Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: ሙሀመድ   አንቀጽ:
وَلَوْ نَشَآءُ لَاَرَیْنٰكَهُمْ فَلَعَرَفْتَهُمْ بِسِیْمٰهُمْ ؕ— وَلَتَعْرِفَنَّهُمْ فِیْ لَحْنِ الْقَوْلِ ؕ— وَاللّٰهُ یَعْلَمُ اَعْمَالَكُمْ ۟
ಮತ್ತು ನಾವಿಚ್ಛಿಸಿರುತ್ತಿದ್ದರೆ ಅವರೆಲ್ಲರನ್ನೂ ನಿನಗೆ ತೋರಿಸಿಕೊಡುತ್ತಿದ್ದೆವು. ಆಗ ನೀವು ಅವರನ್ನು ಅವರ ಮುಖ ಲಕ್ಷಣಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಿರಿ ಹಾಗು ಖಂಡಿತ ನೀವು ಅವರನ್ನು ಅವರ ಮಾತಿನ ಶೈಲಿಯಿಂದಲೇ ಗುರುತಿಸಿಕೊಳ್ಳುವಿರಿ, ಅಲ್ಲಾಹನು ನಿಮ್ಮ ಸಕಲ ಕರ್ಮಗಳನ್ನು ಚೆನ್ನಾಗಿ ಬಲ್ಲನು.
የአረብኛ ቁርኣን ማብራሪያ:
وَلَنَبْلُوَنَّكُمْ حَتّٰی نَعْلَمَ الْمُجٰهِدِیْنَ مِنْكُمْ وَالصّٰبِرِیْنَ ۙ— وَنَبْلُوَاۡ اَخْبَارَكُمْ ۟
ನಿಮ್ಮಲ್ಲಿ ಹೋರಾಡುವವರು ಸಹನಾಶೀಲರು ಯಾರೆಂದು ತಿಳಿಯುವ ತನಕ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸಲಿದ್ದೇವೆ ಮತ್ತು ನಾವು ನಿಮ್ಮ ಸ್ಥಿತಿಗತಿಗಳನ್ನೂ ಪರೀಕ್ಷಿಸುವೆವು.
የአረብኛ ቁርኣን ማብራሪያ:
اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ وَشَآقُّوا الرَّسُوْلَ مِنْ بَعْدِ مَا تَبَیَّنَ لَهُمُ الْهُدٰی ۙ— لَنْ یَّضُرُّوا اللّٰهَ شَیْـًٔا ؕ— وَسَیُحْبِطُ اَعْمَالَهُمْ ۟
ನಿಶ್ಚಯವಾಗಿಯೂ ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದು ಅನಂತರ ಸಂದೇಶವಾಹಕರನ್ನು ವಿರೋಧಿಸಿದವರಾರೋ ಅವರು ಅಲ್ಲಾಹನಿಗೆ ಸ್ವಲ್ಪವೂ ಹಾನಿಯನ್ನುಂಟು ಮಾಡಲಾರರು. ಸದ್ಯದಲ್ಲೇ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸುವನು.
የአረብኛ ቁርኣን ማብራሪያ:
یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَاَطِیْعُوا الرَّسُوْلَ وَلَا تُبْطِلُوْۤا اَعْمَالَكُمْ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗು ಸಂದೇಶವಾಹಕರನ್ನು ಅನುಸರಿಸಿರಿ, ಮತ್ತು ನಿಮ್ಮ ಕರ್ಮಗಳನ್ನು ವ್ಯರ್ಥಗೊಳಿಸಬೇಡಿರಿ.
የአረብኛ ቁርኣን ማብራሪያ:
اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ ثُمَّ مَاتُوْا وَهُمْ كُفَّارٌ فَلَنْ یَّغْفِرَ اللّٰهُ لَهُمْ ۟
ಸತ್ಯನಿಷೇಧಿಸಿ ಅಲ್ಲಾಹನ ಮಾರ್ಗದಿಂದ ತಡೆದು ಅನಂತರ ಸತ್ಯನಿಷೇಧಿಗಳಾಗಿದ್ದ ಪರಿಸ್ಥತಿಯಲ್ಲೇ ಮರಣಹೊಂದಿದವರಿಗೆ ಅಲ್ಲಾಹನು ಎಂದಿಗೂ ಕ್ಷಮಿಸುವುದಿಲ್ಲ.
የአረብኛ ቁርኣን ማብራሪያ:
فَلَا تَهِنُوْا وَتَدْعُوْۤا اِلَی السَّلْمِ ۖۗ— وَاَنْتُمُ الْاَعْلَوْنَ ۖۗ— وَاللّٰهُ مَعَكُمْ وَلَنْ یَّتِرَكُمْ اَعْمَالَكُمْ ۟
ಆದ್ದರಿಂದ (ಓ ಸತ್ಯವಿಶ್ವಾಸಿಗಳೇ) ನೀವು ಬಲಹೀನರಾಗಬೇಡಿರಿ, ಮತ್ತು ಸಂಧಾನದ ಬೇಡಿಕೆಯನ್ನಿಡಬೇಡಿರಿ, ವಸ್ತುತಃ ನೀವೇ ವಿಜಯಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಜೊತೆಯಲ್ಲಿದ್ದಾನೆ, ಅವನು ನಿಮ್ಮ ಕರ್ಮಗಳನ್ನು ಖಂಡಿತ ಕಡಿತಗೊಳಿಸುವುದಿಲ್ಲ.
የአረብኛ ቁርኣን ማብራሪያ:
اِنَّمَا الْحَیٰوةُ الدُّنْیَا لَعِبٌ وَّلَهْوٌ ؕ— وَاِنْ تُؤْمِنُوْا وَتَتَّقُوْا یُؤْتِكُمْ اُجُوْرَكُمْ وَلَا یَسْـَٔلْكُمْ اَمْوَالَكُمْ ۟
ವಾಸ್ತವದಲ್ಲಿ ಇಹಲೋಕದ ಜೀವನವು ಆಟ-ವಿನೋದ ಮಾತ್ರವಾಗಿದೆ. ನೀವು ವಿಶ್ವಾಸವಿರಿಸಿದರೆ ಹಾಗು ಭಯಭಕ್ತಿಯನ್ನು ಹೊಂದಿದರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ಕರುಣಿಸುವನು. ಅವನು ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳುವುದಿಲ್ಲ.
የአረብኛ ቁርኣን ማብራሪያ:
اِنْ یَّسْـَٔلْكُمُوْهَا فَیُحْفِكُمْ تَبْخَلُوْا وَیُخْرِجْ اَضْغَانَكُمْ ۟
ಅವನು ನಿಮ್ಮಿಂದ ಸಂಪತ್ತನ್ನು ಕೇಳಿ ಒತ್ತಾಯ ಮಾಡುತ್ತಿದ್ದರೆ ಆಗ ನೀವು ಜಿಪುಣತೆ ತೋರುತ್ತಿದ್ದಿರಿ ಮತ್ತು ಅವನು ನಿಮ್ಮ ದ್ವೇಷವನ್ನು ಹೊರತರುತ್ತಿದ್ದನು.
የአረብኛ ቁርኣን ማብራሪያ:
هٰۤاَنْتُمْ هٰۤؤُلَآءِ تُدْعَوْنَ لِتُنْفِقُوْا فِیْ سَبِیْلِ اللّٰهِ ۚ— فَمِنْكُمْ مَّنْ یَّبْخَلُ ۚ— وَمَنْ یَّبْخَلْ فَاِنَّمَا یَبْخَلُ عَنْ نَّفْسِهٖ ؕ— وَاللّٰهُ الْغَنِیُّ وَاَنْتُمُ الْفُقَرَآءُ ۚ— وَاِنْ تَتَوَلَّوْا یَسْتَبْدِلْ قَوْمًا غَیْرَكُمْ ۙ— ثُمَّ لَا یَكُوْنُوْۤا اَمْثَالَكُمْ ۟۠
ತಿಳಿದುಕೊಳ್ಳಿರಿ! ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಸಲುವಾಗಿ ನಿಮ್ಮನ್ನು ಕರೆಯಲಾರದೆ ನಿಮ್ಮಲ್ಲಿ ಕೆಲವರು ಜಿಪುಣತೆ ತೋರತೊಡಗುತ್ತಾರೆ ಮತ್ತು ಯಾರು ಜಿಪುಣತೆ ತೋರುತ್ತಾನೋ ವಾಸ್ತವದಲ್ಲಿ ಅವನು ತನ್ನೊಂದಿಗೆ ಜಿಪುಣತೆ ತೋರುತ್ತಿದ್ದಾನೆ. ಅಲ್ಲಾಹನು ನಿರಪೇಕ್ಷÀನು ಮತ್ತು ನೀವೇ ಅವನ ಅವಲಂಬಿತರು. ಇನ್ನು ನೀವು ವಿಮುಖರಾಗಿಬಿಟ್ಟರೆ ಅವನು ನಿಮ್ಮ ಹೊರತು ಬೇರೊಂದು ಜನಾಂಗವನ್ನು ತರುವನು , ಅವರು ನಿಮ್ಮಂತೆ ಆಗಲಾರರು.
የአረብኛ ቁርኣን ማብራሪያ:
 
የይዘት ትርጉም ምዕራፍ: ሙሀመድ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተረጎመዋል በሸይኽ ባሺር ሜሶሪ። ዝግጅቱ የተጠናቀቀው በረዋድ የትርጉም ማዕከል ቁጥጥር ስር ነው።

መዝጋት