ಅವರ ಹೃದಯಗಳು ಅಲಕ್ಷö್ಯವಾಗಿವೆ. ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೆ? ನೀವು ಕಣ್ಣಾರೆ ಕಾಣುತ್ತಾ ಜಾದೂವಿಗೆ ಗುರಿಯಾಗುತ್ತಿರುವಿರಾ? ಎಂದು ಅಕ್ರಮಿಗಳು ರಹಸ್ಯವಾಗಿ ಸಮಾಲೋಚನೆಯನ್ನು ಮಾಡಿದರು.
ಆ ಅಕ್ರಮಿಗಳು ಹೀಗೂ ಹೇಳುತ್ತಾರೆ: ಇದು (ಕುರ್‌ಆನ್) ನಿರರ್ಥಕ ಕನಸುಗಳಾಗಿವೆ. ಹಾಗಲ್ಲ, ಅವನು ಇದನ್ನು ಸ್ವತಃ ರಚಿಸಿದ್ದಾನೆ. ಇಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಅನ್ಯಥಾ ಅವನು ಹಿಂದಿನ ಪೈಗಂಬರರು ದೃಷ್ಟಾಂತಗಳೊAದಿಗೆ ಕಳುಹಿಸಲ್ಪಟ್ಟಂತೇ ಇವನು ನಮ್ಮಲ್ಲಿಗೂ ಒಂದು ದೃಷ್ಟಾಂತವನ್ನು ತರಲಿ.
ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮದೇ ಪ್ರಾಸ್ತಾವವಿರುವಂತಹ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉದ್ಬೋಧವಿದೆ. ಹಾಗಿದ್ದೂ ನೀವು ವಿವೇಚಿಸಿಕೊಳ್ಳುವುದಿಲ್ಲವೇ?