Alkʋrãɑn wɑgellã mɑɑnɑ wã lebgre - Sẽn lebg ne Kanada goamã - Bašɩɩr Maysuuriy

external-link copy
229 : 2

اَلطَّلَاقُ مَرَّتٰنِ ۪— فَاِمْسَاكٌ بِمَعْرُوْفٍ اَوْ تَسْرِیْحٌ بِاِحْسَانٍ ؕ— وَلَا یَحِلُّ لَكُمْ اَنْ تَاْخُذُوْا مِمَّاۤ اٰتَیْتُمُوْهُنَّ شَیْـًٔا اِلَّاۤ اَنْ یَّخَافَاۤ اَلَّا یُقِیْمَا حُدُوْدَ اللّٰهِ ؕ— فَاِنْ خِفْتُمْ اَلَّا یُقِیْمَا حُدُوْدَ اللّٰهِ ۙ— فَلَا جُنَاحَ عَلَیْهِمَا فِیْمَا افْتَدَتْ بِهٖ ؕ— تِلْكَ حُدُوْدُ اللّٰهِ فَلَا تَعْتَدُوْهَا ۚ— وَمَنْ یَّتَعَدَّ حُدُوْدَ اللّٰهِ فَاُولٰٓىِٕكَ هُمُ الظّٰلِمُوْنَ ۟

(ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ ಮಾರ್ಗಗಳಿವೆ) ಒಂದು ಸದಾಚಾರದೊಂದಿಗೆ ತಡೆದಿರಿಸಿಕೊಳ್ಳಿರಿ ಇಲ್ಲವೇ ಒಳಿತಿನೊಂದಿಗೆ ವಿದಾಯ ಹೇಳಿರಿ. ನೀವು ಅವರಿಗೆ ನೀಡಿರುವ ವಧು ಧನದಿಂದ ಏನನ್ನಾದರೂ ಮರಳಿಪಡೆಯುವುÀದು ನಿಮಗೆ ಧರ್ಮ ಸಮ್ಮತವಲ್ಲ. ಆದರೆ (ವಿವಾಹ ಸಂಬAಧÀವನ್ನು ಬಾಕಿ ಉಳಿಸಿದರೆ) ಅಲ್ಲಾಹನು ಮೇರೆಗಳನ್ನು ದಂಪತಿಗಳು ನೆಲೆ ನಿಲ್ಲಿಸಲಾರೆವು ಎಂದು ಭಯಪಟ್ಟರೆ ಬೇರೆ ವಿಚಾರ. ಆದ್ದರಿಂದ ಅವರು ಅಲ್ಲಾಹನ ಮೇರೆಗಳನ್ನು ನೆಲೆ ನಿಲ್ಲಿಸಲಾರರೆÉಂದು ನೀವು ಭಯಪಟ್ಟರೆ ಪತ್ನಿಯು ಬಿಡುಗಡೆ ಪಡೆಯಲ್ಲಿಕ್ಕಾಗಿ ಮಹರ್ (ವಧು) ಧನವನ್ನು ಮರಳಿಸಿದರೆ ಈ ವಿಚಾರದಲ್ಲಿ ಅವರಿಬ್ಬರ ಮೇಲೆ ದೋಷವಿರುವುದಿಲ್ಲ. ಇವು ಅಲ್ಲಾಹನ ಮೇರೆಗಳು. ಜಾಗೃತೆ! ಇವುಗಳನ್ನು ಮೀರಬೇಡಿರಿ ಮತ್ತು ಯಾರು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸುತ್ತಾರೋ ಅವರು ಅಕ್ರಮಿಗಳಾಗಿರುತ್ತಾರೆ. info
التفاسير: |