Check out the new design

Fassarar Ma'anonin Alqura'ni - Fassarar Kanadiy - Bashir Maisuri * - Teburin Bayani kan wasu Fassarori


Fassarar Ma'anoni Sura: Al'a'raf   Aya:
وَاكْتُبْ لَنَا فِیْ هٰذِهِ الدُّنْیَا حَسَنَةً وَّفِی الْاٰخِرَةِ اِنَّا هُدْنَاۤ اِلَیْكَ ؕ— قَالَ عَذَابِیْۤ اُصِیْبُ بِهٖ مَنْ اَشَآءُ ۚ— وَرَحْمَتِیْ وَسِعَتْ كُلَّ شَیْءٍ ؕ— فَسَاَكْتُبُهَا لِلَّذِیْنَ یَتَّقُوْنَ وَیُؤْتُوْنَ الزَّكٰوةَ وَالَّذِیْنَ هُمْ بِاٰیٰتِنَا یُؤْمِنُوْنَ ۟ۚ
ಇಹಲೋಕದಲ್ಲೂ ಪರಲೋಕದಲ್ಲೂ ನಮಗಾಗಿ ಒಳಿತನ್ನು ದಾಖಲಿಸು. ನಾವು ನಿನ್ನೆಡೆಗೆ ಮರಳುತ್ತೇವೆ. ಅಲ್ಲಾಹನು ಹೇಳುವನು: ನಾನು ಇಚ್ಛಿಸುವವರ ಮೇಲೆಯೇ ನನ್ನ ಶಿಕ್ಷೆಯನ್ನು ಜಾರಿಗೊಳಿಸುವೆನು ಮತ್ತು ನನ್ನ ಕಾರುಣ್ಯವು ಸರ್ವ ವಸ್ತುಗಳನ್ನು ಆವರಿಸಿಕೊಂಡಿದೆ. ಆದ್ದರಿಂದ ಭಯಪಡುವ, ಝಕಾತ್ ನೀಡುವ ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವ ಜನರಿಗಾಗಿ ಕಾರುಣ್ಯವನ್ನು ನಾನು ದಾಖಲಿಸಿಡುವೆನು.
Tafsiran larabci:
اَلَّذِیْنَ یَتَّبِعُوْنَ الرَّسُوْلَ النَّبِیَّ الْاُمِّیَّ الَّذِیْ یَجِدُوْنَهٗ مَكْتُوْبًا عِنْدَهُمْ فِی التَّوْرٰىةِ وَالْاِنْجِیْلِ ؗ— یَاْمُرُهُمْ بِالْمَعْرُوْفِ وَیَنْهٰىهُمْ عَنِ الْمُنْكَرِ وَیُحِلُّ لَهُمُ الطَّیِّبٰتِ وَیُحَرِّمُ عَلَیْهِمُ الْخَبٰٓىِٕثَ وَیَضَعُ عَنْهُمْ اِصْرَهُمْ وَالْاَغْلٰلَ الَّتِیْ كَانَتْ عَلَیْهِمْ ؕ— فَالَّذِیْنَ اٰمَنُوْا بِهٖ وَعَزَّرُوْهُ وَنَصَرُوْهُ وَاتَّبَعُوا النُّوْرَ الَّذِیْۤ اُنْزِلَ مَعَهٗۤ ۙ— اُولٰٓىِٕكَ هُمُ الْمُفْلِحُوْنَ ۟۠
ಅವರು ತಮ್ಮ ಬಳಿಯಿರುವ ತೌರಾತ್‌ನಲ್ಲೂ, ಇಂಜೀಲ್‌ನಲ್ಲೂ ಅವರನ್ನು (ಮುಹಮ್ಮದರನ್ನು) ದಾಖಲಿಸಲ್ಪಟ್ಟಿರುವುದಾಗಿ ಕಾಣುವ ನಿರಕ್ಷರಿಯಾದ ಪೈಗಂಬರರಲ್ಲಿ ವಿಶ್ವಾಸವಿರಿಸುತ್ತಾರೆ. ಅವರು ಅವರಿಗೆ ಒಳಿತಿನ ಆದೇಶ ನೀಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ಉತ್ತಮ ವಸ್ತುಗಳನ್ನು ಅವರಿಗೆ ಧರ್ಮ ಸಮ್ಮತಗೊಳಿಸುತ್ತಾರೆ ಮತ್ತು ಅಶುದ್ಧ ವಸ್ತುಗಳನ್ನು ಅವರ ಮೇಲೆ ನಿಷಿದ್ಧಗೊಳಿಸುತ್ತಾರೆ. ಅವರ ಮೇಲಿರುವ ಭಾರಗಳನ್ನೂ (ಮೂಡನಂಬಿಕೆ, ಧಾರ್ಮಿಕ ಬಿಕ್ಕಟ್ಟು) ಇಳಿಸುತ್ತಾರೆ ಮತ್ತು ಸಂಕೋಲೆಗಳನ್ನೂ (ಸಿಲುಕಿರುವ ತಪ್ಪು ಸಂಪ್ರದಾಯಗಳನ್ನು) ಬಿಡಿಸುತ್ತಾರೆ. ಇನ್ನು ಯಾರು ಆ ಪೈಗಂಬರರ ಮೇಲೆ ವಿಶ್ವಾಸವಿಡುತ್ತಾರೋ, ಅವರಿಗೆ ಬೆಂಬಲ ನೀಡುತ್ತಾರೋ ಮತ್ತು ಅವರಿಗೆ ಸಹಾಯ ಮಾಡುತ್ತಾರೋ ಮತ್ತು ಅವರ ಜೊತೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುತ್ತಾರೋ ಅಂತಹವರೇ ಯಶಸ್ಸು ಪಡೆಯುವವರಾಗಿರುತ್ತಾರೆ.
Tafsiran larabci:
قُلْ یٰۤاَیُّهَا النَّاسُ اِنِّیْ رَسُوْلُ اللّٰهِ اِلَیْكُمْ جَمِیْعَا ١لَّذِیْ لَهٗ مُلْكُ السَّمٰوٰتِ وَالْاَرْضِ ۚ— لَاۤ اِلٰهَ اِلَّا هُوَ یُحْیٖ وَیُمِیْتُ ۪— فَاٰمِنُوْا بِاللّٰهِ وَرَسُوْلِهِ النَّبِیِّ الْاُمِّیِّ الَّذِیْ یُؤْمِنُ بِاللّٰهِ وَكَلِمٰتِهٖ وَاتَّبِعُوْهُ لَعَلَّكُمْ تَهْتَدُوْنَ ۟
ಓ ಪೈಗಂಬರರೇ ಹೇಳಿರಿ: ಓ ಜನರೇ, ನಿಮ್ಮೆಲ್ಲರ ಕಡೆಗೆ ಆಕಾಶಗಳ ಮತ್ತು ಭೂಮಿಯ ಆಧಿಪತ್ಯ ಹೊಂದಿರುವ ಅಲ್ಲಾಹನ ಸಂದೇಶ ವಾಹಕನಾಗಿರುವೆನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನೇ ಜೀವ ನೀಡುತ್ತಾನೆ ಮತ್ತು ಮರಣ ನೀಡುತ್ತಾನೆ. ಆದ್ದರಿಂದ ನೀವು ಅಲ್ಲಾಹನ ಮೇಲೂ, ಅವನ ವಚನಗಳಲ್ಲಿ ವಿಶ್ವಾಸವಿಟ್ಟ ನಿರಕ್ಷರಿ ಪೈಗಂಬರರಾದ ಅವನ ಸಂದೇಶವಾಹಕರ ಮೇಲೂ ವಿಶ್ವಾಸವಿರಿಸಿರಿ ಮತ್ತು ಅವರ ಅನುಸರಣೆ ಮಾಡಿರಿ. ಪ್ರಾಯಶಃ ನೀವು ಸನ್ಮಾರ್ಗ ಪಡೆಯಬಹುದು.
Tafsiran larabci:
وَمِنْ قَوْمِ مُوْسٰۤی اُمَّةٌ یَّهْدُوْنَ بِالْحَقِّ وَبِهٖ یَعْدِلُوْنَ ۟
ಮತ್ತು ಮೂಸಾರವರ ಜನತೆಯ ಪೈಕಿ ಸತ್ಯಕ್ಕನುಗುಣವಾಗಿ ಮಾರ್ಗದರ್ಶನ ನೀಡುವ ಮತ್ತು ಅದರ ಪ್ರಕಾರ ನ್ಯಾಯವನ್ನೂ ಪಾಲಿಸುವ ಒಂದು ಪಂಗಡವಿತ್ತು.
Tafsiran larabci:
 
Fassarar Ma'anoni Sura: Al'a'raf
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiy - Bashir Maisuri - Teburin Bayani kan wasu Fassarori

Fassarar ta Sheikh Bashir Maisuri. An sabunta ta ƙarƙashin kulawar Cibiyar Ruwad Tarjamah.

Rufewa