Check out the new design

Fassarar Ma'anonin Alqura'ni - Fassarar Kanadiya - Bashir Maisuri * - Teburin Bayani kan wasu Fassarori


Fassarar Ma'anoni Sura: Al'bakara   Aya:
تِلْكَ الرُّسُلُ فَضَّلْنَا بَعْضَهُمْ عَلٰی بَعْضٍ ۘ— مِنْهُمْ مَّنْ كَلَّمَ اللّٰهُ وَرَفَعَ بَعْضَهُمْ دَرَجٰتٍ ؕ— وَاٰتَیْنَا عِیْسَی ابْنَ مَرْیَمَ الْبَیِّنٰتِ وَاَیَّدْنٰهُ بِرُوْحِ الْقُدُسِ ؕ— وَلَوْ شَآءَ اللّٰهُ مَا اقْتَتَلَ الَّذِیْنَ مِنْ بَعْدِهِمْ مِّنْ بَعْدِ مَا جَآءَتْهُمُ الْبَیِّنٰتُ وَلٰكِنِ اخْتَلَفُوْا فَمِنْهُمْ مَّنْ اٰمَنَ وَمِنْهُمْ مَّنْ كَفَرَ ؕ— وَلَوْ شَآءَ اللّٰهُ مَا اقْتَتَلُوْا ۫— وَلٰكِنَّ اللّٰهَ یَفْعَلُ مَا یُرِیْدُ ۟۠
ನಾವು ಆ ಸಂದೇಶವಾಹಕರಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಶ್ರೇಷ್ಠತೆಯನ್ನು ದಯಪಾಲಿಸಿದೆವು. ಅವರ ಪೈಕಿ ಅಲ್ಲಾಹನು ಸಂಭಾಷಣೆ ನಡೆಸಿದವರು ಇದ್ದಾರೆ ಮತ್ತು ಅವನು ಅವರಲ್ಲಿ ಕೆಲವರಿಗೆ ಪದವಿಗಳನ್ನು ನೀಡಿ ಉನ್ನತಗೊಳಿಸಿದನು ಮತ್ತು ಮರ್ಯಮರ ಪುತ್ರ ಈಸಾರಿಗೆ ನಾವು ಸುಸ್ಪಷ್ಟ ಪುರಾವೆಗಳನ್ನು ದಯಪಾಲಿಸಿದೆವು ಹಾಗೂ ಅವರನ್ನು ಪವಿತ್ರಾತ್ಮನ ಮೂಲಕ ಬಲಪಡಿಸಿದೆವು ಮತ್ತು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ತಮ್ಮಲ್ಲಿಗೆ ಸುಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಅವರ ನಂತರದವರು ಪರಸ್ಪರ ಕಾದಾಡುತ್ತಿರಲಿಲ್ಲ. ಆದರೆ ಅವರು ಭಿನ್ನತೆ ತೋರಿದರು. ಹೀಗೆ ಅವರಲ್ಲಿ ಕೆಲವರು ಸತ್ಯ ವಿಶ್ವಾಸವಿರಿಸಿದರು ಇನ್ನು ಕೆಲವರು ಸತ್ಯನಿಷೇಧ ಕೈಗೊಂಡರು ಮತ್ತು ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಅವರು ಪರಸ್ಪರ ಕಾದಾಡುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
Tafsiran larabci:
یٰۤاَیُّهَا الَّذِیْنَ اٰمَنُوْۤا اَنْفِقُوْا مِمَّا رَزَقْنٰكُمْ مِّنْ قَبْلِ اَنْ یَّاْتِیَ یَوْمٌ لَّا بَیْعٌ فِیْهِ وَلَا خُلَّةٌ وَّلَا شَفَاعَةٌ ؕ— وَالْكٰفِرُوْنَ هُمُ الظّٰلِمُوْنَ ۟
ಓ ಸತ್ಯವಿಶ್ವಾಸಿಗಳೇ! ಕ್ರಯ ವಿಕ್ರಯವಾಗಲೀ, ಸ್ನೇಹ ಬಾಂಧವ್ಯವಾಗಲೀ ಮತ್ತು ಯಾವ ಶಿಫಾರಸ್ಸಾಗಲೀ ನಡೆಯದ ದಿನ ಬರುವುದಕ್ಕೆ ಮುನ್ನ ನಾವು ನಿಮಗೆ ದಯಪಾಲಿಸಿದ ಜೀವನಾಧಾರದಿಂದ ಖರ್ಚು ಮಾಡಿರಿ ಮತ್ತು ಸತ್ಯ ನಿಷೇಧಿಸಿದವರೇ ಅಕ್ರಮಿಗಳಾಗಿರುವರು.
Tafsiran larabci:
