ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
61 : 2

وَاِذْ قُلْتُمْ یٰمُوْسٰی لَنْ نَّصْبِرَ عَلٰی طَعَامٍ وَّاحِدٍ فَادْعُ لَنَا رَبَّكَ یُخْرِجْ لَنَا مِمَّا تُنْۢبِتُ الْاَرْضُ مِنْ بَقْلِهَا وَقِثَّآىِٕهَا وَفُوْمِهَا وَعَدَسِهَا وَبَصَلِهَا ؕ— قَالَ اَتَسْتَبْدِلُوْنَ الَّذِیْ هُوَ اَدْنٰی بِالَّذِیْ هُوَ خَیْرٌ ؕ— اِهْبِطُوْا مِصْرًا فَاِنَّ لَكُمْ مَّا سَاَلْتُمْ ؕ— وَضُرِبَتْ عَلَیْهِمُ الذِّلَّةُ وَالْمَسْكَنَةُ وَبَآءُوْ بِغَضَبٍ مِّنَ اللّٰهِ ؕ— ذٰلِكَ بِاَنَّهُمْ كَانُوْا یَكْفُرُوْنَ بِاٰیٰتِ اللّٰهِ وَیَقْتُلُوْنَ النَّبِیّٖنَ بِغَیْرِ الْحَقِّ ؕ— ذٰلِكَ بِمَا عَصَوْا وَّكَانُوْا یَعْتَدُوْنَ ۟۠

ಓ ಮೂಸಾ(ಅ) ನಾವು ಒಂದೇ ಬಗೆಯ ಆಹಾರವನ್ನು ಸಹಿಸಲಾರೆವು ಆದ್ದರಿಂದ ಭೂಮಿಯ ಉತ್ಪಾದನೆಗಳಾದ ಸೊಪ್ಪು, ಸೌತೆ, ಗೋಧಿ, ಚನ್ನಂಗಿ ಬೇಳೆ, ಈರುಳ್ಳಿ ಇತ್ಯಾದಿಗಳನ್ನು ನಮಗೆ ಉತ್ಪಾದಿಸಿ ಕೊಡಲು ತಾವು ತಮ್ಮ ಪ್ರಭುವಿನೊಂದಿಗೆ ಪ್ರಾರ್ಥಿಸಿರಿ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಮೂಸಾ(ಅ) ಹೇಳಿದರು ಉತ್ತಮವಾದುದರ ಬದಲಿಗೆ ನಿಕೃಷ್ಟವಾದುದ್ದನ್ನು ಬೇಡುವಿರಾ? ಸರಿ ಹಾಗಾದರೆ ನೀವು ಯಾವುದೇ ಪಟ್ಟಣದಲ್ಲಿ ಹೋಗಿ ವಾಸಿಸಿರಿ. ಅಲ್ಲಿ ನಿಮಗೆ ನೀವು ಬೇಡಿದ ಎಲ್ಲವು ಸಿಗುವುದು. ಮತ್ತು (ಇಂತಹ ಹಟಮಾರಿತನದಿಂದಾಗಿ) ಅವರ ಮೇಲೆ ನಿಂದ್ಯತೆಯನ್ನು, ದಾರಿದ್ರö್ಯವನ್ನು ಹೇರಲಾಯಿತು ಮತ್ತು ಅವರು ಅಲ್ಲಾಹನ ಕ್ರೋಧವನ್ನು ಹೊತ್ತುಕೊಂಡು ಮರಳಿದರು. ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು, ಮತ್ತು ಅನ್ಯಾಯವಾಗಿ ಪೈಗಂಬರರನ್ನು ವಧಿಸುತಿದ್ದರು. ಇದು ಅವರು ಧಿಕ್ಕಾರ ತೋರಿದುದರ ಹಾಗೂ ಮಿತಿಮೀರಿ ಹೋದುದರ ನಿಮಿತ್ತವಾಗಿತ್ತು. info
التفاسير: |