Kur'an-ı Kerim meal tercümesi - الترجمة الكنادية - حمزة بتور * - Mealler fihristi

XML CSV Excel API
Please review the Terms and Policies

Anlam tercümesi Sure: Sûratu İbrâhîm   Ayet:

ಸೂರ ಇಬ್ರಾಹೀಮ್

الٓرٰ ۫— كِتٰبٌ اَنْزَلْنٰهُ اِلَیْكَ لِتُخْرِجَ النَّاسَ مِنَ الظُّلُمٰتِ اِلَی النُّوْرِ ۙ۬— بِاِذْنِ رَبِّهِمْ اِلٰی صِرَاطِ الْعَزِیْزِ الْحَمِیْدِ ۟ۙ
ಅಲಿಫ್ ಲಾಮ್ ರಾ. ಇದು ಗ್ರಂಥ. ನೀವು ಮನುಷ್ಯರನ್ನು ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಅಂಧಕಾರಗಳಿಂದ ಬೆಳಕಿಗೆ—ಪ್ರಬಲನು ಮತ್ತು ಸ್ತುತ್ಯರ್ಹನಾದವನ ಮಾರ್ಗಕ್ಕೆ—ತರಲು ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.
Arapça tefsirler:
اللّٰهِ الَّذِیْ لَهٗ مَا فِی السَّمٰوٰتِ وَمَا فِی الْاَرْضِ ؕ— وَوَیْلٌ لِّلْكٰفِرِیْنَ مِنْ عَذَابٍ شَدِیْدِ ۟ۙ
ಅಂದರೆ, ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಯಾರಿಗೆ ಸೇರಿದೆಯೋ ಆ ಅಲ್ಲಾಹನ ಮಾರ್ಗಕ್ಕೆ. ಸತ್ಯನಿಷೇಧಿಗಳಿಗೆ ಕಠೋರ ಶಿಕ್ಷೆಯ ದುರ್ಗತಿ ಕಾದಿದೆ.
Arapça tefsirler:
١لَّذِیْنَ یَسْتَحِبُّوْنَ الْحَیٰوةَ الدُّنْیَا عَلَی الْاٰخِرَةِ وَیَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ؕ— اُولٰٓىِٕكَ فِیْ ضَلٰلٍۢ بَعِیْدٍ ۟
ಅವರು ಯಾರೆಂದರೆ, ಪರಲೋಕಕ್ಕಿಂತಲೂ ಇಹಲೋಕಕ್ಕೆ ಆದ್ಯತೆ ನೀಡುವವರು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಗಟ್ಟುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಅತಿವಿದೂರದ ದುರ್ಮಾರ್ಗದಲ್ಲಿದ್ದಾರೆ.
Arapça tefsirler:
وَمَاۤ اَرْسَلْنَا مِنْ رَّسُوْلٍ اِلَّا بِلِسَانِ قَوْمِهٖ لِیُبَیِّنَ لَهُمْ ؕ— فَیُضِلُّ اللّٰهُ مَنْ یَّشَآءُ وَیَهْدِیْ مَنْ یَّشَآءُ ؕ— وَهُوَ الْعَزِیْزُ الْحَكِیْمُ ۟
ನಾವು ಎಲ್ಲಾ ಸಂದೇಶವಾಹಕರನ್ನೂ ಅವರ ಜನರ ಭಾಷೆಯಲ್ಲಿ (ಮಾತನಾಡುವಂತೆ) ಕಳುಹಿಸಿದ್ದೇವೆ. ಅವರು ಜನರಿಗೆ ಸಂದೇಶವನ್ನು ಸ್ಪಷ್ಟವಾಗಿ ವಿವರಿಸಿಕೊಡುವುದಕ್ಕಾಗಿ. ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Arapça tefsirler:
وَلَقَدْ اَرْسَلْنَا مُوْسٰی بِاٰیٰتِنَاۤ اَنْ اَخْرِجْ قَوْمَكَ مِنَ الظُّلُمٰتِ اِلَی النُّوْرِ ۙ۬— وَذَكِّرْهُمْ بِاَیّٰىمِ اللّٰهِ ؕ— اِنَّ فِیْ ذٰلِكَ لَاٰیٰتٍ لِّكُلِّ صَبَّارٍ شَكُوْرٍ ۟
“ನಿಮ್ಮ ಜನರನ್ನು ಅಂಧಕಾರಗಳಿಂದ ಬೆಳಕಿಗೆ ತನ್ನಿರಿ ಮತ್ತು ಅವರಿಗೆ ಅಲ್ಲಾಹನ ಉಪಕಾರಗಳನ್ನು ನೆನಪಿಸಿಕೊಡಿ” (ಎಂದು ಆದೇಶಿಸುತ್ತಾ) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ನಿಶ್ಚಯವಾಗಿಯೂ, ಸೈರಣೆಯಿರುವ ಮತ್ತು ಕೃತಜ್ಞರಾದ ಪ್ರತಿಯೊಬ್ಬರಿಗೂ ಅದರಲ್ಲಿ ದೃಷ್ಟಾಂತಗಳಿವೆ.
Arapça tefsirler:
وَاِذْ قَالَ مُوْسٰی لِقَوْمِهِ اذْكُرُوْا نِعْمَةَ اللّٰهِ عَلَیْكُمْ اِذْ اَنْجٰىكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ وَیُذَبِّحُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟۠
ಮೂಸಾ ತಮ್ಮ ಜನರಿಗೆ ಹೇಳಿದ ಸಂದರ್ಭ: “(ಓ ಜನರೇ!) ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ಅಲ್ಲಾಹು ನಿಮ್ಮ ರಕ್ಷಿಸಿದ ಸಂದರ್ಭದಲ್ಲಿ ಅವನು ನಿಮಗೆ ಕರುಣಿಸಿದ ಅನುಗ್ರಹವನ್ನು ಸ್ಮರಿಸಿ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಹಾ ಪರೀಕ್ಷೆಯಿತ್ತು”.
Arapça tefsirler:
وَاِذْ تَاَذَّنَ رَبُّكُمْ لَىِٕنْ شَكَرْتُمْ لَاَزِیْدَنَّكُمْ وَلَىِٕنْ كَفَرْتُمْ اِنَّ عَذَابِیْ لَشَدِیْدٌ ۟
ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ: “ನೀವು ಕೃತಜ್ಞರಾದರೆ ನಾನು ನಿಮಗೆ (ಅನುಗ್ರಹವನ್ನು) ಖಂಡಿತ ಹೆಚ್ಚಿಸುವೆನು. ಆದರೆ ನೀವು ಕೃತಘ್ನರಾದರೆ ನನ್ನ ಶಿಕ್ಷೆಯು ಅತಿಕಠೋರವಾಗಿದೆ.”
Arapça tefsirler:
وَقَالَ مُوْسٰۤی اِنْ تَكْفُرُوْۤا اَنْتُمْ وَمَنْ فِی الْاَرْضِ جَمِیْعًا ۙ— فَاِنَّ اللّٰهَ لَغَنِیٌّ حَمِیْدٌ ۟
ಮೂಸಾ ಹೇಳಿದರು: “ನೀವು ಮತ್ತು ಭೂಮಿಯಲ್ಲಿರುವ ಮನುಷ್ಯರೆಲ್ಲರೂ ಒಟ್ಟಾಗಿ ಅಲ್ಲಾಹನನ್ನು ನಿಷೇಧಿಸಿದರೂ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.”
Arapça tefsirler:
اَلَمْ یَاْتِكُمْ نَبَؤُا الَّذِیْنَ مِنْ قَبْلِكُمْ قَوْمِ نُوْحٍ وَّعَادٍ وَّثَمُوْدَ ۛؕ۬— وَالَّذِیْنَ مِنْ بَعْدِهِمْ ۛؕ— لَا یَعْلَمُهُمْ اِلَّا اللّٰهُ ؕ— جَآءَتْهُمْ رُسُلُهُمْ بِالْبَیِّنٰتِ فَرَدُّوْۤا اَیْدِیَهُمْ فِیْۤ اَفْوَاهِهِمْ وَقَالُوْۤا اِنَّا كَفَرْنَا بِمَاۤ اُرْسِلْتُمْ بِهٖ وَاِنَّا لَفِیْ شَكٍّ مِّمَّا تَدْعُوْنَنَاۤ اِلَیْهِ مُرِیْبٍ ۟
ನಿಮಗಿಂತ ಮೊದಲಿನ ನೂಹರ ಜನರು, ಆದ್ ಮತ್ತು ಸಮೂದ್ ಗೋತ್ರಗಳು ಹಾಗೂ ಅವರ ನಂತರ ಬಂದ—ಅಲ್ಲಾಹನ ಹೊರತು ಬೇರೆ ಯಾರೂ ತಿಳಿದಿರದ ಗೋತ್ರಗಳು—ಮುಂತಾದವರ ಸಮಾಚಾರಗಳು ನಿಮಗೆ ತಲುಪಿಲ್ಲವೇ? ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆಗ ಅವರು ತಮ್ಮ ಕೈಯನ್ನು ಬಾಯಿಗೆ ಒತ್ತಿ ಹಿಡಿದು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ನೀವು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿದ್ದೀರೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.”
Arapça tefsirler:
قَالَتْ رُسُلُهُمْ اَفِی اللّٰهِ شَكٌّ فَاطِرِ السَّمٰوٰتِ وَالْاَرْضِ ؕ— یَدْعُوْكُمْ لِیَغْفِرَ لَكُمْ مِّنْ ذُنُوْبِكُمْ وَیُؤَخِّرَكُمْ اِلٰۤی اَجَلٍ مُّسَمًّی ؕ— قَالُوْۤا اِنْ اَنْتُمْ اِلَّا بَشَرٌ مِّثْلُنَا ؕ— تُرِیْدُوْنَ اَنْ تَصُدُّوْنَا عَمَّا كَانَ یَعْبُدُ اٰبَآؤُنَا فَاْتُوْنَا بِسُلْطٰنٍ مُّبِیْنٍ ۟
ಅವರ ಸಂದೇಶವಾಹಕರುಗಳು ಕೇಳಿದರು: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನ ಬಗ್ಗೆ ನಿಮಗೆ ಸಂಶಯವೇ? ನಿಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ಒಂದು ನಿಗದಿತ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲು ಅವನು ನಿಮ್ಮನ್ನು ಕರೆಯುತ್ತಿದ್ದಾನೆ.” ಅವರು ಹೇಳಿದರು: “ನೀವು ನಮ್ಮಂತಿರುವ ಮನುಷ್ಯರೇ ಆಗಿದ್ದೀರಿ. ನಮ್ಮ ಪೂರ್ವಜರು ಯಾರನ್ನು ಆರಾಧಿಸುತ್ತಿದ್ದರೋ ಅವರಿಂದ ನಮ್ಮನ್ನು ತಡೆಯುವುದೇ ನಿಮ್ಮ ಉದ್ದೇಶವಾಗಿದೆ. ನಮಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ತಂದು ತೋರಿಸಿ.”
Arapça tefsirler:
قَالَتْ لَهُمْ رُسُلُهُمْ اِنْ نَّحْنُ اِلَّا بَشَرٌ مِّثْلُكُمْ وَلٰكِنَّ اللّٰهَ یَمُنُّ عَلٰی مَنْ یَّشَآءُ مِنْ عِبَادِهٖ ؕ— وَمَا كَانَ لَنَاۤ اَنْ نَّاْتِیَكُمْ بِسُلْطٰنٍ اِلَّا بِاِذْنِ اللّٰهِ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟
ಅವರ ಸಂದೇಶವಾಹಕರುಗಳು ಕೇಳಿದರು: “ನಾವು ನಿಮ್ಮಂತಿರುವ ಮನುಷ್ಯರೇ ಆಗಿದ್ದೇವೆ. ಆದರೆ ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರನ್ನು ಆಶೀರ್ವದಿಸುತ್ತಾನೆ. ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ಸಾಕ್ಷ್ಯಾಧಾರವನ್ನು ತರಲು ನಮಗೆ ಸಾಧ್ಯವಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Arapça tefsirler:
وَمَا لَنَاۤ اَلَّا نَتَوَكَّلَ عَلَی اللّٰهِ وَقَدْ هَدٰىنَا سُبُلَنَا ؕ— وَلَنَصْبِرَنَّ عَلٰی مَاۤ اٰذَیْتُمُوْنَا ؕ— وَعَلَی اللّٰهِ فَلْیَتَوَكَّلِ الْمُتَوَكِّلُوْنَ ۟۠
ಅಲ್ಲಾಹು ನಮಗೆ ನಮ್ಮ ಮಾರ್ಗಗಳನ್ನು ಸ್ಪಷ್ಟವಾಗಿ ತೋರಿಸಿರುವಾಗ ಅವನಲ್ಲಿ ಭರವಸೆಯಿಡದಿರಲು ನಮಗೇನು ಹಕ್ಕಿದೆ? ನೀವು ನೀಡುವ ಕಿರುಕುಳಗಳನ್ನು ನಾವು ಖಂಡಿತ ಸಹಿಸಿಕೊಳ್ಳುತ್ತೇವೆ. ಭರವಸೆಯಿಡುವವರು ಅಲ್ಲಾಹನಲ್ಲಿಯೇ ಭರವಸೆಯಿಡಲಿ.”
Arapça tefsirler:
وَقَالَ الَّذِیْنَ كَفَرُوْا لِرُسُلِهِمْ لَنُخْرِجَنَّكُمْ مِّنْ اَرْضِنَاۤ اَوْ لَتَعُوْدُنَّ فِیْ مِلَّتِنَا ؕ— فَاَوْحٰۤی اِلَیْهِمْ رَبُّهُمْ لَنُهْلِكَنَّ الظّٰلِمِیْنَ ۟ۙ
ಸತ್ಯನಿಷೇಧಿಗಳು ಅವರ ಸಂದೇಶವಾಹಕರುಗಳೊಡನೆ ಹೇಳಿದರು: “ನಾವು ನಿಮ್ಮನ್ನು ನಮ್ಮ ಊರಿನಿಂದ ಖಂಡಿತ ಓಡಿಸುತ್ತೇವೆ. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇಬೇಕು. ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ದೇವವಾಣಿಯನ್ನು ನೀಡಿದನು: “ಆ ಅಕ್ರಮಿಗಳನ್ನು ನಾವು ಖಂಡಿತ ಸರ್ವನಾಶ ಮಾಡುತ್ತೇವೆ.
Arapça tefsirler:
وَلَنُسْكِنَنَّكُمُ الْاَرْضَ مِنْ بَعْدِهِمْ ؕ— ذٰلِكَ لِمَنْ خَافَ مَقَامِیْ وَخَافَ وَعِیْدِ ۟
ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ವಾಸ ಮಾಡಿಸುತ್ತೇವೆ. ಇದು ನನ್ನ ಮುಂದೆ ನಿಲ್ಲುವುದನ್ನು ಭಯಪಡುವವರಿಗೆ ಮತ್ತು ನನ್ನ ಎಚ್ಚರಿಕೆಗಳನ್ನು ಭಯಪಡುವವರಿಗಾಗಿದೆ.”
Arapça tefsirler:
وَاسْتَفْتَحُوْا وَخَابَ كُلُّ جَبَّارٍ عَنِیْدٍ ۟ۙ
ಅವರು (ಪ್ರವಾದಿಗಳು) ತೀರ್ಪು ನೀಡಬೇಕೆಂದು ಅಂಗಲಾಚಿದರು. ಪ್ರತಿಯೊಬ್ಬ ಹಠಮಾರಿ ಪೀಡಕನು ನೆಲಕಚ್ಚಿದನು.
Arapça tefsirler:
مِّنْ وَّرَآىِٕهٖ جَهَنَّمُ وَیُسْقٰی مِنْ مَّآءٍ صَدِیْدٍ ۟ۙ
ನರಕಾಗ್ನಿ ಅವನ ಮುಂಭಾಗದಲ್ಲೇ ಇದೆ. ಅವನಿಗೆ ಕೀವು ತುಂಬಿದ ನೀರನ್ನು ಕುಡಿಸಲಾಗುವುದು.
Arapça tefsirler:
یَّتَجَرَّعُهٗ وَلَا یَكَادُ یُسِیْغُهٗ وَیَاْتِیْهِ الْمَوْتُ مِنْ كُلِّ مَكَانٍ وَّمَا هُوَ بِمَیِّتٍ ؕ— وَمِنْ وَّرَآىِٕهٖ عَذَابٌ غَلِیْظٌ ۟
ಅವನು ಅದನ್ನು ಅತೀವ ತ್ರಾಸದಿಂದ ಗುಟುಕರಿಸುವನು. ಆದರೂ ಅದನ್ನು ಗಂಟಲ ಕೆಳಗಿಳಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಸಾವು ಎಲ್ಲಾ ಕಡೆಗಳಿಂದಲೂ ಅವನ ಬಳಿಗೆ ಬರುವುದು. ಆದರೂ ಅವನು ಸಾಯುವುದಿಲ್ಲ. ಅವನಿಗೆ ಅದರ ಹಿಂದೆಯೇ ಅತಿಕಠೋರ ಶಿಕ್ಷೆಯೂ ಇದೆ.
Arapça tefsirler:
مَثَلُ الَّذِیْنَ كَفَرُوْا بِرَبِّهِمْ اَعْمَالُهُمْ كَرَمَادِ ١شْتَدَّتْ بِهِ الرِّیْحُ فِیْ یَوْمٍ عَاصِفٍ ؕ— لَا یَقْدِرُوْنَ مِمَّا كَسَبُوْا عَلٰی شَیْءٍ ؕ— ذٰلِكَ هُوَ الضَّلٰلُ الْبَعِیْدُ ۟
ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು ಯಾರೋ—ಅವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಬಿರುಗಾಳಿಯ ದಿನ ಅದಕ್ಕೆ ಬಲವಾದ ಗಾಳಿ ಬೀಸಿತು. ಅವರು ಮಾಡಿದ ಕರ್ಮಗಳಲ್ಲಿ ಯಾವುದರ ಮೇಲೂ (ಅದನ್ನು ಹಿಡಿದಿಟ್ಟುಕೊಳ್ಳಲು) ಅವರಿಗೆ ಸಾಮರ್ಥ್ಯವಿಲ್ಲ. ಅತಿವಿದೂರವಾದ ದುರ್ಮಾರ್ಗವೆಂದರೆ ಇದೇ.[1]
[1] ಬಿರುಗಾಳಿ ಬೀಸಿದರೆ ಬೂದಿಯ ಸ್ಥಿತಿ ಏನಾಗುವುದೋ ಪರಲೋಕಕ್ಕೆ ಬರುವಾಗ ಸತ್ಯನಿಷೇಧಿಗಳ ಕರ್ಮಗಳು ಸ್ಥಿತಿಯೂ ಆದೇ ಆಗುತ್ತದೆ. ಅವರು ಮಾಡಿದ ಯಾವುದೇ ಸತ್ಕರ್ಮಕ್ಕೂ ಅಲ್ಲಿ ಪ್ರತಿಫಲವಿಲ್ಲ. ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತವೆ.
Arapça tefsirler:
اَلَمْ تَرَ اَنَّ اللّٰهَ خَلَقَ السَّمٰوٰتِ وَالْاَرْضَ بِالْحَقِّ ؕ— اِنْ یَّشَاْ یُذْهِبْكُمْ وَیَاْتِ بِخَلْقٍ جَدِیْدٍ ۟ۙ
ಅಲ್ಲಾಹು ಭೂಮ್ಯಾಕಾಶಗಳನ್ನು ಅತ್ಯಂತ ನಿಖರವಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ? ಅವನು ಇಚ್ಛಿಸಿದರೆ ಅವನು ನಿಮ್ಮನ್ನು ತೊಲಗಿಸಿ ಹೊಸ ಸೃಷ್ಟಿಯನ್ನು ತರುವನು.
Arapça tefsirler:
وَّمَا ذٰلِكَ عَلَی اللّٰهِ بِعَزِیْزٍ ۟
ಅಲ್ಲಾಹನ ಮಟ್ಟಿಗೆ ಅದು ಕಷ್ಟವೇ ಅಲ್ಲ.
Arapça tefsirler:
وَبَرَزُوْا لِلّٰهِ جَمِیْعًا فَقَالَ الضُّعَفٰٓؤُا لِلَّذِیْنَ اسْتَكْبَرُوْۤا اِنَّا كُنَّا لَكُمْ تَبَعًا فَهَلْ اَنْتُمْ مُّغْنُوْنَ عَنَّا مِنْ عَذَابِ اللّٰهِ مِنْ شَیْءٍ ؕ— قَالُوْا لَوْ هَدٰىنَا اللّٰهُ لَهَدَیْنٰكُمْ ؕ— سَوَآءٌ عَلَیْنَاۤ اَجَزِعْنَاۤ اَمْ صَبَرْنَا مَا لَنَا مِنْ مَّحِیْصٍ ۟۠
ಅವರೆಲ್ಲರೂ ಅಲ್ಲಾಹನ ಬಳಿಗೆ ಹೊರಟು ಬರುವರು. ಆಗ ಬಲಹೀನರು ಅಹಂಕಾರಿಗಳೊಂದಿಗೆ ಹೇಳುವರು: “ನಾವು ನಿಜಕ್ಕೂ ನಿಮ್ಮ ಹಿಂಬಾಲಕರಾಗಿದ್ದೆವು. ಈಗ ಅಲ್ಲಾಹನ ಶಿಕ್ಷೆಯಿಂದ ಒಂದಂಶವನ್ನಾದರೂ ನಮ್ಮಿಂದ ದೂರ ಮಾಡುವಿರಾ?” ಅವರು ಉತ್ತರಿಸುವರು: “ಅಲ್ಲಾಹು ನಮಗೆ ಸನ್ಮಾರ್ಗ ತೋರಿಸುತ್ತಿದ್ದರೆ ನಾವು ನಿಮಗೂ ಸನ್ಮಾರ್ಗ ತೋರಿಸುತ್ತಿದ್ದೆವು. ಈಗ ನಾವು ಸಹನೆ ಕಳೆದುಕೊಂಡರೂ ಸಹನೆಯಿಂದ ವರ್ತಿಸಿದರೂ ಯಾವುದೇ ವ್ಯತ್ಯಾಸವಿಲ್ಲ. ನಮಗೆ ಯಾವುದೇ ರಕ್ಷಾಮಾರ್ಗವಿಲ್ಲ.”
Arapça tefsirler:
وَقَالَ الشَّیْطٰنُ لَمَّا قُضِیَ الْاَمْرُ اِنَّ اللّٰهَ وَعَدَكُمْ وَعْدَ الْحَقِّ وَوَعَدْتُّكُمْ فَاَخْلَفْتُكُمْ ؕ— وَمَا كَانَ لِیَ عَلَیْكُمْ مِّنْ سُلْطٰنٍ اِلَّاۤ اَنْ دَعَوْتُكُمْ فَاسْتَجَبْتُمْ لِیْ ۚ— فَلَا تَلُوْمُوْنِیْ وَلُوْمُوْۤا اَنْفُسَكُمْ ؕ— مَاۤ اَنَا بِمُصْرِخِكُمْ وَمَاۤ اَنْتُمْ بِمُصْرِخِیَّ ؕ— اِنِّیْ كَفَرْتُ بِمَاۤ اَشْرَكْتُمُوْنِ مِنْ قَبْلُ ؕ— اِنَّ الظّٰلِمِیْنَ لَهُمْ عَذَابٌ اَلِیْمٌ ۟
ವಿಷಯವನ್ನು ತೀರ್ಮಾನಿಸಲಾದಾಗ ಶೈತಾನನು ಹೇಳುವನು: “ನಿಜಕ್ಕೂ ಅಲ್ಲಾಹು ನಿಮಗೆ ಮಾಡಿದ ವಾಗ್ದಾನವು ಸತ್ಯವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆ. ಆದರೆ ನಾನು ನನ್ನ ವಾಗ್ದಾನವನ್ನು ಉಲ್ಲಂಘಿಸಿದ್ದೇನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ನಾನು ನಿಮ್ಮನ್ನು ಕರೆದಾಗ ನೀವು ನನ್ನ ಹಿಂದೆ ಓಡಿ ಬಂದಿರಿ. ಆದ್ದರಿಂದ ನನ್ನ ಮೇಲೆ ಅಪವಾದ ಹೊರಿಸಬೇಡಿ. ನಿಮ್ಮ ಮೇಲೆಯೇ ಅಪವಾದ ಹೊರಿಸಿರಿ. ನನ್ನನ್ನು ಸಹಾಯಕ್ಕಾಗಿ ಕೂಗಬೇಡಿ. ನಾನು ನಿಮ್ಮನ್ನು ಸಹಾಯಕ್ಕಾಗಿ ಕೂಗುವುದಿಲ್ಲ. ನೀವು ಇದಕ್ಕೆ ಮೊದಲು ನನ್ನನ್ನು ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡಿದ್ದನ್ನು ನಾನು ನಿಷೇಧಿಸಿದ್ದೇನೆ. ನಿಶ್ಚಯವಾಗಿಯೂ, ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.”
Arapça tefsirler:
وَاُدْخِلَ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا بِاِذْنِ رَبِّهِمْ ؕ— تَحِیَّتُهُمْ فِیْهَا سَلٰمٌ ۟
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸಲಾಗುವುದು. ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರ ಅಭಿವಂದನೆಯು ಸಲಾಂ (ಶಾಂತಿ) ಎಂದಾಗಿರುವುದು.
Arapça tefsirler:
اَلَمْ تَرَ كَیْفَ ضَرَبَ اللّٰهُ مَثَلًا كَلِمَةً طَیِّبَةً كَشَجَرَةٍ طَیِّبَةٍ اَصْلُهَا ثَابِتٌ وَّفَرْعُهَا فِی السَّمَآءِ ۟ۙ
ಅಲ್ಲಾಹು ಪರಿಶುದ್ಧ ವಚನಕ್ಕೆ[1] ಯಾವ ರೀತಿಯಲ್ಲಿ ಉದಾಹರಣೆ ನೀಡಿದ್ದಾನೆಂದು ನೀವು ನೋಡಿಲ್ಲವೇ? ಅದೊಂದು ಪರಿಶುದ್ಧ ಮರದಂತೆ. ಅದರ ಬೇರುಗಳು ಭದ್ರವಾಗಿವೆ ಮತ್ತು ರೆಂಭೆಗಳು ಆಕಾಶದಲ್ಲಿವೆ.
[1] ಪರಿಶುದ್ಧ ವಚನ ಎಂದರೆ ‘ಲಾಇಲಾಹ ಇಲ್ಲಲ್ಲಾಹ್’ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ) ಎಂಬ ವಚನ. ಈ ವಚನವನ್ನು ಸ್ವೀಕರಿಸಿ ಇದರ ಆಧಾರದಲ್ಲಿ ಬದುಕುವ ಸತ್ಯವಿಶ್ವಾಸಿಗೆ ಯಾವುದೇ ಭಯವಿಲ್ಲ. ಅವನು ಸಂಪೂರ್ಣ ಆತ್ಮಶಾಂತಿಯೊಂದಿಗೆ ಬದುಕುತ್ತಾನೆ. ಜೀವನದಲ್ಲಿ ಏರುಪೇರುಗಳನ್ನು ಕಾಣುವಾಗ, ಕಷ್ಟಗಳು ಬರುವಾಗ, ದುರಂತಗಳು ಸಂಭವಿಸುವಾಗ ಅವನು ಧೃತಿಗೆಡುವುದಿಲ್ಲ. ಅವನು ಅಲ್ಲಾಹನಲ್ಲಿ ಸಂಪೂರ್ಣ ಭರವಸೆಯಿಟ್ಟು ಮುಂದುವರಿಯುತ್ತಾನೆ. ಅವನ ಎಲ್ಲಾ ಕರ್ಮಗಳಿಗೂ ಪರಲೋಕದಲ್ಲಿ ಅತ್ಯುತ್ತಮ ಪ್ರತಿಫಲವಿರುತ್ತದೆ.
