Check out the new design

ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫ * - ߘߟߊߡߌߘߊ ߟߎ߫ ߦߌ߬ߘߊ߬ߥߟߊ


ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߓߌ߬ߟߊ߬ߟߌ   ߟߝߊߙߌ ߘߏ߫:

ಅತ್ತಲಾಕ್

یٰۤاَیُّهَا النَّبِیُّ اِذَا طَلَّقْتُمُ النِّسَآءَ فَطَلِّقُوْهُنَّ لِعِدَّتِهِنَّ وَاَحْصُوا الْعِدَّةَ ۚ— وَاتَّقُوا اللّٰهَ رَبَّكُمْ ۚ— لَا تُخْرِجُوْهُنَّ مِنْ بُیُوْتِهِنَّ وَلَا یَخْرُجْنَ اِلَّاۤ اَنْ یَّاْتِیْنَ بِفَاحِشَةٍ مُّبَیِّنَةٍ ؕ— وَتِلْكَ حُدُوْدُ اللّٰهِ ؕ— وَمَنْ یَّتَعَدَّ حُدُوْدَ اللّٰهِ فَقَدْ ظَلَمَ نَفْسَهٗ ؕ— لَا تَدْرِیْ لَعَلَّ اللّٰهَ یُحْدِثُ بَعْدَ ذٰلِكَ اَمْرًا ۟
ಓ ಪೈಗಂಬರರೇ (ಹೇಳಿರಿ) ನೀವು ಪತ್ನಿಯರನ್ನು ವಿಚ್ಛೇದಿಸುವುದಾದರೆ, ಅವರ ಇದ್ದಃ(ನರ‍್ಮಲ್ಯದ) ಆರಂಭದ ಕಾಲಾವಧಿಯಲ್ಲಿ ವಿಚ್ಛೇದನೆ ನೀಡಿರಿ ಹಾಗೂ ಇದ್ದಃ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. ಅವರು ಸ್ಪಷ್ಟ ಪಾಪಕೃತ್ಯವೆಸಗದೇ ನೀವು ಅವರನ್ನು ಇದ್ದಃ ಅವಧಿಯಲ್ಲಿ ಅವರ ಮನೆಗಳಿಂದ ಹೊರ ಹಾಕಬೇಡಿರಿ, (ಸ್ವತಃ) ಅವರೂ ಹೊರಟು ಹೋಗದಿರಲಿ, ಇವು ಅಲ್ಲಾಹನ ನಿಶ್ಚಿತ ಮೇರೆಗಳು ಮತ್ತು ಅಲ್ಲಾಹನ ಮೇರೆಗಳನ್ನು ಮೀರುವವನೇ ನಿಜವಾಗಿಯೂ ತನ್ನ ಮೇಲೆ ಅಕ್ರಮ ಮಾಡಿದನು ಬಹುಶಃ ಇದ್ದಃದ ಬಳಿಕ ಅಲ್ಲಾಹನು ಯಾವುದಾದರೂ ಹೊಂದಾಣಿಕೆಯ ಹೊಸ ದಾರಿಯನ್ನುಂಟು ಮಾಡಬಹುದು. ಅದು ನಿಮಗೆ ತಿಳಿಯದು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
فَاِذَا بَلَغْنَ اَجَلَهُنَّ فَاَمْسِكُوْهُنَّ بِمَعْرُوْفٍ اَوْ فَارِقُوْهُنَّ بِمَعْرُوْفٍ وَّاَشْهِدُوْا ذَوَیْ عَدْلٍ مِّنْكُمْ وَاَقِیْمُوا الشَّهَادَةَ لِلّٰهِ ؕ— ذٰلِكُمْ یُوْعَظُ بِهٖ مَنْ كَانَ یُؤْمِنُ بِاللّٰهِ وَالْیَوْمِ الْاٰخِرِ ؕ۬— وَمَنْ یَّتَّقِ اللّٰهَ یَجْعَلْ لَّهٗ مَخْرَجًا ۟ۙ
ಇನ್ನು ಆ ಸ್ತ್ರೀಯರು ತಮ್ಮ ಇದ್ದಃ ಕಾಲಾವಧಿಗೆ ತಲುಪಿದರೆ ಆಗ ನೀವು ಅವರನ್ನು ಉತ್ತಮ ರೀತಿಯಲ್ಲಿ ನಿಮ್ಮ ವಿವಾಹದಲ್ಲಿ ಇರಿಸಿಕೊಳ್ಳಿರಿ ಇಲ್ಲವೇ, ಉತ್ತಮ ರೀತಿಯಲ್ಲಿ ಅವರಿಂದ ಬರ‍್ಪಡಿರಿ ನಿಮ್ಮ ಪೈಕಿ ನ್ಯಾಯವಂತರಾದ ಇಬ್ಬರನ್ನು ಸಾಕ್ಷಿಗಳನ್ನಾಗಿ ನಿಶ್ಚಯಿಸಿರಿ ಮತ್ತು ನೀವು ಅಲ್ಲಾಹನ ಸಂತೃಪ್ತಿಗೋಸ್ಕರ ಸರಿಯಾದ ನಿಟ್ಟಿನಲ್ಲಿ ಸಾಕ್ಷö್ಯ ನೀಡಿರಿ ಇದೇ ಅಲ್ಲಾಹನಲ್ಲಿ ಅಂತ್ಯ ದಿನದಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೆ ನೀಡಲಾಗುವ ಉಪದೇಶವಾಗಿದೆ, ಯಾರು ಅಲ್ಲಾಹನನ್ನು ಭಯಪಡುತ್ತಾನೆ ಅವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ಮಾಡಿಕೊಡುವನು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَّیَرْزُقْهُ مِنْ حَیْثُ لَا یَحْتَسِبُ ؕ— وَمَنْ یَّتَوَكَّلْ عَلَی اللّٰهِ فَهُوَ حَسْبُهٗ ؕ— اِنَّ اللّٰهَ بَالِغُ اَمْرِهٖ ؕ— قَدْ جَعَلَ اللّٰهُ لِكُلِّ شَیْءٍ قَدْرًا ۟
ಅವನು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವನಿಗೆ ಜೀವನಾಧಾರ ಕೊಡುವನು ಅಲ್ಲಾಹನ ಮೇಲೆ ಭರವಸೆಯನ್ನಿಡುವವನಿಗೆ ಅವನೇ ಸಾಕು ಅಲ್ಲಾಹನು ತನ್ನ ಕರ‍್ಯಗಳನ್ನು ಪರ‍್ತಿಗೊಳಿಸಿಯೇ ತೀರುವವನಾಗಿದ್ದಾನೆ ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿರುತ್ತಾನೆ.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
وَا یَىِٕسْنَ مِنَ الْمَحِیْضِ مِنْ نِّسَآىِٕكُمْ اِنِ ارْتَبْتُمْ فَعِدَّتُهُنَّ ثَلٰثَةُ اَشْهُرٍ وَّا لَمْ یَحِضْنَ ؕ— وَاُولَاتُ الْاَحْمَالِ اَجَلُهُنَّ اَنْ یَّضَعْنَ حَمْلَهُنَّ ؕ— وَمَنْ یَّتَّقِ اللّٰهَ یَجْعَلْ لَّهٗ مِنْ اَمْرِهٖ یُسْرًا ۟
ನಿಮ್ಮ(ವಿಚ್ಛೇದಿತ) ಸ್ತ್ರೀಯರ ಪೈಕಿ ಋತುಸ್ರಾವದಿಂದ ನಿರಾಶರಾಗಿರುವವರ ಬಗ್ಗೆ ನಿಮಗೆ ಸಂದೇಹವಿದ್ದರೆ ಅವರ ಇದ್ದಃ ಅವಧಿಯು ಮೂರು ತಿಂಗಳುಗಳಾಗಿವೆ ಮತ್ತು ಋತುಮತಿ ಯಾಗದವರಿಗೂ ಇದೇ ನಿಯಮವಿದೆ. ರ‍್ಭಿಣಿಸ್ತ್ರೀಯರ ಇದ್ದಃ ಅವಧಿಯು ಹೆರಿಗೆಯತನಕವಿದೆ. ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅವನ ವಿಷಯದಲ್ಲೂ ಅಲ್ಲಾಹನು ಅನುಕೂಲತೆಯನ್ನು ಉಂಟುಮಾಡುವವನು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
ذٰلِكَ اَمْرُ اللّٰهِ اَنْزَلَهٗۤ اِلَیْكُمْ ؕ— وَمَنْ یَّتَّقِ اللّٰهَ یُكَفِّرْ عَنْهُ سَیِّاٰتِهٖ وَیُعْظِمْ لَهٗۤ اَجْرًا ۟
ಇದು ಅಲ್ಲಾಹನು ನಿಮ್ಮೆಡೆಗೆ ಅವತರ‍್ಣಗೊಳಿಸಿರುವ ಅಜ್ಞೆಯಾಗಿದೆ ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅಲ್ಲಾಹನು ಅವನ ಪಾಪಗಳನ್ನು ಅಳಿಸುವನು ಹಾಗೂ ಅವನಿಗೆ ಮಹಾ ಪ್ರತಿಫಲವನ್ನು ನೀಡುವನು.
ߊߙߊߓߎߞߊ߲ߡߊ ߞߘߐߦߌߘߊ ߟߎ߬:
 
ߞߘߐ ߟߎ߬ ߘߟߊߡߌ߬ߘߊ߬ߟߌ ߝߐߘߊ ߘߏ߫: ߓߌ߬ߟߊ߬ߟߌ
ߝߐߘߊ ߟߎ߫ ߦߌ߬ߘߊ߬ߥߟߊ ߞߐߜߍ ߝߙߍߕߍ
 
ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫ - ߘߟߊߡߌߘߊ ߟߎ߫ ߦߌ߬ߘߊ߬ߥߟߊ

ߞߓ. ߛߌ߯ߌߞ߬ ߓߌߛߌߙ ߡߌߛߎ߬ߙߌ߫߸ ߊ߬ ߛߊߞߍ߫ ߘߊ߫ ߙߎ߬ߥߊ߯ߘߎ߫ ߘߟߊߡߌߘߊ ߝߊ߲ߓߊ ߟߊ߫.

ߘߊߕߎ߲߯ߠߌ߲