Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: مائىدە   ئايەت:
اُحِلَّ لَكُمْ صَیْدُ الْبَحْرِ وَطَعَامُهٗ مَتَاعًا لَّكُمْ وَلِلسَّیَّارَةِ ۚ— وَحُرِّمَ عَلَیْكُمْ صَیْدُ الْبَرِّ مَا دُمْتُمْ حُرُمًا ؕ— وَاتَّقُوا اللّٰهَ الَّذِیْۤ اِلَیْهِ تُحْشَرُوْنَ ۟
ನಿಮ್ಮ ಪ್ರಯೋಜನಕ್ಕಾಗಿ ಮತ್ತು ಪ್ರಯಾಣಿಕರ ಪ್ರಯೋಜನಕ್ಕಾಗಿ ಸಮುದ್ರದಲ್ಲಿ ಬೇಟೆಯಾಡುವುದನ್ನೂ ಮತ್ತು ಅದನ್ನು ತಿನ್ನುವುದನ್ನೂ ಧರ್ಮಸಮ್ಮತಗೊಳಿಸಲಾಗಿದೆ. ಮತ್ತು ನೀವು ಇಹ್ರಾಮ್‌ನ ಸ್ಥಿತಿಯಲ್ಲಿರುವಾಗ ನೆಲದ ಬೇಟೆಯನ್ನು ನಿಮಗೆ ನಿಷಿದ್ಧಗೊಳಿಸಲಾಗಿದೆ. ಯಾರೆಡೆಗೆ ನೀವು ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹುನನ್ನು ಭಯಪಡಿರಿ.
ئەرەپچە تەپسىرلەر:
جَعَلَ اللّٰهُ الْكَعْبَةَ الْبَیْتَ الْحَرَامَ قِیٰمًا لِّلنَّاسِ وَالشَّهْرَ الْحَرَامَ وَالْهَدْیَ وَالْقَلَآىِٕدَ ؕ— ذٰلِكَ لِتَعْلَمُوْۤا اَنَّ اللّٰهَ یَعْلَمُ مَا فِی السَّمٰوٰتِ وَمَا فِی الْاَرْضِ وَاَنَّ اللّٰهَ بِكُلِّ شَیْءٍ عَلِیْمٌ ۟
ಆದರಣೀಯ ಗೃಹವಾದ ಕಾಬಾವನ್ನು, ಅಲ್ಲಾಹನು ಜನರ ಶಾಂತಿಯ ಕೇಂದ್ರವನ್ನಾಗಿ ಮಾಡಿದ್ದಾನೆ. ಮತ್ತು ಗೌರವಾನ್ವಿತ ತಿಂಗಳನ್ನು ಹರಮ್‌ನಲ್ಲಿ ಬಲಿನೀಡಲಾಗುವ ಪ್ರಾಣಿಯನ್ನೂ, ಕೊರಳಲ್ಲಿ ಪಟ್ಟಿ ಹಾಕಲಾದ (ಕಾಬಾದ ಕಡೆ ಒಯ್ಯುವ) ಪ್ರಾಣಿಗಳನ್ನೂ ಸಹ. ಇದು ನಿಸ್ಸಂಶಯವಾಗಿಯು ಅಲ್ಲಾಹನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಜ್ಞಾನವನ್ನು ಹೊಂದಿದ್ದಾನೆAದೂ, ಮತ್ತು ಅವನು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಅರಿತಿರುವನೆಂದೂ ನೀವು ತಿಳಿದುಕೊಳ್ಳಲೆಂದಾಗಿದೆ.
ئەرەپچە تەپسىرلەر:
اِعْلَمُوْۤا اَنَّ اللّٰهَ شَدِیْدُ الْعِقَابِ وَاَنَّ اللّٰهَ غَفُوْرٌ رَّحِیْمٌ ۟ؕ
ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂದೂ ಮತ್ತು ಅಲ್ಲಾಹನು ಕ್ಷಮಾಶೀಲನೂ ಹಾಗೂ ಕರುಣಾನಿಧಿಯೂ ಆಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
ئەرەپچە تەپسىرلەر:
مَا عَلَی الرَّسُوْلِ اِلَّا الْبَلٰغُ ؕ— وَاللّٰهُ یَعْلَمُ مَا تُبْدُوْنَ وَمَا تَكْتُمُوْنَ ۟
ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನೀವು ಬಹಿರಂಗಗೊಳಿಸುವುದನ್ನೂ, ಬಚ್ಚಿಡುವುದನ್ನೂ ಅಲ್ಲಾಹನು ಅರಿಯುತ್ತಾನೆ.
ئەرەپچە تەپسىرلەر:
قُلْ لَّا یَسْتَوِی الْخَبِیْثُ وَالطَّیِّبُ وَلَوْ اَعْجَبَكَ كَثْرَةُ الْخَبِیْثِ ۚ— فَاتَّقُوا اللّٰهَ یٰۤاُولِی الْاَلْبَابِ لَعَلَّكُمْ تُفْلِحُوْنَ ۟۠
ಓ ಪೈಗಂಬರರೇ ಹೇಳಿರಿ: ಅಶುದ್ಧವಾದುದೂ, ಶುದ್ಧವಾದುದೂ ಸಮಾನವಲ್ಲ; ನಿಮಗೆ ಅಶುದ್ಧವಾದವುಗಳ ಹೆಚ್ಚಳವು ಆಕರ್ಷಕವಾಗಿ ಕಂಡರೂ ಸರಿಯೇ, ಓ ಬುದ್ಧಿವಂತರೇ, ನೀವು ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ಸು ಪಡೆಯಬಹುದು.
ئەرەپچە تەپسىرلەر:
یٰۤاَیُّهَا الَّذِیْنَ اٰمَنُوْا لَا تَسْـَٔلُوْا عَنْ اَشْیَآءَ اِنْ تُبْدَ لَكُمْ تَسُؤْكُمْ ۚ— وَاِنْ تَسْـَٔلُوْا عَنْهَا حِیْنَ یُنَزَّلُ الْقُرْاٰنُ تُبْدَ لَكُمْ ؕ— عَفَا اللّٰهُ عَنْهَا ؕ— وَاللّٰهُ غَفُوْرٌ حَلِیْمٌ ۟
ಓ ಸತ್ಯವಿಶ್ವಾಸಿಗಳೇ, ನಿಮಗೆ ಬಹಿರಂಗಗೊಳಿಸಲಾದರೆ ಸಹಿಸಲು ಸಾಧ್ಯವಾಗದಂತಹ ಸಂಗತಿಗಳನ್ನು ನೀವು ಕೇಳಬಾರದು ಮತ್ತು ಕುರ್‌ಅನ್ ಅವತೀರ್ಣಗೊಳ್ಳುವ ಸಂದರ್ಭದಲ್ಲಿ ನೀವು ಅವುಗಳ ಕುರಿತು ಪ್ರಶ್ನಿಸುವುದಾದರೆ ನಿಮಗೆ ಅವುಗಳನ್ನು ಬಹಿರಂಗಗೊಳಿಸಲಾಗುವುದು. ಗತ ಪ್ರಶ್ನೆಗಳನ್ನು ಅಲ್ಲಾಹನು ಮನ್ನಿಸಿರುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ಸಹನಾಶೀಲನೂ ಆಗಿರುವನು.
ئەرەپچە تەپسىرلەر:
قَدْ سَاَلَهَا قَوْمٌ مِّنْ قَبْلِكُمْ ثُمَّ اَصْبَحُوْا بِهَا كٰفِرِیْنَ ۟
ಇಂತಹ ಪ್ರಶ್ನೆಗಳನ್ನು ನಿಮಗಿಂತ ಮುಂಚಿನ ಜನರೂ ಕೇಳಿದ್ದರು. ಅವುಗಳ ಉತ್ತರ ಸಿಕ್ಕಿತು. ತರುವಾಯ ಅವರು ಆ ಮಾತುಗಳ ನಿಷೇಧಿಗಳಾಗಿಬಿಟ್ಟರು.
ئەرەپچە تەپسىرلەر:
مَا جَعَلَ اللّٰهُ مِنْ بَحِیْرَةٍ وَّلَا سَآىِٕبَةٍ وَّلَا وَصِیْلَةٍ وَّلَا حَامٍ ۙ— وَّلٰكِنَّ الَّذِیْنَ كَفَرُوْا یَفْتَرُوْنَ عَلَی اللّٰهِ الْكَذِبَ ؕ— وَاَكْثَرُهُمْ لَا یَعْقِلُوْنَ ۟
ಬಹೀರಃವನ್ನಾಗಲೀ, ಸಾಇಬಃವನ್ನಾಗಲೀ, ವಸೀಲವನ್ನಾಗಲೀ ಮತ್ತು ಹಾಮ್‌ಅನ್ನಾಗಲೀ (ಮಿಥ್ಯಾರಾಧ್ಯರಿಗೆ ಬಿಟ್ಟ ಪ್ರಾಣಿಗಳು) ಅಲ್ಲಾಹನು ನಿಶ್ಚಯಿಸಿರುವುದಿಲ್ಲ. ಆದರೆ ಸತ್ಯನಿಷೇಧಿಗಳು (ದೇವತೆಗಳಿಗೆ ಬಿಟ್ಟು) ಅಲ್ಲಾಹನ ಮೇಲೆ ಸುಳ್ಳು ಹೆಣೆಯುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ವಿವೇಕವನ್ನು ಹೊಂದಿರುವುದಿಲ್ಲ.
ئەرەپچە تەپسىرلەر:
 
مەنالار تەرجىمىسى سۈرە: مائىدە
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش