Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አልን ኑር   አንቀጽ:
اِنَّ الَّذِیْنَ جَآءُوْ بِالْاِفْكِ عُصْبَةٌ مِّنْكُمْ ؕ— لَا تَحْسَبُوْهُ شَرًّا لَّكُمْ ؕ— بَلْ هُوَ خَیْرٌ لَّكُمْ ؕ— لِكُلِّ امْرِئٍ مِّنْهُمْ مَّا اكْتَسَبَ مِنَ الْاِثْمِ ۚ— وَالَّذِیْ تَوَلّٰی كِبْرَهٗ مِنْهُمْ لَهٗ عَذَابٌ عَظِیْمٌ ۟
ಈ ಮಹಾ ಸುಳ್ಳಾರೋಪವನ್ನು ಹೊರಿಸಿದವರು ನಿಮ್ಮ ಪೈಕಿಯ ಒಂದು ಕೂಟದವರಾಗಿದ್ದಾರೆ. ನೀವು ಅದನ್ನು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸದಿರಿ. ಬದಲಾಗಿ!ಅದು ನಿಮ್ಮ ಪಾಲಿಗೆ ಹಿತಕರವಾಗಿರುತ್ತದೆ.ಅವರ ಪೈಕಿ ಪ್ರತಿಯೊಬ್ಬರಿಗೂ ತಾನು ಗಳಿಸಿದಷ್ಟು ಪಾಪವಿರುವುದು ಮತ್ತು ಅದರ ಮುಖ್ಯ ಪಾತ್ರ ವಹಿಸಿಕೊಂಡವನಿಗೆ ಅತ್ಯಂತ ದೊಡ್ಡ ಯಾತನೆಯಿರುವುದು.
የአረብኛ ቁርኣን ማብራሪያ:
لَوْلَاۤ اِذْ سَمِعْتُمُوْهُ ظَنَّ الْمُؤْمِنُوْنَ وَالْمُؤْمِنٰتُ بِاَنْفُسِهِمْ خَیْرًا ۙ— وَّقَالُوْا هٰذَاۤ اِفْكٌ مُّبِیْنٌ ۟
ನೀವಿದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತಿçà ಪುರುಷರು ತಮ್ಮ ಕುರಿತು ಉತ್ತಮ ಭಾವನೆಯನ್ನು ಏಕೆ ಹೊಂದಲಿಲ್ಲ? ಮತ್ತು ಇದೊಂದು ಸುಸ್ಪಷ್ಟ ಸುಳ್ಳಾರೋಪವಾಗಿದೆಯೆಂದು ಯಾಕೆ ಹೇಳಲಿಲ್ಲ?
የአረብኛ ቁርኣን ማብራሪያ:
لَوْلَا جَآءُوْ عَلَیْهِ بِاَرْبَعَةِ شُهَدَآءَ ۚ— فَاِذْ لَمْ یَاْتُوْا بِالشُّهَدَآءِ فَاُولٰٓىِٕكَ عِنْدَ اللّٰهِ هُمُ الْكٰذِبُوْنَ ۟
ಅವರು ಈ ವಿಚಾರದಲ್ಲಿ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಮತ್ತು ಅವರು ಸಾಕ್ಷಿಗಳನ್ನು ತರದಿದ್ದ ಕಾರಣ ಅವರೇ ಅಲ್ಲಾಹನ ಬಳಿ ಸುಳ್ಳುಗಾರರಾಗಿದ್ದಾರೆ.
የአረብኛ ቁርኣን ማብራሪያ:
وَلَوْلَا فَضْلُ اللّٰهِ عَلَیْكُمْ وَرَحْمَتُهٗ فِی الدُّنْیَا وَالْاٰخِرَةِ لَمَسَّكُمْ فِیْ مَاۤ اَفَضْتُمْ فِیْهِ عَذَابٌ عَظِیْمٌ ۟ۚ
ಅಲ್ಲಾಹನ ಅನುಗ್ರಹ ಮತ್ತು ಅವನ ಕೃಪೆಯು ನಿಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಇಲ್ಲದಿರುತ್ತಿದ್ದರೆ ನೀವು ಯಾವ ವಿಚಾರದ ಚರ್ಚೆಯಲ್ಲಿ ತೊಡಗಿದ್ದೀರೋ ಅದರ ನಿಮಿತ್ತ ಖಂಡಿತ ನಿಮಗೆ ಮಹಾಯಾತನೆಯೊಂದು ಬಾಧಿಸುತ್ತಿತ್ತು.
የአረብኛ ቁርኣን ማብራሪያ:
اِذْ تَلَقَّوْنَهٗ بِاَلْسِنَتِكُمْ وَتَقُوْلُوْنَ بِاَفْوَاهِكُمْ مَّا لَیْسَ لَكُمْ بِهٖ عِلْمٌ وَّتَحْسَبُوْنَهٗ هَیِّنًا ۖۗ— وَّهُوَ عِنْدَ اللّٰهِ عَظِیْمٌ ۟
ನೀವು ನಿಮ್ಮ ನಾಲಗೆಗಳ ಮೂಲಕ ಅದನ್ನು ಸಾಗಿಸುತ್ತಿದ್ದಾಗ ಹಾಗೂ ನಿಮಗೆ ಜ್ಞಾನವಿಲ್ಲದ ವಿಚಾರವನ್ನು ನಿಮ್ಮ ಬಾಯಿಯಿಂದ ಹೇಳಿಕೊಳ್ಳುತ್ತಿದ್ದಾಗ. ನೀವು ಅದನ್ನು ಕ್ಷÄಲ್ಲಕವೆಂದು ಭಾವಿಸಿಕೊಂಡಿದ್ದಿರಿ. ಆದರೆ ಅದು ಅಲ್ಲಾಹನ ಬಳಿ ಮಹಾ ಗಂಭೀರ ವಿಷಯವಾಗಿತ್ತು.
የአረብኛ ቁርኣን ማብራሪያ:
وَلَوْلَاۤ اِذْ سَمِعْتُمُوْهُ قُلْتُمْ مَّا یَكُوْنُ لَنَاۤ اَنْ نَّتَكَلَّمَ بِهٰذَا ۖۗ— سُبْحٰنَكَ هٰذَا بُهْتَانٌ عَظِیْمٌ ۟
ನೀವು ಇದನ್ನು ಕೇಳಿದಾಗ “ನಮಗೆ ಇಂತಹ ವಿಚಾರವನ್ನು ಹೇಳುವುದು ಭೂಷಣವಲ್ಲ”. ಅಲ್ಲಾಹನೇ, ನೀನು ಪಾವನನು. ಇದೊಂದು ಘೋರ ಅಪವಾದವಾಗಿದೆಯೆಂದು ಯಾಕೆ ಹೇಳಲಿಲ್ಲ?
የአረብኛ ቁርኣን ማብራሪያ:
یَعِظُكُمُ اللّٰهُ اَنْ تَعُوْدُوْا لِمِثْلِهٖۤ اَبَدًا اِنْ كُنْتُمْ مُّؤْمِنِیْنَ ۟ۚ
ಸತ್ಯವಿಶ್ವಾಸಿಗಳಾಗಿದ್ದರೆ ಪುನಃ ಎಂದೂ ನೀವು ಇಂತಹ ಕಾರ್ಯವೆಸಗಬಾರದೆಂದು ಅಲ್ಲಾಹನು ನಿಮಗೆ ಉಪದೇಶ ನೀಡುತ್ತಾನೆ.
የአረብኛ ቁርኣን ማብራሪያ:
وَیُبَیِّنُ اللّٰهُ لَكُمُ الْاٰیٰتِ ؕ— وَاللّٰهُ عَلِیْمٌ حَكِیْمٌ ۟
ಅಲ್ಲಾಹನು ತನ್ನ ಸೂಕ್ತಿಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿದ್ದಾನೆ.
የአረብኛ ቁርኣን ማብራሪያ:
اِنَّ الَّذِیْنَ یُحِبُّوْنَ اَنْ تَشِیْعَ الْفَاحِشَةُ فِی الَّذِیْنَ اٰمَنُوْا لَهُمْ عَذَابٌ اَلِیْمٌ ۙ— فِی الدُّنْیَا وَالْاٰخِرَةِ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟
ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲತೆಯನ್ನು ಹರಡಲು ಬಯಸುವವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕ ಯಾತನೆಯಿದೆ ಮತ್ತು ಅಲ್ಲಾಹನು ಅರಿಯುತ್ತಾನೆ. ನೀವು ಅರಿಯುವುದಿಲ್ಲ.
የአረብኛ ቁርኣን ማብራሪያ:
وَلَوْلَا فَضْلُ اللّٰهِ عَلَیْكُمْ وَرَحْمَتُهٗ وَاَنَّ اللّٰهَ رَءُوْفٌ رَّحِیْمٌ ۟۠
ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆಯು ಇಲ್ಲದಿರುತ್ತಿದ್ದರೆ ಹಾಗೂ ಅಲ್ಲಾಹನು ಕೃಪಾಳುವು ಕರುಣಾನಿಧಿಯು ಆಗಿಲ್ಲದಿರುತ್ತಿದ್ದರೆ (ನಿಮ್ಮ ಮೇಲೆ ಶಿಕ್ಷೆ ಎರಗಿಬಿಡುತ್ತಿತ್ತು).
የአረብኛ ቁርኣን ማብራሪያ:
 
የይዘት ትርጉም ምዕራፍ: አልን ኑር
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተረጎመዋል በሸይኽ ባሺር ሜሶሪ። ዝግጅቱ የተጠናቀቀው በረዋድ የትርጉም ማዕከል ቁጥጥር ስር ነው።

መዝጋት