Check out the new design

Qurani Kərimin mənaca tərcüməsi - Kannad dilinə tərcümə - Bəşir Meysuri. * - Tərcumənin mündəricatı


Mənaların tərcüməsi Surə: ən-Nəhl   Ayə:
ثُمَّ یَوْمَ الْقِیٰمَةِ یُخْزِیْهِمْ وَیَقُوْلُ اَیْنَ شُرَكَآءِیَ الَّذِیْنَ كُنْتُمْ تُشَآقُّوْنَ فِیْهِمْ ؕ— قَالَ الَّذِیْنَ اُوْتُوا الْعِلْمَ اِنَّ الْخِزْیَ الْیَوْمَ وَالسُّوْٓءَ عَلَی الْكٰفِرِیْنَ ۟ۙ
ಅನಂತರ ಪ್ರಳಯ ದಿನಂದAದು ಅಲ್ಲಾಹನು ಅವರನ್ನು ಅಪಮಾನಗೊಳಿಸುವನು. ಮತ್ತು ಹೇಳುವನು: ನೀವು ಯಾರ ವಿಚಾರವಾಗಿ (ಸತ್ಯವಿಶ್ವಾಸಿಗಳೊಡನೆ) ಜಗಳವಾಡುತ್ತಿದ್ದಿರೋ ಆ ನನ್ನ ಸಹಭಾಗಿಗಳು ಎಲ್ಲಿದ್ದಾರೆ? ಜ್ಞಾನ ನೀಡಲ್ಪಟ್ಟವರು ಹೇಳುವರು: ನಿಶ್ಚಯವಾಗಿಯು ಇಂದಿನ ದಿನವಂತು ಸತ್ಯನಿಷೇಧಿಗಳಿಗೆ ಅಪಮಾನ ಮತ್ತು ಕೆಡುಕು ಅಂಟಿಕೊAಡು ಬಿಟ್ಟಿತು.
Ərəbcə təfsirlər:
الَّذِیْنَ تَتَوَفّٰىهُمُ الْمَلٰٓىِٕكَةُ ظَالِمِیْۤ اَنْفُسِهِمْ ۪— فَاَلْقَوُا السَّلَمَ مَا كُنَّا نَعْمَلُ مِنْ سُوْٓءٍ ؕ— بَلٰۤی اِنَّ اللّٰهَ عَلِیْمٌۢ بِمَا كُنْتُمْ تَعْمَلُوْنَ ۟
ತಮ್ಮ ಮೇಲೆಯೇ ಅಕ್ರಮವೆಸಗುತ್ತಿರುವ ಸ್ಥಿತಿಯಲ್ಲಿ ಸತ್ಯನಿಷೇಧಿಗಳ ಪ್ರಾಣವನ್ನು ಮಲಕ್‌ಗಳು ವಶಪಡಿಸಿಕೊಳ್ಳುವಾಗ ಅವರು ಸಂಪೂರ್ಣವಾಗಿ ಶರಣಾಗುವರು; ಅವರು ಹೇಳುವರು ನಾವು ದುಷ್ಕೃತ್ಯವನ್ನು ಎಸಗುತ್ತಿರಲಿಲ್ಲ. (ಹೇಳಲಾಗುವುದು) ಯಾಕಿಲ್ಲ? ನೀವು ಮಾಡುತ್ತಿದ್ದ ದುಷ್ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.
Ərəbcə təfsirlər:
فَادْخُلُوْۤا اَبْوَابَ جَهَنَّمَ خٰلِدِیْنَ فِیْهَا ؕ— فَلَبِئْسَ مَثْوَی الْمُتَكَبِّرِیْنَ ۟
ಆದುದರಿಂದ ನೀವು ನರಕದ ದ್ವಾರಗಳಲ್ಲಿ ಪ್ರವೇಶಿಸಿರಿ. ನೀವು ಅದರಲ್ಲಿ ಶಾಶ್ವತವಾಗಿರುವಿರಿ. ಕೊನೆಗೆ ಅಹಂಕಾರಿಗಳ ವಾಸಸ್ಥಾನವು ಅದೆಷ್ಟು ಕೆಟ್ಟದು!.
Ərəbcə təfsirlər:
وَقِیْلَ لِلَّذِیْنَ اتَّقَوْا مَاذَاۤ اَنْزَلَ رَبُّكُمْ ؕ— قَالُوْا خَیْرًا ؕ— لِلَّذِیْنَ اَحْسَنُوْا فِیْ هٰذِهِ الدُّنْیَا حَسَنَةٌ ؕ— وَلَدَارُ الْاٰخِرَةِ خَیْرٌ ؕ— وَلَنِعْمَ دَارُ الْمُتَّقِیْنَ ۟ۙ
ಮತ್ತು ಭಯಭಕ್ತಿಯನ್ನಿರಿಸಿಕೊಂಡವರೊAದಿಗೆ: ನಿಮ್ಮ ಪ್ರಭುವು ಏನನ್ನು ಅವತೀರ್ಣಗೊಳಿಸಿರುವನು? ಎಂದು ಕೇಳಲಾದಾಗ ಅವರು ಉತ್ತರಿಸುವರು: ಅತ್ಯುತ್ತಮವಾದುದ್ದನ್ನು ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ. ಮತ್ತು ಪರಲೋಕ ಭವನವಂತು ಅತ್ಯುತ್ತಮವಾಗಿರುವುದು ಮತ್ತು ಭಯಭಕ್ತಿಯುಳ್ಳವರ ಭವನವು ಅದೆಷ್ಟು ಉತ್ತಮವಾದುದು!
Ərəbcə təfsirlər:
جَنّٰتُ عَدْنٍ یَّدْخُلُوْنَهَا تَجْرِیْ مِنْ تَحْتِهَا الْاَنْهٰرُ لَهُمْ فِیْهَا مَا یَشَآءُوْنَ ؕ— كَذٰلِكَ یَجْزِی اللّٰهُ الْمُتَّقِیْنَ ۟ۙ
ಶಾಶ್ವತ ನಿವಾಸವಾದ ಸ್ವರ್ಗೋದ್ಯಾನಗಳಲ್ಲಿ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅಲ್ಲಿ ಅವರು ಇಚ್ಛಿಸುವುದೆಲ್ಲವೂ ಅವರಿಗಿರುವುದು. ಅಲ್ಲಾಹನು ಭಯ ಭಕ್ತಿಯುಳ್ಳವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತಾನೆ.
Ərəbcə təfsirlər:
الَّذِیْنَ تَتَوَفّٰىهُمُ الْمَلٰٓىِٕكَةُ طَیِّبِیْنَ ۙ— یَقُوْلُوْنَ سَلٰمٌ عَلَیْكُمُ ۙ— ادْخُلُوا الْجَنَّةَ بِمَا كُنْتُمْ تَعْمَلُوْنَ ۟
ಮಲಕ್‌ಗಳು ಅವರ ಪ್ರಾಣವನ್ನು ಅವರು ಪರಿಶುದ್ಧರಾಗಿರುವ ಸ್ಥಿತಿಯಲ್ಲಿ ವಶಪಡಿಸಿಕೊಳ್ಳುವರು. ನಿಮ್ಮ ಮೇಲೆ ಶಾಂತಿ ಇರಲಿ. ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ಸ್ವರ್ಗೋದ್ಯಾನವನ್ನು ಪ್ರವೇಶಿಸಿರಿ ಎನ್ನುವರು.
Ərəbcə təfsirlər:
هَلْ یَنْظُرُوْنَ اِلَّاۤ اَنْ تَاْتِیَهُمُ الْمَلٰٓىِٕكَةُ اَوْ یَاْتِیَ اَمْرُ رَبِّكَ ؕ— كَذٰلِكَ فَعَلَ الَّذِیْنَ مِنْ قَبْلِهِمْ ؕ— وَمَا ظَلَمَهُمُ اللّٰهُ وَلٰكِنْ كَانُوْۤا اَنْفُسَهُمْ یَظْلِمُوْنَ ۟
ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ ಎಂದೇ ನಿರೀಕ್ಷಿಸುತ್ತಿದ್ದಾರೆಯೇ? ಇವರ ಮುಂಚಿನವರು ಸಹ ಇದೇ ಪ್ರಕಾರ ಮಾಡಿದ್ದರು ಅವರ ಮೇಲೆ ಅಲ್ಲಾಹನು ಯಾವುದೇ ಅಕ್ರಮವನ್ನೆಸಗಲಿಲ್ಲ ಬದಲಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
Ərəbcə təfsirlər:
فَاَصَابَهُمْ سَیِّاٰتُ مَا عَمِلُوْا وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟۠
ಕೊನಗೆ ಅವರು ಎಸಗಿರುವ ದುಷ್ಕೃತ್ಯಗಳ ಪರಿಣಾಮವು ಅವರಿಗೆ ಎರಗಿತು. ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಬಿಟ್ಟಿತು.
Ərəbcə təfsirlər:
 
Mənaların tərcüməsi Surə: ən-Nəhl
Surələrin mündəricatı Səhifənin rəqəmi
 
Qurani Kərimin mənaca tərcüməsi - Kannad dilinə tərcümə - Bəşir Meysuri. - Tərcumənin mündəricatı

Şeyx Bəşir Meysuri tərəfindən tərcümə edilmişdir. "Ruvvad" tərcümə mərkəzinin rəhbərliyi altında inkişaf etdirilmişdir.

Bağlamaq