Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: ھۇجۇرات   ئايەت:
وَلَوْ اَنَّهُمْ صَبَرُوْا حَتّٰی تَخْرُجَ اِلَیْهِمْ لَكَانَ خَیْرًا لَّهُمْ ؕ— وَاللّٰهُ غَفُوْرٌ رَّحِیْمٌ ۟
ನೀವು ಅವರ ಬಳಿ ಹೊರಟು ಬರುವತನಕ ಅವರು ತಾಳ್ಮೆ ವಹಿಸಿದ್ದರೆ ಅದುವೇ ಅವರಿಗೆ ಅತ್ಯುತ್ತಮವಾಗಿತ್ತು, ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْۤا اِنْ جَآءَكُمْ فَاسِقٌ بِنَبَاٍ فَتَبَیَّنُوْۤا اَنْ تُصِیْبُوْا قَوْمًا بِجَهَالَةٍ فَتُصْبِحُوْا عَلٰی مَا فَعَلْتُمْ نٰدِمِیْنَ ۟
ಓ ಸತ್ಯವಿಶ್ವಾಸಿಗಳೇ, ನಿಮ್ಮ ಬಳಿ ದುಷ್ಟನೂಬ್ಬನು ಯಾವುದಾದರು ಸುದ್ದಿಯನ್ನು ತಂದರೆ ನೀವು ಚೆನ್ನಾಗಿ ಪರಿಶೀಲಿಸಿರಿ, ನೀವು ಒಂದು ಜನತೆಗೆ ಅಜ್ಞಾನದಿಂದ ಹಾನಿಯನ್ನುಂಟು ಮಾಡಿ, ಆ ಬಳಿಕ ನೀವು ಮಾಡಿದ ಕೃತ್ಯಕ್ಕೆ ಖೇದ ಪಡಬೇಕಾದೀತು.
ئەرەپچە تەپسىرلەر:
وَاعْلَمُوْۤا اَنَّ فِیْكُمْ رَسُوْلَ اللّٰهِ ؕ— لَوْ یُطِیْعُكُمْ فِیْ كَثِیْرٍ مِّنَ الْاَمْرِ لَعَنِتُّمْ وَلٰكِنَّ اللّٰهَ حَبَّبَ اِلَیْكُمُ الْاِیْمَانَ وَزَیَّنَهٗ فِیْ قُلُوْبِكُمْ وَكَرَّهَ اِلَیْكُمُ الْكُفْرَ وَالْفُسُوْقَ وَالْعِصْیَانَ ؕ— اُولٰٓىِٕكَ هُمُ الرّٰشِدُوْنَ ۟ۙ
ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.
ئەرەپچە تەپسىرلەر:
فَضْلًا مِّنَ اللّٰهِ وَنِعْمَةً ؕ— وَاللّٰهُ عَلِیْمٌ حَكِیْمٌ ۟
ಇದು ಅಲ್ಲಾಹನ ಅನುಗ್ರಹ ಮತ್ತು ಉಪಕಾರವಾಗಿದೆ, ಅಲ್ಲಾಹನು ಸರ್ವಜ್ಞಾನಿಯು ಯುಕ್ತಿ ಪೂರ್ಣನೂ ಆಗಿದ್ದಾನೆ.
ئەرەپچە تەپسىرلەر:
وَاِنْ طَآىِٕفَتٰنِ مِنَ الْمُؤْمِنِیْنَ اقْتَتَلُوْا فَاَصْلِحُوْا بَیْنَهُمَا ۚ— فَاِنْ بَغَتْ اِحْدٰىهُمَا عَلَی الْاُخْرٰی فَقَاتِلُوا الَّتِیْ تَبْغِیْ حَتّٰی تَفِیْٓءَ اِلٰۤی اَمْرِ اللّٰهِ ۚ— فَاِنْ فَآءَتْ فَاَصْلِحُوْا بَیْنَهُمَا بِالْعَدْلِ وَاَقْسِطُوْا ؕ— اِنَّ اللّٰهَ یُحِبُّ الْمُقْسِطِیْنَ ۟
ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ, ಬಳಿಕ ಅವುಗಳಲ್ಲೊಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿಕ್ರಮತೋರಿದರೆ ನೀವು ಅತಿಕ್ರಮ ತೋರುತ್ತಿರುವ ಗುಂಪಿನೊAದಿಗೆ ಅದು ಅಲ್ಲಾಹನ ಆಜ್ಞೆಯೆಡೆಗೆ ಮರಳಿ ಬರುವವರೆಗೆ ಹೋರಾಡಿರಿ, ಇನ್ನುಅದು ಮರಳಿ ಬಂದರೆ ಅವರ ನಡುವೆ ನ್ಯಾಯದೊಂದಿಗೆ ಸಂಧಾನ ಮಾಡಿರಿ, ಹಾಗು ನ್ಯಾಯನೀತಿ ಪಾಲಿಸಿರಿ, ನಿಸ್ಸಂಶಯವಾಗಿಯು ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುತ್ತಾನೆ.
