Check out the new design

Fassarar Ma'anonin Alqura'ni - Fassarar Kanadiy - Bashir Maisuri * - Teburin Bayani kan wasu Fassarori


Fassarar Ma'anoni Sura: Yaseen   Aya:
وَمَاۤ اَنْزَلْنَا عَلٰی قَوْمِهٖ مِنْ بَعْدِهٖ مِنْ جُنْدٍ مِّنَ السَّمَآءِ وَمَا كُنَّا مُنْزِلِیْنَ ۟
ಅವನ ಬಳಿಕ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಯಾವುದೇ ಸÉÊನ್ಯವನ್ನು ಇಳಿಸಲಿಲ್ಲ ಮತ್ತು ನಾವು ಹೀಗೆ ಇಳಿಸುವುದೂ ಇಲ್ಲ.
Tafsiran larabci:
اِنْ كَانَتْ اِلَّا صَیْحَةً وَّاحِدَةً فَاِذَا هُمْ خٰمِدُوْنَ ۟
ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.
Tafsiran larabci:
یٰحَسْرَةً عَلَی الْعِبَادِ ۣۚ— مَا یَاْتِیْهِمْ مِّنْ رَّسُوْلٍ اِلَّا كَانُوْا بِهٖ یَسْتَهْزِءُوْنَ ۟
ಅಯ್ಯೋ ದಾಸರ ಅವಸ್ಥೆಯೇ ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನ ಅಪಹಾಸ್ಯ ಮಾಡದೇ ಬಿಡಲಿಲ್ಲ.
Tafsiran larabci:
اَلَمْ یَرَوْا كَمْ اَهْلَكْنَا قَبْلَهُمْ مِّنَ الْقُرُوْنِ اَنَّهُمْ اِلَیْهِمْ لَا یَرْجِعُوْنَ ۟
ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾವು ನಾಶಪಡಿಸಿದ್ದನ್ನು ಇವರು ಕಾಣಲಿಲ್ಲವೇ? ಅವರಾದರೋ ಇವರ ಬಳಿಗೆ ಮರಳಲಾರರು.
Tafsiran larabci:
وَاِنْ كُلٌّ لَّمَّا جَمِیْعٌ لَّدَیْنَا مُحْضَرُوْنَ ۟۠
ಅವರೆಲ್ಲರೂ(ಪುನರುತ್ಥಾನದ ದಿನ) ನಮ್ಮ ಮುಂದೆ ಒಟ್ಟಾಗಿ ಹಾಜರುಗೊಳಿಸಲಾಗುವರು.
Tafsiran larabci:
وَاٰیَةٌ لَّهُمُ الْاَرْضُ الْمَیْتَةُ ۖۚ— اَحْیَیْنٰهَا وَاَخْرَجْنَا مِنْهَا حَبًّا فَمِنْهُ یَاْكُلُوْنَ ۟
ಮತ್ತು ನಿರ್ಜೀವ ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ಅದನ್ನು ನಾವು ಜೀವಂತಗೊಳಿಸಿ ಅದರಿಂದ ಧಾನ್ಯಗಳನ್ನು ಹೊರತರುತ್ತೇವೆ. ತರುವಾಯ ಅವರು ಅದರಿಂದ ತಿನ್ನುತ್ತಾರೆ.
Tafsiran larabci:
وَجَعَلْنَا فِیْهَا جَنّٰتٍ مِّنْ نَّخِیْلٍ وَّاَعْنَابٍ وَّفَجَّرْنَا فِیْهَا مِنَ الْعُیُوْنِ ۟ۙ
ಮತ್ತು ನಾವು ಅದರಲ್ಲಿ ಖರ್ಜೂರ ಹಾಗೂ ದ್ರಾಕ್ಷಿಗಳ ತೋಟಗಳನ್ನು ಉಂಟುಮಾಡಿದೆವು ಮತ್ತು ಅದರಲ್ಲಿ ಚಿಲುಮೆಗಳನ್ನು ಹರಿಸಿದೆವು.