Arapça tefsirler:
تُؤْتِیْۤ اُكُلَهَا كُلَّ حِیْنٍ بِاِذْنِ رَبِّهَا ؕ— وَیَضْرِبُ اللّٰهُ الْاَمْثَالَ لِلنَّاسِ لَعَلَّهُمْ یَتَذَكَّرُوْنَ ۟
ಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅದು ಎಲ್ಲ ಕಾಲಗಳಲ್ಲೂ ಫಲ ನೀಡುತ್ತದೆ. ಅಲ್ಲಾಹು ಜನರಿಗೆ ಉದಾಹರಣೆಗಳನ್ನು ವಿವರಿಸುತ್ತಾನೆ. ಅವರು ಉಪದೇಶ ಪಡೆಯುವುದಕ್ಕಾಗಿ.
Arapça tefsirler:
وَمَثَلُ كَلِمَةٍ خَبِیْثَةٍ كَشَجَرَةٍ خَبِیْثَةِ ١جْتُثَّتْ مِنْ فَوْقِ الْاَرْضِ مَا لَهَا مِنْ قَرَارٍ ۟
ಹೊಲಸು ವಚನದ[1] ಉದಾಹರಣೆಯು ಒಂದು ಹೊಲಸು ಮರದಂತೆ. ಅದು ಭೂಮಿಯಿಂದ ಬೇರು ಸಹಿತ ಕಿತ್ತು ಹೋಗಿದೆ. ಅದಕ್ಕೆ ಯಾವುದೇ ಭದ್ರತೆಯಿಲ್ಲ.
[1] ಹೊಲಸು ವಚನ ಎಂದರೆ ದೇವಸಹಭಾಗಿತ್ವ (ಶಿರ್ಕ್) ಮತ್ತು ಸತ್ಯನಿಷೇಧ (ಕುಫ್ರ್) ದ ವಚನಗಳು. ಈ ವಚನಕ್ಕೆ ಯಾವುದೇ ಅಡಿಪಾಯವಿಲ್ಲ. ಒಂದು ಸಣ್ಣ ಗಾಳಿಗೂ ಇದು ಕಿತ್ತು ಹೋಗಬಹುದು. ದೇವಸಹಭಾಗಿತ್ವ ಮತ್ತು ಸತ್ಯನಿಷೇಧದಲ್ಲಿ ಬದುಕುವವರ ಜೀವನವು ಸುಭದ್ರವಲ್ಲ. ಅವರಿಗೆ ಆತ್ಮಶಾಂತಿಯಿರುವುದಿಲ್ಲ. ಒಂದು ಸಣ್ಣ ಕಷ್ಟ ಬಂದರೂ ಅವರು ಧೃತಿಗೆಡುತ್ತಾರೆ. ಕೆಲವೊಮ್ಮೆ ತಮ್ಮ ಜೀವನವನ್ನೇ ಕೊನೆಗೊಳಿಸುತ್ತಾರೆ. ಪರಲೋಕದಲ್ಲಿ ಅವರ ಕರ್ಮಗಳಿಗೆ ಯಾವುದೇ ಪ್ರತಿಫಲವಿರುವುದಿಲ್ಲ.
Arapça tefsirler:
یُثَبِّتُ اللّٰهُ الَّذِیْنَ اٰمَنُوْا بِالْقَوْلِ الثَّابِتِ فِی الْحَیٰوةِ الدُّنْیَا وَفِی الْاٰخِرَةِ ۚ— وَیُضِلُّ اللّٰهُ الظّٰلِمِیْنَ ۙ۫— وَیَفْعَلُ اللّٰهُ مَا یَشَآءُ ۟۠
ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸದೃಢ ವಚನದ ಮೂಲಕ ದೃಢವಾಗಿ ನಿಲ್ಲಿಸುತ್ತಾನೆ.[1] ಅಕ್ರಮವೆಸಗಿದವರನ್ನು ಅಲ್ಲಾಹು ದಾರಿತಪ್ಪಿಸುತ್ತಾನೆ. ಅಲ್ಲಾಹು ಅವನು ಇಚ್ಛಿಸಿದ್ದನ್ನು ಮಾಡುತ್ತಾನೆ.
[1] ಇಹಲೋಕ ಜೀವನದಲ್ಲಿ, ಮರಣದ ಸಂದರ್ಭ ಮತ್ತು ಸಮಾಧಿಯಲ್ಲಿ ಪ್ರಶ್ನೆ ಕೇಳಲಾಗುವ ಸಂದರ್ಭ ಅಲ್ಲಾಹು ಸತ್ಯವಿಶ್ವಾಸಿಗಳನ್ನು ‘ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್’ ಎಂಬ ವಚನದಲ್ಲಿ ದೃಢವಾಗಿ ನಿಲ್ಲಿಸುತ್ತಾನೆ.
Arapça tefsirler:
اَلَمْ تَرَ اِلَی الَّذِیْنَ بَدَّلُوْا نِعْمَتَ اللّٰهِ كُفْرًا وَّاَحَلُّوْا قَوْمَهُمْ دَارَ الْبَوَارِ ۟ۙ
ಅಲ್ಲಾಹನ ಅನುಗ್ರಹಕ್ಕೆ ಬದಲಿಯಾಗಿ ಕೃತಘ್ನತೆ ತೋರಿದ ಮತ್ತು ತಮ್ಮ ಜನರನ್ನು ನಾಶದ ಭವನಕ್ಕೆ ಇಳಿಸಿದವರನ್ನು ನೀವು ನೋಡಿಲ್ಲವೇ?
Arapça tefsirler:
جَهَنَّمَ ۚ— یَصْلَوْنَهَا ؕ— وَبِئْسَ الْقَرَارُ ۟
ಅಂದರೆ ನರಕಾಗ್ನಿಗೆ. ಅವರು ಅದರಲ್ಲಿ (ಪ್ರವೇಶಿಸಿ) ಉರಿಯುವರು. ಅದು ಬಹಳ ನಿಕೃಷ್ಟ ವಾಸಸ್ಥಳವಾಗಿದೆ.
Arapça tefsirler:
وَجَعَلُوْا لِلّٰهِ اَنْدَادًا لِّیُضِلُّوْا عَنْ سَبِیْلِهٖ ؕ— قُلْ تَمَتَّعُوْا فَاِنَّ مَصِیْرَكُمْ اِلَی النَّارِ ۟
ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುವುದಕ್ಕಾಗಿ ಅವರು ಅಲ್ಲಾಹನಿಗೆ ಕೆಲವು ಸರಿಸಾಟಿಗಳನ್ನು ಮಾಡಿದರು. ಹೇಳಿರಿ: “ನೀವು ಆನಂದಿಸಿರಿ. ಕೊನೆಗೆ ನಿಮ್ಮ ಮರಳುವಿಕೆಯು ನರಕಕ್ಕೇ ಆಗಿದೆ.”
Arapça tefsirler:
قُلْ لِّعِبَادِیَ الَّذِیْنَ اٰمَنُوْا یُقِیْمُوا الصَّلٰوةَ وَیُنْفِقُوْا مِمَّا رَزَقْنٰهُمْ سِرًّا وَّعَلَانِیَةً مِّنْ قَبْلِ اَنْ یَّاْتِیَ یَوْمٌ لَّا بَیْعٌ فِیْهِ وَلَا خِلٰلٌ ۟
ನನ್ನ ಸತ್ಯವಿಶ್ವಾಸಿ ದಾಸರೊಡನೆ—ಅವರು ನಮಾಝ್ ಸಂಸ್ಥಾಪಿಸಲಿ ಮತ್ತು ಯಾವುದೇ ಕ್ರಯ-ವಿಕ್ರಯ ಅಥವಾ ಗೆಳೆತನವು ಉಪಕಾರ ಮಾಡದ ದಿನವು ಆಗಮಿಸುವ ಮೊದಲೇ ನಾವು ಅವರಿಗೆ ಒದಗಿಸಿದ ಧನದಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡಲಿ ಎಂದು ಹೇಳಿರಿ.
Arapça tefsirler:
اَللّٰهُ الَّذِیْ خَلَقَ السَّمٰوٰتِ وَالْاَرْضَ وَاَنْزَلَ مِنَ السَّمَآءِ مَآءً فَاَخْرَجَ بِهٖ مِنَ الثَّمَرٰتِ رِزْقًا لَّكُمْ ۚ— وَسَخَّرَ لَكُمُ الْفُلْكَ لِتَجْرِیَ فِی الْبَحْرِ بِاَمْرِهٖ ۚ— وَسَخَّرَ لَكُمُ الْاَنْهٰرَ ۟ۚ
ಅಲ್ಲಾಹನೇ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಅದರಿಂದ ನಿಮ್ಮ ಉಪಜೀವನಕ್ಕಾಗಿ ಹಣ್ಣುಗಳನ್ನು ಉತ್ಪಾದಿಸಿದನು. ಕಡಲಲ್ಲಿ ಅವನ ಆಜ್ಞೆಯಂತೆ ಚಲಿಸಲು ಅವನು ನಿಮಗೆ ನಾವೆಯನ್ನು ನಿಯಂತ್ರಿಸಿಕೊಟ್ಟನು. ಅವನು ನದಿಗಳನ್ನು ಕೂಡ ನಿಮ್ಮ ನಿಯಂತ್ರಣಕ್ಕೆ ನೀಡಿದನು.
Arapça tefsirler:
وَسَخَّرَ لَكُمُ الشَّمْسَ وَالْقَمَرَ دَآىِٕبَیْنِ ۚ— وَسَخَّرَ لَكُمُ الَّیْلَ وَالنَّهَارَ ۟ۚ
ನಿರಂತರವಾಗಿ ಚಲಿಸುವ ರೀತಿಯಲ್ಲಿ ಸೂರ್ಯ-ಚಂದ್ರರನ್ನು ಅವನು ನಿಮಗೆ ನಿಯಂತ್ರಿಸಿಕೊಟ್ಟನು. ರಾತ್ರಿ-ಹಗಲಗಳನ್ನು ಕೂಡ ಅವನು ನಿಮಗೆ ನಿಯಂತ್ರಿಸಿಕೊಟ್ಟನು.
Arapça tefsirler:
وَاٰتٰىكُمْ مِّنْ كُلِّ مَا سَاَلْتُمُوْهُ ؕ— وَاِنْ تَعُدُّوْا نِعْمَتَ اللّٰهِ لَا تُحْصُوْهَا ؕ— اِنَّ الْاِنْسَانَ لَظَلُوْمٌ كَفَّارٌ ۟۠
ನೀವು ಅವನೊಂದಿಗೆ ಕೇಳಿದ್ದೆಲ್ಲವನ್ನೂ ಅವನು ನಿಮಗೆ ನೀಡಿದನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸತೊಡಗಿದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ಮನುಷ್ಯನು ನಿಜಕ್ಕೂ ಕಡು ಅಕ್ರಮಿ ಮತ್ತು ಕೃತಘ್ನನಾಗಿದ್ದಾನೆ.
Arapça tefsirler:
وَاِذْ قَالَ اِبْرٰهِیْمُ رَبِّ اجْعَلْ هٰذَا الْبَلَدَ اٰمِنًا وَّاجْنُبْنِیْ وَبَنِیَّ اَنْ نَّعْبُدَ الْاَصْنَامَ ۟ؕ
ಇಬ್ರಾಹೀಮ್ ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ಈ ನಗರವನ್ನು (ಮಕ್ಕಾ) ನಿರ್ಭಯವಾಗಿ ಮಾಡು ಮತ್ತು ನನ್ನನ್ನು ಹಾಗೂ ನನ್ನ ಮಕ್ಕಳನ್ನು ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು.
Arapça tefsirler:
رَبِّ اِنَّهُنَّ اَضْلَلْنَ كَثِیْرًا مِّنَ النَّاسِ ۚ— فَمَنْ تَبِعَنِیْ فَاِنَّهٗ مِنِّیْ ۚ— وَمَنْ عَصَانِیْ فَاِنَّكَ غَفُوْرٌ رَّحِیْمٌ ۟
ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ, ಅವು ಜನರಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸಿವೆ. ಆದ್ದರಿಂದ ಯಾರು ನನ್ನನ್ನು ಹಿಂಬಾಲಿಸುತ್ತಾನೋ ಅವನು ನನ್ನವನು. ಯಾರು ನನಗೆ ಅವಿಧೇಯತೆ ತೋರುತ್ತಾನೋ—ನಿಶ್ಚಯವಾಗಿಯೂ ನೀನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿರುವೆ.
Arapça tefsirler:
رَبَّنَاۤ اِنِّیْۤ اَسْكَنْتُ مِنْ ذُرِّیَّتِیْ بِوَادٍ غَیْرِ ذِیْ زَرْعٍ عِنْدَ بَیْتِكَ الْمُحَرَّمِ ۙ— رَبَّنَا لِیُقِیْمُوا الصَّلٰوةَ فَاجْعَلْ اَفْىِٕدَةً مِّنَ النَّاسِ تَهْوِیْۤ اِلَیْهِمْ وَارْزُقْهُمْ مِّنَ الثَّمَرٰتِ لَعَلَّهُمْ یَشْكُرُوْنَ ۟
ಓ ನಮ್ಮ ಪರಿಪಾಲಕನೇ! ನಾನು ನನ್ನ ಮಕ್ಕಳಲ್ಲಿ ಕೆಲವರನ್ನು ಹೊಲಗಳಿಲ್ಲದ ಈ ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಬಳಿ ವಾಸ ಮಾಡಿಸಿದ್ದೇನೆ. ಓ ನಮ್ಮ ಪರಿಪಾಲಕನೇ! ಅವರು ನಮಾಝ್ ಸಂಸ್ಥಾಪಿಸುವುದಕ್ಕಾಗಿ. ಆದ್ದರಿಂದ ಜನರಲ್ಲಿ ಕೆಲವರ ಹೃದಯಗಳು ಅವರ ಕಡೆಗೆ ಒಲಿಯುವಂತೆ ಮಾಡು. ಅವರ ಉಪಜೀವನಕ್ಕಾಗಿ ಹಣ್ಣು-ಹಂಪಲುಗಳನ್ನು ನೀಡು. ಅವರು ಕೃತಜ್ಞರಾಗಲೂಬಹುದು.[1]
[1] ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ರವರು ಪತ್ನಿ ಹಾಜರ ಮತ್ತು ಪುತ್ರ ಇಸ್ಮಾಈಲರನ್ನು ಮಕ್ಕಾದ ನಿರ್ಜನ ಕಣಿವೆಯಲ್ಲಿ ಬಿಟ್ಟು ಹೊರಟುಹೋದರು. ಹೋಗುವಾಗ ಅವರು ಈ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ಅಲ್ಲಾಹು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು. ಮುಂದೆ ಮಕ್ಕಾ ಎಲ್ಲಾ ರೀತಿಯ ಹಣ್ಣು-ಹಂಪಲುಗಳು ದೊರೆಯುವ ಒಂದು ಜನನಿಬಿಡ ಪ್ರದೇಶವಾಗಿ ಮಾರ್ಪಟ್ಟಿತು.
Arapça tefsirler:
رَبَّنَاۤ اِنَّكَ تَعْلَمُ مَا نُخْفِیْ وَمَا نُعْلِنُ ؕ— وَمَا یَخْفٰی عَلَی اللّٰهِ مِنْ شَیْءٍ فِی الْاَرْضِ وَلَا فِی السَّمَآءِ ۟
ಓ ನಮ್ಮ ಪರಿಪಾಲಕನೇ! ನಾವು ಬಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನೀನು ತಿಳಿಯುವೆ. ಭೂಮಿಯಲ್ಲಿ ಅಥವಾ ಆಕಾಶದಲ್ಲಿರುವ ಯಾವುದೇ ವಸ್ತು ಅಲ್ಲಾಹನಿಂದ ಮರೆಯಾಗಿಲ್ಲ.
Arapça tefsirler:
اَلْحَمْدُ لِلّٰهِ الَّذِیْ وَهَبَ لِیْ عَلَی الْكِبَرِ اِسْمٰعِیْلَ وَاِسْحٰقَ ؕ— اِنَّ رَبِّیْ لَسَمِیْعُ الدُّعَآءِ ۟
ಇಳಿ ವಯಸ್ಸಿನಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್‍ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನನ್ನ ಪರಿಪಾಲಕನು ನಿಜಕ್ಕೂ ಪ್ರಾರ್ಥನೆಗಳನ್ನು ಕೇಳುತ್ತಾನೆ.
Arapça tefsirler:
رَبِّ اجْعَلْنِیْ مُقِیْمَ الصَّلٰوةِ وَمِنْ ذُرِّیَّتِیْ ۖۗ— رَبَّنَا وَتَقَبَّلْ دُعَآءِ ۟
ಓ ನನ್ನ ಪರಿಪಾಲಕನೇ! ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತಾನದಲ್ಲೂ ಕೂಡ. ಓ ನಮ್ಮ ಪರಿಪಾಲಕನೇ! ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.
Arapça tefsirler:
رَبَّنَا اغْفِرْ لِیْ وَلِوَالِدَیَّ وَلِلْمُؤْمِنِیْنَ یَوْمَ یَقُوْمُ الْحِسَابُ ۟۠
ಓ ನಮ್ಮ ಪರಿಪಾಲಕನೇ! ವಿಚಾರಣೆ ನಡೆಯುವ ದಿನ ನನ್ನನ್ನು, ನನ್ನ ತಂದೆ-ತಾಯಿಗಳನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸು.”
Arapça tefsirler:
وَلَا تَحْسَبَنَّ اللّٰهَ غَافِلًا عَمَّا یَعْمَلُ الظّٰلِمُوْنَ ؕ۬— اِنَّمَا یُؤَخِّرُهُمْ لِیَوْمٍ تَشْخَصُ فِیْهِ الْاَبْصَارُ ۟ۙ
ಅಕ್ರಮಿಗಳು ಮಾಡುವ ದುಷ್ಕರ್ಮಗಳನ್ನು ಅಲ್ಲಾಹು ಗಮನಿಸುತ್ತಿಲ್ಲ ಎಂದು ನೀವು ಎಂದಿಗೂ ಭಾವಿಸಬೇಡಿ. ಅವನು ಅವರ ವಿಚಾರಣೆಯನ್ನು ವಿಳಂಬ ಮಾಡುವುದು ಕಣ್ಣುಗಳು ಭಯದಿಂದ ದುರುಗುಟ್ಟಿ ನೋಡುವ ದಿನದವರೆಗೆ ಮಾತ್ರ.
Arapça tefsirler:
مُهْطِعِیْنَ مُقْنِعِیْ رُءُوْسِهِمْ لَا یَرْتَدُّ اِلَیْهِمْ طَرْفُهُمْ ۚ— وَاَفْـِٕدَتُهُمْ هَوَآءٌ ۟ؕ
ಅವರು ತಮ್ಮ ತಲೆಗಳನ್ನು ಎತ್ತಿಹಿಡಿದು ಓಡೋಡಿ ಧಾವಿಸುವರು. ಅವರ ದೃಷ್ಟಿಗಳು ಅವರ ಬಳಿಗೆ ಮರಳುವುದಿಲ್ಲ. ಅವರ ಹೃದಯಗಳು ಬರಿದಾಗಿರುವುವು.
Arapça tefsirler:
وَاَنْذِرِ النَّاسَ یَوْمَ یَاْتِیْهِمُ الْعَذَابُ فَیَقُوْلُ الَّذِیْنَ ظَلَمُوْا رَبَّنَاۤ اَخِّرْنَاۤ اِلٰۤی اَجَلٍ قَرِیْبٍ ۙ— نُّجِبْ دَعْوَتَكَ وَنَتَّبِعِ الرُّسُلَ ؕ— اَوَلَمْ تَكُوْنُوْۤا اَقْسَمْتُمْ مِّنْ قَبْلُ مَا لَكُمْ مِّنْ زَوَالٍ ۟ۙ
ಜನರಿಗೆ ಶಿಕ್ಷೆಯು ಬರುವ ದಿನದ ಬಗ್ಗೆ ಎಚ್ಚರಿಕೆ ನೀಡಿರಿ. ಆಗ ಅಕ್ರಮವೆಸಗಿದವರು ಹೇಳುವರು: “ಓ ನಮ್ಮ ಪರಿಪಾಲಕನೇ! ಸಮೀಪದ ಒಂದು ಅವಧಿಯವರೆಗೆ ನಮಗೆ ಕಾಲಾವಕಾಶ ನೀಡು. ನಾವು ನಿನ್ನ ಕರೆಗೆ ಉತ್ತರಿಸುತ್ತೇವೆ ಮತ್ತು ಸಂದೇಶವಾಹಕರುಗಳನ್ನು ಅನುಸರಿಸುತ್ತೇವೆ.” (ಆಗ ಅವರೊಡನೆ ಹೇಳಲಾಗುವುದು): “ನೀವು ಇಹಲೋಕದಿಂದ (ಪರಲೋಕಕ್ಕೆ) ತೆರಳುವುದೇ ಇಲ್ಲವೆಂದು ಇದಕ್ಕೆ ಮೊದಲು ನೀವು ಆಣೆ ಮಾಡಿ ಹೇಳುತ್ತಿದ್ದಿರಲ್ಲವೇ?”
Arapça tefsirler:
وَّسَكَنْتُمْ فِیْ مَسٰكِنِ الَّذِیْنَ ظَلَمُوْۤا اَنْفُسَهُمْ وَتَبَیَّنَ لَكُمْ كَیْفَ فَعَلْنَا بِهِمْ وَضَرَبْنَا لَكُمُ الْاَمْثَالَ ۟
ಸ್ವಯಂ ಅಕ್ರಮವೆಸಗಿದವರ ವಾಸಸ್ಥಳಗಳಲ್ಲೇ ನೀವೂ ವಾಸವಾಗಿದ್ದಿರಿ. ಅವರೊಡನೆ ನಾವು ಹೇಗೆ ವರ್ತಿಸಿದೆವೆಂದು ನಿಮಗೆ ಸ್ಪಷ್ಟವಾಗಿ ತಿಳಿದಿತ್ತು. ನಾವು ನಿಮಗೆ ಉದಾಹರಣೆಗಳನ್ನೂ ನೀಡಿದ್ದೆವು.
Arapça tefsirler:
وَقَدْ مَكَرُوْا مَكْرَهُمْ وَعِنْدَ اللّٰهِ مَكْرُهُمْ ؕ— وَاِنْ كَانَ مَكْرُهُمْ لِتَزُوْلَ مِنْهُ الْجِبَالُ ۟
ಅವರು ತಮ್ಮ ತಂತ್ರಗಳನ್ನು ಪ್ರಯೋಗಿಸುತ್ತಿದ್ದರು. ಅವರ ಎಲ್ಲಾ ತಂತ್ರಗಳ ಬಗ್ಗೆ ಅಲ್ಲಾಹನಿಗೆ ತಿಳಿದಿದೆ. ಅವರ ತಂತ್ರಗಳಿಗೆ ಪರ್ವತಗಳನ್ನು ಅವುಗಳ ಸ್ಥಳದಿಂದ ಚಲಿಸುವಂತೆ ಮಾಡುವ ಶಕ್ತಿಯೇನೂ ಇಲ್ಲ.
Arapça tefsirler:
فَلَا تَحْسَبَنَّ اللّٰهَ مُخْلِفَ وَعْدِهٖ رُسُلَهٗ ؕ— اِنَّ اللّٰهَ عَزِیْزٌ ذُو انْتِقَامٍ ۟ؕ
ಅಲ್ಲಾಹು ತನ್ನ ಸಂದೇಶವಾಹಕರುಗಳಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸುತ್ತಾನೆಂದು ನೀವು ಎಂದಿಗೂ ಭಾವಿಸಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
Arapça tefsirler:
یَوْمَ تُبَدَّلُ الْاَرْضُ غَیْرَ الْاَرْضِ وَالسَّمٰوٰتُ وَبَرَزُوْا لِلّٰهِ الْوَاحِدِ الْقَهَّارِ ۟
ಭೂಮಿಯು ಈ ಭೂಮಿಯಲ್ಲದ ಬೇರೆಯಾಗಿ ಮತ್ತು ಅದರಂತೆ ಆಕಾಶಗಳು ಕೂಡ ಬದಲಾಗುವ ಹಾಗೂ ಮನುಷ್ಯರೆಲ್ಲರೂ ಏಕೈಕನು ಮತ್ತು ಮಹಾ ಶಕ್ತಿಶಾಲಿಯಾದ ಅಲ್ಲಾಹನ ಮುಂಭಾಗಕ್ಕೆ ಬರುವ ದಿನ.
Arapça tefsirler:
وَتَرَی الْمُجْرِمِیْنَ یَوْمَىِٕذٍ مُّقَرَّنِیْنَ فِی الْاَصْفَادِ ۟ۚ
ಅಂದು ಅಪರಾಧಿಗಳನ್ನು ಸಂಕೋಲೆಗಳಲ್ಲಿ ಒಟ್ಟೊಟ್ಟಿಗೆ ಬಂಧಿಸಿಟ್ಟಿರುವುದನ್ನು ನೀವು ಕಾಣುವಿರಿ.
Arapça tefsirler:
سَرَابِیْلُهُمْ مِّنْ قَطِرَانٍ وَّتَغْشٰی وُجُوْهَهُمُ النَّارُ ۟ۙ
ಅವರ ಉಡುಪುಗಳು ಕಪ್ಪು ರಾಳದ್ದಾಗಿರುವುವು ಮತ್ತು ಬೆಂಕಿ ಅವರ ಮುಖಗಳನ್ನು ಮುಚ್ಚಿಕೊಳ್ಳುವುದು.
Arapça tefsirler:
لِیَجْزِیَ اللّٰهُ كُلَّ نَفْسٍ مَّا كَسَبَتْ ؕ— اِنَّ اللّٰهَ سَرِیْعُ الْحِسَابِ ۟
ಅಲ್ಲಾಹು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ನಿಶ್ಚಯವಾಗಿಯೂ, ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ.
Arapça tefsirler:
هٰذَا بَلٰغٌ لِّلنَّاسِ وَلِیُنْذَرُوْا بِهٖ وَلِیَعْلَمُوْۤا اَنَّمَا هُوَ اِلٰهٌ وَّاحِدٌ وَّلِیَذَّكَّرَ اُولُوا الْاَلْبَابِ ۟۠
ಈ ಕುರ್‌ಆನ್ ಸಂಪೂರ್ಣ ಮನುಕುಲಕ್ಕೆ ಒಂದು ಸೂಚನಾಪತ್ರವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ, ಏಕೈಕ ದೇವನು ಅಲ್ಲಾಹು ಮಾತ್ರವೆಂದು ಅವರು ತಿಳಿಯುವುದಕ್ಕಾಗಿ ಮತ್ತು ಬುದ್ಧಿವಂತರು ಉಪದೇಶ ಸ್ವೀಕರಿಸುವುದಕ್ಕಾಗಿ.
Arapça tefsirler:
 
Anlam tercümesi Sure: Sûratu İbrâhîm
Surelerin fihristi Sayfa numarası
 
Kur'an-ı Kerim meal tercümesi - الترجمة الكنادية - حمزة بتور - Mealler fihristi

ترجمة معاني القرآن الكريم إلى اللغة الكنادية ترجمها محمد حمزة بتور.

Kapat