Check out the new design

Kur'an-ı Kerim meal tercümesi - Kanadaca Tercüme - Beşir Meysuri * - Mealler fihristi


Anlam tercümesi Sure: Sûratu'l-Enbiyâ   Ayet:

ಅಲ್ ಅಂಬಿಯಾ

اِقْتَرَبَ لِلنَّاسِ حِسَابُهُمْ وَهُمْ فِیْ غَفْلَةٍ مُّعْرِضُوْنَ ۟ۚ
ಜನರ ಲೆಕ್ಕಾಚಾರದ ಸಮಯವು ಸಮೀಪಿಸಿದೆ. ಅದಾಗ್ಯೂ ಅವರು ಅಲಕ್ಷö್ಯತೆಯಿಂದ ವಿಮುಖರಾಗುತ್ತಿದ್ದಾರೆ.
Arapça tefsirler:
مَا یَاْتِیْهِمْ مِّنْ ذِكْرٍ مِّنْ رَّبِّهِمْ مُّحْدَثٍ اِلَّا اسْتَمَعُوْهُ وَهُمْ یَلْعَبُوْنَ ۟ۙ
ಅವರ ಬಳಿಗೆ ಅವರ ಪ್ರಭುವಿನ ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದರೆ ಅದನ್ನು ಅವರು ಆಟ-ವಿನೋದದಲ್ಲಿಯೇ ಆಲಿಸುತ್ತಾರೆ.
Arapça tefsirler:
لَاهِیَةً قُلُوْبُهُمْ ؕ— وَاَسَرُّوا النَّجْوَی ۖۗ— الَّذِیْنَ ظَلَمُوْا ۖۗ— هَلْ هٰذَاۤ اِلَّا بَشَرٌ مِّثْلُكُمْ ۚ— اَفَتَاْتُوْنَ السِّحْرَ وَاَنْتُمْ تُبْصِرُوْنَ ۟
ಅವರ ಹೃದಯಗಳು ಅಲಕ್ಷö್ಯವಾಗಿವೆ. ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೆ? ನೀವು ಕಣ್ಣಾರೆ ಕಾಣುತ್ತಾ ಜಾದೂವಿಗೆ ಗುರಿಯಾಗುತ್ತಿರುವಿರಾ? ಎಂದು ಅಕ್ರಮಿಗಳು ರಹಸ್ಯವಾಗಿ ಸಮಾಲೋಚನೆಯನ್ನು ಮಾಡಿದರು.
Arapça tefsirler:
قٰلَ رَبِّیْ یَعْلَمُ الْقَوْلَ فِی السَّمَآءِ وَالْاَرْضِ ؗ— وَهُوَ السَّمِیْعُ الْعَلِیْمُ ۟
ಪೈಗಂಬರ್ ಹೇಳಿದರು: ನನ್ನ ಪ್ರಭು ಆಕಾಶದಲ್ಲೂ, ಭೂಮಿಯಲ್ಲೂ ಇರುವ ಸಕಲ ಮಾತುಗಳನ್ನೂ ಚೆನ್ನಾಗಿ ಅರಿಯುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.
Arapça tefsirler:
بَلْ قَالُوْۤا اَضْغَاثُ اَحْلَامٍ بَلِ افْتَرٰىهُ بَلْ هُوَ شَاعِرٌ ۖۚ— فَلْیَاْتِنَا بِاٰیَةٍ كَمَاۤ اُرْسِلَ الْاَوَّلُوْنَ ۟
ಆ ಅಕ್ರಮಿಗಳು ಹೀಗೂ ಹೇಳುತ್ತಾರೆ: ಇದು (ಕುರ್‌ಆನ್) ನಿರರ್ಥಕ ಕನಸುಗಳಾಗಿವೆ. ಹಾಗಲ್ಲ, ಅವನು ಇದನ್ನು ಸ್ವತಃ ರಚಿಸಿದ್ದಾನೆ. ಇಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಅನ್ಯಥಾ ಅವನು ಹಿಂದಿನ ಪೈಗಂಬರರು ದೃಷ್ಟಾಂತಗಳೊAದಿಗೆ ಕಳುಹಿಸಲ್ಪಟ್ಟಂತೇ ಇವನು ನಮ್ಮಲ್ಲಿಗೂ ಒಂದು ದೃಷ್ಟಾಂತವನ್ನು ತರಲಿ.
Arapça tefsirler:
مَاۤ اٰمَنَتْ قَبْلَهُمْ مِّنْ قَرْیَةٍ اَهْلَكْنٰهَا ۚ— اَفَهُمْ یُؤْمِنُوْنَ ۟
ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?
Arapça tefsirler:
وَمَاۤ اَرْسَلْنَا قَبْلَكَ اِلَّا رِجَالًا نُّوْحِیْۤ اِلَیْهِمْ فَسْـَٔلُوْۤا اَهْلَ الذِّكْرِ اِنْ كُنْتُمْ لَا تَعْلَمُوْنَ ۟
(ಓ ಸಂದೇಶವಾಹಕರೇ) ನಿಮಗಿಂತ ಮೊದಲು ನಾವು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸಿದ್ದೆವು. ಅವರೆಡೆಗೆ ದಿವ್ಯವಾಣಿ ಮಾಡುತ್ತಿದೆವು. ನಿಮಗೆ (ಬಹುದೇವಾರಾಧಕರಿಗೆ) ಜ್ಞಾನವಿಲ್ಲದಿದ್ದರೆ ಗ್ರಂಥದವರೊAದಿಗೆ ವಿಚಾರಿಸಿರಿ.
Arapça tefsirler:
وَمَا جَعَلْنٰهُمْ جَسَدًا لَّا یَاْكُلُوْنَ الطَّعَامَ وَمَا كَانُوْا خٰلِدِیْنَ ۟
ನಾವು ಅವರಿಗೆ ಅಹಾರವನ್ನು ಸೇವಿಸದಂತಹ ಶರೀರವನ್ನು ಮಾಡಿರಲಿಲ್ಲ ಮತ್ತು ಅವರು ಶಾಶ್ವತರೂ ಆಗಿರಲಿಲ್ಲ.
Arapça tefsirler:
ثُمَّ صَدَقْنٰهُمُ الْوَعْدَ فَاَنْجَیْنٰهُمْ وَمَنْ نَّشَآءُ وَاَهْلَكْنَا الْمُسْرِفِیْنَ ۟
ಅನಂತರ ನಾವು ಅವರೊಂದಿಗೆ ಮಾಡಿದ ವಾಗ್ದಾನವನ್ನು ಪೂರ್ಣಗೊಳಿಸಿದೆವು. ನಾವು ಅವರನ್ನೂ ಮತ್ತು ನಾವಿಚ್ಛಿಸಿದ ಇತರರನ್ನು ರಕ್ಷಿಸಿದೆವು ಮತ್ತು ಮಿತಿಮೀರಿದವರನ್ನು ನಾಶ ಪಡಿಸಿದೆವು.
Arapça tefsirler:
لَقَدْ اَنْزَلْنَاۤ اِلَیْكُمْ كِتٰبًا فِیْهِ ذِكْرُكُمْ ؕ— اَفَلَا تَعْقِلُوْنَ ۟۠
ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮದೇ ಪ್ರಾಸ್ತಾವವಿರುವಂತಹ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉದ್ಬೋಧವಿದೆ. ಹಾಗಿದ್ದೂ ನೀವು ವಿವೇಚಿಸಿಕೊಳ್ಳುವುದಿಲ್ಲವೇ?
Arapça tefsirler:
 
Anlam tercümesi Sure: Sûratu'l-Enbiyâ
Surelerin fihristi Sayfa numarası
 
Kur'an-ı Kerim meal tercümesi - Kanadaca Tercüme - Beşir Meysuri - Mealler fihristi

Şeyh Beşir Meysuri tarafından tercüme edilmiştir. Rowad Tercüme Merkezi gözetiminde geliştirimiştir.

Kapat