Check out the new design

Qurani Kərimin mənaca tərcüməsi - Kannad dilinə tərcümə - Bəşir Meysuri. * - Tərcumənin mündəricatı


Mənaların tərcüməsi Surə: ən-Nisa   Ayə:
وَّالْمُحْصَنٰتُ مِنَ النِّسَآءِ اِلَّا مَا مَلَكَتْ اَیْمَانُكُمْ ۚ— كِتٰبَ اللّٰهِ عَلَیْكُمْ ۚ— وَاُحِلَّ لَكُمْ مَّا وَرَآءَ ذٰلِكُمْ اَنْ تَبْتَغُوْا بِاَمْوَالِكُمْ مُّحْصِنِیْنَ غَیْرَ مُسٰفِحِیْنَ ؕ— فَمَا اسْتَمْتَعْتُمْ بِهٖ مِنْهُنَّ فَاٰتُوْهُنَّ اُجُوْرَهُنَّ فَرِیْضَةً ؕ— وَلَا جُنَاحَ عَلَیْكُمْ فِیْمَا تَرٰضَیْتُمْ بِهٖ مِنْ بَعْدِ الْفَرِیْضَةِ ؕ— اِنَّ اللّٰهَ كَانَ عَلِیْمًا حَكِیْمًا ۟
ಮತ್ತು ವೈವಾಹಿಕ ಸಂಬAಧದಲ್ಲಿರುವ ಇತರೆ ಸ್ತಿçÃಯರು (ನಿಷಿದ್ಧರಾಗಿದ್ದಾರೆ) ಆದರೆ ನಿಮ್ಮ ಒಡೆತನಕ್ಕೆ ಬಂದವರ (ದಾಸಿಯರ) ಹೊರತು ಅಲ್ಲಾಹನು ಈ ನಿಯಮಗಳನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಿರುವನು ಈ ಸ್ತಿçÃಯರ ಹೊರತಾದ ಇತರ ಸ್ತಿçÃಯರನ್ನು ನೀವು ನಿಮ್ಮ ಸಂಪತ್ತಿನ ವಧುಧನದ ಮೂಲಕ ಅವರನ್ನು ವಿವಾಹವಾಗಲು ಇಚ್ಛಿಸುವುದಾದರೆ. ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ. ವೈವಾಹಿಕ ಸಂಬAಧವಾಗಿರಬೇಕು. ಅನೈತಿಕ ಸಂಬAಧವಾಗಿರಬಾರದು ಆದ್ದರಿಂದ ನೀವು ಅವರಿಂದ ಸುಖಭೋಗವನ್ನು ಪಡೆದಿದ್ದರೆ ಅವರಿಗೆ ನಿಶ್ಚಯಿಸಲಾದ ವಧುಧನವನ್ನು ಕೊಟ್ಟು ಬಿಡಿರಿ. ಮತ್ತು ವಧುಧನ ನಿಶ್ಚಯವಾದ ಬಳಿಕ ನೀವು ಪರಸ್ಪರ ಸಂತೃಪ್ತಿಯೊAದಿಗೆ ವಿನಾಯಿತಿ ತೋರುವುದರಲ್ಲಿ ನಿಮ್ಮ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಸ್ಸಂದೇಹವಾಗಿಯು ಅಲ್ಲಾಹನು ಎಲ್ಲವನ್ನೂ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
Ərəbcə təfsirlər:
وَمَنْ لَّمْ یَسْتَطِعْ مِنْكُمْ طَوْلًا اَنْ یَّنْكِحَ الْمُحْصَنٰتِ الْمُؤْمِنٰتِ فَمِنْ مَّا مَلَكَتْ اَیْمَانُكُمْ مِّنْ فَتَیٰتِكُمُ الْمُؤْمِنٰتِ ؕ— وَاللّٰهُ اَعْلَمُ بِاِیْمَانِكُمْ ؕ— بَعْضُكُمْ مِّنْ بَعْضٍ ۚ— فَانْكِحُوْهُنَّ بِاِذْنِ اَهْلِهِنَّ وَاٰتُوْهُنَّ اُجُوْرَهُنَّ بِالْمَعْرُوْفِ مُحْصَنٰتٍ غَیْرَ مُسٰفِحٰتٍ وَّلَا مُتَّخِذٰتِ اَخْدَانٍ ۚ— فَاِذَاۤ اُحْصِنَّ فَاِنْ اَتَیْنَ بِفَاحِشَةٍ فَعَلَیْهِنَّ نِصْفُ مَا عَلَی الْمُحْصَنٰتِ مِنَ الْعَذَابِ ؕ— ذٰلِكَ لِمَنْ خَشِیَ الْعَنَتَ مِنْكُمْ ؕ— وَاَنْ تَصْبِرُوْا خَیْرٌ لَّكُمْ ؕ— وَاللّٰهُ غَفُوْرٌ رَّحِیْمٌ ۟۠
