Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: نىسا   ئايەت:
لَا یَسْتَوِی الْقٰعِدُوْنَ مِنَ الْمُؤْمِنِیْنَ غَیْرُ اُولِی الضَّرَرِ وَالْمُجٰهِدُوْنَ فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ؕ— فَضَّلَ اللّٰهُ الْمُجٰهِدِیْنَ بِاَمْوَالِهِمْ وَاَنْفُسِهِمْ عَلَی الْقٰعِدِیْنَ دَرَجَةً ؕ— وَكُلًّا وَّعَدَ اللّٰهُ الْحُسْنٰی ؕ— وَفَضَّلَ اللّٰهُ الْمُجٰهِدِیْنَ عَلَی الْقٰعِدِیْنَ اَجْرًا عَظِیْمًا ۟ۙ
ತನ್ನ ಜೀವ ಮತ್ತು ಸಂಪತ್ತುಗಳೊAದಿಗೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವ ಸತ್ಯವಿಶ್ವಾಸಿಗಳು ಮತ್ತು ಕಾರಣವಿಲ್ಲದೆಯೇ ಮನೆಗಳಲ್ಲಿ ಕುಳಿತು ಬಿಟ್ಟಿರುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತಮ್ಮ ಜೀವ ಮತ್ತು ಸಂಪತ್ತುಗಳೊAದಿಗೆ ಯುದ್ಧ ಮಾಡುವವರನ್ನು ಮನೆಗಳಲ್ಲಿ ಕುಳಿತುಕೊಂಡಿರುವವರ ಮೇಲೆ ಅಲ್ಲಾಹನು ಪದವಿಗಳಲ್ಲಿ ಶ್ರೇಷ್ಠತೆ ನೀಡಿರುವನು. ಅಲ್ಲಾಹನು ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ಆದರೆ ಅಲ್ಲಾಹನು ಮನೆಗೆಗಳಲ್ಲಿ ಕುಳಿತುಕೊಂಡಿರುವವರಿ ಗಿಂತ ಹೋರಾಡುವವರಿಗೆ ಮಹಾ ಪ್ರತಿಫಲವನ್ನು ನೀಡಿ ಶ್ರೇಷ್ಠರನ್ನಾಗಿ ಮಾಡಿರುವನು.
ئەرەپچە تەپسىرلەر:
دَرَجٰتٍ مِّنْهُ وَمَغْفِرَةً وَّرَحْمَةً ؕ— وَكَانَ اللّٰهُ غَفُوْرًا رَّحِیْمًا ۟۠
ಅವನ ವತಿಯಿಂದ ಪದವಿಗಳು ಪಾಪವಿಮೋಚನೆ ಮತ್ತು ಕಾರುಣ್ಯವು ಲಭಿಸುವುದು ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
ئەرەپچە تەپسىرلەر:
اِنَّ الَّذِیْنَ تَوَفّٰىهُمُ الْمَلٰٓىِٕكَةُ ظَالِمِیْۤ اَنْفُسِهِمْ قَالُوْا فِیْمَ كُنْتُمْ ؕ— قَالُوْا كُنَّا مُسْتَضْعَفِیْنَ فِی الْاَرْضِ ؕ— قَالُوْۤا اَلَمْ تَكُنْ اَرْضُ اللّٰهِ وَاسِعَةً فَتُهَاجِرُوْا فِیْهَا ؕ— فَاُولٰٓىِٕكَ مَاْوٰىهُمْ جَهَنَّمُ ؕ— وَسَآءَتْ مَصِیْرًا ۟ۙ
ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿರುವವರ ಆತ್ಮವನ್ನು ದೂತರು ವಶಪಡಿಸಿಕೊಳ್ಳುವಾಗ ನೀವು ಯಾವ ಸ್ಥಿತಿಯಲ್ಲಿದ್ದಿರಿ? ಎಂದು ಅವರೊಂದಿಗೆ ಕೇಳುವರು: ನಾವು ನಮ್ಮ ನಾಡಿನಲ್ಲಿ ದುರ್ಬಲರಾಗಿದ್ದೆವು ಎಂದು ಅವರು ಉತ್ತರಿಸುವರು. ಅವರು (ದೂತರು) ಕೇಳುವರು: ನೀವು ನಿಮ್ಮ ನಾಡನ್ನು ಬಿಟ್ಟು ಅನ್ಯ ನಾಡಿಗೆ ಹೋಗುವಷ್ಟು ಅಲ್ಲಾಹನ ಭೂಮಿ ವಿಶಾಲವಾಗಿರಲಿಲ್ಲವೇ? ಅಂತಹ ಜನರ ವಾಸಸ್ಥಳವು ನರಕವಾಗಿದೆ. ಮತ್ತು ಅದು ಕೆಟ್ಟ ವಾಸಸ್ಥಳವಾಗಿದೆ.
ئەرەپچە تەپسىرلەر:
اِلَّا الْمُسْتَضْعَفِیْنَ مِنَ الرِّجَالِ وَالنِّسَآءِ وَالْوِلْدَانِ لَا یَسْتَطِیْعُوْنَ حِیْلَةً وَّلَا یَهْتَدُوْنَ سَبِیْلًا ۟ۙ
ಆದರೆ ಯಾವುದೇ ಯೋಜನೆಯನ್ನು ರೂಪಿಸಲಾಗದ, ಮತ್ತು ಮರ್ಗೋಪಾಯವಿಲ್ಲದ ಅಸಹಾಯಕ ಸ್ತಿçÃ-ಪುರುಷರು ಮತ್ತು ಮಕ್ಕಳ ಹೊರತು;
ئەرەپچە تەپسىرلەر:
فَاُولٰٓىِٕكَ عَسَی اللّٰهُ اَنْ یَّعْفُوَ عَنْهُمْ ؕ— وَكَانَ اللّٰهُ عَفُوًّا غَفُوْرًا ۟
ಅಲ್ಲಾಹನು ಅವರನ್ನು ಮನ್ನಿಸಿಬಿಡಬಹುದು. ಅಲ್ಲಾಹನು ಅತ್ಯಧಿಕ ಮನ್ನಿಸುವವನು, ಕ್ಷಮಾಶೀಲನು ಆಗಿದ್ದಾನೆ.
ئەرەپچە تەپسىرلەر:
وَمَنْ یُّهَاجِرْ فِیْ سَبِیْلِ اللّٰهِ یَجِدْ فِی الْاَرْضِ مُرٰغَمًا كَثِیْرًا وَّسَعَةً ؕ— وَمَنْ یَّخْرُجْ مِنْ بَیْتِهٖ مُهَاجِرًا اِلَی اللّٰهِ وَرَسُوْلِهٖ ثُمَّ یُدْرِكْهُ الْمَوْتُ فَقَدْ وَقَعَ اَجْرُهٗ عَلَی اللّٰهِ ؕ— وَكَانَ اللّٰهُ غَفُوْرًا رَّحِیْمًا ۟۠
ಯಾರು ಅಲ್ಲಾಹನ ಮಾರ್ಗದಲ್ಲಿ ತನ್ನ ನಾಡನ್ನು ತ್ಯಜಿಸುತ್ತಾನೋ ಅವನು ಭೂಮಿಯಲ್ಲಿ ಧಾರಾಳ ಅಭಯಸ್ಥಾನಗಳನ್ನೂ, ವೈಶಾಲ್ಯತೆಗಳನ್ನೂ ಪಡೆಯುವನು ಮತ್ತು ಯಾರು ತನ್ನ ಮನೆಯಿಂದ ಅಲ್ಲಾಹನೆಡೆಗೂ, ಅವನ ಸಂದೇಶವಾಹಕ ರೆಡೆಗೂ ಹೊರಟು ಅನಂತರ ಸಾವಿಗೀಡಾದರೆ ಖಂಡಿತ ಅವನ ಪ್ರತಿಫಲ ಅಲ್ಲಾಹನ ಬಳಿ ಖಚಿತವಾಗಿ ಬಿಟ್ಟಿತು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
ئەرەپچە تەپسىرلەر:
وَاِذَا ضَرَبْتُمْ فِی الْاَرْضِ فَلَیْسَ عَلَیْكُمْ جُنَاحٌ اَنْ تَقْصُرُوْا مِنَ الصَّلٰوةِ ۖۗ— اِنْ خِفْتُمْ اَنْ یَّفْتِنَكُمُ الَّذِیْنَ كَفَرُوْا ؕ— اِنَّ الْكٰفِرِیْنَ كَانُوْا لَكُمْ عَدُوًّا مُّبِیْنًا ۟
ನೀವು ಪ್ರಯಾಣಿಸುತ್ತಿರುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದಲ್ಲಿ ನೀವು ನಮಾಝನ್ನು ಸಂಕ್ಷಿಪ್ತಗೊಳಿಸಿ ನಿರ್ವಹಿಸುವುದರಲ್ಲಿ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಖಂಡಿತವಾಗಿಯು ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
ئەرەپچە تەپسىرلەر:
 
مەنالار تەرجىمىسى سۈرە: نىسا
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش