ನಾವು ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದು ತನ್ನ ದಾಸನನ್ನು (ಮುಹಮ್ಮದ್) ರಾತ್ರೋ ರಾತ್ರಿ ಮಸ್ಜಿದುಲ್ ಹರಾಮ್‌ನಿಂದ ನಾವು ಅದರ ಪರಿಸರವನ್ನು ಸಮೃದ್ಧಗೊಳಿಸಿರುವಂತಹ ಮಸ್ಜಿದುಲ್ ಅಕ್ಸಾದೆಡೆಗೆ ಕರೆದುಕೊಂಡು ಹೋದವನು (ಅಲ್ಲಾಹ್), ಪರಮ ಪಾವನನು ನಿಶ್ಚಯವಾಗಿಯೂ ಅಲ್ಲಾಹನು ಚೆನ್ನಾಗಿ ಆಲಿಸುವವನು, ಚೆನ್ನಾಗಿ ಹೇಳುವವನು ಆಗಿದ್ದಾನೆ.
ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು ಮತ್ತು ನನ್ನ ಹೊರತು ಯಾರನ್ನೂ ಕಾರ್ಯಸಾಧಕನನ್ನಾಗಿ ಮಾಡಬಾರದೆಂಬ ಆಜ್ಞೆಯೊಂದಿಗೆ ನಾವು ಅದನ್ನು ಇಸ್ರಾಯೀಲ್ ಸಂತತಿಗಳೆಡೆಗೆ ಮಾರ್ಗದರ್ಶನವನ್ನಾಗಿ ಮಾಡಿದೆವು.
ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್)ಗ್ರಂಥದಲ್ಲಿ. ನೀವು ಭೂಮಿಯಲ್ಲಿ ಎರಡು ಬಾರಿ ಕ್ಷೆÆÃಭೆ ಹರಡಲಿದ್ದೀರಿ ಮತ್ತು ಮಹಾ ಅತಿಕ್ರಮಗಳನ್ನು ಎಸಗುವಿರಿ ಎಂದು ವಿಧಿಸಿದ್ದೇವು. (ಎಚ್ಚರಿಸಿದ್ದೆವು)
ಅವೆರಡು ವಾಗ್ದಾನಗಳ ಪೈಕಿ ಮೊದಲನೆಯದು ಬರುತ್ತಲೇ ನಾವು ನಿಮ್ಮ ವಿರುದ್ಧ ಮಹಾ ರಣಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮ ಮನೆಗಳೊಳಗೆ ನುಗ್ಗಿದರು ಮತ್ತು ಅಲ್ಲಾಹನ ಈ ವಾಗ್ದಾನವು ಪೂರ್ತಿಯಾಗಲೇ ಬೇಕಿತ್ತು.
ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯದ ಸರದಿಯನ್ನು ಮರುಕಳಿಸಿಕೊಟ್ಟೆವು ಮತ್ತು ಸಂಪತ್ತು, ಸಂತಾನಗಳ ಮೂಲಕ ನಿಮಗೆ ಸಹಾಯವನ್ನು ನೀಡಿದೆವು ಹಾಗೂ ನಾವು ನಿಮ್ಮನ್ನು ಸಂಖ್ಯಾ ಬಲವುಳ್ಳವರನ್ನಾಗಿ ಮಾಡಿದೆವು.
ನೀವು ಒಳಿತು ಮಾಡುವುದಾದರೆ ಸ್ವತಃ ನಿಮಗಾಗಿಯೇ ಒಳಿತು ಮಾಡುವಿರಿ ಮತ್ತು ನೀವು ಕೆಡುಕು ಮಾಡುವುದಾದರೆ ಸ್ವತಃ ಅದು ನಿಮಗಾಗಿಯೇ ಇರುವುದು. ಅನಂತರ ಮತ್ತೊಂದು ವಾಗ್ದಾನದ ಸಮಯ ಬಂದಾಗ ನಿಮ್ಮ ಮುಖಗಳನ್ನು ವಿರೂಪಗೊಳಿಸಲೆಂದೂ, ಮೊದಲ ಬಾರಿಯಂತೆಯೇ ಪುನಃ ಆ ಮಸೀದಿಗೆ ನುಗ್ಗಲೆಂದೂ ಹಾಗೂ ಅವರು ನಿಯಂತ್ರಣ ಸಾಧಿಸಿದೆಲ್ಲವನ್ನು, ಮೂಲೋತ್ಪಾಟನೆ ಮಾಡಲೆಂದೂ (ನಾವು ಬೇರೆ ದಾಸರನ್ನು) ಕಳುಹಿಸಿದೆವು.