ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.