Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: نەمل   ئايەت:
اِنِّیْ وَجَدْتُّ امْرَاَةً تَمْلِكُهُمْ وَاُوْتِیَتْ مِنْ كُلِّ شَیْءٍ وَّلَهَا عَرْشٌ عَظِیْمٌ ۟
ನಾನು ಓರ್ವ ಸ್ತಿçà ಅಲ್ಲಿನ ಜನರನ್ನು ಆಳುತ್ತಿರುವುದಾಗಿ ಕಂಡಿರುವೆನು ಮತ್ತು ಅವಳಿಗೆ ಸಕಲ ವಸ್ತುಗಳನ್ನು ನೀಡಲಾಗಿದೆ. ಅಲ್ಲದೇ ಅವಳಿಗೊಂದು ದೊಡ್ಡಸಿಂಹಾಸನವಿದೆ.
ئەرەپچە تەپسىرلەر:
وَجَدْتُّهَا وَقَوْمَهَا یَسْجُدُوْنَ لِلشَّمْسِ مِنْ دُوْنِ اللّٰهِ وَزَیَّنَ لَهُمُ الشَّیْطٰنُ اَعْمَالَهُمْ فَصَدَّهُمْ عَنِ السَّبِیْلِ فَهُمْ لَا یَهْتَدُوْنَ ۟ۙ
ನಾನು ಅವಳನ್ನು ಮತ್ತು ಅವಳ ಜನರನ್ನು ಅಲ್ಲಾಹನ ಹೊರತು ಸೂರ್ಯನಿಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು. ಶೈತಾನನು ಅವರ ಕರ್ಮಗಳನ್ನು ಅವರಿಗೆ ಸುಂದರವಾಗಿಸಿ ಅವರನ್ನು ಸನ್ಮಾರ್ಗದಿಂದ ತಡೆದಿರುತ್ತಾನೆ. ಆದ್ದರಿಂದ ಅವರು ಸನ್ಮಾರ್ಗ ಹೊಂದುವುದಿಲ್ಲ.
ئەرەپچە تەپسىرلەر:
اَلَّا یَسْجُدُوْا لِلّٰهِ الَّذِیْ یُخْرِجُ الْخَبْءَ فِی السَّمٰوٰتِ وَالْاَرْضِ وَیَعْلَمُ مَا تُخْفُوْنَ وَمَا تُعْلِنُوْنَ ۟
ಭೂಮಿ, ಆಕಾಶಗಳಲ್ಲಿರುವ ರಹಸ್ಯ ವಸ್ತುಗಳನ್ನು ಹೊರತರುವ ಮತ್ತು ನೀವು ಅಡಗಿಸಿಡುವುದನ್ನೂ, ಬಹಿರಂಗಗೊಳಿಸುವುದನ್ನೂ ಅರಿಯುವ ಅಲ್ಲಾಹನಿಗೇ ಅವರು ಸಾಷ್ಟಾಂಗವೆರಗುವುದಿಲ್ಲ.
ئەرەپچە تەپسىرلەر:
اَللّٰهُ لَاۤ اِلٰهَ اِلَّا هُوَ رَبُّ الْعَرْشِ الْعَظِیْمِ ۟
ಅಲ್ಲಾಹನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ. ಅವನೇ ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.
ئەرەپچە تەپسىرلەر:
قَالَ سَنَنْظُرُ اَصَدَقْتَ اَمْ كُنْتَ مِنَ الْكٰذِبِیْنَ ۟
ಸುಲೈಮಾನ್ ಹೇಳಿದರು: ನೀನು ಸತ್ಯವನ್ನು ನುಡಿದಿರುವೆಯಾ ಅಥವಾ ಸುಳ್ಳನಾಗಿರುವೆಯಾ ಎಂಬುದನ್ನು ನಾವು ನೋಡುವೆವು.
ئەرەپچە تەپسىرلەر:
اِذْهَبْ بِّكِتٰبِیْ هٰذَا فَاَلْقِهْ اِلَیْهِمْ ثُمَّ تَوَلَّ عَنْهُمْ فَانْظُرْ مَاذَا یَرْجِعُوْنَ ۟
ನೀನು ಈ ನನ್ನ ಪತ್ರವನ್ನು ತೆಗೆದುಕೊಂಡು ಹೋಗಿ ಅವರ ಮುಂದೆ ಹಾಕಿಬಿಡು. ಮತ್ತು ಅವರಿಂದ ಸರಿದು ನಿಲ್ಲು ಅನಂತರ ಅವರು ಯಾವ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ನೋಡು.
ئەرەپچە تەپسىرلەر:
قَالَتْ یٰۤاَیُّهَا الْمَلَؤُا اِنِّیْۤ اُلْقِیَ اِلَیَّ كِتٰبٌ كَرِیْمٌ ۟
ಅವಳು (ರಾಣಿಯು) ಹೇಳಿದಳು: ಓ ನಾಯಕರೇ, ನನ್ನೆಡೆಗೆ ಒಂದು ಗೌರವಾರ್ಹ ಪತ್ರವನ್ನು ಹಾಕಲಾಗಿದೆ.
ئەرەپچە تەپسىرلەر:
اِنَّهٗ مِنْ سُلَیْمٰنَ وَاِنَّهٗ بِسْمِ اللّٰهِ الرَّحْمٰنِ الرَّحِیْمِ ۟ۙ
ಅದು ಸುಲೈಮಾನರ ಕಡೆಯಿಂದ ಬಂದಿದೆ ಅದನ್ನು ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ, ಆರಂಭಿಸಲಾಗಿದೆ.
ئەرەپچە تەپسىرلەر:
اَلَّا تَعْلُوْا عَلَیَّ وَاْتُوْنِیْ مُسْلِمِیْنَ ۟۠
ಇದರಲ್ಲಿ ನೀವು ನನ್ನ ಮುಂದೆ ಅಹಂಕಾರ ತೋರದಿರಿ ಮತ್ತು ಅಲ್ಲಾಹನಿಗೆ ಶರಣಾಗಿ ನನ್ನೆಡೆಗೆ ಬನ್ನಿರಿ ಎಂದಿದೆ.
ئەرەپچە تەپسىرلەر:
قَالَتْ یٰۤاَیُّهَا الْمَلَؤُا اَفْتُوْنِیْ فِیْۤ اَمْرِیْ ۚ— مَا كُنْتُ قَاطِعَةً اَمْرًا حَتّٰی تَشْهَدُوْنِ ۟
ಅವಳು ಹೇಳಿದಳು: ಓ ನಾಯಕರೇ, ನನ್ನ ಈ ವಿಚಾರದಲ್ಲಿ ನನಗೆ ಸಲಹೆ ನೀಡಿರಿ. ನಾನು ಯಾವ ವಿಷಯದಲ್ಲೂ ನಿಮ್ಮನ್ನು ಬಿಟ್ಟು ತೀರ್ಮಾನವನ್ನು ಕೈಗೊಳ್ಳುವುದಿಲ್ಲ.
ئەرەپچە تەپسىرلەر:
قَالُوْا نَحْنُ اُولُوْا قُوَّةٍ وَّاُولُوْا بَاْسٍ شَدِیْدٍ ۙ۬— وَّالْاَمْرُ اِلَیْكِ فَانْظُرِیْ مَاذَا تَاْمُرِیْنَ ۟
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
ئەرەپچە تەپسىرلەر:
قَالَتْ اِنَّ الْمُلُوْكَ اِذَا دَخَلُوْا قَرْیَةً اَفْسَدُوْهَا وَجَعَلُوْۤا اَعِزَّةَ اَهْلِهَاۤ اَذِلَّةً ۚ— وَكَذٰلِكَ یَفْعَلُوْنَ ۟
ಅವರು ಹೇಳಿದರು: ನಾವು ಶಕ್ತಿಶಾಲಿಗಳೂ, ಯುದ್ಧ ವೀರರೂ ಆಗಿದ್ದೇವೆ ಮತ್ತು ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ನಮಗೆ ಯಾವ ಆದೇಶ ನೀಡುವಿರಿ ಎಂದು ಸ್ವತಃ ನೀವೇ ಯೋಚಿಸಿರಿ.
ئەرەپچە تەپسىرلەر:
وَاِنِّیْ مُرْسِلَةٌ اِلَیْهِمْ بِهَدِیَّةٍ فَنٰظِرَةٌ بِمَ یَرْجِعُ الْمُرْسَلُوْنَ ۟
ಆದ ಕಾರಣ ಯುದ್ಧದ ಬದಲಿಗೆ ನಾನು ಅವರ ಕಡೆಗೆ ಒಂದು ಉಡುಗೊರೆಯನ್ನು ಕಳುಹಿಸುವವಳಿದ್ದೇನೆ. ಅನಂತರ ದೂತರು ಯಾವ ಪ್ರತಿಕ್ರಿಯೆಯೊಂದಿಗೆ ಮರಳುತ್ತಾರೆಂದು ನಾನು ನೋಡುತ್ತೇನೆ.
ئەرەپچە تەپسىرلەر:
 
مەنالار تەرجىمىسى سۈرە: نەمل
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش