ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳ ಒಡೆಯನಾದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ಮತ್ತು ಅವನಿಗೇ ಪರಲೋಕದಲ್ಲಿ ಸರ್ವಸ್ತುತಿಯು ಮೀಸಲಿರುವುದು. ಅವನು ಯುಕ್ತಿಪೂರ್ಣನೂ, ವಿವರಪೂರ್ಣನೂ ಆಗಿದ್ದಾನೆ.
ಭೂಮಿಯಲ್ಲಿ ಪ್ರವೇಶಿಸುವ ಮತ್ತು ಅದರಿಂದ ಹೊರಬರುವ, ಆಕಾಶದಿಂದ ಇಳಿಯುವ ಮತ್ತು ಅದರಲ್ಲಿ ಏರಿ ಹೋಗುವ ಎಲ್ಲವನ್ನೂ ಅವನು ಅರಿಯುತ್ತಾನೆ ಮತ್ತು ಅವನು ಕರುಣಾಮಯಿಯು, ಕ್ಷಮಾಶೀಲನೂ ಆಗಿದ್ದಾನೆ.
ಅಂತ್ಯಗಳಿಗೆ (ಪ್ರಳಯ) ನಮ್ಮಲ್ಲಿಗೆ ಬರಲಾರದು ಎಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ: ಅಲ್ಲ ಅಗೋಚರ ಜ್ಞಾನಿಯಾದ ನನ್ನ ಪ್ರಭುವಿನಾಣೆ! ಅದು ನಿಮ್ಮಲ್ಲಿಗೆ ಖಂಡಿತ ಬರುವುದು. ಅಲ್ಲಾಹನಿಂದ ಆಕಾಶಗಳಲ್ಲಾಗಲೀ ಭೂಮಿಯಲ್ಲಾಗಲೀ, ಅಣೂತೂಕದಷ್ಟಾದರೂ ಸರಿ ಮರೆಯಾಗಿರುವುದಿಲ್ಲ. ಮತ್ತು ಅದಕ್ಕಿಂತ ಚಿಕ್ಕದಿರಲಿ, ಇಲ್ಲವೇ ದೊಡ್ಡದಿರಲಿ ಎಲ್ಲವೂ ಸುಸ್ಪಷ್ಟ ದಾಖಲೆಯಲ್ಲಿದೆ.
(ಓ ಪೈಗಂಬರರೇ) ನಿಮ್ಮೆಡೆಗೆ ತಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದು ಸತ್ಯವಾಗಿದೆಯೆಂದು ಮತ್ತು ಇದು ಪ್ರಚಂಡನೂ ಸ್ತುತ್ಯರ್ಹನೂ ಆದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸುತ್ತದೆಂದು ಜ್ಞಾನ ನೀಡಲ್ಪಟ್ಟವರು ಮಾತ್ರ ತಿಳಿಯುತ್ತಾರೆ.