Check out the new design

Fassarar Ma'anonin Alqura'ni - Fassarar Kanadiy - Hamza Batur * - Teburin Bayani kan wasu Fassarori

PDF XML CSV Excel API
Please review the Terms and Policies

Fassarar Ma'anoni Sura: Al'kahf   Aya:
اَلْمَالُ وَالْبَنُوْنَ زِیْنَةُ الْحَیٰوةِ الدُّنْیَا ۚ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ اَمَلًا ۟
ಆಸ್ತಿ ಮತ್ತು ಸಂತಾನಗಳು ಇಹಲೋಕ ಜೀವನದ ಅಲಂಕಾರಗಳಾಗಿವೆ. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಭರವಸೆಯನ್ನು ಹೊಂದಿವೆ.
Tafsiran larabci:
وَیَوْمَ نُسَیِّرُ الْجِبَالَ وَتَرَی الْاَرْضَ بَارِزَةً ۙ— وَّحَشَرْنٰهُمْ فَلَمْ نُغَادِرْ مِنْهُمْ اَحَدًا ۟ۚ
ನಾವು ಪರ್ವತಗಳನ್ನು ಚಲಿಸುವಂತೆ ಮಾಡುವ ಮತ್ತು ಭೂಮಿಯನ್ನು ನೀವು ಸಮತಟ್ಟಾದ ಬಯಲಿನಂತೆ ಕಾಣುವ ಹಾಗೂ ನಾವು ಅವರಲ್ಲಿ (ಮನುಷ್ಯರಲ್ಲಿ) ಒಬ್ಬರನ್ನೂ ಬಿಡದೆ ಒಟ್ಟುಗೂಡಿಸುವ ದಿನ!
Tafsiran larabci:
وَعُرِضُوْا عَلٰی رَبِّكَ صَفًّا ؕ— لَقَدْ جِئْتُمُوْنَا كَمَا خَلَقْنٰكُمْ اَوَّلَ مَرَّةٍ ؗ— بَلْ زَعَمْتُمْ اَلَّنْ نَّجْعَلَ لَكُمْ مَّوْعِدًا ۟
ಅವರನ್ನು ತಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ಸಾಲು ಸಾಲಾಗಿ ಪ್ರದರ್ಶಿಸಲಾಗುವುದು. (ಅಲ್ಲಾಹು ಹೇಳುವನು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ಒಂದು ಸಮಯವನ್ನು ಮೀಸಲಿಡುವುದಿಲ್ಲ ಎಂದು ನೀವು ವಾದಿಸುತ್ತಿದ್ದಿರಿ.”
Tafsiran larabci:
وَوُضِعَ الْكِتٰبُ فَتَرَی الْمُجْرِمِیْنَ مُشْفِقِیْنَ مِمَّا فِیْهِ وَیَقُوْلُوْنَ یٰوَیْلَتَنَا مَالِ هٰذَا الْكِتٰبِ لَا یُغَادِرُ صَغِیْرَةً وَّلَا كَبِیْرَةً اِلَّاۤ اَحْصٰىهَا ۚ— وَوَجَدُوْا مَا عَمِلُوْا حَاضِرًا ؕ— وَلَا یَظْلِمُ رَبُّكَ اَحَدًا ۟۠
ಕರ್ಮ ಪುಸ್ತಕವನ್ನು ಇಡಲಾಗುವುದು. ಆಗ ಅಪರಾಧಿಗಳು ಅದರಲ್ಲಿರುವ ಉಲ್ಲೇಖಗಳನ್ನು ನೋಡಿ ಭಯದಿಂದ ನಡುಗುವುದನ್ನು ನೀವು ನೋಡುವಿರಿ. ಅವರು ಹೇಳುವರು: “ಅಯ್ಯೋ ನಮ್ಮ ದುರದೃಷ್ಟವೇ! ಇದೆಂತಹ ಪುಸ್ತಕ? ಇದರಲ್ಲಿ ಚಿಕ್ಕ ಮತ್ತು ದೊಡ್ಡದಾದ ಯಾವುದನ್ನೂ ದಾಖಲಿಸದೆ ಬಿಟ್ಟಿಲ್ಲವಲ್ಲ!” ಅವರು ಮಾಡಿದ ಎಲ್ಲಾ ಕರ್ಮಗಳನ್ನೂ ಅವರು ಅದರಲ್ಲಿ ದಾಖಲಾಗಿರುವುದನ್ನು ಕಾಣುವರು. ನಿಮ್ಮ ಪರಿಪಾಲಕನು (ಅಲ್ಲಾಹು) ಯಾರಿಗೂ ಅನ್ಯಾಯ ಮಾಡುವವನಲ್ಲ.
Tafsiran larabci:
وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— كَانَ مِنَ الْجِنِّ فَفَسَقَ عَنْ اَمْرِ رَبِّهٖ ؕ— اَفَتَتَّخِذُوْنَهٗ وَذُرِّیَّتَهٗۤ اَوْلِیَآءَ مِنْ دُوْنِیْ وَهُمْ لَكُمْ عَدُوٌّ ؕ— بِئْسَ لِلظّٰلِمِیْنَ بَدَلًا ۟
ನಾವು ದೇವದೂತರುಗಳೊಡನೆ, “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ಹೇಳಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು. ಇಬ್ಲೀಸನ ಹೊರತು. ಅವನು ಜಿನ್ನ್‌ಗಳಲ್ಲಿ ಸೇರಿದ್ದನು. ಅವನು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದನು. ಹೀಗಿರುವಾಗ, ನೀವು ನನ್ನನ್ನು ಬಿಟ್ಟು ಅವನನ್ನು ಮತ್ತು ಅವನ ಸಂತಾನವನ್ನು ಮಿತ್ರರಾಗಿ ಸ್ವೀಕರಿಸುವಿರಾ? ವಾಸ್ತವವಾಗಿ ಅವರು ನಿಮ್ಮ ವೈರಿಗಳಾಗಿದ್ದೂ ಸಹ. ಅಕ್ರಮಿಗಳಿಗೆ ಬದಲಿಯಾಗಿ ಸಿಕ್ಕಿದ್ದು ಬಹಳ ನಿಕೃಷ್ಟವಾಗಿದೆ.
Tafsiran larabci:
مَاۤ اَشْهَدْتُّهُمْ خَلْقَ السَّمٰوٰتِ وَالْاَرْضِ وَلَا خَلْقَ اَنْفُسِهِمْ ۪— وَمَا كُنْتُ مُتَّخِذَ الْمُضِلِّیْنَ عَضُدًا ۟
ನಾನು ಭೂಮ್ಯಾಕಾಶಗಳ ಸೃಷ್ಟಿಸುವಾಗ ಅಥವಾ ಸ್ವತಃ ಅವರನ್ನೇ ಸೃಷ್ಟಿಸುವಾಗ ಅವರನ್ನು (ಶೈತಾನರನ್ನು) ಅದಕ್ಕೆ ಸಾಕ್ಷಿಗಳನ್ನಾಗಿ ಮಾಡಲಿಲ್ಲ. ದಾರಿತಪ್ಪಿಸುವವರನ್ನು ನಾನು ಸಹಾಯಕರನ್ನಾಗಿ ಮಾಡುವುದೂ ಇಲ್ಲ.
Tafsiran larabci:
وَیَوْمَ یَقُوْلُ نَادُوْا شُرَكَآءِیَ الَّذِیْنَ زَعَمْتُمْ فَدَعَوْهُمْ فَلَمْ یَسْتَجِیْبُوْا لَهُمْ وَجَعَلْنَا بَیْنَهُمْ مَّوْبِقًا ۟
“ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ದೇವರುಗಳನ್ನು ಕರೆಯಿರಿ” ಎಂದು ಅಲ್ಲಾಹು ಆದೇಶಿಸುವ ದಿನ. ಅವರು ಆ ದೇವರುಗಳನ್ನು ಕರೆಯುವರು. ಆದರೆ ಅವರು ಇವರಿಗೆ ಉತ್ತರ ನೀಡುವುದಿಲ್ಲ. ನಾವು ಅವರ ನಡುವೆ ವಿನಾಶದ ಕಂದಕವನ್ನು ನಿರ್ಮಿಸುವೆವು.
Tafsiran larabci:
وَرَاَ الْمُجْرِمُوْنَ النَّارَ فَظَنُّوْۤا اَنَّهُمْ مُّوَاقِعُوْهَا وَلَمْ یَجِدُوْا عَنْهَا مَصْرِفًا ۟۠
ಅಪರಾಧಿಗಳು ನರಕವನ್ನು ಕಣ್ಣಾರೆ ನೋಡುವರು. ಅವರು ಅದರಲ್ಲಿ ಬೀಳುವರೆಂದು ಅವರಿಗೆ ಖಾತ್ರಿಯಾಗುವುದು. ಅದರಿಂದ ತಪ್ಪಿಸಿಕೊಳ್ಳುವ ಯಾವುದೇ ಮಾರ್ಗವನ್ನು ಅವರು ಕಾಣಲಾರರು.
Tafsiran larabci:
 
Fassarar Ma'anoni Sura: Al'kahf
Teburin Jerin Sunayen Surori Lambar shafi
 
Fassarar Ma'anonin Alqura'ni - Fassarar Kanadiy - Hamza Batur - Teburin Bayani kan wasu Fassarori

Ya fassara ta Muhammad Hamza Batur. An sabunta ta ƙarƙashin kulawar Cibiyar Ruwad Tarjamah.

Rufewa