Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: ھەج   ئايەت:
یٰۤاَیُّهَا النَّاسُ ضُرِبَ مَثَلٌ فَاسْتَمِعُوْا لَهٗ ؕ— اِنَّ الَّذِیْنَ تَدْعُوْنَ مِنْ دُوْنِ اللّٰهِ لَنْ یَّخْلُقُوْا ذُبَابًا وَّلَوِ اجْتَمَعُوْا لَهٗ ؕ— وَاِنْ یَّسْلُبْهُمُ الذُّبَابُ شَیْـًٔا لَّا یَسْتَنْقِذُوْهُ مِنْهُ ؕ— ضَعُفَ الطَّالِبُ وَالْمَطْلُوْبُ ۟
ಓ ಜನರೇ, ಒಂದು ಉಪಮೆಯನ್ನು ಕೊಡಲಾಗುತ್ತಿದೆ. ಗಮನವಿಟ್ಟು ಕೇಳಿರಿ. ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಬೆಡುತ್ತಿರುವಿರೋ ನಿಜವಾಗಿಯೂ ಅವರು ಒಂದು ನೊಣವನ್ನೂ ಸಹ ಸೃಷ್ಟಿಸಲಾರರು. ಅವರೆಲ್ಲರೂ ಅದಕ್ಕೋಸ್ಕರ ಒಟ್ಟು ಸೇರಿದರೂ ಸರಿಯೇ. ಅಷ್ಟೇಕೆ! ನೊಣವು ಅವರಿಂದ ಏನನ್ನಾದರೂ ಕಸಿದು ಕೊಂಡು ಹೋದರೆ ಅವರು ಅದನ್ನು ಅದರಿಂದ ಹಿಂದಕ್ಕೆ ಪಡೆಯಲೂ ಅಶಕ್ತರು. ಬೇಡುವವನೂ ದುರ್ಬಲನು, ಯಾರಿಂದ ಬೇಡಲಾಗುತ್ತಿದೆಯೋ ಅವನೂ ದುರ್ಬಲನು!
ئەرەپچە تەپسىرلەر:
مَا قَدَرُوا اللّٰهَ حَقَّ قَدْرِهٖ ؕ— اِنَّ اللّٰهَ لَقَوِیٌّ عَزِیْزٌ ۟
ಅವರು ಅಲ್ಲಾಹನ ಮಹತ್ವವನ್ನು ಅರಿತುಕೊಳ್ಳಬೇಕಾದ ರೀತಿಯಲ್ಲಿ ಅರಿತುಕೊಳ್ಳಲೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
ئەرەپچە تەپسىرلەر:
اَللّٰهُ یَصْطَفِیْ مِنَ الْمَلٰٓىِٕكَةِ رُسُلًا وَّمِنَ النَّاسِ ؕ— اِنَّ اللّٰهَ سَمِیْعٌ بَصِیْرٌ ۟ۚ
ಅಲ್ಲಾಹನು ಮಲಕ್‌ಗಳಿಂದಲೂ, ಮನುಷ್ಯರಿಂದಲೂ ಸಂದೇಶವಾಹಕರನ್ನು ಆಯ್ದುಕೊಳ್ಳುತ್ತಾನೆ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವವನ್ನು ಆಲಿಸುವವನು, ಸರ್ವವನ್ನು ನೋಡುವವನು ಆಗಿದ್ದಾನೆ.
ئەرەپچە تەپسىرلەر:
یَعْلَمُ مَا بَیْنَ اَیْدِیْهِمْ وَمَا خَلْفَهُمْ ؕ— وَاِلَی اللّٰهِ تُرْجَعُ الْاُمُوْرُ ۟
ಜನರ ಮುಂದಿರುವುದನ್ನು ಹಿಂದಿರುವುದನ್ನು ಅವನು ಬಲ್ಲನು.ಮತ್ತು ಕಾರ್ಯಗಳೆಲ್ಲವೂ ಅಲ್ಲಾಹನೆಡೆಗೆ ಮರಳಿಸಲ್ಪಡುತ್ತವೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوا ارْكَعُوْا وَاسْجُدُوْا وَاعْبُدُوْا رَبَّكُمْ وَافْعَلُوا الْخَیْرَ لَعَلَّكُمْ تُفْلِحُوْنَ ۟
ಓ ಸತ್ಯವಿಶ್ಚಾಸಿಗಳೇ, ನೀವು ಬಾಗಿರಿ, ಸಾಷ್ಟಾಂಗವೆರಗಿರಿ ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ ಹಾಗೂ ಒಳಿತನ್ನು ಮಾಡಿರಿ. ನೀವು ಯಶಸ್ಸು ಪಡೆಯಬಹುದು.
ئەرەپچە تەپسىرلەر:
وَجَاهِدُوْا فِی اللّٰهِ حَقَّ جِهَادِهٖ ؕ— هُوَ اجْتَبٰىكُمْ وَمَا جَعَلَ عَلَیْكُمْ فِی الدِّیْنِ مِنْ حَرَجٍ ؕ— مِلَّةَ اَبِیْكُمْ اِبْرٰهِیْمَ ؕ— هُوَ سَمّٰىكُمُ الْمُسْلِمِیْنَ ۙ۬— مِنْ قَبْلُ وَفِیْ هٰذَا لِیَكُوْنَ الرَّسُوْلُ شَهِیْدًا عَلَیْكُمْ وَتَكُوْنُوْا شُهَدَآءَ عَلَی النَّاسِ ۖۚ— فَاَقِیْمُوا الصَّلٰوةَ وَاٰتُوا الزَّكٰوةَ وَاعْتَصِمُوْا بِاللّٰهِ ؕ— هُوَ مَوْلٰىكُمْ ۚ— فَنِعْمَ الْمَوْلٰی وَنِعْمَ النَّصِیْرُ ۟۠
ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ! ಅವನು ನಿಮ್ಮನ್ನು ಆಯ್ಕೆ ಮಾಡಿದ್ದಾನೆ ಮತ್ತು ಅವನು ನಿಮ್ಮ ಮೇಲೆ ಧರ್ಮವಿಷಯದಲ್ಲಿ ಯಾವುದೇ ಇಕ್ಕಟ್ಟನ್ನುಂಟು ಮಾಡಿಲ್ಲ. ನಿಮ್ಮ ತಂದೆ ಇಬ್ರಾಹೀಮ್‌ರ ಧರ್ಮವನ್ನು ಸಂಸ್ಥಾಪಿಸಿರಿ. ಈ ಕುರ್‌ಆನ್‌ಗಿಂತ ಮೊದಲು (ಬಂದ ಗ್ರಂಥಗಳಲ್ಲೂ), ಇದರಲ್ಲೂ ಅವನು ನಿಮ್ಮ ಹೆಸರನ್ನು ಮುಸ್ಲಿಮ್ ಎಂದಿಟ್ಟಿರುತ್ತಾನೆ. ಇದು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲೆಂದು, ನೀವು ಸಕಲ ಜನರ ಮೇಲೆ ಸಾಕ್ಷಿಗಳಾಗಲೆಂದಾಗಿದೆ. ಹಾಗೆಯೇ ನೀವು ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ ಮತ್ತು ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ರಕ್ಷಕ ಮಿತ್ರನಾಗಿದ್ದಾನೆ. ಅವನು ಅದೆಷ್ಟು ಉತ್ತಮನು ಹಾಗೂ ಅದೆಷ್ಟು ಉತ್ತಮ ಸಹಾಯಕನು!.
ئەرەپچە تەپسىرلەر:
 
مەنالار تەرجىمىسى سۈرە: ھەج
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش