ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ.
ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ.