Check out the new design

क़ुरआन के अर्थों का अनुवाद - कन्नड़ अनुवाद - बशीर मैसूरी * - अनुवादों की सूची


अर्थों का अनुवाद सूरा: अश़्-शूरा   आयत:
فَاطِرُ السَّمٰوٰتِ وَالْاَرْضِ ؕ— جَعَلَ لَكُمْ مِّنْ اَنْفُسِكُمْ اَزْوَاجًا وَّمِنَ الْاَنْعَامِ اَزْوَاجًا ۚ— یَذْرَؤُكُمْ فِیْهِ ؕ— لَیْسَ كَمِثْلِهٖ شَیْءٌ ۚ— وَهُوَ السَّمِیْعُ الْبَصِیْرُ ۟
ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತ. ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದ್ದಾನೆ ಮತ್ತು ಪ್ರಾಣಿಗಳಲ್ಲಿಯು ಜೋಡಿಗಳನ್ನುಂಟು ಮಾಡಿದ್ದಾನೆ. ತನ್ಮೂಲಕ ಅವನು ನಿಮ್ಮನ್ನು ಭೂಮಿಯಲ್ಲಿ ಹಬ್ಬಿಸುತ್ತಾನೆ. ಅವನಂತಹ ಯಾವೊಂದು ವಸ್ತುವೂ ಇಲ್ಲ. ಅವನು ಸರ್ವವನ್ನಾಲಿಸುವವನೂ, ನೋಡುವವನೂ ಆಗಿದ್ದಾನೆ.
अरबी तफ़सीरें:
لَهٗ مَقَالِیْدُ السَّمٰوٰتِ وَالْاَرْضِ ۚ— یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّهٗ بِكُلِّ شَیْءٍ عَلِیْمٌ ۟
ಆಕಾಶಗಳ ಮತ್ತು ಭೂಮಿಯ ಕೀಲಿಕೈಗಳು ಅವನ ಬಳಿಯಿವೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಪರಿಮಿತಗೊಳಿಸುತ್ತಾನೆ. ಖಂಡಿತವಾಗಿಯು ಅವನು ಸಕಲ ವಿಷಯಗಳ ಜ್ಞಾನಿಯಾಗಿದ್ದಾನೆ.
अरबी तफ़सीरें:
شَرَعَ لَكُمْ مِّنَ الدِّیْنِ مَا وَصّٰی بِهٖ نُوْحًا وَّالَّذِیْۤ اَوْحَیْنَاۤ اِلَیْكَ وَمَا وَصَّیْنَا بِهٖۤ اِبْرٰهِیْمَ وَمُوْسٰی وَعِیْسٰۤی اَنْ اَقِیْمُوا الدِّیْنَ وَلَا تَتَفَرَّقُوْا فِیْهِ ؕ— كَبُرَ عَلَی الْمُشْرِكِیْنَ مَا تَدْعُوْهُمْ اِلَیْهِ ؕ— اَللّٰهُ یَجْتَبِیْۤ اِلَیْهِ مَنْ یَّشَآءُ وَیَهْدِیْۤ اِلَیْهِ مَنْ یُّنِیْبُ ۟ؕ
ಅಲ್ಲಾಹನು ನೂಹ್‌ರವರಿಗೆ ಅಜ್ಞಾಪಿಸಿದ ಧರ್ಮವನ್ನೇ ನಿಮಗೋಸ್ಕರ ನಿಶ್ಚಯಿಸಿದ್ದಾನೆ ಮತ್ತು ಅದನ್ನು ನಾವು ದಿವ್ಯ ಸಂದೇಶದ ಮುಖಾಂತರ ನಿಮ್ಮೆಡೆಗೆ ಕಳುಹಿಸಿರುತ್ತೇವೆ ಮತ್ತು ಇದೇ ಆದೇಶವನ್ನು ನಾವು ಇಬ್ರಾಹೀಮ್, ಮೂಸಾ ಮತ್ತು ಈಸಾರವರಿಗೆ ನೀಡಿದೆವು ಮತ್ತು ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ನೀವು ಭಿನ್ನತೆಯನ್ನುಂಟು ಮಾಡಬೇಡಿರಿ ಎಂದು. ಇನ್ನು ನೀವು ಯಾವ ವಿಷಯದೆಡೆಗೆ ಈ ಬಹುದೇವಾರಾಧಕರನ್ನು ಅಹ್ವಾನಿಸುತ್ತಿರುವಿರೋ ಅದು ಅವರಿಗೆ ದೊಡ್ಡ ಭಾರವಾಗಿ ತೋರುತ್ತಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ಆಯ್ದುಕೊಳ್ಳುತ್ತಾನೆ. ಅವನೆಡೆಗೆ ಮರಳುವವರಿಗೆ ಅವನು ನೇರ ಮಾರ್ಗದಲ್ಲಿ ಮುನ್ನಡೆಸುತ್ತಾನೆ.
अरबी तफ़सीरें:
وَمَا تَفَرَّقُوْۤا اِلَّا مِنْ بَعْدِ مَا جَآءَهُمُ الْعِلْمُ بَغْیًا بَیْنَهُمْ ؕ— وَلَوْلَا كَلِمَةٌ سَبَقَتْ مِنْ رَّبِّكَ اِلٰۤی اَجَلٍ مُّسَمًّی لَّقُضِیَ بَیْنَهُمْ ؕ— وَاِنَّ الَّذِیْنَ اُوْرِثُوا الْكِتٰبَ مِنْ بَعْدِهِمْ لَفِیْ شَكٍّ مِّنْهُ مُرِیْبٍ ۟
ಅವರು ತಮ್ಮ ಬಳಿ ಜ್ಞಾನ ಬಂದ ಬಳಿಕ ತಮ್ಮ ಪರಸ್ಪರ ವಿರೋಧದಿಂದಾಗಿ ಭಿನ್ನತೆ ತೋರಿದರು ನಿಮ್ಮ ಪ್ರಭುವಿನಿಂದ ಅವರ ಕುರಿತು ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡಲಾಗುವ ಮಾತು ಮೊದಲೇ ನಿರ್ಧರಿತವಾಗಿಲ್ಲದಿರುತ್ತಿದ್ದರೆ ಖಂಡಿತ ಅವರ ನಡುವೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ವಾರಿಸುದಾರರಾದವರು ಅವರ ಕುರಿತು ಗೊಂದಲಕಾರಿ ಸಂದೇಹದಲ್ಲಿದ್ದಾರೆ.
अरबी तफ़सीरें:
فَلِذٰلِكَ فَادْعُ ۚ— وَاسْتَقِمْ كَمَاۤ اُمِرْتَ ۚ— وَلَا تَتَّبِعْ اَهْوَآءَهُمْ ۚ— وَقُلْ اٰمَنْتُ بِمَاۤ اَنْزَلَ اللّٰهُ مِنْ كِتٰبٍ ۚ— وَاُمِرْتُ لِاَعْدِلَ بَیْنَكُمْ ؕ— اَللّٰهُ رَبُّنَا وَرَبُّكُمْ ؕ— لَنَاۤ اَعْمَالُنَا وَلَكُمْ اَعْمَالُكُمْ ؕ— لَا حُجَّةَ بَیْنَنَا وَبَیْنَكُمْ ؕ— اَللّٰهُ یَجْمَعُ بَیْنَنَا ۚ— وَاِلَیْهِ الْمَصِیْرُ ۟ؕ
ಆದ್ದರಿಂದ ನೀವು ಇದೇ ಧರ್ಮದೆಡೆಗೇ ಕರೆಯುತ್ತಿರಿ ಮತ್ತು ನಿಮಗೆ ಆಜ್ಞಾಪಿಸಲಾದಂತೆ ಅದರಲ್ಲೇ ಸ್ಥಿರವಾಗಿರಿ ಮತ್ತು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸದಿರಿ ಹಾಗೂ ಹೇಳಿರಿ: ಅಲ್ಲಾಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿಟ್ಟಿದ್ದೇನೆ ಮತ್ತು ನಿಮ್ಮ ನಡುವೆ ನ್ಯಾಯಪಾಲಿಸುತ್ತಿರಲು ನನ್ನೊಂದಿಗೆ ಅಜ್ಞಾಪಿಸಲಾಗಿದೆ. ನಮ್ಮ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನಮ್ಮ ಕರ್ಮಗಳು ನಮಗಿರುವುವು ಮತ್ತು ನಿಮ್ಮ ಕರ್ಮಗಳು ನಿಮಗಿರುವುವು. ನಮ್ಮ ಮತ್ತು ನಿಮ್ಮ ನಡುವೆ ಜಗಳವೂ ಇಲ್ಲ. ಅಲ್ಲಾಹನು ನಮ್ಮನ್ನು ಒಟ್ಟುಗೂಡಿಸುವನು ಮತ್ತು ಅವನೆಡೆಗೇ ಮರಳಲಿಕ್ಕಿದೆ.
अरबी तफ़सीरें:
 
अर्थों का अनुवाद सूरा: अश़्-शूरा
सूरों की सूची पृष्ठ संख्या
 
क़ुरआन के अर्थों का अनुवाद - कन्नड़ अनुवाद - बशीर मैसूरी - अनुवादों की सूची

इसका अनुवाद शेख बशीर मैसूरी द्वारा किया गया है। इसे अनुवाद अग्रदूत केंद्र की निगरानी में विकसित किया गया है।

बंद करें