Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ጣሃ   አንቀጽ:
اِذْ اَوْحَیْنَاۤ اِلٰۤی اُمِّكَ مَا یُوْحٰۤی ۟ۙ
ನಾವು ನಿಮ್ಮ ತಾಯಿಯೆಡಗೆ ಕೊಡಬೇಕಾಗಿದ್ದ ಜ್ಞಾನವನ್ನು ದಿವ್ಯವಾಣಿಯ ಮೂಲಕ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.
የአረብኛ ቁርኣን ማብራሪያ:
اَنِ اقْذِفِیْهِ فِی التَّابُوْتِ فَاقْذِفِیْهِ فِی الْیَمِّ فَلْیُلْقِهِ الْیَمُّ بِالسَّاحِلِ یَاْخُذْهُ عَدُوٌّ لِّیْ وَعَدُوٌّ لَّهٗ ؕ— وَاَلْقَیْتُ عَلَیْكَ مَحَبَّةً مِّنِّیْ ۚ۬— وَلِتُصْنَعَ عَلٰی عَیْنِیْ ۟ۘ
ನೀನು ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ನದಿಯಲ್ಲಿ ತೇಲಿಬಿಡು, ಅನಂತರ ನದಿಯು ಅದನ್ನು ದಡಕ್ಕೆ ಸೇರಿಸಿಬಿಡುವುದು ಮತ್ತು ಅದನ್ನು ನನ್ನ ಮತ್ತು ಆ ಮಗುವಿನ ಶತ್ರುವು ಎತ್ತಿಕೊಳ್ಳುವನು ಮತ್ತು ನಾನು ನಿನ್ನ ಮೇಲೆ ನನ್ನ ಕಡೆಯ ಪ್ರೀತಿಯನ್ನು ಹಾಕಿರುವೆನು ಇದೇಕೆಂದರೆ ನಿನ್ನ ಪಾಲನೆ ಪೋಷಣೆಯು ನನ್ನ ಮೇಲ್ನೋಟದಲ್ಲೇ ಆಗಲೆಂದಾಗಿದೆ.
የአረብኛ ቁርኣን ማብራሪያ:
اِذْ تَمْشِیْۤ اُخْتُكَ فَتَقُوْلُ هَلْ اَدُلُّكُمْ عَلٰی مَنْ یَّكْفُلُهٗ ؕ— فَرَجَعْنٰكَ اِلٰۤی اُمِّكَ كَیْ تَقَرَّ عَیْنُهَا وَلَا تَحْزَنَ ؕ۬— وَقَتَلْتَ نَفْسًا فَنَجَّیْنٰكَ مِنَ الْغَمِّ وَفَتَنّٰكَ فُتُوْنًا ۫۬— فَلَبِثْتَ سِنِیْنَ فِیْۤ اَهْلِ مَدْیَنَ ۙ۬— ثُمَّ جِئْتَ عَلٰی قَدَرٍ یّٰمُوْسٰی ۟
ನಿನ್ನ ಸಹೋದರಿಯು (ಅಪರಿಚಿತಳಾಗಿ) ನಡೆದು ಹೋಗಿ: (ಫಿರ್‌ಔನನ ಮನೆಯವರಿಗೆ) ಈ ಶಿಶುವನ್ನು ಅತ್ಯುತ್ತಮವಾಗಿ ಆರೈಕೆ ಮಾಡುವವರ ಕುರಿತು ನಾನು ನಿಮಗೆ ತಿಳಿಸಿಕೊಡಲೇ? ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಈ ಉಪಾಯದ ಮೂಲಕ ನಾವು ನಿಮ್ಮನ್ನು (ಅರೈಕೆಗಾಗಿ) ಪುನಃ ನಿಮ್ಮ ತಾಯಿಯೆಡೆಗೆ ಅವಳ ಕಣ್ಣು ತಣಿಸಲೆಂದೂ, ಅವಳು ವ್ಯಥೆಪಡದಿರಲೆಂದೂ ಮರಳಿಸಿದೆವು.ಮತ್ತು ನೀವು (ಫಿರ್‌ಔನಿನ ಜನಾಂಗದ) ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಲೂ ನಿಮ್ಮನ್ನು ಅ ಮನೋವ್ಯಥೆಯಿಂದ ಪಾರು ಮಾಡಿದೆವು. ಒಟ್ಟಿನಲ್ಲಿ ನಾವು ನಿಮ್ಮನ್ನು ಪರೀಕ್ಷೆಗೊಳಪಡಿಸಿದೆವು. ಹಾಗೆಯೇ ನೀವು ಹಲವು ವರ್ಷಗಳ ಕಾಲ ಮದ್‌ಯನ್ ಜನರ ನಡುವೆ ತಂಗಿದ್ದೀರಿ. ತರುವಾಯ ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ.
የአረብኛ ቁርኣን ማብራሪያ:
وَاصْطَنَعْتُكَ لِنَفْسِیْ ۟ۚ
ಮತ್ತು ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ.
የአረብኛ ቁርኣን ማብራሪያ:
اِذْهَبْ اَنْتَ وَاَخُوْكَ بِاٰیٰتِیْ وَلَا تَنِیَا فِیْ ذِكْرِیْ ۟ۚ
ಈಗ ನೀವು ಮತ್ತು ನಿಮ್ಮ ಸಹೋದರ ನನ್ನ ದೃಷ್ಟಾಂತಗಳೊAದಿಗೆ ಹೋಗಿರಿ, ಮತ್ತು ನೀವು ನನ್ನ ಸ್ಮರಣೆಯಲ್ಲಿ ಆಲಸ್ಯ ತೋರಬೇಡಿರಿ.
የአረብኛ ቁርኣን ማብራሪያ:
اِذْهَبَاۤ اِلٰی فِرْعَوْنَ اِنَّهٗ طَغٰی ۟ۚۖ
ನೀವಿಬ್ಬರೂ ಫಿರ್‌ಔನನ ಕಡೆಗೆ ಹೋಗಿರಿ. ಅವನು ಮಿತಿ ಮೀರಿದ್ದಾನೆ.
የአረብኛ ቁርኣን ማብራሪያ:
فَقُوْلَا لَهٗ قَوْلًا لَّیِّنًا لَّعَلَّهٗ یَتَذَكَّرُ اَوْ یَخْشٰی ۟
ಅವನೊಂದಿಗೆ ನಯವಾಗಿ ಮಾತನಾಡಿರಿ. ಅವನು ಉಪದೇಶವನ್ನು ಸ್ವೀಕರಿಸಬಹುದು ಅಥವಾ ಭಯ ಪಡಬಹುದು.
የአረብኛ ቁርኣን ማብራሪያ:
قَالَا رَبَّنَاۤ اِنَّنَا نَخَافُ اَنْ یَّفْرُطَ عَلَیْنَاۤ اَوْ اَنْ یَّطْغٰی ۟
ಅವರಿಬ್ಬರೂ ಹೇಳದಿರು: ಓ ನಮ್ಮ ಪ್ರಭು, ಅವನು ನಮ್ಮೊಂದಿಗೆ ಅತಿಕ್ರಮ ತೋರುವ ಅಥವಾ ಅವನು ನಮ್ಮ ಮೇಲೆ ಮುಗಿ ಬೀಳುವ ಭಯ ನಮಗಿದೆ.
የአረብኛ ቁርኣን ማብራሪያ:
قَالَ لَا تَخَافَاۤ اِنَّنِیْ مَعَكُمَاۤ اَسْمَعُ وَاَرٰی ۟
ಅಲ್ಲಾಹನು ಉತ್ತರಿಸಿದನು: ನೀವು ಭಯಪಡದಿರಿ. ನಾನು ನಿಮ್ಮ ಜೊತೆಗಿದ್ದೇನೆ ಮತ್ತು ನಾನು ಎಲ್ಲವನ್ನು ಆಲಿಸುತ್ತಿದ್ದೇನೆ, ವೀಕ್ಷಿಸುತ್ತಿದ್ದೇನೆ.
የአረብኛ ቁርኣን ማብራሪያ:
فَاْتِیٰهُ فَقُوْلَاۤ اِنَّا رَسُوْلَا رَبِّكَ فَاَرْسِلْ مَعَنَا بَنِیْۤ اِسْرَآءِیْلَ ۙ۬— وَلَا تُعَذِّبْهُمْ ؕ— قَدْ جِئْنٰكَ بِاٰیَةٍ مِّنْ رَّبِّكَ ؕ— وَالسَّلٰمُ عَلٰی مَنِ اتَّبَعَ الْهُدٰی ۟
ನೀವು ಅವನೆಡೆಗೆ ಹೋಗಿ ಹೇಳಿರಿ: ನಾವು ನಿನ್ನ ಪ್ರಭುವಿನ ಸಂದೇಶವಾಹಕರಾಗಿದ್ದೇವೆ. ನೀನು ಇಸ್ರಾಯೀಲ್ ಸಂತತಿಗಳನ್ನು ನಮ್ಮ ಸಂಗಡ ಕಳುಹಿಸಿಕೊಡು ಮತ್ತು ಅವರಿಗೆ ಹಿಂಸೆ ಕೊಡಬೇಡ. ನಾವು ನಿನ್ನಲ್ಲಿಗೆ ನಿನ್ನ ಪ್ರಭುವಿನ ಕಡೆಯ ನಿದರ್ಶನದೊಂದಿಗೆ ಬಂದಿರುತ್ತೇವೆ ಮತ್ತು ಸನ್ಮಾರ್ಗವನ್ನು ಹಿಂಬಾಲಿಸಿದವನ ಮೇಲೆ ಶಾಂತಿಯಿರುವುದು.
የአረብኛ ቁርኣን ማብራሪያ:
اِنَّا قَدْ اُوْحِیَ اِلَیْنَاۤ اَنَّ الْعَذَابَ عَلٰی مَنْ كَذَّبَ وَتَوَلّٰی ۟
ಸುಳ್ಳಾಗಿಸಿದವನಿಗೂ ಹಾಗೂ ವಿಮುಖನಾದವನಿಗೂ ಶಿಕ್ಷೆಯಿರುವುದೆಂದು ನಮ್ಮೆಡೆಗೆ ದಿವ್ಯವಾಣಿ ಮಾಡಲಾಗಿದೆ.
የአረብኛ ቁርኣን ማብራሪያ:
قَالَ فَمَنْ رَّبُّكُمَا یٰمُوْسٰی ۟
ಫಿರ್‌ಔನ್ ಹೇಳಿದನು: ಓ ಮೂಸಾ, ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು?
የአረብኛ ቁርኣን ማብራሪያ:
قَالَ رَبُّنَا الَّذِیْۤ اَعْطٰی كُلَّ شَیْءٍ خَلْقَهٗ ثُمَّ هَدٰی ۟
ಆಗ ಅವರು ಉತ್ತರಿಸಿದರು: ಪ್ರತಿಯೊಂದು ವಸ್ತುವಿಗೂ ಅದರ ಪ್ರತ್ಯೇಕ ಸ್ವರೂಪವನ್ನೂ ದಯಪಾಲಿಸಿದವನು ಹಾಗೂ ಮಾರ್ಗ ತೋರಿದವನು ನಮ್ಮ ಪ್ರಭು.
የአረብኛ ቁርኣን ማብራሪያ:
قَالَ فَمَا بَالُ الْقُرُوْنِ الْاُوْلٰی ۟
ಅವನು ಕೇಳಿದನು: ಸರಿ, ಗತ (ಬಹುದೇವಾರಾಧಕ) ಪೀಳಿಗೆಗಳ ಸ್ಥಿತಿಯೇನಾಗುವುದು?
የአረብኛ ቁርኣን ማብራሪያ:
 
የይዘት ትርጉም ምዕራፍ: ጣሃ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት