Check out the new design

Fassarar Ma'anonin Alqura'ni - Fassarar Kanadiy - Bashir Maisuri * - Teburin Bayani kan wasu Fassarori


Fassarar Ma'anoni Sura: Al'nisaa   Aya:
اَلَمْ تَرَ اِلَی الَّذِیْنَ یَزْعُمُوْنَ اَنَّهُمْ اٰمَنُوْا بِمَاۤ اُنْزِلَ اِلَیْكَ وَمَاۤ اُنْزِلَ مِنْ قَبْلِكَ یُرِیْدُوْنَ اَنْ یَّتَحَاكَمُوْۤا اِلَی الطَّاغُوْتِ وَقَدْ اُمِرُوْۤا اَنْ یَّكْفُرُوْا بِهٖ ؕ— وَیُرِیْدُ الشَّیْطٰنُ اَنْ یُّضِلَّهُمْ ضَلٰلًا بَعِیْدًا ۟
ಓ ಪೈಗಂಬರರೇ ತಮ್ಮೆಡೆಗೆ ಅವತೀರ್ಣಗೊಳಿಸಲಾದುದರಲ್ಲೂ, ತಮಗಿಂತ ಮುಂಚೆ ಅವತೀರ್ಣಗೊಳಿಸಲಾದುದರಲ್ಲೂ ನಾವು ವಿಶ್ವಾಸವಿಟ್ಟಿದ್ದೇವೆಂದು ವಾದಿಸುವ, ಜನರನ್ನು ನೀವು ಕಂಡಿಲ್ಲವೇ? ಆದರೆ ಅವರು (ಶೈತಾನನ ಹಿಂಬಾಲಕರು)ತಮ್ಮ ತೀರ್ಪನ್ನು ಮಿಥ್ಯಶಕ್ತಿಯೆಡೆಗೆ ಕೊಂಡೊಯ್ಯಲು ಬಯಸುತ್ತಾರೆ. ವಾಸ್ತವದಲ್ಲಿ ಶೈತಾನನನ್ನು ನಿರಾಕರಿಸಲು ಅವರು ಆದೇಶಿಸಲಾಗಿದ್ದರು. ಶೈತಾನನಂತೂ ಅವರನ್ನು ಪಥಭ್ರಷ್ಟತೆಗೊಳಿಸಿ ಬಹುದೂರ ಕೊಂಡೊಯ್ಯಲು ಬಯಸುತ್ತಾನೆ.
Tafsiran larabci:
وَاِذَا قِیْلَ لَهُمْ تَعَالَوْا اِلٰی مَاۤ اَنْزَلَ اللّٰهُ وَاِلَی الرَّسُوْلِ رَاَیْتَ الْمُنٰفِقِیْنَ یَصُدُّوْنَ عَنْكَ صُدُوْدًا ۟ۚ
ಅಲ್ಲಾಹನು ಅವತೀರ್ಣಗೊಳಿಸಿರುವುದರ (ಕುರ್‌ಆನ್) ಕಡೆಗೆ ಮತ್ತು ಸಂದೇಶವಾಹಕರ ಕಡೆಗೆ ಬನ್ನಿರಿ ಎಂದು ಅವರೊಂದಿಗೆ ಹೇಳಲಾದರೆ ಆ ಕಪಟವಿಶ್ವಾಸಿಗಳು ತಮ್ಮಿಂದ ವಿಮುಖರಾಗಿ ಹೋಗುವುದನ್ನು ನೀವು ಕಾಣುತ್ತೀರಿ.
Tafsiran larabci:
فَكَیْفَ اِذَاۤ اَصَابَتْهُمْ مُّصِیْبَةٌ بِمَا قَدَّمَتْ اَیْدِیْهِمْ ثُمَّ جَآءُوْكَ یَحْلِفُوْنَ ۖۗ— بِاللّٰهِ اِنْ اَرَدْنَاۤ اِلَّاۤ اِحْسَانًا وَّتَوْفِیْقًا ۟
ಅವರ (ಕಪಟಿಗಳ) ಕೈಗಳು ಮಾಡಿದ ಪಾಪಗಳ ಫಲವಾಗಿ ಅವರಿಗೇನಾದರೂ ಆಪತ್ತು ಬಾಧಿಸಿದರೆ. ಅವರು ತಮ್ಮ ಬಳಿಗೆ ಬಂದು ನಾವು ಕೇವಲ ಒಳಿತು ಮತ್ತು ಸಂಧಾನವಲ್ಲದೇ ಬೇರೇನೂ ಉದ್ದೇಶಿಸಿರಲಿಲ್ಲವೆಂದು ಅಲ್ಲಾಹನ ಮೇಲೆ ಆಣೆ ಹಾಕುತ್ತಾ ಹೇಳುತ್ತಾರೆ. ಅವರ ಅವಸ್ಥೆ ಏನಾದಿತು?
Tafsiran larabci:
اُولٰٓىِٕكَ الَّذِیْنَ یَعْلَمُ اللّٰهُ مَا فِیْ قُلُوْبِهِمْ ۗ— فَاَعْرِضْ عَنْهُمْ وَعِظْهُمْ وَقُلْ لَّهُمْ فِیْۤ اَنْفُسِهِمْ قَوْلًا بَلِیْغًا ۟
ಅವರ ಮನಸ್ಸುಗಳಲ್ಲಿ ಏನಿದೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ನೀವು ಅವರನ್ನು ಕಡೆಗಣಿಸಿರಿ ಮತ್ತು ಅವರಿಗೆ ಸದುಪದೇಶವನ್ನು ನೀಡಿರಿ ಮತ್ತು ಅವರ ಹೃದಯವನ್ನು ಸ್ಪರ್ಶಿಸುವಂತಹ ಮಾತನ್ನು ಅವರಿಗೆ ಹೇಳಿರಿ.
Tafsiran larabci:
وَمَاۤ اَرْسَلْنَا مِنْ رَّسُوْلٍ اِلَّا لِیُطَاعَ بِاِذْنِ اللّٰهِ ؕ— وَلَوْ اَنَّهُمْ اِذْ ظَّلَمُوْۤا اَنْفُسَهُمْ جَآءُوْكَ فَاسْتَغْفَرُوا اللّٰهَ وَاسْتَغْفَرَ لَهُمُ الرَّسُوْلُ لَوَجَدُوا اللّٰهَ تَوَّابًا رَّحِیْمًا ۟
ನಾವು ಪ್ರತಿಯೊಬ್ಬ ಸಂದೇಶವಾಹಕನನ್ನು ಅಲ್ಲಾಹನ ಅಪ್ಪಣೆಯಂತೆ ಅವನನ್ನು ಅನುಸರಿಸಲಿಕ್ಕಾಗಿಯೇ ನಿಯೋಗಿಸಿದ್ದೇವೆ ಮತ್ತು ಅವರು ತಮ್ಮ ಮೇಲೆ ಅಕ್ರಮವನ್ನು ಮಾಡಿ, ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಮತ್ತು ಅವರಿಗೋಸ್ಕರ ಸಂದೇಶವಾಹಕನು ಸಹ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಖಂಡಿತ ಅವರು ಅಲ್ಲಾಹನನ್ನು ಕ್ಷಮೆ ನೀಡುವವನಾಗಿಯು, ಕರುಣೆಯುಳ್ಳವನಾಗಿಯು ಕಾಣುತ್ತಿದ್ದರು.
Tafsiran larabci:
فَلَا وَرَبِّكَ لَا یُؤْمِنُوْنَ حَتّٰی یُحَكِّمُوْكَ فِیْمَا شَجَرَ بَیْنَهُمْ ثُمَّ لَا یَجِدُوْا فِیْۤ اَنْفُسِهِمْ حَرَجًا مِّمَّا قَضَیْتَ وَیُسَلِّمُوْا تَسْلِیْمًا ۟
ಆದ್ದರಿಂದ ನಿಮ್ಮ ಪ್ರಭುವಿನಾಣೆ ಅವರು ತಮ್ಮ ನಡುವಿನ ಸಕಲ ಭಿನ್ನತೆಯ ವಿಷಯಗಳಲ್ಲಿ ನಿಮ್ಮನ್ನು ತೀರ್ಪುಗಾರನನ್ನಾಗಿಸಿ ಬಳಿಕ ನೀವು ನೀಡಿದ ತೀರ್ಪಿನ ಕುರಿತು ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಅತೃಪ್ತಿಯು ಉಂಟಾಗದೇ ಸಂಪೂರ್ಣ ವಿಧೇಯತೆಯೊಂದಿಗೆ ಅದನ್ನು ಸ್ವೀಕರಿಸುವವರೆಗೆ ಅವರು ಸತ್ಯವಿಶ್ವಾಸಿಗಳಾಗಲಾರರು.
Tafsiran larabci:
 
Fassarar Ma'anoni Sura: Al'nisaa
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiy - Bashir Maisuri - Teburin Bayani kan wasu Fassarori

Fassarar ta Sheikh Bashir Maisuri. An sabunta ta ƙarƙashin kulawar Cibiyar Ruwad Tarjamah.

Rufewa