Check out the new design

Firo maanaaji al-quraan tedduɗo oo - Eggo (nantino) ngo e haala Kannada - Hamza Batur * - Tippudi firooji ɗii

PDF XML CSV Excel API
Please review the Terms and Policies

Firo maanaaji Simoore: Simoore sujjannde   Aaya:

ಅಸ್ಸಜ್ದ

الٓمّٓ ۟ۚ
ಅಲಿಫ್-ಲಾಮ್-ಮೀಮ್.
Faccirooji aarabeeji:
تَنْزِیْلُ الْكِتٰبِ لَا رَیْبَ فِیْهِ مِنْ رَّبِّ الْعٰلَمِیْنَ ۟ؕ
ಈ ಗ್ರಂಥವು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.
Faccirooji aarabeeji:
اَمْ یَقُوْلُوْنَ افْتَرٰىهُ ۚ— بَلْ هُوَ الْحَقُّ مِنْ رَّبِّكَ لِتُنْذِرَ قَوْمًا مَّاۤ اَتٰىهُمْ مِّنْ نَّذِیْرٍ مِّنْ قَبْلِكَ لَعَلَّهُمْ یَهْتَدُوْنَ ۟
ಅವರು (ಪ್ರವಾದಿ) ಇದನ್ನು ಸ್ವಯಂ ರಚಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದ ಸತ್ಯವಾಗಿದೆ. ನಿಮಗಿಂತ ಮೊದಲು ಯಾವುದೇ ಮುನ್ನೆಚ್ಚರಿಕೆಗಾರರು ಬರದ ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರು ಸನ್ಮಾರ್ಗವನ್ನು ಸ್ವೀಕರಿಸುವುದಕ್ಕಾಗಿ.
Faccirooji aarabeeji:
اَللّٰهُ الَّذِیْ خَلَقَ السَّمٰوٰتِ وَالْاَرْضَ وَمَا بَیْنَهُمَا فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ؕ— مَا لَكُمْ مِّنْ دُوْنِهٖ مِنْ وَّلِیٍّ وَّلَا شَفِیْعٍ ؕ— اَفَلَا تَتَذَكَّرُوْنَ ۟
ಅಲ್ಲಾಹನೇ ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನ ಹೊರತು ನಿಮಗೆ ಬೇರೆ ರಕ್ಷಕರೋ, ಶಿಫಾರಸುಗಾರರೋ ಇಲ್ಲ. ಆದರೂ ನೀವು ಉಪದೇಶ ಪಡೆಯುವುದಿಲ್ಲವೇ?
Faccirooji aarabeeji:
یُدَبِّرُ الْاَمْرَ مِنَ السَّمَآءِ اِلَی الْاَرْضِ ثُمَّ یَعْرُجُ اِلَیْهِ فِیْ یَوْمٍ كَانَ مِقْدَارُهٗۤ اَلْفَ سَنَةٍ مِّمَّا تَعُدُّوْنَ ۟
ಅವನು ಆಕಾಶದಿಂದ ಭೂಮಿಯ ತನಕ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ನಂತರ ನಿಮ್ಮ ಎಣಿಕೆಯ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾದ ಒಂದು ದಿನದಂದು ಆ ಕಾರ್ಯಗಳು ಅವನ ಬಳಿಗೆ ಏರಿಹೋಗುತ್ತವೆ.
Faccirooji aarabeeji:
ذٰلِكَ عٰلِمُ الْغَیْبِ وَالشَّهَادَةِ الْعَزِیْزُ الرَّحِیْمُ ۟ۙ
ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನಾಗಿದ್ದಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
Faccirooji aarabeeji:
الَّذِیْۤ اَحْسَنَ كُلَّ شَیْءٍ خَلَقَهٗ وَبَدَاَ خَلْقَ الْاِنْسَانِ مِنْ طِیْنٍ ۟ۚ
ಅವನು ತನ್ನ ಎಲ್ಲಾ ಸೃಷ್ಟಿಗಳನ್ನು ಅತ್ಯಂತ ಸಮರ್ಪಕವಾಗಿ ಸೃಷ್ಟಿಸಿದ್ದಾನೆ. ಅವನು ಮನುಷ್ಯ ಸೃಷ್ಟಿಯನ್ನು ಜೇಡಿಮಣ್ಣಿನಿಂದ ಆರಂಭಿಸಿದನು.
Faccirooji aarabeeji:
ثُمَّ جَعَلَ نَسْلَهٗ مِنْ سُلٰلَةٍ مِّنْ مَّآءٍ مَّهِیْنٍ ۟ۚ
ನಂತರ ಅವನ (ಮನುಷ್ಯನ) ಸಂತಾನವನ್ನು ತುಚ್ಛ ನೀರಿನ ಸತ್ವದಿಂದ (ವೀರ್ಯದಿಂದ) ಉಂಟುಮಾಡಿದನು.
Faccirooji aarabeeji:
ثُمَّ سَوّٰىهُ وَنَفَخَ فِیْهِ مِنْ رُّوْحِهٖ وَجَعَلَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟
ನಂತರ ಅವನಿಗೆ ಸರಿಯಾದ ರೂಪವನ್ನು ನೀಡಿ, ತನ್ನ ಕಡೆಯ ಆತ್ಮವನ್ನು ಊದಿದನು. ಅವನು ನಿಮಗೆ ಕೇಳುವ ಶಕ್ತಿಯನ್ನು, ನೋಡುವ ಶಕ್ತಿಯನ್ನು ಮತ್ತು ಹೃದಯವನ್ನು ನೀಡಿದನು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.
Faccirooji aarabeeji:
وَقَالُوْۤا ءَاِذَا ضَلَلْنَا فِی الْاَرْضِ ءَاِنَّا لَفِیْ خَلْقٍ جَدِیْدٍ ؕ۬— بَلْ هُمْ بِلِقَآءِ رَبِّهِمْ كٰفِرُوْنَ ۟
ಸತ್ಯನಿಷೇಧಿಗಳು ಹೇಳಿದರು: “ನಾವು ಭೂಮಿಯಲ್ಲಿ ವಿಲೀನವಾಗಿ ಕಣ್ಮರೆಯಾದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?” ಅಲ್ಲ, ವಾಸ್ತವವಾಗಿ ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದ್ದಾರೆ.
Faccirooji aarabeeji:
قُلْ یَتَوَفّٰىكُمْ مَّلَكُ الْمَوْتِ الَّذِیْ وُكِّلَ بِكُمْ ثُمَّ اِلٰی رَبِّكُمْ تُرْجَعُوْنَ ۟۠
ಹೇಳಿರಿ: “ನಿಮ್ಮ ಹೊಣೆ ವಹಿಸಿಕೊಡಲಾದ ಮರಣದ ದೂತರು ನಿಮ್ಮ ಆತ್ಮವನ್ನು ವಶಪಡಿಸುವರು. ನಂತರ ನಿಮ್ಮನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು.”
Faccirooji aarabeeji:
 
Firo maanaaji Simoore: Simoore sujjannde
Tippudi cimooje Tonngoode hello ngoo
 
Firo maanaaji al-quraan tedduɗo oo - Eggo (nantino) ngo e haala Kannada - Hamza Batur - Tippudi firooji ɗii

Eggo ko Mohamed Hamza Betur. Nde woni ko e ñiiɓirde Rowad ngam eggo.

Uddude