Check out the new design

Kur'an-ı Kerim meal tercümesi - Kanadaca Tercüme - Beşir Meysuri * - Mealler fihristi


Anlam tercümesi Sure: Sûratu's-Secde   Ayet:

ಅಸ್ಸಜ್ದ

الٓمّٓ ۟ۚ
ಅಲೀಫ್ ಲಾಮ್ ಮೀಮ್.
Arapça tefsirler:
تَنْزِیْلُ الْكِتٰبِ لَا رَیْبَ فِیْهِ مِنْ رَّبِّ الْعٰلَمِیْنَ ۟ؕ
ಈ ಗ್ರಂಥವು ಸರ್ವಲೋಕದ ಪ್ರಭುವಿನ ವತಿಯಿಂದ ಅವತೀರ್ಣಗೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
Arapça tefsirler:
اَمْ یَقُوْلُوْنَ افْتَرٰىهُ ۚ— بَلْ هُوَ الْحَقُّ مِنْ رَّبِّكَ لِتُنْذِرَ قَوْمًا مَّاۤ اَتٰىهُمْ مِّنْ نَّذِیْرٍ مِّنْ قَبْلِكَ لَعَلَّهُمْ یَهْتَدُوْنَ ۟
ಇದನ್ನು ಪ್ರವಾದಿಯವರು ಸ್ವತಃ ರಚಿಸಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ಇದು ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಯಾರು ಮುನ್ನೆಚ್ಚರಿಕೆಗಾರರು ಬಂದಿರದAತಹ ಒಂದು ಸಮೂಹಕ್ಕೆ ನೀವು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರು ಸನ್ಮಾರ್ಗ ಪಡೆಯಲೂಬಹುದು.
Arapça tefsirler:
اَللّٰهُ الَّذِیْ خَلَقَ السَّمٰوٰتِ وَالْاَرْضَ وَمَا بَیْنَهُمَا فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ؕ— مَا لَكُمْ مِّنْ دُوْنِهٖ مِنْ وَّلِیٍّ وَّلَا شَفِیْعٍ ؕ— اَفَلَا تَتَذَكَّرُوْنَ ۟
ಅಲ್ಲಾಹನೆಂದರೆ ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ಮಧ್ಯಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾಗಿದ್ದಾನೆ. ತರುವಾಯ ಸಿಂಹಾಸನದ ಮೇಲೆ ಆರೋಢನಾದನು. ಅವನ ಹೊರತು ನಿಮಗೆ ಯಾವ ರಕ್ಷಕನಾಗಲೀ, ಶಿಫಾರಸ್ಸುಗಾರನಾಗಲೀ ಇಲ್ಲ. ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Arapça tefsirler:
یُدَبِّرُ الْاَمْرَ مِنَ السَّمَآءِ اِلَی الْاَرْضِ ثُمَّ یَعْرُجُ اِلَیْهِ فِیْ یَوْمٍ كَانَ مِقْدَارُهٗۤ اَلْفَ سَنَةٍ مِّمَّا تَعُدُّوْنَ ۟
ಅವನು ಆಕಾಶದಿಂದ ಭೂಮಿಯವರೆಗೆ ಸಕಲ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ತರುವಾಯ ಆ ಕಾರ್ಯವು ಅವನೆಡೆಗೆ ಏರಿಹೋಗುವುದು ಇಂತಹಾ ಒಂದು ದಿನದಲ್ಲಿ ಅದರÀ ವಿಸ್ತಾರವು ನೀವು ಗಣಿಸುವ ಸಾವಿರ ವರ್ಷಗಳಾಗಿರುವುದು.
Arapça tefsirler:
ذٰلِكَ عٰلِمُ الْغَیْبِ وَالشَّهَادَةِ الْعَزِیْزُ الرَّحِیْمُ ۟ۙ
ಅವನೇ ಗೋಚರ ಅಗೋಚರಗಳನ್ನು ಅರಿಯುವವನೂ, ಪ್ರತಾಪಶಾಲಿಯು, ಕರುಣಾನಿಧಿಯು ಆಗಿರುವÀನು.
Arapça tefsirler:
الَّذِیْۤ اَحْسَنَ كُلَّ شَیْءٍ خَلَقَهٗ وَبَدَاَ خَلْقَ الْاِنْسَانِ مِنْ طِیْنٍ ۟ۚ
ಅವನು ಸಕಲ ವಸ್ತುಗಳನ್ನೂ ಚೆನ್ನಾಗಿ ಸೃಷ್ಟಿಸಿದನು ಮತ್ತು ಮಾನವನ ಸೃಷ್ಟಿಯನ್ನು ಅವನು ಆವೇ ಮಣ್ಣಿನಿಂದ ಆರಂಭಿಸಿದನು.
Arapça tefsirler:
ثُمَّ جَعَلَ نَسْلَهٗ مِنْ سُلٰلَةٍ مِّنْ مَّآءٍ مَّهِیْنٍ ۟ۚ
ತರುವಾಯ ಅವನ ಸಂತತಿಯನ್ನು ತುಚ್ಛವಾದ ನೀರಿನ ಸತ್ವದಿಂದ ಮುಂದುವರಿಸಿದನು.
Arapça tefsirler:
ثُمَّ سَوّٰىهُ وَنَفَخَ فِیْهِ مِنْ رُّوْحِهٖ وَجَعَلَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟
ತರುವಾಯ ಅವನು ಅವನಿಗೆ ಉತ್ತಮ ಸ್ವರೂಪವನ್ನು ನೀಡಿ ತನ್ನವತಿಯ ಆತ್ಮವನ್ನು ಅವನಲ್ಲಿ ಊದಿದನು. ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನು, ಹೃದಯಗಳನ್ನೂ ಉಂಟುಮಾಡಿದವನು. ನೀವು ಸ್ವಲ್ಪ ಮಾತ್ರವೇ ಕೃತಜ್ಞತೆ ಸಲ್ಲಿಸುತ್ತೀರಿ.
Arapça tefsirler:
وَقَالُوْۤا ءَاِذَا ضَلَلْنَا فِی الْاَرْضِ ءَاِنَّا لَفِیْ خَلْقٍ جَدِیْدٍ ؕ۬— بَلْ هُمْ بِلِقَآءِ رَبِّهِمْ كٰفِرُوْنَ ۟
ಅವರು ಹೇಳಿದರು: ನಾವು ಭೂಮಿಯಲ್ಲಿ ಮಣ್ಣು ಪಾಲಾಗಿಬಿಟ್ಟರೂ ನಾವು ಹೊಸದಾಗಿ ಸೃಷ್ಟಿಸಲಾಗುವೆವೋ? ಹಾಗಲ್ಲ, ಅವರು ತಮ್ಮ ಪ್ರಭುವಿನ ಭೇಟಿಯನ್ನು ನಿಷೇಧಿಸುವವರಾಗಿದ್ದಾರೆ.
Arapça tefsirler:
قُلْ یَتَوَفّٰىكُمْ مَّلَكُ الْمَوْتِ الَّذِیْ وُكِّلَ بِكُمْ ثُمَّ اِلٰی رَبِّكُمْ تُرْجَعُوْنَ ۟۠
ಹೇಳಿರಿ: ಓ ಪೈಗಂಬರರೇ! ನಿಮ್ಮ ಮೇಲೆ ನಿಯೋಗಿಸಲಾದ ಮರಣದ ದೂತನು ನಿಮ್ಮನ್ನು ಮೃತಪಡಿಸಲಿದ್ದಾನೆ. ತರುವಾಯ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವಿರಿ.
Arapça tefsirler:
 
Anlam tercümesi Sure: Sûratu's-Secde
Surelerin fihristi Sayfa numarası
 
Kur'an-ı Kerim meal tercümesi - Kanadaca Tercüme - Beşir Meysuri - Mealler fihristi

Şeyh Beşir Meysuri tarafından tercüme edilmiştir. Rowad Tercüme Merkezi gözetiminde geliştirimiştir.

Kapat