Check out the new design

Kur'an-ı Kerim meal tercümesi - Kanadaca Tercüme - Beşir Meysuri * - Mealler fihristi


Anlam tercümesi Sure: Sûratu'l-Mu'minûn   Ayet:
مَا تَسْبِقُ مِنْ اُمَّةٍ اَجَلَهَا وَمَا یَسْتَاْخِرُوْنَ ۟ؕ
ಯಾವೊಂದು ಸಮುದಾಯವು ತನ್ನ ನಿಶ್ಚಿತ ಅವಧಿಯನ್ನು ದಾಟಿ ಮುಂದೆ ಸಾಗುವುದೂ ಇಲ್ಲ, ಹಿಂದುಳಿಯುವುದೂ ಇಲ್ಲ.
Arapça tefsirler:
ثُمَّ اَرْسَلْنَا رُسُلَنَا تَتْرَا ؕ— كُلَّ مَا جَآءَ اُمَّةً رَّسُوْلُهَا كَذَّبُوْهُ فَاَتْبَعْنَا بَعْضَهُمْ بَعْضًا وَّجَعَلْنٰهُمْ اَحَادِیْثَ ۚ— فَبُعْدًا لِّقَوْمٍ لَّا یُؤْمِنُوْنَ ۟
ತರುವಾಯ ನಾವು ನಮ್ಮ ಸಂದೇಶವಾಹಕರನ್ನು ನಿರಂತರವಾಗಿ ಕಳಿಹಿಸಿದೆವು. ಪ್ರತಿಯೊಂದು ಸಮುದಾಯಕ್ಕೆ ಅವರ ಸಂದೇಶವಾಹಕನು ಬಂದಾಗಲೆಲ್ಲಾ ಅವರು ಅವನನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಂದರ ಹಿಂದೆ ಒಂದರAತೆ ನಾಶ ಮಾಡಿದೆವು ಮತ್ತು ನಾವು ಅವರನ್ನು ಕಥೆಗಳನ್ನಾಗಿ ಮಾಡಿಬಟ್ಟೆವು. ಸತ್ಯವಿಶ್ವಾಸವನ್ನು ಸ್ವೀಕರಿಸದ ಜನರಿಗೆ ಶಾಪವಿರಲಿ.
Arapça tefsirler:
ثُمَّ اَرْسَلْنَا مُوْسٰی وَاَخَاهُ هٰرُوْنَ ۙ۬— بِاٰیٰتِنَا وَسُلْطٰنٍ مُّبِیْنٍ ۟ۙ
ಅನಂತರ ನಾವು ಮೂಸ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊAದಿಗೆ ಹಾಗೂ ಸುಸ್ಪಷ್ಟ ಪುರಾವೆಯೊಂದಿಗೆ ಕಳುಹಿಸಿದೆವು.
Arapça tefsirler:
اِلٰی فِرْعَوْنَ وَمَلَاۡىِٕهٖ فَاسْتَكْبَرُوْا وَكَانُوْا قَوْمًا عَالِیْنَ ۟ۚ
ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ, (ಕಳುಹಿಸಿದೆವು) ಆದರೆ ಅವರು ದುರಹಂಕಾರ ತೋರಿದರು ಮತ್ತು ಅವರು ದರ್ಪವುಳ್ಳ ಜನರಾಗಿದ್ದರು.
Arapça tefsirler:
فَقَالُوْۤا اَنُؤْمِنُ لِبَشَرَیْنِ مِثْلِنَا وَقَوْمُهُمَا لَنَا عٰبِدُوْنَ ۟ۚ
ಅವರು ಹೇಳಿದರು: ನಮ್ಮಂತೆಯೇ ಇರುವ ಇಬ್ಬರು ಮನುಷ್ಯರ ಮೇಲೆ ನಾವು ವಿಶ್ವಾಸವಿಡುವುದೇ? ವಸ್ತುತಃ ಅವರ ಜನಾಂಗದವರು ನಮ್ಮ ದಾಸರಾಗಿದ್ದಾರೆ!
Arapça tefsirler:
فَكَذَّبُوْهُمَا فَكَانُوْا مِنَ الْمُهْلَكِیْنَ ۟
ಹಾಗೆಯೇ ಅವರು ಅವರಿಬ್ಬರನ್ನೂ ಸುಳ್ಳಾಗಿಸಿದರು. ಕೊನೆಗೆ ಅವರು ನಾಶ ಹೊಂದುವವರೊAದಿಗೆ ಸೇರಿಬಿಟ್ಟರು.
Arapça tefsirler:
وَلَقَدْ اٰتَیْنَا مُوْسَی الْكِتٰبَ لَعَلَّهُمْ یَهْتَدُوْنَ ۟
ಅವರು ಸನ್ಮಾರ್ಗ ಪಡೆಯಲೆಂದು ನಾವು ಮೂಸಾರವರಿಗೆ ಗ್ರಂಥವನ್ನು ದಯಪಾಲಿಸಿದೆವು.
Arapça tefsirler:
وَجَعَلْنَا ابْنَ مَرْیَمَ وَاُمَّهٗۤ اٰیَةً وَّاٰوَیْنٰهُمَاۤ اِلٰی رَبْوَةٍ ذَاتِ قَرَارٍ وَّمَعِیْنٍ ۟۠
ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
Arapça tefsirler:
یٰۤاَیُّهَا الرُّسُلُ كُلُوْا مِنَ الطَّیِّبٰتِ وَاعْمَلُوْا صَالِحًا ؕ— اِنِّیْ بِمَا تَعْمَلُوْنَ عَلِیْمٌ ۟ؕ
ನಾವು ಮರ್ಯಮರ ಪುತ್ರನನ್ನು, ಅವನ ತಾಯಿಯನ್ನು ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅವರಿಬ್ಬರಿಗೂ ಪ್ರಶಾಂತತೆಯ, ನೀರಿನ ಧಾರೆಯುಳ್ಳ ಉನ್ನತವಾದ ಪ್ರದೇಶದಲ್ಲಿ ಆಶ್ರಯ ನೀಡಿದೆವು.
Arapça tefsirler:
وَاِنَّ هٰذِهٖۤ اُمَّتُكُمْ اُمَّةً وَّاحِدَةً وَّاَنَا رَبُّكُمْ فَاتَّقُوْنِ ۟
ನಿಶ್ಚಯವಾಗಿಯೂ ನಿಮ್ಮ ಈ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮೆಲ್ಲರ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.
Arapça tefsirler:
فَتَقَطَّعُوْۤا اَمْرَهُمْ بَیْنَهُمْ زُبُرًا ؕ— كُلُّ حِزْبٍۭ بِمَا لَدَیْهِمْ فَرِحُوْنَ ۟
ಅನಂತರ ಅವರು ತಮ್ಮ ಧರ್ಮವನ್ನು ಪರಸ್ಪರ ಭಿನ್ನವಿಭಿನ್ನಗೊಳಿಸಿದರು. ಪ್ರತಿಯೊಂದು ಗುಂಪು ತಮ್ಮ ಬಳಿಯಿರುವುದರ ಕುರಿತು ಹೆಮ್ಮೆಪಡುತ್ತಿದೆ.
Arapça tefsirler:
فَذَرْهُمْ فِیْ غَمْرَتِهِمْ حَتّٰی حِیْنٍ ۟
ಆದ್ದರಿಂದ ನೀವು ಅವರನ್ನು ಅವರ ಅಲಕ್ಷö್ಯತೆಯಲ್ಲಿ ಸ್ವಲ್ಪ ಕಾಲದವರೆಗೆ ಬಿಟ್ಟು ಬಿಡಿರಿ.
Arapça tefsirler:
اَیَحْسَبُوْنَ اَنَّمَا نُمِدُّهُمْ بِهٖ مِنْ مَّالٍ وَّبَنِیْنَ ۟ۙ
ನಾವು ಅವರ ಸಂಪತ್ತು ಹಾಗೂ ಸಂತಾನಗಳನ್ನು ಹೆಚ್ಚಿಸುತ್ತಿದ್ದೇವೆಂದು
Arapça tefsirler:
نُسَارِعُ لَهُمْ فِی الْخَیْرٰتِ ؕ— بَلْ لَّا یَشْعُرُوْنَ ۟
ಅವರಿಗೆ ಒಳಿತುಗಳಲ್ಲಿ ಶೀಘ್ರಗೊಳಿಸುತ್ತೇವೆಂದು ಅವರು ಭಾವಿಸುತ್ತಿದ್ದಾರೆಯೇ? ಹಾಗಲ್ಲ! ಆದರೆ ಅವರು ಗ್ರಹಿಸಿಕೊಳ್ಳುವುದಿಲ್ಲ.
Arapça tefsirler:
اِنَّ الَّذِیْنَ هُمْ مِّنْ خَشْیَةِ رَبِّهِمْ مُّشْفِقُوْنَ ۟ۙ
ನಿಶ್ಚಯವಾಗಿಯು ಯಾರು ತಮ್ಮ ಪ್ರಭುವಿನ ಭಯದಿಂದ ನಡುಗುತ್ತಾರೋ,
Arapça tefsirler:
وَالَّذِیْنَ هُمْ بِاٰیٰتِ رَبِّهِمْ یُؤْمِنُوْنَ ۟ۙ
ಯಾರು ತಮ್ಮ ಪ್ರಭುವಿನ ಸೂಕ್ತಿಗಳಲ್ಲಿ ವಿಶ್ವಾಸವಿಡುತ್ತಾರೋ!
Arapça tefsirler:
وَالَّذِیْنَ هُمْ بِرَبِّهِمْ لَا یُشْرِكُوْنَ ۟ۙ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
Arapça tefsirler:
 
Anlam tercümesi Sure: Sûratu'l-Mu'minûn
Surelerin fihristi Sayfa numarası
 
Kur'an-ı Kerim meal tercümesi - Kanadaca Tercüme - Beşir Meysuri - Mealler fihristi

Şeyh Beşir Meysuri tarafından tercüme edilmiştir. Rowad Tercüme Merkezi gözetiminde geliştirimiştir.

Kapat