Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አት-ተውባህ   አንቀጽ:
وَالَّذِیْنَ اتَّخَذُوْا مَسْجِدًا ضِرَارًا وَّكُفْرًا وَّتَفْرِیْقًا بَیْنَ الْمُؤْمِنِیْنَ وَاِرْصَادًا لِّمَنْ حَارَبَ اللّٰهَ وَرَسُوْلَهٗ مِنْ قَبْلُ ؕ— وَلَیَحْلِفُنَّ اِنْ اَرَدْنَاۤ اِلَّا الْحُسْنٰی ؕ— وَاللّٰهُ یَشْهَدُ اِنَّهُمْ لَكٰذِبُوْنَ ۟
ಮತ್ತು (ಸತ್ಯವಿಶ್ವಾಸಿಗಳಿಗೆ) ಕೇಡು ಬಗೆಯುವ ಉದ್ದೇಶದಿಂದಲೂ, ಸತ್ಯನಿಷೇಧವನ್ನು ಬಲಪಡಿಸುವ ಉದ್ದೇಶದಿಂದಲೂ, ಸತ್ಯವಿಶ್ವಾಸಿಗಳ ನಡುವೆ ಭಿನ್ನತೆಯನ್ನುಂಟು ಮಾಡುವ ಉದ್ದೇಶದಿಂದಲೂ ಮತ್ತು ಅಲ್ಲಾಹನ ಹಾಗೂ ಅವನ ಸಂದೇಶವಾಹಕರಿಗೆ ವಿರೋಧಿಯಾಗಿ ಈ ಮೊದಲಿನಿಂದಲೇ ಹೋರಾಡುತ್ತಾ ಬಂದಿರುವ ವ್ಯಕ್ತಿಯೊಬ್ಬನಿಗೆ ಹೊಂಚು ತಾಣವನ್ನಾಗಿಡುವ ಉದ್ದೇಶದಿಂದಲೂ ಮಸೀದಿಯೊಂದನ್ನು ನಿರ್ಮಿಸಿದವರು ಸಹ ಆ ಕಪಟ ವಿಶ್ವಾಸಿಗಳ ಪೈಕಿಯಲ್ಲಿದ್ದಾರೆ. ಮತ್ತು ಅವರು ಒಳಿತಿನ ಹೊರತು ಇನ್ನಾವುದೇ ಉದ್ದೇಶ ನಮಗಿರಲಿಲ್ಲ ಎಂದು ಆಣೆಯಿಟ್ಟು ಹೇಳುವರು. ಅವರು ಸಂಪೂರ್ಣ ಸುಳ್ಳುಗಾರರಾಗಿದ್ದಾರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
የአረብኛ ቁርኣን ማብራሪያ:
لَا تَقُمْ فِیْهِ اَبَدًا ؕ— لَمَسْجِدٌ اُسِّسَ عَلَی التَّقْوٰی مِنْ اَوَّلِ یَوْمٍ اَحَقُّ اَنْ تَقُوْمَ فِیْهِ ؕ— فِیْهِ رِجَالٌ یُّحِبُّوْنَ اَنْ یَّتَطَهَّرُوْا ؕ— وَاللّٰهُ یُحِبُّ الْمُطَّهِّرِیْنَ ۟
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.
የአረብኛ ቁርኣን ማብራሪያ:
اَفَمَنْ اَسَّسَ بُنْیَانَهٗ عَلٰی تَقْوٰی مِنَ اللّٰهِ وَرِضْوَانٍ خَیْرٌ اَمْ مَّنْ اَسَّسَ بُنْیَانَهٗ عَلٰی شَفَا جُرُفٍ هَارٍ فَانْهَارَ بِهٖ فِیْ نَارِ جَهَنَّمَ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟
ಅನಂತರ ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯಭಕ್ತಿ ಮತ್ತು ಅವನ ಸಂತೃಪ್ತಿಯ ಮೇಲೆ ನಿರ್ಮಿಸುವವನು ಉತ್ತಮನೋ ಅಥವಾ ಕಟ್ಟಡವನ್ನು ಯಾವುದಾದರೂ ಕುಸಿದುಬೀಳಲಿಕ್ಕಿರುವ ಅಸ್ಥಿರ ಅಂಚಿನಲ್ಲಿ ನಿರ್ಮಿಸಿ ಕೊನೆಗೆ ಅದರೊಂದಿಗೆ ನರಕಾಗ್ನಿಯಲ್ಲಿ ಬೀಳುವವನೋ? ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗವನ್ನು ತೋರಲಾರನು.
የአረብኛ ቁርኣን ማብራሪያ:
لَا یَزَالُ بُنْیَانُهُمُ الَّذِیْ بَنَوْا رِیْبَةً فِیْ قُلُوْبِهِمْ اِلَّاۤ اَنْ تَقَطَّعَ قُلُوْبُهُمْ ؕ— وَاللّٰهُ عَلِیْمٌ حَكِیْمٌ ۟۠
ಅವರ ಹೃದಯಗಳು ನುಚ್ಚು ನೂರಾಗುವವರೆಗೂ ಅವರು ನಿರ್ಮಿಸಿದಂತಹ ಈ ಕಟ್ಟಡವು (ಮಸೀದಿ) ಅವರ ಹೃದಯಗಳಲ್ಲಿ ಸದಾ ಸಂಶಯ ಮೂಲವಾಗಿ ಉಳಿಯುವುದು. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
የአረብኛ ቁርኣን ማብራሪያ:
اِنَّ اللّٰهَ اشْتَرٰی مِنَ الْمُؤْمِنِیْنَ اَنْفُسَهُمْ وَاَمْوَالَهُمْ بِاَنَّ لَهُمُ الْجَنَّةَ ؕ— یُقَاتِلُوْنَ فِیْ سَبِیْلِ اللّٰهِ فَیَقْتُلُوْنَ وَیُقْتَلُوْنَ ۫— وَعْدًا عَلَیْهِ حَقًّا فِی التَّوْرٰىةِ وَالْاِنْجِیْلِ وَالْقُرْاٰنِ ؕ— وَمَنْ اَوْفٰی بِعَهْدِهٖ مِنَ اللّٰهِ فَاسْتَبْشِرُوْا بِبَیْعِكُمُ الَّذِیْ بَایَعْتُمْ بِهٖ ؕ— وَذٰلِكَ هُوَ الْفَوْزُ الْعَظِیْمُ ۟
ನಿಸ್ಸಂಶಯವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ ಜೀವಗಳನ್ನೂ, ಅವರ ಸಂಪತ್ತುಗಳನ್ನೂ ಅವರಿಗೆ ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಅದರಲ್ಲಿ ಅವರು ಕೊಲ್ಲುತ್ತಾರೆ ಮತ್ತು ಕೊಲ್ಲಲ್ಪಡುತ್ತಾರೆ. ಈ ಬಗ್ಗೆ ತೌರಾತ್‌ನಲ್ಲೂ, ಇಂಜೀಲ್‌ನಲ್ಲೂ ಮತ್ತು ಕುರ್‌ಆನ್‌ನಲ್ಲೂ ಸತ್ಯವಾದ ವಾಗ್ದಾನ ನೀಡಲಾಗಿದೆ ಮತ್ತು ಅಲ್ಲಾಹನಿಗಿಂತ ಹೆಚ್ಚು ತನ್ನ ವಾಗ್ದಾನವನ್ನು ಈಡೇರಿಸುವವನು ಇನ್ನಾರಿದ್ದಾನೆ? ಆದ್ದರಿಂದ ನೀವು ಆತನೊಂದಿಗೆ ಮಾಡಿದ ಈ ವ್ಯವಹಾರದ ವಿಚಾರವಾಗಿ ಸಂತೋಷಪಡಿರಿ ಮತ್ತು ಇದು ಮಹಾ ಯಶಸ್ಸಾಗಿದೆ.
የአረብኛ ቁርኣን ማብራሪያ:
 
የይዘት ትርጉም ምዕራፍ: አት-ተውባህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት