Check out the new design

ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫ * - ߘߟߊߡߌߘߊ ߟߎ߫ ߦߌ߬ߘߊ߬ߥߟߊ


ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߊ߲ߜߊߟߌߡߊ   ߟߝߊߙߌ ߘߏ߫:
اَلَّذِیْنَ اٰمَنُوْا وَعَمِلُوا الصّٰلِحٰتِ طُوْبٰی لَهُمْ وَحُسْنُ مَاٰبٍ ۟
ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಶುಭವಾರ್ತೆ ಇದೆ ಮತ್ತು ಉತ್ತಮ ತಾಣವಿದೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
كَذٰلِكَ اَرْسَلْنٰكَ فِیْۤ اُمَّةٍ قَدْ خَلَتْ مِنْ قَبْلِهَاۤ اُمَمٌ لِّتَتْلُوَاۡ عَلَیْهِمُ الَّذِیْۤ اَوْحَیْنَاۤ اِلَیْكَ وَهُمْ یَكْفُرُوْنَ بِالرَّحْمٰنِ ؕ— قُلْ هُوَ رَبِّیْ لَاۤ اِلٰهَ اِلَّا هُوَ ۚ— عَلَیْهِ تَوَكَّلْتُ وَاِلَیْهِ مَتَابِ ۟
ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَوْ اَنَّ قُرْاٰنًا سُیِّرَتْ بِهِ الْجِبَالُ اَوْ قُطِّعَتْ بِهِ الْاَرْضُ اَوْ كُلِّمَ بِهِ الْمَوْتٰی ؕ— بَلْ لِّلّٰهِ الْاَمْرُ جَمِیْعًا ؕ— اَفَلَمْ یَایْـَٔسِ الَّذِیْنَ اٰمَنُوْۤا اَنْ لَّوْ یَشَآءُ اللّٰهُ لَهَدَی النَّاسَ جَمِیْعًا ؕ— وَلَا یَزَالُ الَّذِیْنَ كَفَرُوْا تُصِیْبُهُمْ بِمَا صَنَعُوْا قَارِعَةٌ اَوْ تَحُلُّ قَرِیْبًا مِّنْ دَارِهِمْ حَتّٰی یَاْتِیَ وَعْدُ اللّٰهِ ؕ— اِنَّ اللّٰهَ لَا یُخْلِفُ الْمِیْعَادَ ۟۠
ಕುರ್‌ಆನಿನ ಮೂಲಕ ಪರ್ವತಗಳನ್ನು ಚಲಿಸುವಂತೆಯು ಅಥವಾ ಭೂಮಿಯನ್ನು ಸೀಳಿಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತನಾಡುವಂತೆ ಮಾಡಲಾಗುತ್ತಿದ್ದರೂ ಅವರು ಸತ್ಯ ವಿಶ್ವಾಸ ಸ್ವೀಕರಿಸುತ್ತಿರಲಿಲ್ಲ ವಾಸ್ತವವೇನೆಂದರೆ ಕಾರ್ಯವೆಲ್ಲವು ಅಲ್ಲಾಹನ ವಶದಲ್ಲಿರುವುದು. ಅಲ್ಲಾಹನು ಇಚ್ಛಿಸುವುದಾದರೆ ಸರ್ವರಿಗೂ ಸನ್ಮಾರ್ಗ ನೀಡುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೆ ? ಸತ್ಯ ನಿಷÉÃಧಿಗಳಿಗೆ ತಮ್ಮ ನಿಷÉÃಧದ ಫಲವಾಗಿ ಯಾವುದಾದರೂ ವಿಪತ್ತು ಬಾಧಿಸುತ್ತಲೇ ಇರುವುದು ಅಥವಾ ಅದು ಅಲ್ಲಾಹನ ವಾಗ್ದಾನ ಬರುವತನಕ ಅವರ ಮನೆಗಳ ಸಮೀಪದಲ್ಲೇ ಎರಗುತ್ತಲೇ ಇರುವುದು ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَلَقَدِ اسْتُهْزِئَ بِرُسُلٍ مِّنْ قَبْلِكَ فَاَمْلَیْتُ لِلَّذِیْنَ كَفَرُوْا ثُمَّ اَخَذْتُهُمْ ۫— فَكَیْفَ كَانَ عِقَابِ ۟
ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?
ߊߙߊߓߎߞߊ߲ߡߊ ߞߘߐߦߌߘߊ ߟߎ߬:
اَفَمَنْ هُوَ قَآىِٕمٌ عَلٰی كُلِّ نَفْسٍ بِمَا كَسَبَتْ ۚ— وَجَعَلُوْا لِلّٰهِ شُرَكَآءَ ؕ— قُلْ سَمُّوْهُمْ ؕ— اَمْ تُنَبِّـُٔوْنَهٗ بِمَا لَا یَعْلَمُ فِی الْاَرْضِ اَمْ بِظَاهِرٍ مِّنَ الْقَوْلِ ؕ— بَلْ زُیِّنَ لِلَّذِیْنَ كَفَرُوْا مَكْرُهُمْ وَصُدُّوْا عَنِ السَّبِیْلِ ؕ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟
ಪ್ರತಿಯೊಬ್ಬ ವ್ಯಕ್ತಿಯ ಸಂಪಾದನೆಯ ಮೇಲೆ ಮೇಲ್ವಿಚಾರಣೆ ಮಾಡುವ ಅಲ್ಲಾಹನಿಗೆ ಅವರು ಸಹಭಾಗಿಗಳನ್ನು ನಿಶ್ಚಯಿಸಿಕೊಂಡಿದ್ದಾರೆಯೇ? ಹೇಳಿರಿ; ಒಮ್ಮೆ ಅವುಗಳ ಹೆಸರುಗಳನ್ನಾದರೂ ತಿಳಿಸಿರಿ. ಅಥವಾ ನೀವು ಅಲ್ಲಾಹನಿಗೆ ಅವನು ಭೂಮಿಯಲ್ಲಿ ಅರಿತೇ ಇಲ್ಲದುದನ್ನು ತಿಳಿಸಿಕೊಡುತ್ತಿರುವಿರಾ ? ಅಥವಾ ನೀವು ಬಾಹ್ಯಾ ಮಾತುಗಳನ್ನು ಹೇಳಿಬಿಡುತ್ತೀರಾ? ವಾಸ್ತವ ವಿಚಾರವೇನೆಂದರೆ ಸತ್ಯ ನಿಷÉÃಧಿಸುವವರಿಗೆ ಅವರ ಕುತಂತ್ರಗಳನ್ನು ಸುಂದರವಾಗಿಸಲಾಗಿದೆ. ಮತ್ತು ಅವರು ನೈಜ ಮಾರ್ಗದಿಂದ ತಡೆಯಲಾಗಿದ್ದಾರೆ ಮತ್ತು ಯಾರನ್ನು ಅಲ್ಲಾಹನು ದಾರಿತಪ್ಪಿಸುವನೋ ಅವನಿಗಾರು ಮಾರ್ಗದರ್ಶಕನಿಲ್ಲ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
لَهُمْ عَذَابٌ فِی الْحَیٰوةِ الدُّنْیَا وَلَعَذَابُ الْاٰخِرَةِ اَشَقُّ ۚ— وَمَا لَهُمْ مِّنَ اللّٰهِ مِنْ وَّاقٍ ۟
ಅವರಿಗೆ ಇಹಲೋಕದ ಜೀವನದಲ್ಲಿ ಯಾತನೆ ಇದೆ ಮತ್ತು ಪರಲೋಕದ ಯಾತನೆಯು ಅತ್ಯಂತ ಕಠಿಣವಾಗಿರುತ್ತದೆ, ಮತ್ತು ಅಲ್ಲಾಹನಿಂದ ಅವರನ್ನು ರಕ್ಷಿಸುವವನು ಯಾರು ಇರಲಾರನು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
 
ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߛߊ߲ߜߊߟߌߡߊ
ߝߐߘߊ ߟߎ߫ ߦߌ߬ߘߊ߬ߥߟߊ ߞߐߜߍ ߝߙߍߕߍ
 
ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫ - ߘߟߊߡߌߘߊ ߟߎ߫ ߦߌ߬ߘߊ߬ߥߟߊ

ߞߓ. ߛߌ߯ߌߞ߬ ߓߌߛߌߙ ߡߌߛߎ߬ߙߌ߫߸ ߊ߬ ߛߊߞߍ߫ ߘߊ߫ ߙߎ߬ߥߊ߯ߘߎ߫ ߘߟߊߡߌߘߊ ߝߊ߲ߓߊ ߟߊ߫.

ߘߊߕߎ߲߯ߠߌ߲