Check out the new design

Fassarar Ma'anonin Alqura'ni - Fassarar Kanadiya - Bashir Maisuri * - Teburin Bayani kan wasu Fassarori


Fassarar Ma'anoni Sura: Alhajj   Aya:
وَهُدُوْۤا اِلَی الطَّیِّبِ مِنَ الْقَوْلِ ۖۗۚ— وَهُدُوْۤا اِلٰی صِرَاطِ الْحَمِیْدِ ۟
ಐಹಿಕ ಜೀವನದಲ್ಲಿ ಅವರನ್ನು ಪವಿತ್ರ ವಚನದೆಡೆಗೆ (ಸಾಕ್ಷಿ ವಚನ) ಮುನ್ನಡೆಸಲಾಗಿದೆ ಮತ್ತು ಅವರನ್ನು ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸಲಾಗಿತ್ತು.
Tafsiran larabci:
اِنَّ الَّذِیْنَ كَفَرُوْا وَیَصُدُّوْنَ عَنْ سَبِیْلِ اللّٰهِ وَالْمَسْجِدِ الْحَرَامِ الَّذِیْ جَعَلْنٰهُ لِلنَّاسِ سَوَآءَ ١لْعَاكِفُ فِیْهِ وَالْبَادِ ؕ— وَمَنْ یُّرِدْ فِیْهِ بِاِلْحَادٍ بِظُلْمٍ نُّذِقْهُ مِنْ عَذَابٍ اَلِیْمٍ ۟۠
ಯಾರು ಸತ್ಯನಿಷೇಧಿಸಿದರೊ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೋ ಮತ್ತು ಅಲ್ಲಿನ ನಿವಾಸಿಗಳಿಗೂ ಹಾಗೂ ಹೊರ ನಾಡಿನವರಿಗೂ ನಾವು ಸಮಾನ ಹಕ್ಕುನ್ನು ನೀಡಿರುವ. ಮಸ್ಜಿದುಲ್ ಹರಾಮ್‌ನಿಂದ ತಡೆಯುತ್ತಾರೋ ಮತ್ತು ಅಲ್ಲಿ ಯಾರು ಅನ್ಯಾಯದೊಂದಿಗೆ ಅತಿರೇಕವನ್ನು ಬಯಸುತ್ತಾನೋ ಅವನಿಗೆ ನಾವು ವೇದನಾಜನಕ ಯಾತನೆಯನ್ನು ಸವಿಯುವಂತೆ ಮಾಡುವೆವು.
Tafsiran larabci:
وَاِذْ بَوَّاْنَا لِاِبْرٰهِیْمَ مَكَانَ الْبَیْتِ اَنْ لَّا تُشْرِكْ بِیْ شَیْـًٔا وَّطَهِّرْ بَیْتِیَ لِلطَّآىِٕفِیْنَ وَالْقَآىِٕمِیْنَ وَالرُّكَّعِ السُّجُوْدِ ۟
ನಾವು ಇಬ್ರಾಹೀಮರಿಗೆ ಕಾಬಾಲಯದ ಸ್ಥಾನವನ್ನು ನಿಶ್ಚಯಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ನೀವು ನನ್ನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ ಮತ್ತು ಪ್ರದಕ್ಷಿಣೆ ಹಾಕುವವರಿಗೆ, ನಮಾಝ್ ನಿರ್ವಹಿಸುವವರಿಗೆ, ಬಾಗುವವರಿಗೆ, ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುಚಿಯಾಗಿರಿಸಿರಿ.
Tafsiran larabci:
وَاَذِّنْ فِی النَّاسِ بِالْحَجِّ یَاْتُوْكَ رِجَالًا وَّعَلٰی كُلِّ ضَامِرٍ یَّاْتِیْنَ مِنْ كُلِّ فَجٍّ عَمِیْقٍ ۟ۙ
ಹಜ್ಜ್ಗಾಗಿ ನೀವು ಜನರಿಗೆ ಕರೆ ನೀಡಿರಿ. ಅವರು ಪಾದಚಾರಿಗಳಾಗಿಯೂ, ಬಳಲಿದ ಒಂಟೆಗಳ ಮೇಲೂ ದೂರದ ಎಲ್ಲಾ ಮಾರ್ಗದಿಂದಲೂ ನಿಮ್ಮ ಬಳಿಗೆ ಬರುವರು.
Tafsiran larabci:
لِّیَشْهَدُوْا مَنَافِعَ لَهُمْ وَیَذْكُرُوا اسْمَ اللّٰهِ فِیْۤ اَیَّامٍ مَّعْلُوْمٰتٍ عَلٰی مَا رَزَقَهُمْ مِّنْ بَهِیْمَةِ الْاَنْعَامِ ۚ— فَكُلُوْا مِنْهَا وَاَطْعِمُوا الْبَآىِٕسَ الْفَقِیْرَ ۟ؗ
ಅವರು ತಮ್ಮ ಪ್ರಯೋಜನಗಳನ್ನು ಪಡೆಯಲಿಕ್ಕಾಗಿ ಬರಲಿ ಮತ್ತು ಅವರಿಗೆ ದಯಪಾಲಿಸಿದ ಜಾನುವಾರುಗಳ ಮೇಲೆ ನಿರ್ಧಿಷ್ಟ ದಿನಗಳಲ್ಲಿ ಅಲ್ಲಾಹನ ನಾಮವನ್ನುಚ್ಚರಿಸಲಿ. ಅದರಿಂದ ನೀವೂ ತಿನ್ನಿರಿ ಹಾಗೂ ಕಡುಬಡವರಿಗೂ ತಿನ್ನಿಸಿರಿ.
Tafsiran larabci:
ثُمَّ لْیَقْضُوْا تَفَثَهُمْ وَلْیُوْفُوْا نُذُوْرَهُمْ وَلْیَطَّوَّفُوْا بِالْبَیْتِ الْعَتِیْقِ ۟
ತರುವಾಯ ಅವರು ತಮ್ಮ ಮಾಲಿನ್ಯಗಳನ್ನು ನೀಗಿಸಲಿ ಮತ್ತು ತಮ್ಮ ಪುರಾತನ ಭವನ ಕಾಬಾದ ಪ್ರದಕ್ಷಿಣೆ ಮಾಡಲಿ.
Tafsiran larabci:
ذٰلِكَ ۗ— وَمَنْ یُّعَظِّمْ حُرُمٰتِ اللّٰهِ فَهُوَ خَیْرٌ لَّهٗ عِنْدَ رَبِّهٖ ؕ— وَاُحِلَّتْ لَكُمُ الْاَنْعَامُ اِلَّا مَا یُتْلٰی عَلَیْكُمْ فَاجْتَنِبُوا الرِّجْسَ مِنَ الْاَوْثَانِ وَاجْتَنِبُوْا قَوْلَ الزُّوْرِ ۟ۙ
ಇದು ಹಜ್ಜ್ನ ವಿಷಯವಾಗಿದೆ ಮತ್ತು ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುವನೋ ಅವನ ಪಾಲಿಗೆ ಅವನ ಪ್ರಭುವಿನ ಬಳಿ ಅತ್ಯುತ್ತಮವಾದುದು ಇದೆ ಮತ್ತು ಜಾನುವಾರುಗಳನ್ನು ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ ಆದರೆ ನಿಮಗೆ ಓದಿ ಹೇಳಲಾದವುಗಳ ಹೊರತು ಹಾಗೆಯೇ ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತನ್ನು ತೊರೆದು ಬಿಡರಿ.
Tafsiran larabci:
 
Fassarar Ma'anoni Sura: Alhajj
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiya - Bashir Maisuri - Teburin Bayani kan wasu Fassarori

Fassarar Sheikh Bashir Maisuri. An sabunta ta ƙarƙashin kulawar Cibiyar fassara ta Ruwad.

Rufewa