Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል ኢስራዕ   አንቀጽ:
عَسٰی رَبُّكُمْ اَنْ یَّرْحَمَكُمْ ۚ— وَاِنْ عُدْتُّمْ عُدْنَا ۘ— وَجَعَلْنَا جَهَنَّمَ لِلْكٰفِرِیْنَ حَصِیْرًا ۟
ನಿಮ್ಮ ಪ್ರಭುವು ನಿಮ್ಮ ಮೇಲೆ ಕೃಪೆ ತೋರಲೂಬಹುದು. ಅದರೆ ಇನ್ನು ಮುಂದೆಯೂ ನೀವು ಅದೇ ಕೃತ್ಯವನ್ನು ಮಾಡಿದರೆ ನಾವು ಸಹ ಪುನಃ ಹಾಗೆಯೇ ಮಾಡುವೆವು ಹಾಗೂ ನಾವು ನರಕವನ್ನು ಸತ್ಯನಿಷೇಧಿಗಳಿಗೆ ಸೆರೆಮನೆಯನ್ನಾಗಿ ಮಾಡಿರುವೆವು.
የአረብኛ ቁርኣን ማብራሪያ:
اِنَّ هٰذَا الْقُرْاٰنَ یَهْدِیْ لِلَّتِیْ هِیَ اَقْوَمُ وَیُبَشِّرُ الْمُؤْمِنِیْنَ الَّذِیْنَ یَعْمَلُوْنَ الصّٰلِحٰتِ اَنَّ لَهُمْ اَجْرًا كَبِیْرًا ۟ۙ
ನಿಶ್ಚಯವಾಗಿಯು ಈ ಕುರ್‌ಆನ್ ಅತ್ಯಂತ ಋಜುವಾದ ಮಾರ್ಗಕ್ಕೆ ಮುನ್ನಡೆಸುತ್ತದೆ ಮತ್ತು ಸತ್ಕರ್ಮಗಳನ್ನೆಸಗುವ ಸತ್ಯವಿಶ್ವಾಸಿಗಳಿಗೆ ದೊಡ್ಡ ಪ್ರತಿಫಲವಿದೆ ಎಂಬ ಸುವಾರ್ತೆ ನೀಡುತ್ತದೆ.
የአረብኛ ቁርኣን ማብራሪያ:
وَّاَنَّ الَّذِیْنَ لَا یُؤْمِنُوْنَ بِالْاٰخِرَةِ اَعْتَدْنَا لَهُمْ عَذَابًا اَلِیْمًا ۟۠
ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವನ್ನಿಡದವರಿಗೆ ನಾವು ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿದ್ದೇವೆ.
የአረብኛ ቁርኣን ማብራሪያ:
وَیَدْعُ الْاِنْسَانُ بِالشَّرِّ دُعَآءَهٗ بِالْخَیْرِ ؕ— وَكَانَ الْاِنْسَانُ عَجُوْلًا ۟
ಮಾನವನು ತನ್ನ ಒಳಿತಿಗೆ ಪ್ರಾರ್ಥಿಸುವಂತೆಯೇ ಕೆಡುಕಿಗೂ ಪ್ರಾರ್ಥಿಸತೊಡಗುತ್ತಾನೆ ಮತ್ತು ಮಾನವನು ಮಹಾ ದುಡುಕು ಸ್ವಭಾವದವನಾಗಿದ್ದಾನೆ.
የአረብኛ ቁርኣን ማብራሪያ:
وَجَعَلْنَا الَّیْلَ وَالنَّهَارَ اٰیَتَیْنِ فَمَحَوْنَاۤ اٰیَةَ الَّیْلِ وَجَعَلْنَاۤ اٰیَةَ النَّهَارِ مُبْصِرَةً لِّتَبْتَغُوْا فَضْلًا مِّنْ رَّبِّكُمْ وَلِتَعْلَمُوْا عَدَدَ السِّنِیْنَ وَالْحِسَابَ ؕ— وَكُلَّ شَیْءٍ فَصَّلْنٰهُ تَفْصِیْلًا ۟
ರಾತ್ರಿ ಮತ್ತು ಹಗಲನ್ನು ನಾವು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು. ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಿರೆಂದು ವರ್ಷಗಳ ಗಣನೆಯನ್ನು, ಲೆಕ್ಕಾಚಾರವನ್ನು ತಿಳಿದುಕೊಳ್ಳೆಂದೂ ನಾವು ರಾತ್ರಿಯ ದೃಷ್ಟಾಂತವನ್ನು ಪ್ರಕಾಶರಹಿತವನ್ನಾಗಿಯೂ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಯÀವನ್ನಾಗಿಯೂ ಮಾಡಿದೆವು ಮತ್ತು ಪ್ರತಿಯೊಂದನ್ನು ನಾವು ಬಹಳ ಸ್ಪಷ್ಟವಾಗಿ ವಿವರಿಸಿ ಕೊಟ್ಟಿದ್ದೇವೆ.
የአረብኛ ቁርኣን ማብራሪያ:
وَكُلَّ اِنْسَانٍ اَلْزَمْنٰهُ طٰٓىِٕرَهٗ فِیْ عُنُقِهٖ ؕ— وَنُخْرِجُ لَهٗ یَوْمَ الْقِیٰمَةِ كِتٰبًا یَّلْقٰىهُ مَنْشُوْرًا ۟
ನಾವು ಪ್ರತಿಯೊಬ್ಬ ಮನುಷ್ಯನ ಕರ್ಮಗಳನ್ನು ಅವನ ಕೊರಳಿಗೆ ಕಟ್ಟಿಬಿಟ್ಟದ್ದೇವೆ ಮತ್ತು ಪ್ರಳಯ ದಿನದಂದು ನಾವು ಅವನಿಗಾಗಿ ಒಂದು ಗ್ರಂಥವನ್ನು ಹೊರ ತರುವೆವು. ಅವನು ಅದನ್ನು ತನ್ನ ಮುಂದೆ ತೆರೆದಿಟ್ಟಿರುವುದಾಗಿಯೇ ಕಾಣುವನು.
የአረብኛ ቁርኣን ማብራሪያ:
اِقْرَاْ كِتٰبَكَ ؕ— كَفٰی بِنَفْسِكَ الْیَوْمَ عَلَیْكَ حَسِیْبًا ۟ؕ
ಸ್ವತಃ ನೀನೇ ನಿನ್ನ ಕರ್ಮಗ್ರಂಥವನ್ನು ಓದು. ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು.
የአረብኛ ቁርኣን ማብራሪያ:
مَنِ اهْتَدٰی فَاِنَّمَا یَهْتَدِیْ لِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ؕ— وَلَا تَزِرُ وَازِرَةٌ وِّزْرَ اُخْرٰی ؕ— وَمَا كُنَّا مُعَذِّبِیْنَ حَتّٰی نَبْعَثَ رَسُوْلًا ۟
ಯಾರು ಸನ್ಮಾರ್ಗ ಸ್ವೀಕರಿಸುತ್ತಾನೋ ಅವನು ಸ್ವತಃ ತನ್ನ ಒಳಿತಿಗೆಂದೇ ಸನ್ಮಾರ್ಗ ಸ್ವೀಕರಿಸುತ್ತಾನೆ ಹಾಗೂ ಯಾರು ಪಥ ಭ್ರಷ್ಟನಾಗುತ್ತನೋ ಪಥ ಭ್ರಷ್ಟತೆಯ ಭಾರವು ಅವನ ಮೇಲೆಯೇ ಇರುವುದು ಮತ್ತು ಭಾರ ಹೊತ್ತ ಯಾವೊಬ್ಬನೂ ಬೇರೊಬ್ಬ ವ್ಯಕ್ತಿಯ ಭಾರವನ್ನು ಹೊರುವುದಿಲ್ಲ ಮತ್ತು ಒಬ್ಬ ಸಂದೇಶವಾಹಕನನ್ನು ಕಳುಹಿಸುವ ಮೊದಲೇ (ಯಾವುದೇ ಜನಾಂಗವನ್ನು) ನಾವು ಶಿಕ್ಷಿಸುವುದಿಲ್ಲ.
የአረብኛ ቁርኣን ማብራሪያ:
وَاِذَاۤ اَرَدْنَاۤ اَنْ نُّهْلِكَ قَرْیَةً اَمَرْنَا مُتْرَفِیْهَا فَفَسَقُوْا فِیْهَا فَحَقَّ عَلَیْهَا الْقَوْلُ فَدَمَّرْنٰهَا تَدْمِیْرًا ۟
ನಾವು ಯಾವುದಾದರೂ ನಾಡನ್ನು ನಾಶಗೊಳಿಸಲಿಚ್ಛಿಸಿದಾಗ ಅಲ್ಲಿನ ಸುಖ ಲೋಲುಪರಿಗೆ ಆದೇಶ ನೀಡುತ್ತೇವೆ ಮತ್ತು ಅವರು ಆ ನಾಡಲ್ಲಿ (ಆದೇಶಗಳನ್ನು) ಧಿಕ್ಕಾರವನ್ನೆಸಗತೊಡಗುತ್ತಾರೆ. ಆಗ ಅವರ ಮೇಲೆ (ಯಾತನೆಯ) ಮಾತು ನಿಜವಾಗಿ ಬಿಡುತ್ತದೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತೇವೆ.
የአረብኛ ቁርኣን ማብራሪያ:
وَكَمْ اَهْلَكْنَا مِنَ الْقُرُوْنِ مِنْ بَعْدِ نُوْحٍ ؕ— وَكَفٰی بِرَبِّكَ بِذُنُوْبِ عِبَادِهٖ خَبِیْرًا بَصِیْرًا ۟
ನೂಹರ ನಂತರ ನಾವು ಅದೇಷ್ಟೋ ತಲೆಮಾರುಗಳನ್ನು ನಾಶಗೊಳಿಸಿರುವೆವು ಮತ್ತು ತನ್ನ ದಾಸರ ಪಾಪಗಳನ್ನು ಸೂಕ್ಷö್ಮವಾಗಿ ತಿಳಿಯಲಿಕ್ಕು, ವೀಕ್ಷಿಸಲಿಕ್ಕು ನಿನ್ನ ಪ್ರಭುವೇ ಸಾಕು.
የአረብኛ ቁርኣን ማብራሪያ:
 
የይዘት ትርጉም ምዕራፍ: አል ኢስራዕ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት