Check out the new design

Firo maanaaji al-quraan tedduɗo oo - Eggo Kannada ngol - Bashiir Maisoori * - Tippudi firooji ɗii


Firo maanaaji Simoore: Simoore kuɗol (al-qalam)   Aaya:
اِنَّا بَلَوْنٰهُمْ كَمَا بَلَوْنَاۤ اَصْحٰبَ الْجَنَّةِ ۚ— اِذْ اَقْسَمُوْا لَیَصْرِمُنَّهَا مُصْبِحِیْنَ ۟ۙ
ನಿಸ್ಸಂಶಯವಾಗಿಯೂ ನಾವು ತೋಟದವರನ್ನು (ಯಮನ್ನವರು) ಪರೀಕ್ಷಿಸಿದಂತೆಯೇ ಅವರನ್ನು (ಮಕ್ಕಾದವರನ್ನು) ಪರೀಕ್ಷೆಗೊಳಪಡಿಸುವೆವು. ಪ್ರಭಾತವಾಗುತ್ತಲೇ ತೋಟದ ಫಲಗಳನ್ನು ಕೊಯ್ಯುವೆವೆಂದು ಅವರು ಆಣೆ ಹಾಕಿದ ಸಂರ‍್ಭವನ್ನು ಸ್ಮರಿಸಿರಿ.
Faccirooji aarabeeji:
وَلَا یَسْتَثْنُوْنَ ۟
ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.
Faccirooji aarabeeji:
فَطَافَ عَلَیْهَا طَآىِٕفٌ مِّنْ رَّبِّكَ وَهُمْ نَآىِٕمُوْنَ ۟
ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.
Faccirooji aarabeeji:
فَاَصْبَحَتْ كَالصَّرِیْمِ ۟ۙ
ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.
Faccirooji aarabeeji:
فَتَنَادَوْا مُصْبِحِیْنَ ۟ۙ
ಮುಂಜಾನೆ ಆಗುತ್ತಲೇ ಅವರು ಪರಸ್ಪರ ಕೂಗಿ ಹೇಳಿದರು;
Faccirooji aarabeeji:
اَنِ اغْدُوْا عَلٰی حَرْثِكُمْ اِنْ كُنْتُمْ صٰرِمِیْنَ ۟
ನಿಮಗೆ ಕೊಯ್ಯಲಿಕ್ಕಿದ್ದರೆ ನಿಮ್ಮ ತೋಟದೆಡೆಗೆ ಹೊರಡಿರಿ.
Faccirooji aarabeeji:
فَانْطَلَقُوْا وَهُمْ یَتَخَافَتُوْنَ ۟ۙ
ಅನಂತರ ಅವರೆಲ್ಲರೂ ಪರಸ್ಪರ ಪಿಸುಗುಟ್ಟುತ್ತಾ ತೆರಳಿದರು.
Faccirooji aarabeeji:
اَنْ لَّا یَدْخُلَنَّهَا الْیَوْمَ عَلَیْكُمْ مِّسْكِیْنٌ ۟ۙ
ಇಂದು ಯಾವೊಬ್ಬ ಬಡವನೂ ನಿಮ್ಮ ಬಳಿಗೆ ಬರದಂತಾಗಲಿ.
Faccirooji aarabeeji:
وَّغَدَوْا عَلٰی حَرْدٍ قٰدِرِیْنَ ۟
ನಾವು ಬಡವರನ್ನು ತಡೆಯಲು ಶಕ್ತರು ಎಂದು ಭಾವಿಸಿ ಅವರು ಮುಂಜಾನೆಯೇ ತೆರಳಿದರು,
Faccirooji aarabeeji:
فَلَمَّا رَاَوْهَا قَالُوْۤا اِنَّا لَضَآلُّوْنَ ۟ۙ
ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ
Faccirooji aarabeeji:
بَلْ نَحْنُ مَحْرُوْمُوْنَ ۟
. ಅಲ್ಲ, ನಾವು ವಂಚಿತರಾಗಿದ್ದೇವೆ.
Faccirooji aarabeeji:
قَالَ اَوْسَطُهُمْ اَلَمْ اَقُلْ لَّكُمْ لَوْلَا تُسَبِّحُوْنَ ۟
ಅವರ ಪೈಕಿ ಉತ್ತಮನಾಗಿದ್ದವನು ಹೇಳಿದನು; ನೀವು ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುವುದಿಲ್ಲವೇಕೆ? ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
Faccirooji aarabeeji:
قَالُوْا سُبْحٰنَ رَبِّنَاۤ اِنَّا كُنَّا ظٰلِمِیْنَ ۟
ಆಗ ಅವರು ನಮ್ಮ ಪ್ರಭು ಪರಮಪಾವವನು. ನಿಸ್ಸಂದೇಹವಾಗಿಯೂ ನಾವು ಅಕ್ರಮಿಗಳಾಗಿದ್ದೆವು ಎಂದರು.
Faccirooji aarabeeji:
فَاَقْبَلَ بَعْضُهُمْ عَلٰی بَعْضٍ یَّتَلَاوَمُوْنَ ۟
ಬಳಿಕ ಅವರು ಪರಸ್ಪರರನ್ನು ಆಕ್ಷೇಪಿಸತೊಡಗಿದರು.
Faccirooji aarabeeji:
قَالُوْا یٰوَیْلَنَاۤ اِنَّا كُنَّا طٰغِیْنَ ۟
ಅಯ್ಯೋ ದರ‍್ಗತಿಯೇ, ಖಂಡಿತವಾಗಿಯೂ ನಾವು ಅತಿಕ್ರಮಿಗಳಾಗಿದ್ದೆವು ಎಂದರು.
Faccirooji aarabeeji:
عَسٰی رَبُّنَاۤ اَنْ یُّبْدِلَنَا خَیْرًا مِّنْهَاۤ اِنَّاۤ اِلٰی رَبِّنَا رٰغِبُوْنَ ۟
ನಮ್ಮ ಪ್ರಭು ನಮಗೆ ಇದಕ್ಕಿಂತಲೂ ಉತ್ತಮವಾಗಿರುವುದನ್ನು ಇದರ ಬದಲಿಗೆ ಕೊಡಬಹುದು. ನಿಸ್ಸಂದೇಹವಾಗಿಯೂ ನಾವು ನಮ್ಮ ಪ್ರಭುವಿನಲ್ಲೇ ನಿರೀಕ್ಷೆಯನ್ನಿರಿಸಿದ್ದೇವೆ.
Faccirooji aarabeeji:
كَذٰلِكَ الْعَذَابُ ؕ— وَلَعَذَابُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟۠
ಶಿಕ್ಷೆ ಹೀಗೆಯೇ ಇರುತ್ತದೆ ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಕಟ ಅವರು ಅರಿಯುತ್ತಿದ್ದರೆ!
Faccirooji aarabeeji:
اِنَّ لِلْمُتَّقِیْنَ عِنْدَ رَبِّهِمْ جَنّٰتِ النَّعِیْمِ ۟
ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹಪರ‍್ಣ ಸ್ರ‍್ಗೋದ್ಯಾನಗಳಿವೆ.
Faccirooji aarabeeji:
اَفَنَجْعَلُ الْمُسْلِمِیْنَ كَالْمُجْرِمِیْنَ ۟ؕ
ನಾವು ಆಜ್ಞಾಪಾಲಕರನ್ನು ಅಪರಾಧಿಗಳಂತೆ ಮಾಡುವೆವೇ ?
Faccirooji aarabeeji:
مَا لَكُمْ ۫— كَیْفَ تَحْكُمُوْنَ ۟ۚ
ನಿಮಗೇನಾಗಿದೆ ? ನೀವು ಹೇಗೆ ತರ‍್ಮಾನ ಮಾಡುತ್ತಿರುವಿರಿ ?
Faccirooji aarabeeji:
اَمْ لَكُمْ كِتٰبٌ فِیْهِ تَدْرُسُوْنَ ۟ۙ
ಅಥವಾ ನಿಮ್ಮ ಬಳಿ ಯಾವುದಾದರೂ ಗ್ರಂಥವಿದ್ದು ನೀವು ಅದನ್ನು ಅಧ್ಯಯನ ನಡೆಸುತ್ತಿರುವಿರಾ ?
Faccirooji aarabeeji:
اِنَّ لَكُمْ فِیْهِ لَمَا تَخَیَّرُوْنَ ۟ۚ
ಅಂದರೆ ಅದರಲ್ಲಿ ನೀವು ಮೆಚ್ಚುವಂತಹ ವಿಚಾರಗಳು ಬರೆದಿವೆಯೇ ?
Faccirooji aarabeeji:
اَمْ لَكُمْ اَیْمَانٌ عَلَیْنَا بَالِغَةٌ اِلٰی یَوْمِ الْقِیٰمَةِ ۙ— اِنَّ لَكُمْ لَمَا تَحْكُمُوْنَ ۟ۚ
ನೀವು ತರ‍್ಮಾನಿಸುದೆಲ್ಲವೂ ನಿಮಗಿರುವುದೆಂದು ಪುನರುತ್ಥಾನದ ದಿನದವರೆಗೆ ನಾವು ಪಾಲಿಸಲೇಬೇಕಾದ ಕರಾರನ್ನು ನೀವು ನಮ್ಮಿಂದ ಪಡೆದುಕೊಂಡಿರುವಿರಾ ?
Faccirooji aarabeeji:
سَلْهُمْ اَیُّهُمْ بِذٰلِكَ زَعِیْمٌ ۟ۚۛ
ಅವರ ಪೈಕಿ ಇದಕ್ಕೆ ಜಾಮೀನು ವಹಿಸಿ ಕೊಂಡಿರುವವನು ಯಾರೆಂದು ಅವರೊಂದಿಗೆ ಕೇಳಿರಿ.
Faccirooji aarabeeji:
اَمْ لَهُمْ شُرَكَآءُ ۛۚ— فَلْیَاْتُوْا بِشُرَكَآىِٕهِمْ اِنْ كَانُوْا صٰدِقِیْنَ ۟
ಅಥವಾ, ಅವರಿಗೆ ಸಹಭಾಗಿಗಳಿದ್ದಾರೆಯೇ ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ಕರೆತರಲಿ.
Faccirooji aarabeeji:
یَوْمَ یُكْشَفُ عَنْ سَاقٍ وَّیُدْعَوْنَ اِلَی السُّجُوْدِ فَلَا یَسْتَطِیْعُوْنَ ۟ۙ
ಕಣಕಾಲನ್ನು ಪ್ರಕಟ ಮಾಡಲಾಗುವ ದಿನ ಸಾಷ್ಟಾಂಗ ಮಾಡಲು ಅವರನ್ನು ಕರೆಯಲಾಗುವುದು, ಆಗ ಅವರಿಗೆ ಸಾಷ್ಟಾಂಗ ಮಾಡಲು ಸಾಧ್ಯವಾಗದು.
Faccirooji aarabeeji:
 
Firo maanaaji Simoore: Simoore kuɗol (al-qalam)
Tippudi cimooje Tonngoode hello ngoo
 
Firo maanaaji al-quraan tedduɗo oo - Eggo Kannada ngol - Bashiir Maisoori - Tippudi firooji ɗii

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddude