Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: ئەئراپ   ئايەت:
وَجٰوَزْنَا بِبَنِیْۤ اِسْرَآءِیْلَ الْبَحْرَ فَاَتَوْا عَلٰی قَوْمٍ یَّعْكُفُوْنَ عَلٰۤی اَصْنَامٍ لَّهُمْ ۚ— قَالُوْا یٰمُوْسَی اجْعَلْ لَّنَاۤ اِلٰهًا كَمَا لَهُمْ اٰلِهَةٌ ؕ— قَالَ اِنَّكُمْ قَوْمٌ تَجْهَلُوْنَ ۟
ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ತರುವಾಯ ತಮ್ಮ ಕೆಲವು ವಿಗ್ರಹಗಳ ಮುಂದೆ ಉಪಾಸಕರಾಗಿ ಕೂತಿದ್ದ ಒಂದು ಜನತೆಯ ಮುಂದಿನಿAದ ಅವರು ಹಾದು ಹೋಗುವಾಗ ಹೇಳತೊಡಗಿದರು: ಓ ಮೂಸಾ, ಇವರಿಗೆ ಆರಾಧ್ಯರಿರುವಂತೆಯೇ ನಮಗೂ ಒಂದು ಆರಾಧ್ಯನನ್ನು ಮಾಡಿಕೊಡಿ. ಅವರು ಹೇಳಿದರು: ಖಂಡಿತವಾಗಿಯು ನೀವು ಅವಿವೇಕಿ ಜನರಾಗಿರುವಿರಿ.
ئەرەپچە تەپسىرلەر:
اِنَّ هٰۤؤُلَآءِ مُتَبَّرٌ مَّا هُمْ فِیْهِ وَبٰطِلٌ مَّا كَانُوْا یَعْمَلُوْنَ ۟
ಖಂಡಿತವಾಗಿಯು ಇವರು ಯಾವ ಕೃತ್ಯದಲ್ಲಿ ಮಗ್ನರಾಗಿರುವರೋ ಅದು ನಾಶ ಮಾಡಲಾಗುವುದು ಮತ್ತು ಅವರ ಈ ಕೃತ್ಯವು ವ್ಯರ್ಥವಾಗಿದೆ.
ئەرەپچە تەپسىرلەر:
قَالَ اَغَیْرَ اللّٰهِ اَبْغِیْكُمْ اِلٰهًا وَّهُوَ فَضَّلَكُمْ عَلَی الْعٰلَمِیْنَ ۟
ಅವರು ಹೇಳಿದರು: ನಾನು ಅಲ್ಲಾಹನ ಹೊರತು ಬೇರೆ ಆರಾಧ್ಯನನ್ನು ನಿಮಗೆ ನಿಶ್ಚಯಿಸಿ ಕೊಡುವುದೇ? ಅವನಾದರೋ ನಿಮಗೆ ಸಕಲ ಲೋಕದವರ ಮೇಲೆ ಔನ್ನತ್ಯವನ್ನು ನೀಡಿರುವನು.
ئەرەپچە تەپسىرلەر:
وَاِذْ اَنْجَیْنٰكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ ۚ— یُقَتِّلُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟۠
ಮತ್ತು ನಿಮಗೆ ಕಠಿಣವಾಗಿ ಶಿಕ್ಷಿಸುತ್ತಿದ್ದ, ನಿಮ್ಮ ಗಂಡು ಮಕ್ಕಳನ್ನು ವಧಿಸಿ, ನಿಮ್ಮ ಹೆಣ್ಣುಮಕ್ಕಳನ್ನು ಜೀವಂತವಾಗಿ ಬಿಡುತ್ತಿದ್ದ ಫಿರ್‌ಔನನ ಜನರಿಂದ ನಿಮ್ಮನ್ನು ನಾವು ರಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ ಮತ್ತು ಇದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಒಂದು ದೊಡ್ಡ ಪರೀಕ್ಷೆಯಿತ್ತು.
