Check out the new design

Qurani Kərimin mənaca tərcüməsi - Kannad dilinə tərcümə - Bəşir Meysuri. * - Tərcumənin mündəricatı


Mənaların tərcüməsi Surə: Qaf   Ayə:

ಕ್ವಾಫ್

قٓ ۫— وَالْقُرْاٰنِ الْمَجِیْدِ ۟ۚ
ಕಾಫ್, ಆದರಣೀಯ ಕುರ್‌ಆನಿನ ಆಣೆ,
Ərəbcə təfsirlər:
بَلْ عَجِبُوْۤا اَنْ جَآءَهُمْ مُّنْذِرٌ مِّنْهُمْ فَقَالَ الْكٰفِرُوْنَ هٰذَا شَیْءٌ عَجِیْبٌ ۟ۚ
ಅವರ ಬಳಿ ಅವರಿಂದಲೇ ಮುನ್ನೆಚ್ಚರಿಗಾರನೊಬ್ಬನು ಬಂದಿರುವುದರಿAದ ಅವರು ಅಚ್ಚರಿಪಟ್ಟರು, ಸತ್ಯನಿಷೇಧಿಗಳು ಹೇಳುತ್ತಾರೆ ಇದೊಂದು ಆಶ್ಚರ್ಯಕರ ವಿಷಯವಾಗಿದೆ
Ərəbcə təfsirlər:
ءَاِذَا مِتْنَا وَكُنَّا تُرَابًا ۚ— ذٰلِكَ رَجْعٌ بَعِیْدٌ ۟
ನಾವು ಮೃತಪಟ್ಟು ಮಣ್ಣಾದ ಬಳಿಕ? ಪುನಃ ಜೀವಂತಗೊಳಿಸಿ ಮರಳುವುದು ಬುದ್ಧಿಗೇ ವಿದೂರವಾಗಿದೆ.
Ərəbcə təfsirlər:
قَدْ عَلِمْنَا مَا تَنْقُصُ الْاَرْضُ مِنْهُمْ ۚ— وَعِنْدَنَا كِتٰبٌ حَفِیْظٌ ۟
ಭೂಮಿಯು ಅವರ ಶರೀರಗಳಿಂದ ಏನನ್ನು ಕಡಿತಗೊಳಿಸುವುದೆಂದು ನಾವು ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನು ಸುರಕ್ಷಿತವಾಗಿರಿಸುವ ಗ್ರಂಥವಿದೆ.
Ərəbcə təfsirlər:
بَلْ كَذَّبُوْا بِالْحَقِّ لَمَّا جَآءَهُمْ فَهُمْ فِیْۤ اَمْرٍ مَّرِیْجٍ ۟
ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ಸುಳ್ಳಾಗಿಸಿಬಿಟ್ಟರು ಆದ್ದರಿಂದ ಅವರು ಗೊಂದಲದಲ್ಲಿದ್ದಾರೆ.
Ərəbcə təfsirlər:
اَفَلَمْ یَنْظُرُوْۤا اِلَی السَّمَآءِ فَوْقَهُمْ كَیْفَ بَنَیْنٰهَا وَزَیَّنّٰهَا وَمَا لَهَا مِنْ فُرُوْجٍ ۟
ತಮ್ಮ ಮೇಲ್ಭಾಗದಲ್ಲಿರುವ ಆಕಾಶದದತ್ತ ಅವರು ನೋಡಲಿಲ್ಲವೇ; ನಾವದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವೆAದು? ಅದಕ್ಕೆಯಾವ ಬಿರುಕೂಇಲ್ಲ.
Ərəbcə təfsirlər:
وَالْاَرْضَ مَدَدْنٰهَا وَاَلْقَیْنَا فِیْهَا رَوَاسِیَ وَاَنْۢبَتْنَا فِیْهَا مِنْ كُلِّ زَوْجٍ بَهِیْجٍ ۟ۙ
ಭೂಮಿಯನ್ನು ನಾವು ಹರಡಿಸಿದೆವು, ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಎಲ್ಲಾ ವಿಧದ ನಯನ ಮನೋಹರವಾದ ಸಸ್ಯಜೋಡಿಗಳನ್ನು ಬೆಳೆಸಿದೆವು.
Ərəbcə təfsirlər:
تَبْصِرَةً وَّذِكْرٰی لِكُلِّ عَبْدٍ مُّنِیْبٍ ۟
ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.
Ərəbcə təfsirlər:
وَنَزَّلْنَا مِنَ السَّمَآءِ مَآءً مُّبٰرَكًا فَاَنْۢبَتْنَا بِهٖ جَنّٰتٍ وَّحَبَّ الْحَصِیْدِ ۟ۙ
ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು.
Ərəbcə təfsirlər:
وَالنَّخْلَ بٰسِقٰتٍ لَّهَا طَلْعٌ نَّضِیْدٌ ۟ۙ
ಮತ್ತು ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರ ಮರಗಳನ್ನು ಉಂಟುಮಾಡಿದೆವು.
Ərəbcə təfsirlər:
رِّزْقًا لِّلْعِبَادِ ۙ— وَاَحْیَیْنَا بِهٖ بَلْدَةً مَّیْتًا ؕ— كَذٰلِكَ الْخُرُوْجُ ۟
ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ.
Ərəbcə təfsirlər:
كَذَّبَتْ قَبْلَهُمْ قَوْمُ نُوْحٍ وَّاَصْحٰبُ الرَّسِّ وَثَمُوْدُ ۟ۙ
ಇವರಿಗಿಂತ (ಮಕ್ಕಾದ ಬಹುದೇವಾರಾಧಕರಿಗಿಂತ) ಮೊದಲು ನೂಹರ ಜನಾಂಗ, ರಸ್ಸ್ನವರು ಮತ್ತು ಸಮೂದರು,
Ərəbcə təfsirlər:
وَعَادٌ وَّفِرْعَوْنُ وَاِخْوَانُ لُوْطٍ ۟ۙ
ಮತ್ತು ಆದರು ಫಿರ್‌ಔನನು ಮತ್ತು ಲೂತರ ಸಹೋದರರು.
Ərəbcə təfsirlər:
وَّاَصْحٰبُ الْاَیْكَةِ وَقَوْمُ تُبَّعٍ ؕ— كُلٌّ كَذَّبَ الرُّسُلَ فَحَقَّ وَعِیْدِ ۟
ಐಕಾದವರು ಮತ್ತು ತುಬ್ಬಾ ಜನಾಂಗದವರೂ ಸಹ, ಅವರೆಲ್ಲರೂ ಸಂದೇಶವಾಹಕರನ್ನು ನಿಷೇಧಿಸಿದರು, ಕೊನೆಗೆ ಅವರ ಮೇಲೆ ನನ್ನ (ಶಿಕ್ಷೆಯ) ಎಚ್ಚರಿಕೆಯು ಸತ್ಯವಾಗಿಬಿಟ್ಟಿತು.
Ərəbcə təfsirlər:
اَفَعَیِیْنَا بِالْخَلْقِ الْاَوَّلِ ؕ— بَلْ هُمْ فِیْ لَبْسٍ مِّنْ خَلْقٍ جَدِیْدٍ ۟۠
ಏನೂ ನಾವು ಮೊದಲ ಬಾರಿ ಸೃಷ್ಟಿಸುವ ಮೂಲಕ ದಣಿದುಬಿಟ್ಟಿದ್ದೇವೆ ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಕುರಿತು ಸಂದೇಹದಲ್ಲಿದ್ದಾರೆ.
Ərəbcə təfsirlər:
 
Mənaların tərcüməsi Surə: Qaf
Surələrin mündəricatı Səhifənin rəqəmi
 
Qurani Kərimin mənaca tərcüməsi - Kannad dilinə tərcümə - Bəşir Meysuri. - Tərcumənin mündəricatı

Şeyx Bəşir Meysuri tərəfindən tərcümə edilmişdir. "Ruvvad" tərcümə mərkəzinin rəhbərliyi altında inkişaf etdirilmişdir.

Bağlamaq