Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 哈吉   段:
وَیَسْتَعْجِلُوْنَكَ بِالْعَذَابِ وَلَنْ یُّخْلِفَ اللّٰهُ وَعْدَهٗ ؕ— وَاِنَّ یَوْمًا عِنْدَ رَبِّكَ كَاَلْفِ سَنَةٍ مِّمَّا تَعُدُّوْنَ ۟
ಅವರು ಯಾತನೆಗೆ ಆತುರಪಟ್ಟುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಹನು ತನ್ನ ವಾಗ್ದನವನ್ನೆಂದೂ ಉಲ್ಲಂಘಿಸುವುದಿಲ್ಲ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಒಂದು ಸಾವಿರ ವರ್ಷಗಳದ್ದಾಗಿರುತ್ತದೆ.
阿拉伯语经注:
وَكَاَیِّنْ مِّنْ قَرْیَةٍ اَمْلَیْتُ لَهَا وَهِیَ ظَالِمَةٌ ثُمَّ اَخَذْتُهَا ۚ— وَاِلَیَّ الْمَصِیْرُ ۟۠
ಅದೆಷ್ಟೋ ಅಕ್ರಮಿ ನಾಡುಗಳಿಗೆ ನಾನು ಕಾಲಾವಕಾಶವನ್ನು ನೀಡಿದೆನು. ಅನಂತರ ನಾನು ಅವರನ್ನು ಹಿಡಿದುಬಿಟ್ಟೆನು ಮತ್ತು ನನ್ನೆಡೆಗೇ ಮರಳುವಿಕೆಯಿರುವುದು.
阿拉伯语经注:
قُلْ یٰۤاَیُّهَا النَّاسُ اِنَّمَاۤ اَنَا لَكُمْ نَذِیْرٌ مُّبِیْنٌ ۟ۚ
(ಓ ಪೈಗಂಬರರೇ) ಹೇಳಿರಿ: ಓ ಜನರೇ, ನಾನು ನಿಮಗೆ ಬಹಿರಂಗವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
阿拉伯语经注:
فَالَّذِیْنَ اٰمَنُوْا وَعَمِلُوا الصّٰلِحٰتِ لَهُمْ مَّغْفِرَةٌ وَّرِزْقٌ كَرِیْمٌ ۟
ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರೋ ಅವರಿಗೆ ಕ್ಷಮೆಯೂ, ಗೌರವಪೂರ್ಣ ಜೀವನಾಧಾರವು ಇರುವುದು.
阿拉伯语经注:
وَالَّذِیْنَ سَعَوْا فِیْۤ اٰیٰتِنَا مُعٰجِزِیْنَ اُولٰٓىِٕكَ اَصْحٰبُ الْجَحِیْمِ ۟
ನಮ್ಮ ದೃಷ್ಟಾಂತಗಳನ್ನು ಸೋಲಿಸುವ ಪ್ರಯತ್ನದಲ್ಲಿರುವವರು ನರಕವಾಸಿಗಳಾಗಿರುವರು.
阿拉伯语经注:
وَمَاۤ اَرْسَلْنَا مِنْ قَبْلِكَ مِنْ رَّسُوْلٍ وَّلَا نَبِیٍّ اِلَّاۤ اِذَا تَمَنّٰۤی اَلْقَی الشَّیْطٰنُ فِیْۤ اُمْنِیَّتِهٖ ۚ— فَیَنْسَخُ اللّٰهُ مَا یُلْقِی الشَّیْطٰنُ ثُمَّ یُحْكِمُ اللّٰهُ اٰیٰتِهٖ ؕ— وَاللّٰهُ عَلِیْمٌ حَكِیْمٌ ۟ۙ
ನಾವು ನಿಮಗಿಂತ ಮೊದಲು ಯಾವೊಬ್ಬ ಸಂದೇಶವಾಹಕನನ್ನಾಗಲಿ, ಪ್ರವಾದಿಯನ್ನಾಗಲೀ ಕಳುಹಿಸಿರುತ್ತೇವೆಯೋ ಅವನು ಏನೇ ಉದ್ದೇಶಿಸಿದರೂ ಅವನ ಉದ್ದೇಶ ಮಾರ್ಗದಲ್ಲಿ ಶೈತಾನನು ದುಷ್ಪೆçÃರಣೆಗಳನ್ನು ಹಾಕಿದನು. ಆದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ನೀಗಿಸುತ್ತಾನೆ. ಮತ್ತು ತನ್ನ ವಚನಗಳನ್ನು ಸದೃಢಗೊಳಿಸುತ್ತಾನೆ. ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿರುವನು.
阿拉伯语经注:
لِّیَجْعَلَ مَا یُلْقِی الشَّیْطٰنُ فِتْنَةً لِّلَّذِیْنَ فِیْ قُلُوْبِهِمْ مَّرَضٌ وَّالْقَاسِیَةِ قُلُوْبُهُمْ ؕ— وَاِنَّ الظّٰلِمِیْنَ لَفِیْ شِقَاقٍ بَعِیْدٍ ۟ۙ
ಇದೇಕೆಂದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ಹೃದಯಗಳಲ್ಲಿ ರೋಗವಿರುವವರಿಗೂ ಮತ್ತು ಕಠಿಣ ಹೃದಯವಂತರಿಗೂ ಪರೀಕ್ಷಾ ಸಾಧನವನ್ನಾಗಿ ಮಾಡಲೆಂದಾಗಿದೆ ಮತ್ತು ನಿಸ್ಸಂದೇಹವಾಗಿಯೂ ಅಕ್ರಮಿಗಳು ವಿರೋಧದಲ್ಲಿ ಬಹುದೂರ ಸರಿದಿದ್ದಾರೆ.
阿拉伯语经注:
وَّلِیَعْلَمَ الَّذِیْنَ اُوْتُوا الْعِلْمَ اَنَّهُ الْحَقُّ مِنْ رَّبِّكَ فَیُؤْمِنُوْا بِهٖ فَتُخْبِتَ لَهٗ قُلُوْبُهُمْ ؕ— وَاِنَّ اللّٰهَ لَهَادِ الَّذِیْنَ اٰمَنُوْۤا اِلٰی صِرَاطٍ مُّسْتَقِیْمٍ ۟
ಮತ್ತು ಜ್ಞಾನ ಪಡೆದವರು ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವೇ ಆಗಿದೆಯೆಂದು ದೃಢವಾಗಿ ತಿಳಿಯಲೆಂದಾಗಿದೆ. ಆ ಬಳಿಕ ಅವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಅವರ ಹೃದಯಗಳು ಅದಕ್ಕೆ ಶರಣಾಗಲಿ. ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸವಿರಿಸಿದವರಿಗೆ ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
阿拉伯语经注:
وَلَا یَزَالُ الَّذِیْنَ كَفَرُوْا فِیْ مِرْیَةٍ مِّنْهُ حَتّٰی تَاْتِیَهُمُ السَّاعَةُ بَغْتَةً اَوْ یَاْتِیَهُمْ عَذَابُ یَوْمٍ عَقِیْمٍ ۟
ಸತ್ಯನಿಷೇಧಿಸಿದವರು ದಿವ್ಯವಾಣಿಯ ಕುರಿತು ಸದಾ ಸಂದೇಹದಲ್ಲೇ ಇರುವರು. ಕೊನೆಗೆ ಅವರ ಮೇಲೆ ಅಂತ್ಯ ಗಳಿಗೆಯು ಹಠಾತ್ತನೆ ಬಂದುಬಿಡುವುದು ಅಥವಾ ಅಶುಭದಿನದ ಯಾತನೆಯು ಅವರ ಬಳಿ ಬಂದು ಬಿಡುವುದು.
阿拉伯语经注:
 
含义的翻译 章: 哈吉
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