ئەرەپچە تەپسىرلەر:
وَوٰعَدْنَا مُوْسٰی ثَلٰثِیْنَ لَیْلَةً وَّاَتْمَمْنٰهَا بِعَشْرٍ فَتَمَّ مِیْقَاتُ رَبِّهٖۤ اَرْبَعِیْنَ لَیْلَةً ۚ— وَقَالَ مُوْسٰی لِاَخِیْهِ هٰرُوْنَ اخْلُفْنِیْ فِیْ قَوْمِیْ وَاَصْلِحْ وَلَا تَتَّبِعْ سَبِیْلَ الْمُفْسِدِیْنَ ۟
ಮತ್ತು ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವನ್ನು ಮಾಡಿದೆವು ನಂತರ ಹತ್ತು ರಾತ್ರಿಗಳನ್ನು ಹೆಚ್ಚಿಸಿ ಅವರ ಪ್ರಭೂ ನಿಶ್ಚಯಿಸಿದ ಅವಧಿಯು ಒಟ್ಟು ನಲ್ವತ್ತು ರಾತ್ರಿಗಳಾಗಿ ಪೂರ್ಣಗೊಂಡಿತು ಮತ್ತು ಮೂಸಾ ತನ್ನ ಸಹೋದರ ಹಾರೂನ್‌ರವರೊಂದಿಗೆ ಹೇಳಿದರು: ನನ್ನ ಪ್ರತಿನಿಧಿಯಾಗಿ ನನ್ನ ಜನಾಂಗದ ನಡುವೆ ಸುಧಾರಣೆ ಮಾಡುತ್ತಿರು ಮತ್ತು ಗಲಭೆ ಕೋರರ ಮಾರ್ಗವನ್ನು ಅನುಸರಿಸದಿರು.
ئەرەپچە تەپسىرلەر:
وَلَمَّا جَآءَ مُوْسٰی لِمِیْقَاتِنَا وَكَلَّمَهٗ رَبُّهٗ ۙ— قَالَ رَبِّ اَرِنِیْۤ اَنْظُرْ اِلَیْكَ ؕ— قَالَ لَنْ تَرٰىنِیْ وَلٰكِنِ انْظُرْ اِلَی الْجَبَلِ فَاِنِ اسْتَقَرَّ مَكَانَهٗ فَسَوْفَ تَرٰىنِیْ ۚ— فَلَمَّا تَجَلّٰی رَبُّهٗ لِلْجَبَلِ جَعَلَهٗ دَكًّا وَّخَرَّ مُوْسٰی صَعِقًا ۚ— فَلَمَّاۤ اَفَاقَ قَالَ سُبْحٰنَكَ تُبْتُ اِلَیْكَ وَاَنَا اَوَّلُ الْمُؤْمِنِیْنَ ۟
ಮತ್ತು ನಮ್ಮ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪ್ರಭು ಅವರೊಂದಿಗೆ ಮಾತನಾಡಿದಾಗ ಹೇಳಿದರು: ನನ್ನ ಪ್ರಭೂ, ನನಗೆ ನಿನ್ನ ದರ್ಶನವನ್ನು ನೀಡು, ನಾನು ನಿನ್ನನ್ನೊಮ್ಮೆ ನೋಡಬೇಕು. ಆಗ ಹೇಳಲಾಯಿತು: ನೀನು ನನ್ನನ್ನು ಎಂದಿಗೂ ನೋಡಲಾರೆ. ಆದರೆ ನೀನು ಆ ಪರ್ವತದೆಡೆಗೆ ನೋಡುತ್ತಿರು. ಅದು ಅದರ ಸ್ಥಳದಲ್ಲಿಯೇ ದೃಢವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ. ಹಾಗೆ ಅವರ ಪ್ರಭು ಪರ್ವತಕ್ಕೆ ತನ್ನ ದಿವ್ಯ ಪ್ರಕಾಶವನ್ನು ಬೀರಿದಾಗ ಅದು ಪುಡಿಗಟ್ಟಿ ಬಿಟ್ಟಿತು ಮತ್ತು ಮೂಸಾ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ನಂತರ ಅವರು ಪ್ರಜ್ಞೆಗೆ ಬಂದಾಗ ಹೇಳಿದರು: ನಿಸ್ಸಂಶಯವಾಗಿಯು ನಾನು ನಿನ್ನ ಸನ್ನಿಧಿಯಲ್ಲಿ ಪಶ್ಚಾತ್ತಾಪ ಹೊಂದಿ ಮರಳಿರುವೆನು ಮತ್ತು ಎಲ್ಲರಿಗಿಂತ ಮೊದಲು ನಿನ್ನ ಮೇಲೆ ಸತ್ಯವಿಶ್ವಾಸ ಕೈಗೊಂಡಿರುವೆನು.
ئەرەپچە تەپسىرلەر:
 
مەنالار تەرجىمىسى سۈرە: ئەئراپ
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش