ಮೂಸಾ ತನ್ನ ಮನೆಯವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಾನೊಂದು ಬೆಂಕಿಯನ್ನು ಕಂಡಿರುವೆನು. ನಾನು ಅಲ್ಲಿಂದೇನಾದರೂ ನಿಮಗೆ ಸುದ್ದಿಯನ್ನು ತರುವೆನು ಇಲ್ಲವೇ ಪ್ರಜ್ವಲಿಸುವ ಬೆಂಕಿಕೆAಡವನ್ನು ತರುವೆನು. ನೀವು ಚಳಿಕಾಯಿಸಿಕೊಳ ್ಳಬಹುದು.
ಅವರು ಅಲ್ಲಿಗೆ ತಲುಪಿದಾಗ ಕರೆಕೊಡಲಾಯಿತು: “ಈ ಅಗ್ನಿಯಲ್ಲಿರುವವನು ಮಹಾಮಂಗಳಮಯನಾಗಿರುವನು ಮತ್ತು ಇದರ ಸುತ್ತಮುತ್ತಲಲ್ಲಿರುವವರು ಸಹ ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಪರಮ ಪಾವನನು.
ಮತ್ತು ನಿಮ್ಮ ಲಾಠಿಯನ್ನು ಕೆಳಗೆ ಹಾಕಿಬಿಡಿ. ಅವರು ಅದನ್ನು (ಹಾಕಿದಾಗ) ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಬೆನ್ನು ತಿರುಗಿಸಿ ಓಟಕಿತ್ತರು ಹಾಗೂ ತಿರುಗಿ ನೋಡಲಿಲ್ಲ. ಓ ಮೂಸಾ ನೀವು ಭಯಪಡದಿರಿ. ನಿಶ್ಚಯವಾಗಿಯು ಸಂದೇಶವಾಹಕರು ನನ್ನ ಸನ್ನಿಧಿಯಲ್ಲಿ ಭಯಪಡುವುದಿಲ್ಲ.
ನಿನ್ನ ಕೈಯನ್ನು ನಿನ್ನ ಜೇಬಿನೊಳಗೆ ಹಾಕು. ಅದು ಯಾವುದೇ ಲೋಪವಿಲ್ಲದೆ ಬೆಳ್ಳಗಾಗಿ ಮಿಂಚುತ್ತ ಹೊರಬರುವುದು. ನೀನು ಒಂಬತ್ತು ದೃಷ್ಟಾಂತಗಳೊAದಿಗೆ ಫಿರ್‌ಔನ್ ಮತ್ತು ಅವನ ಜನಾಂಗದೆಡೆಗೆ ಹೋಗು. ನಿಜವಾಗಿಯು ಅವರು ದುಷ್ಕರ್ಮಿಗಳಾಗಿದ್ದಾರೆ.