Check out the new design

Kur'an-ı Kerim meal tercümesi - Kanadaca Tercüme - Beşir Meysuri * - Mealler fihristi


Anlam tercümesi Sure: Sûratu'l-Bakarah   Ayet:
وَاِذْ یَرْفَعُ اِبْرٰهٖمُ الْقَوَاعِدَ مِنَ الْبَیْتِ وَاِسْمٰعِیْلُ ؕ— رَبَّنَا تَقَبَّلْ مِنَّا ؕ— اِنَّكَ اَنْتَ السَّمِیْعُ الْعَلِیْمُ ۟
ಸ್ಮರಿಸಿರಿ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ)ರು ಕಾಅಬಾದ ಅಡಿಪಾಯವನ್ನು ಎರಿಸುತ್ತಾ ಹೀಗೆ ಪ್ರಾರ್ಥಿಸುತ್ತಿದ್ದರು; ನಮ್ಮ ಪ್ರಭುವೇ, ನಮ್ಮಿಂದ ಈ ಕಾರ್ಯವನ್ನು ಸ್ವೀಕರಿಸು. ನೀನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯು ಆಗಿರುವೆ.
Arapça tefsirler:
رَبَّنَا وَاجْعَلْنَا مُسْلِمَیْنِ لَكَ وَمِنْ ذُرِّیَّتِنَاۤ اُمَّةً مُّسْلِمَةً لَّكَ ۪— وَاَرِنَا مَنَاسِكَنَا وَتُبْ عَلَیْنَا ۚ— اِنَّكَ اَنْتَ التَّوَّابُ الرَّحِیْمُ ۟
ನಮ್ಮ ಪ್ರಭುವೇ, ನಮ್ಮನ್ನು ನಿನ್ನ ವಿಧೇಯದಾಸರನ್ನಾಗಿ ಮಾಡು ಮತ್ತು ನಮ್ಮ ಸಂತತಿಗಳಿAದಲೂ ಒಂದು ಸಮುದಾಯವನ್ನು ನಿನಗೆ ವಿಧೇಯರನ್ನಾಗಿ ಮಾಡು ಹಾಗೂ ನಮಗೆ ಆರಾಧನಾ ಕ್ರಮಗಳನ್ನು ತೋರಿಸಿ ಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನಿಸ್ಸಂಶಯವಾಗಿಯು ನೀನೇ ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾನಿಧಿಯು ಆಗಿರುವೆ.
Arapça tefsirler:
رَبَّنَا وَابْعَثْ فِیْهِمْ رَسُوْلًا مِّنْهُمْ یَتْلُوْا عَلَیْهِمْ اٰیٰتِكَ وَیُعَلِّمُهُمُ الْكِتٰبَ وَالْحِكْمَةَ وَیُزَكِّیْهِمْ ؕ— اِنَّكَ اَنْتَ الْعَزِیْزُ الْحَكِیْمُ ۟۠
ನಮ್ಮ ಪ್ರಭುವೇ ಅವರಿಂದಲೇ ಒಬ್ಬ ಸಂದೇಶವಾಹಕನನ್ನು (ಅವರ ಮಾರ್ಗದರ್ಶನಕ್ಕಾಗಿ) ಅವರಲ್ಲಿ ನಿಯೋಗಿಸು. ಅವರು ಅವರ ಮುಂದೆ ನಿನ್ನ ಸೂಕ್ತಿಗಳನ್ನು ಓದಿ ಹೇಳುತ್ತಾ ಅವರಿಗೆ ಗ್ರಂಥವನ್ನು, ಸುಜ್ಞಾನವನ್ನೂ ಕಲಿಸುತ್ತಾ ಅವರನ್ನು ಸಂಸ್ಕರಿಸಲಿ. ವಾಸ್ತವದಲ್ಲಿ ನೀನು ಪ್ರತಾಪಶಾಲಿಯು, ಯುಕ್ತಿಪೂರ್ಣನೂ ಆಗಿರುವೆ.
Arapça tefsirler:
وَمَنْ یَّرْغَبُ عَنْ مِّلَّةِ اِبْرٰهٖمَ اِلَّا مَنْ سَفِهَ نَفْسَهٗ ؕ— وَلَقَدِ اصْطَفَیْنٰهُ فِی الدُّنْیَا ۚ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟
ತನ್ನನ್ನು ತಾನೇ ಅವಿವೇಕಿಯನ್ನಾಗಿ ಮಾಡಿಕೊಂಡವನ ಹೊರತು ಇನ್ನಾರೂ ಇಬ್ರಾಹೀಮರ ಧರ್ಮದಿಂದ ವಿಮುಖನಾಗಬಲ್ಲ. ನಿಶ್ಚಯವಾಗಿಯು ನಾವು ಅವರನ್ನು ಇಹಲೋಕದಲ್ಲಿ ಆಯ್ದು ಕೊಂಡೆವು ಮತ್ತು ಪರಲೋಕದಲ್ಲೂ ಅವರು ಸಜ್ಜನರೊಂದಿಗಿರುವರು.
Arapça tefsirler:
اِذْ قَالَ لَهٗ رَبُّهٗۤ اَسْلِمْ ۙ— قَالَ اَسْلَمْتُ لِرَبِّ الْعٰلَمِیْنَ ۟
ಅವರಿಗೆ ಅವರ ಪ್ರಭುವು ಶರಣಾಗು ಎಂದು ಹೇಳಿದಾಗ (ತಕ್ಷಣ) ಸರ್ವಲೋಕಗಳ ಪ್ರಭುವಿಗೆ ನಾನು ಶರಣಾದೆನು ಎಂದು ಅವರು ಹೇಳಿದರು.
Arapça tefsirler:
وَوَصّٰی بِهَاۤ اِبْرٰهٖمُ بَنِیْهِ وَیَعْقُوْبُ ؕ— یٰبَنِیَّ اِنَّ اللّٰهَ اصْطَفٰی لَكُمُ الدِّیْنَ فَلَا تَمُوْتُنَّ اِلَّا وَاَنْتُمْ مُّسْلِمُوْنَ ۟ؕ
ಮತ್ತು ಇದೇ ಉಪದೇಶವನ್ನು ಇಬ್ರಾಹೀಮ್ (ಅ) ಮತ್ತು ಯಾಕೂಬ್(ಅ)ರವರು ತಮ್ಮ ಸಂತತಿಗಳಿಗೆ ನೀಡಿದರು; ಓ ನನ್ನಸಂತತಿಗಳೇ, ಅಲ್ಲಾಹನು ನಿಮಗೋಸ್ಕರ ಈ ಧರ್ಮವನ್ನು ಆಯ್ಕೆ ಮಾಡಿರುವನು. ಜಾಗೃತೆ! ನೀವು ಶರಾಣಾಗಿರುವ ಸ್ಥಿತಿಯಲ್ಲೇ ಮರಣ ಹೊಂದಬೇಕು ಎಂದರು.
Arapça tefsirler:
اَمْ كُنْتُمْ شُهَدَآءَ اِذْ حَضَرَ یَعْقُوْبَ الْمَوْتُ ۙ— اِذْ قَالَ لِبَنِیْهِ مَا تَعْبُدُوْنَ مِنْ بَعْدِیْ ؕ— قَالُوْا نَعْبُدُ اِلٰهَكَ وَاِلٰهَ اٰبَآىِٕكَ اِبْرٰهٖمَ وَاِسْمٰعِیْلَ وَاِسْحٰقَ اِلٰهًا وَّاحِدًا ۖۚ— وَّنَحْنُ لَهٗ مُسْلِمُوْنَ ۟
ನೀವು ಯಾಕೂಬರಿಗೆ ಮರಣವು ಸನ್ನಿಹಿತವಾದಾಗ ಹಾಜರಿದ್ದೀರಾ? ಅವರು ತಮ್ಮ ಮಕ್ಕಳಿಗೆ; ನೀವು ನನ್ನ ನಂತರ ಯಾರನ್ನು ಆರಾಧಿಸುವಿರಿ ಎಂದು ಕೇಳಿದಾಗ ಅವರ ಮಕ್ಕಳು ಹೇಳಿದರು; ನಾವು ನಿಮ್ಮ ಆರಾಧ್ಯನೂ, ನಿಮ್ಮ ಪಿತಾಮಹರಾದ ಇಬ್ರಾಹೀಮ್, ಇಸ್ಮಾಯೀಲ್, ಇಸ್‌ಹಾಕರ ಆರಾಧ್ಯನೂ ಆಗಿರುವ ಏಕೈಕ ಆರಾಧ್ಯನನ್ನು ಆರಾಧಿಸುತ್ತೇವೆ ಮತ್ತು ನಾವು ಅವನಿಗೆ ವಿಧೇಯರಾಗಿರುತ್ತೇವೆ ಎಂದರು.
Arapça tefsirler:
تِلْكَ اُمَّةٌ قَدْ خَلَتْ ۚ— لَهَا مَا كَسَبَتْ وَلَكُمْ مَّا كَسَبْتُمْ ۚ— وَلَا تُسْـَٔلُوْنَ عَمَّا كَانُوْا یَعْمَلُوْنَ ۟
ಆ ಸಮುದಾಯವೂ ಗತಿಸಿ ಹೋಗಿದೆ. ಅವರು ಸಂಪಾದಿಸಿದ್ದು ಅವರಿಗಿದೆ. ಮತ್ತು ನೀವು ಸಂಪಾದಿಸಿದ್ದು ನಿಮಗಿದೆ. ಅವರ ಕರ್ಮಗಳ ಕುರಿತು ನೀವು ವಿಚಾರಿಸಲ್ಪಡಲಾರಿರಿ.
Arapça tefsirler:
 
Anlam tercümesi Sure: Sûratu'l-Bakarah
Surelerin fihristi Sayfa numarası
 
Kur'an-ı Kerim meal tercümesi - Kanadaca Tercüme - Beşir Meysuri - Mealler fihristi

Şeyh Beşir Meysuri tarafından tercüme edilmiştir. Rowad Tercüme Merkezi gözetiminde geliştirimiştir.

Kapat