Tafsiran larabci:
لِیَاْكُلُوْا مِنْ ثَمَرِهٖ ۙ— وَمَا عَمِلَتْهُ اَیْدِیْهِمْ ؕ— اَفَلَا یَشْكُرُوْنَ ۟
ಅವರು ಅದರ ಫಲಗಳನ್ನು ತಿನ್ನಲೆಂದಾಗಿದೆ ಮತ್ತು ಅದನ್ನು ಅವರ ಕÉÊಗಳು ಮಾಡಿದುದಲ್ಲ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
Tafsiran larabci:
سُبْحٰنَ الَّذِیْ خَلَقَ الْاَزْوَاجَ كُلَّهَا مِمَّا تُنْۢبِتُ الْاَرْضُ وَمِنْ اَنْفُسِهِمْ وَمِمَّا لَا یَعْلَمُوْنَ ۟
ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ ವಸ್ತುಗಳಲ್ಲಿಯು ಜೋಡಿಗಳನ್ನು ಸೃಷ್ಟಿಸಿದವನು ಪರಮಪಾವನನು!
Tafsiran larabci:
وَاٰیَةٌ لَّهُمُ الَّیْلُ ۖۚ— نَسْلَخُ مِنْهُ النَّهَارَ فَاِذَا هُمْ مُّظْلِمُوْنَ ۟ۙ
ಮತ್ತÄ ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಸರಿಸುತ್ತೇವೆ. ಆಗ ಹಠಾತ್ತನೆ ಅವರು ಕತ್ತಲಲ್ಲಿ ಸಿಲುಕುತ್ತಾರೆ.
Tafsiran larabci:
وَالشَّمْسُ تَجْرِیْ لِمُسْتَقَرٍّ لَّهَا ؕ— ذٰلِكَ تَقْدِیْرُ الْعَزِیْزِ الْعَلِیْمِ ۟ؕ
ಮತ್ತು ಸೂರ್ಯನು ತನ್ನ ನಿಶ್ಚಿತ ಗುರಿಯೆಡೆಗೆ ಚಲಿಸುತ್ತಿದ್ದಾನೆ. ಇದು ಪ್ರತಾಪಶಾಲಿಯು, ಸರ್ವಜ್ಞನೂ ಆದ ಅಲ್ಲಾಹನ ನಿಶ್ಚಯವಾಗಿದೆ.
Tafsiran larabci:
وَالْقَمَرَ قَدَّرْنٰهُ مَنَازِلَ حَتّٰی عَادَ كَالْعُرْجُوْنِ الْقَدِیْمِ ۟
ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ ಗೊನೆಯಂತಾಗಿ ಬಿಡುತ್ತದೆ.
Tafsiran larabci:
لَا الشَّمْسُ یَنْۢبَغِیْ لَهَاۤ اَنْ تُدْرِكَ الْقَمَرَ وَلَا الَّیْلُ سَابِقُ النَّهَارِ ؕ— وَكُلٌّ فِیْ فَلَكٍ یَّسْبَحُوْنَ ۟
ಸೂರ್ಯನು ಚಂದ್ರನನ್ನು ಹಿಡಿಯಲಾರನು ಮತ್ತು ರಾತ್ರಿಯು ಹಗಲನ್ನು ದಾಟಿಹೋಗದು. ಸಕಲವೂ ತಮ್ಮ ಕಕ್ಷೆಯಲ್ಲಿ ತೇಲುತ್ತಿವೆ.
Tafsiran larabci:
 
Fassarar Ma'anoni Sura: Yaseen
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiy - Bashir Maisuri - Teburin Bayani kan wasu Fassarori

Fassarar ta Sheikh Bashir Maisuri. An sabunta ta ƙarƙashin kulawar Cibiyar Ruwad Tarjamah.

Rufewa