ಮತ್ತು ನಿಮ್ಮ ಪೈಕಿ ಯಾರಿಗೆ ಸತ್ಯವಿಶ್ವಾಸಿನಿಗಳಾದ ಸ್ವತಂತ್ರ ಸ್ತಿçÃಯರನ್ನು ವಿವಾಹವಾಗುವ ಸಾಮರ್ಥ್ಯವಿಲ್ಲವೋ ಅವರು ನಿಮ್ಮ ಒಡೆತನದಲ್ಲಿರುವ ಸತ್ಯವಿಶ್ವಾಸಿಗಳಾದ ಗುಲಾಮ ಸ್ತಿçÃಯರಲ್ಲಿ ಯಾರನ್ನಾದರೂ (ವಿವಾಹ ಮಾಡಿಕೊಳ್ಳÀಬಹುದು) ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ. ನೀವು ಪರಸ್ಪರರು ಒಂದೇ ಆಗಿರುವಿರಿ. ಆದ್ದರಿಂದ ಅವರ ಒಡೆಯರ ಅನುಮತಿಯೊಂದಿಗೆ ವಿವಾಹವಾಗಿರಿ ಮತ್ತು ನೀವು ಶಿಷ್ಟಾಚಾರಕ್ಕಾನುಸಾರವಾಗಿ ವಧುಧನವನ್ನು ಅವರಿಗೆ ನೀಡಿರಿ. ಅವರು ಚಾರಿತ್ರö್ಯವಂತರಾಬೇಕೇ ಹೊರತು ಬಹಿರಂಗವಾಗಿ ನೀಚ ಕೃತ್ಯವನ್ನೇಸಗುವವರೂ, ರಹಸ್ಯ ಸಂಬAಧವಿರಿಸಿ ಕೊಳ್ಳುವವರೂ ಆಗಿರಬಾರದು. ಅವರು ವಿವಾಹಿತರಾದ ಬಳಿಕ ನಿರ್ಲಜ್ಜೆಯ ಕೃತ್ಯವನ್ನೆಸಗಿದರೆ ಸ್ವತಂತ್ರ ಸ್ತಿçÃಯರಿಗೆ ಕೊಡಲಾಗುವ ಶಿಕ್ಷೆಯ ಅರ್ಧಾಂಶವನ್ನು ಅವರಿಗೆ ಕೊಡಲಾಗುವುದು. (ದಾಸಿಯರನ್ನು ವಿವಾಹವಾಗುವ) ಈ ಅನುಮತಿಯು ನಿಮ್ಮ ಪೈಕಿ ಪಾಪದ ಭಯ ಹೊಂದಿರುವವರಿಗಾಗಿರುತ್ತದೆ ಮತ್ತು ನಿಮ್ಮನ್ನು ನಿಂಯತ್ರಿಸಿಕೊAಡರೆ ಅದು ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
Ərəbcə təfsirlər:
یُرِیْدُ اللّٰهُ لِیُبَیِّنَ لَكُمْ وَیَهْدِیَكُمْ سُنَنَ الَّذِیْنَ مِنْ قَبْلِكُمْ وَیَتُوْبَ عَلَیْكُمْ ؕ— وَاللّٰهُ عَلِیْمٌ حَكِیْمٌ ۟
ಅಲ್ಲಾಹನು ನಿಮಗೋಸ್ಕರ ನಿಯಮಗಳನ್ನು ಸ್ಪಷ್ಟಪಡಿಸಿಕೊಡಲೆಂದೂ, ನಿಮ್ಮನ್ನು ನಿಮ್ಮ ಮುಂಚಿನ (ಸಜ್ಜನ) ಪೂರ್ವಿಕರ ಮಾರ್ಗದಲ್ಲಿ ಮುನ್ನಡೆಸಲೆಂದು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದೂ ಇಚ್ಛಿಸುತ್ತಾನೆ. ಮತ್ತು ಅಲ್ಲಾಹನು ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
Ərəbcə təfsirlər:
 
Mənaların tərcüməsi Surə: ən-Nisa
Surələrin mündəricatı Səhifənin rəqəmi
 
Qurani Kərimin mənaca tərcüməsi - Kannad dilinə tərcümə - Bəşir Meysuri. - Tərcumənin mündəricatı

Şeyx Bəşir Meysuri tərəfindən tərcümə edilmişdir. "Ruvvad" tərcümə mərkəzinin rəhbərliyi altında inkişaf etdirilmişdir.

Bağlamaq