للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الطلاق   آية:
اَسْكِنُوْهُنَّ مِنْ حَیْثُ سَكَنْتُمْ مِّنْ وُّجْدِكُمْ وَلَا تُضَآرُّوْهُنَّ لِتُضَیِّقُوْا عَلَیْهِنَّ ؕ— وَاِنْ كُنَّ اُولَاتِ حَمْلٍ فَاَنْفِقُوْا عَلَیْهِنَّ حَتّٰی یَضَعْنَ حَمْلَهُنَّ ۚ— فَاِنْ اَرْضَعْنَ لَكُمْ فَاٰتُوْهُنَّ اُجُوْرَهُنَّ ۚ— وَاْتَمِرُوْا بَیْنَكُمْ بِمَعْرُوْفٍ ۚ— وَاِنْ تَعَاسَرْتُمْ فَسَتُرْضِعُ لَهٗۤ اُخْرٰی ۟ؕ
ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ‍್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ‍್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು.
التفاسير العربية:
لِیُنْفِقْ ذُوْ سَعَةٍ مِّنْ سَعَتِهٖ ؕ— وَمَنْ قُدِرَ عَلَیْهِ رِزْقُهٗ فَلْیُنْفِقْ مِمَّاۤ اٰتٰىهُ اللّٰهُ ؕ— لَا یُكَلِّفُ اللّٰهُ نَفْسًا اِلَّا مَاۤ اٰتٰىهَا ؕ— سَیَجْعَلُ اللّٰهُ بَعْدَ عُسْرٍ یُّسْرًا ۟۠
ಸ್ಥಿತಿವಂತನು ತನ್ನ ಸ್ಥಿತಿಗೆ ಅನುಗುಣವಾಗಿ ರ‍್ಚು ಮಾಡಲಿ ಮತ್ತು ಯಾರ ಜೀವನಾಧಾರವು ಪರಿಮಿತವಾಗಿದೆಯೋ ಅವನು ತನಗೆ ಅಲ್ಲಾಹನು ನೀಡಿರುವುದರಿಂದ ರ‍್ಚು ಮಾಡಲಿ. ಅಲ್ಲಾಹನು ಯಾವೊಬ್ಬ ವ್ಯಕ್ತಿಗೂ ಅವನಿಗೆ ನೀಡಿರುವುದುದಕ್ಕಿಂತ ಹೆಚ್ಚು ಭಾರವನ್ನು ಹೊರಿಸುವುದಿಲ್ಲ. ಸದ್ಯವೇ ಅಲ್ಲಾಹನು ಸಂಕಷ್ಟದ ಬಳಿಕ ಅನುಕೂಲತೆಯನ್ನು ಮಾಡಲಿರುವನು.
التفاسير العربية:
وَكَاَیِّنْ مِّنْ قَرْیَةٍ عَتَتْ عَنْ اَمْرِ رَبِّهَا وَرُسُلِهٖ فَحَاسَبْنٰهَا حِسَابًا شَدِیْدًا وَّعَذَّبْنٰهَا عَذَابًا نُّكْرًا ۟
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
التفاسير العربية:
فَذَاقَتْ وَبَالَ اَمْرِهَا وَكَانَ عَاقِبَةُ اَمْرِهَا خُسْرًا ۟
ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ ಆಗಿತ್ತು.
التفاسير العربية:
اَعَدَّ اللّٰهُ لَهُمْ عَذَابًا شَدِیْدًا ۙ— فَاتَّقُوا اللّٰهَ یٰۤاُولِی الْاَلْبَابِ— الَّذِیْنَ اٰمَنُوْا ۛۚ— قَدْ اَنْزَلَ اللّٰهُ اِلَیْكُمْ ذِكْرًا ۟ۙ
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ‍್ಣಗೊಳಿಸಿ ರುತ್ತಾನೆ.
التفاسير العربية:
رَّسُوْلًا یَّتْلُوْا عَلَیْكُمْ اٰیٰتِ اللّٰهِ مُبَیِّنٰتٍ لِّیُخْرِجَ الَّذِیْنَ اٰمَنُوْا وَعَمِلُوا الصّٰلِحٰتِ مِنَ الظُّلُمٰتِ اِلَی النُّوْرِ ؕ— وَمَنْ یُّؤْمِنْ بِاللّٰهِ وَیَعْمَلْ صَالِحًا یُّدْخِلْهُ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— قَدْ اَحْسَنَ اللّٰهُ لَهٗ رِزْقًا ۟
ಅಲ್ಲಾಹನ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲು ನಿಮಗೂ ಒಬ್ಬ ಸಂದೇಶವಾಹಕನನ್ನು ನಿಯೋಜಿಸಿದನು. ಇದು ಸತ್ಯ ವಿಶ್ವಾಸವಿರಿಸಿ, ಸತ್ರ‍್ಮಗಳನ್ನು ಕೈಗೊಂಡವರನ್ನು ಅವನು ಅಂಧಕಾರಗಳಿಂದ ಪ್ರಕಾಶದ ಕಡೆಗೆ ಹೊರತರಲೆಂದಾಗಿದೆ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮವನ್ನು ಕೈಗೊಳ್ಳುತ್ತಾನೋ ಅಲ್ಲಾಹನು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಅವರು ಅದರಲ್ಲಿ ಶಾಶ್ವತವಾಗಿರುವರು, ನಿಸ್ಸಂಶಯವಾಗಿಯೂ ಅಲ್ಲಾಹನು ಅವನಿಗೆ ಅತ್ಯುತ್ತಮ ಜೀವನಾಧಾರವನ್ನು ನೀಡಿರುವನು.
التفاسير العربية:
اَللّٰهُ الَّذِیْ خَلَقَ سَبْعَ سَمٰوٰتٍ وَّمِنَ الْاَرْضِ مِثْلَهُنَّ ؕ— یَتَنَزَّلُ الْاَمْرُ بَیْنَهُنَّ لِتَعْلَمُوْۤا اَنَّ اللّٰهَ عَلٰی كُلِّ شَیْءٍ قَدِیْرٌ ۙ— وَّاَنَّ اللّٰهَ قَدْ اَحَاطَ بِكُلِّ شَیْءٍ عِلْمًا ۟۠
ಅಲ್ಲಾಹನೆಂದರೆ ಏಳು ಆಕಾಶಗಳನ್ನು, ಅವುಗಳಷ್ಟೇ ಭೂಮಿಯನ್ನು ಸೃಷ್ಟಿಸಿದವನು. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತವೆ. ಇದೇಕೆಂದರೆ ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನೆಂದು ಮತ್ತು ತನ್ನ ಜ್ಞಾನದ ಮೂಲಕ ಸಕಲ ವಸ್ತುಗಳನ್ನು ಆವರಿಸಿರುವನೆಂದು ನೀವು ತಿಳಿಯಲೆಂದಾಗಿದೆ.
التفاسير العربية:
 
ترجمة معاني سورة: الطلاق
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق