Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: فاطر   آیت:
وَالَّذِیْۤ اَوْحَیْنَاۤ اِلَیْكَ مِنَ الْكِتٰبِ هُوَ الْحَقُّ مُصَدِّقًا لِّمَا بَیْنَ یَدَیْهِ ؕ— اِنَّ اللّٰهَ بِعِبَادِهٖ لَخَبِیْرٌ بَصِیْرٌ ۟
ಮತ್ತು ನಾವು ನಿಮ್ಮೆಡೆಗೆ ದಿವ್ಯ ಸಂದೇಶವಾಗಿ ಕಳುಹಿಸಿರುವ ಈ ಗ್ರಂಥವು ಸತ್ಯವಾದುದಾಗಿದೆ. ಇದು ತನ್ನ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಖಂಡಿತವಾಗಿಯೂ ಅಲ್ಲಾಹನು ತನ್ನ ದಾಸರ ಕುರಿತು ಸಂಪೂರ್ಣ ಅರಿವುಳ್ಳವನೂ, ಚೆನ್ನಾಗಿ ನೋಡುವವನೂ ಆಗಿದ್ದಾನೆ.
عربی تفاسیر:
ثُمَّ اَوْرَثْنَا الْكِتٰبَ الَّذِیْنَ اصْطَفَیْنَا مِنْ عِبَادِنَا ۚ— فَمِنْهُمْ ظَالِمٌ لِّنَفْسِهٖ ۚ— وَمِنْهُمْ مُّقْتَصِدٌ ۚ— وَمِنْهُمْ سَابِقٌ بِالْخَیْرٰتِ بِاِذْنِ اللّٰهِ ؕ— ذٰلِكَ هُوَ الْفَضْلُ الْكَبِیْرُ ۟ؕ
ತರುವಾಯ ನಾವು ನಮ್ಮ ದಾಸರ ಪÉÊಕಿ ಆಯ್ದುಕೊಂಡವರಿಗೆ ಈ ಗ್ರಂಥದ ವಾರಿಸುದಾರರಾಗಿ ಮಾಡಿದೆವು. ಅನಂತರ ಅವರಲ್ಲಿ ಕೆಲವರು ತಮ್ಮ ಮೇಲೆಯೇ ಅಕ್ರಮವೆಸಗುವವರು ಮತ್ತು ಅವರಲ್ಲಿ ಕೆಲವರು ಮಧ್ಯಮಾರ್ಗವನ್ನು ಅನುಸರಿಸುವವರು ಹಾಗೂ ಅವರ ಪÉÊಕಿ ಅಲ್ಲಾಹನ ಕೃಪೆಯಿಂದ ಒಳಿತುಗಳಲ್ಲಿ ಧಾವಿಸುವವರೂ ಇದ್ದಾರೆ. ಇದುವೇ ಮಹಾ ಅನುಗ್ರಹವಾಗಿದೆ.
عربی تفاسیر:
جَنّٰتُ عَدْنٍ یَّدْخُلُوْنَهَا یُحَلَّوْنَ فِیْهَا مِنْ اَسَاوِرَ مِنْ ذَهَبٍ وَّلُؤْلُؤًا ۚ— وَلِبَاسُهُمْ فِیْهَا حَرِیْرٌ ۟
ಅವರು ಶಾಶ್ವತವಾಗಿ ನೆಲೆಸಲಿಕ್ಕಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವರು, ಅವರಿಗೆ ಸ್ವರ್ಣ ಕಂಕಣಗಳನ್ನೂ, ಮುತ್ತುಗಳನ್ನೂ ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಪು ರೇಷ್ಮೆಯದ್ದಾಗಿರುವುದು.
عربی تفاسیر:
وَقَالُوا الْحَمْدُ لِلّٰهِ الَّذِیْۤ اَذْهَبَ عَنَّا الْحَزَنَ ؕ— اِنَّ رَبَّنَا لَغَفُوْرٌ شَكُوْرُ ۟ۙ
ಮತ್ತು ಅವರು ಹೇಳುವರು: ನಮ್ಮಿಂದ ದುಃಖವನ್ನು ದೂರೀಕರಿಸಿದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ನಿಸ್ಸಂದೇಹವಾಗಿಯು ನಮ್ಮ ಪ್ರಭುವು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
عربی تفاسیر:
١لَّذِیْۤ اَحَلَّنَا دَارَ الْمُقَامَةِ مِنْ فَضْلِهٖ ۚ— لَا یَمَسُّنَا فِیْهَا نَصَبٌ وَّلَا یَمَسُّنَا فِیْهَا لُغُوْبٌ ۟
ಅವನು ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತವಾಸದ ಭವನದಲ್ಲಿ ನೆಲೆಗೊಳಿಸಿದನು. ಇಲ್ಲಿ ನಮಗೆ ಯಾವುದೇ ಸಂಕಷ್ಟವಿಲ್ಲ. ಯಾವುದೇ ಆಯಾಸ ಬಾಧಿಸದು.
عربی تفاسیر:
وَالَّذِیْنَ كَفَرُوْا لَهُمْ نَارُ جَهَنَّمَ ۚ— لَا یُقْضٰی عَلَیْهِمْ فَیَمُوْتُوْا وَلَا یُخَفَّفُ عَنْهُمْ مِّنْ عَذَابِهَا ؕ— كَذٰلِكَ نَجْزِیْ كُلَّ كَفُوْرٍ ۟ۚ
ಸತ್ಯನಿಷೇಧಿಗಳಿಗೆ ನರಕಾಗ್ನಿ ಇದೆ. ಅವರು ಸಾಯುವಂತಾಗಲು ಅವರಿಗೆ ಮರಣವನ್ನೂ ವಿಧಿಸಲಾಗದು. ಅವರಿಂದ ನರಕದ ಶಿಕ್ಷೆಯನ್ನೂ ಹಗುರಗೊಳಿಸಲಾಗದು. ಪ್ರತಿಯೊಬ್ಬ ಸತ್ಯನಿಷೇಧಿಗೆ ನಾವು ಇದೇ ಪ್ರಕಾರ ಪ್ರತಿಫಲ ನೀಡುತ್ತೇವೆ.
عربی تفاسیر:
وَهُمْ یَصْطَرِخُوْنَ فِیْهَا ۚ— رَبَّنَاۤ اَخْرِجْنَا نَعْمَلْ صَالِحًا غَیْرَ الَّذِیْ كُنَّا نَعْمَلُ ؕ— اَوَلَمْ نُعَمِّرْكُمْ مَّا یَتَذَكَّرُ فِیْهِ مَنْ تَذَكَّرَ وَجَآءَكُمُ النَّذِیْرُ ؕ— فَذُوْقُوْا فَمَا لِلظّٰلِمِیْنَ مِنْ نَّصِیْرٍ ۟۠
ಮತ್ತು ಅವರು ಅದರಲ್ಲಿ ಕಿರುಚಾಡುವರು: ನಮ್ಮ ಪ್ರಭು, ನಮ್ಮನ್ನು ಹೊರತೆಗೆ, ನಾವು ಹಿಂದೆ ಎಸಗುತ್ತಿದ್ದಂತಹ ಕರ್ಮಗಳಿಗೆ ವಿರುದ್ಧವಾದ ಸತ್ಕರ್ಮವನ್ನು ಕÉÊಗೊಳ್ಳುವೆವು. (ಆಗ ಅಲ್ಲಾಹನು ಹೇಳುವನು) ತಿಳಿಯುವವರಿಗೆ ತಿಳಿದುಕೊಳ್ಳುವಷ್ಟು ಕಾಲ ನಾವು ನಿಮಗೆ ಆಯುಸ್ಸು ನೀಡಿರಲಿಲ್ಲವೇ? ಹಾಗೂ ನಿಮ್ಮೆಡೆಗೆ ಮುನ್ನೆಚ್ಚರಿಕೆಗಾರನೂ ಬಂದಿದ್ದನು. ಆದ್ದರಿಂದ ಈಗ ಸವಿಯಿರಿ. ಅಕ್ರಮಿಗಳಿಗೆ ಯಾವ ಸಹಾಯಕರೂ ಇರಲಾರರು.
عربی تفاسیر:
اِنَّ اللّٰهَ عٰلِمُ غَیْبِ السَّمٰوٰتِ وَالْاَرْضِ ؕ— اِنَّهٗ عَلِیْمٌۢ بِذَاتِ الصُّدُوْرِ ۟
ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನಿಯಾಗಿದ್ದಾನೆ. ನಿಸ್ಸಂದೇಹವಾಗಿಯು ಅವನು ಹೃದಯದ ಅಂತರಾಳದ ವಿಚಾರಗಳ ಅರಿವುಳ್ಳವನಾಗಿದ್ದಾನೆ.
عربی تفاسیر:
 
معانی کا ترجمہ سورت: فاطر
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں