ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.