اَللّٰهُ لَاۤ اِلٰهَ اِلَّا هُوَ ۚ— اَلْحَیُّ الْقَیُّوْمُ ۚ۬— لَا تَاْخُذُهٗ سِنَةٌ وَّلَا نَوْمٌ ؕ— لَهٗ مَا فِی السَّمٰوٰتِ وَمَا فِی الْاَرْضِ ؕ— مَنْ ذَا الَّذِیْ یَشْفَعُ عِنْدَهٗۤ اِلَّا بِاِذْنِهٖ ؕ— یَعْلَمُ مَا بَیْنَ اَیْدِیْهِمْ وَمَا خَلْفَهُمْ ۚ— وَلَا یُحِیْطُوْنَ بِشَیْءٍ مِّنْ عِلْمِهٖۤ اِلَّا بِمَا شَآءَ ۚ— وَسِعَ كُرْسِیُّهُ السَّمٰوٰتِ وَالْاَرْضَ ۚ— وَلَا یَـُٔوْدُهٗ حِفْظُهُمَا ۚ— وَهُوَ الْعَلِیُّ الْعَظِیْمُ ۟
ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಅವನು ಚಿರಂತನನು, ಸರ್ವ ನಿಯಂತ್ರಕನು. ಅವನಿಗೆ ತೂಕಡಿಕೆಯಾಗಲೀ, ನಿದ್ರೆಯಾಗಲೀ ಬಾಧಿಸದು. ಭೂಮಿ ಆಕಾಶಗಳಲ್ಲಿರುವುದೆಲ್ಲವೂ ಅವನ ಒಡೆತನದಲ್ಲ್ಲಿವೆ. ಅವನ ಅಪ್ಪಣೆಯಿಲ್ಲದೆ ಅವನ ಸನ್ನಿಧಿಯಲ್ಲಿ ಶಿಫಾರಸ್ಸು ಮಾಡುವವನಾರಿದ್ದಾನೆ? ಅವರ (ಮನುಷ್ಯರ) ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನು ಇಚ್ಛಿಸಿರುವುದರ ಹೊರತು ಅವನ ಜ್ಞಾನದಿಂದ ಯಾವುದನ್ನೂ ಅವರು ಪಡೆಯಲಾರರು; ಅವನ 'ಕುರ್ಸಿ'ಯು ಭೂಮಿ ಆಕಾಶಗಳನ್ನು ಆವರಿಸಿದೆ ಅವೆರಡರ ಸಂರಕ್ಷಣೆಯಿAದ ಅವನು ದಣಿಯುವುದಿಲ್ಲ, ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿರುತ್ತಾನೆ.
Tafsiran larabci:
لَاۤ اِكْرَاهَ فِی الدِّیْنِ ۚ— قَدْ تَّبَیَّنَ الرُّشْدُ مِنَ الْغَیِّ ۚ— فَمَنْ یَّكْفُرْ بِالطَّاغُوْتِ وَیُؤْمِنْ بِاللّٰهِ فَقَدِ اسْتَمْسَكَ بِالْعُرْوَةِ الْوُثْقٰی ۗ— لَا انْفِصَامَ لَهَا ؕ— وَاللّٰهُ سَمِیْعٌ عَلِیْمٌ ۟
ಧರ್ಮ ಸ್ವೀಕಾರದ ವಿಷಯದಲ್ಲಿ ಯಾವುದೇ ಬಲವಂತವಿಲ್ಲ. ಸನ್ಮಾರ್ಗವೂ ದುರ್ಮಾರ್ಗದಿಂದ ಪೂರ್ಣ ಬೇರ್ಪಟ್ಟು ಪ್ರತ್ಯೇಕವಾಗಿದೆ. ಆದ್ದರಿಂದ ಯಾರು ಮಿಥ್ಯಾರಾಧ್ಯರನ್ನು ತಿರಸ್ಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಅವನು ಎಂದಿಗೂ ಮುರಿಯದ ಸದೃಢ ಆಶ್ರಯವನ್ನು ಅವಲಂಬಿಸಿದನು. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
Tafsiran larabci:
 
Fassarar Ma'anoni Sura: Al'bakara
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiya - Bashir Maisuri - Teburin Bayani kan wasu Fassarori

Fassarar Sheikh Bashir Maisuri. An sabunta ta ƙarƙashin kulawar Cibiyar fassara ta Ruwad.

Rufewa