ಹೇಳಿರಿ (ಓ ಪೈಗಂಬರರೆ) ಜಿಬ್ರೀಲ್‌ನ ಶತ್ರುವಾಗಿರುವವನಿಗೆ (ತಿಳಿದಿರಲಿ ಅವನಿಗೆ ವಿನಾಶವಿದೆ) ನಿಸ್ಸಂದೇಹವಾಗಿ ಇದನ್ನು (ಈ ಕುರ್‌ಆನನ್ನು) ಅವನು (ಜಿಬ್ರೀಲ್) ಅಲ್ಲಾಹನ ಆಜ್ಞೆಯ ಪ್ರಕಾರ ನಿಮ್ಮ ಹೃದಯದ ಮೇಲೆ ಇಳಿಸಿರುವನು. ಅದು, (ಕುರ್‌ಆನ್) ಇದಕ್ಕಿಂತ ಮುಂಚೆ ಅವತೀರ್ಣಗೊಂಡಿರುವ ದೈವಿಕ ಗ್ರಂಥಗಳನ್ನು ಧೃಢೀಕರಿಸುತ್ತದೆ. ಹಾಗೂ ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ದರ್ಶಕವೂ ಸುವಾರ್ತೆಯೂ ಆಗಿದೆ.