ئەرەپچە تەپسىرلەر:
اِنَّمَا الْمُؤْمِنُوْنَ اِخْوَةٌ فَاَصْلِحُوْا بَیْنَ اَخَوَیْكُمْ وَاتَّقُوا اللّٰهَ لَعَلَّكُمْ تُرْحَمُوْنَ ۟۠
ನಿಶ್ಚಯವಾಗಿಯು ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರಾಗಿದ್ದಾರೆ, ಆದ್ದರಿಂದ ನಿಮ್ಮ ಸಹೋದರರ ನಡುವೆ ಸಂಧಾನ ಮಾಡಿರಿ ಮತ್ತು ಅಲ್ಲಾಹನನ್ನು ಭಯಪಡಿರಿ, ಇದು ನಿಮ್ಮ ಮೇಲೆ ಕರುಣೆತೋರಲೆಂದಾಗಿದೆ.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا لَا یَسْخَرْ قَوْمٌ مِّنْ قَوْمٍ عَسٰۤی اَنْ یَّكُوْنُوْا خَیْرًا مِّنْهُمْ وَلَا نِسَآءٌ مِّنْ نِّسَآءٍ عَسٰۤی اَنْ یَّكُنَّ خَیْرًا مِّنْهُنَّ ۚ— وَلَا تَلْمِزُوْۤا اَنْفُسَكُمْ وَلَا تَنَابَزُوْا بِالْاَلْقَابِ ؕ— بِئْسَ الِاسْمُ الْفُسُوْقُ بَعْدَ الْاِیْمَانِ ۚ— وَمَنْ لَّمْ یَتُبْ فَاُولٰٓىِٕكَ هُمُ الظّٰلِمُوْنَ ۟
ಓ ಸತ್ಯವಿಶ್ವಾಸಿಗಳೇ, ಪುರುಷರುಇತರ ಪುರುಷರನ್ನು ಪರಿಹಾಸ್ಯ ಮಾಡದಿರಲಿ, ಅವರು ಇವರಿಗಿಂತ ಉತ್ತಮವಾಗಿರಬಹುದು, ಸ್ತಿçÃಯರು ಇತರ ಸ್ತಿçÃಯರನ್ನು ಪರಿಹಾಸ್ಯ ಮಾಡದಿರಲಿ. ಅವರು ಇವರಿಗಿಂತ ಉತ್ತಮರಾಗಿರಬಹುದು, ನೀವು ಪರಸ್ಪರರನ್ನು ಹೀಯಾಳಿಸದಿರಿ ಮತ್ತು ಪರಸ್ಪರ ಅಡ್ಡ ಹೆಸರುಗಳಿಂದ ಕರೆಯದಿರಿ. ಏಕೆಂದರೆ ಸತ್ಯವಿಶ್ವಾಸ ಹೊಂದಿದ ಬಳಿಕ ದುರಾಚಾರವು ಕೆಟ್ಟದ್ದಾಗಿದೆ, ಇದರಿಂದ ಪಶ್ಚಾತ್ತಾಪ ಪಟ್ಟು ಮರಳದವರೇ ಅಕ್ರಮಿಗಳಾಗಿರುತ್ತಾರೆ.
ئەرەپچە تەپسىرلەر:
 
مەنالار تەرجىمىسى سۈرە: ھۇجۇرات
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش