ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: المزمل   آية:

سورة المزمل - ಸೂರ ಅಲ್ -ಮುಝ್ಝಮ್ಮಿಲ್

یٰۤاَیُّهَا الْمُزَّمِّلُ ۟ۙ
ಓ ಕಂಬಳಿಯನ್ನು ಹೊದ್ದುಕೊಂಡವರೇ
التفاسير العربية:
قُمِ الَّیْلَ اِلَّا قَلِیْلًا ۟ۙ
ಸ್ವಲ್ಪ ಸಮಯದ ಹೊರತು ರಾತ್ರಿ ಎದ್ದು ನಿಂತು ನಮಾಜ್ ನರ‍್ವಹಿಸಿರಿ.
التفاسير العربية:
نِّصْفَهٗۤ اَوِ انْقُصْ مِنْهُ قَلِیْلًا ۟ۙ
ರ‍್ಧರಾತ್ರಿ ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆಮಾಡಿ.
التفاسير العربية:
اَوْ زِدْ عَلَیْهِ وَرَتِّلِ الْقُرْاٰنَ تَرْتِیْلًا ۟ؕ
ಅಥವಾ ಅದಕ್ಕಿಂತ ಅಧಿಕಗೊಳಿಸಿ ಮತ್ತು ಕುರ್ಆನನ್ನು ಸಾವಕಾಶವಾಗಿ ಪಠಿಸಿರಿ.
التفاسير العربية:
اِنَّا سَنُلْقِیْ عَلَیْكَ قَوْلًا ثَقِیْلًا ۟
ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.
التفاسير العربية:
اِنَّ نَاشِئَةَ الَّیْلِ هِیَ اَشَدُّ وَطْاً وَّاَقْوَمُ قِیْلًا ۟ؕ
ಖಂಡಿತವಾಗಿಯೂ ರಾತ್ರಿಯ ಎದ್ದೇಳುವಿಕೆಯು ಆತ್ಮಸಂಸ್ಕಾರಕ್ಕೆ ಅತ್ಯಂತ ಸೂಕ್ತವಾಗಿದೆ ಮತ್ತು ಮಾತನ್ನು ಹೆಚ್ಚು ನಿಖರಗೊಳಿಸುವಂತಹದ್ದಾಗಿದೆ.
التفاسير العربية:
اِنَّ لَكَ فِی النَّهَارِ سَبْحًا طَوِیْلًا ۟ؕ
ನಿಸ್ಸಂದೇಹವಾಗಿಯೂ ನಿಮಗೆ ಹಗಲಿನ ವೇಳೆಯಲ್ಲಿ ತುಂಬಾ ಕೆಲಸಕರ‍್ಯಗಳಿರುತ್ತವೆ.
التفاسير العربية:
وَاذْكُرِ اسْمَ رَبِّكَ وَتَبَتَّلْ اِلَیْهِ تَبْتِیْلًا ۟ؕ
ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ ಮತ್ತು ಸಕಲರಿಂದ ಬರ‍್ಪಟ್ಟು ಅವನಿಗೆ ಏಕಾಗ್ರಚಿತ್ತರಾಗಿ ಸರ‍್ಪಿಸಿಕೊಳ್ಳಿರಿ.
التفاسير العربية:
رَبُّ الْمَشْرِقِ وَالْمَغْرِبِ لَاۤ اِلٰهَ اِلَّا هُوَ فَاتَّخِذْهُ وَكِیْلًا ۟
ಅವನು ಪರ‍್ವ ಮತ್ತು ಪಶ್ಚಿಮದ ಪ್ರಭುವಾಗಿದ್ದಾನೆ, ಅವನ ಹೊರತು ಬೇರೆ ಆರಾಧ್ಯನಿಲ್ಲ, ಆದ್ದರಿಂದ ಅವನನ್ನೇ ನೀವು ಕರ‍್ಯಸಾದಕನಾಗಿ ಮಾಡಿಕೊಳ್ಳಿರಿ.
التفاسير العربية:
وَاصْبِرْ عَلٰی مَا یَقُوْلُوْنَ وَاهْجُرْهُمْ هَجْرًا جَمِیْلًا ۟
ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ.
التفاسير العربية:
وَذَرْنِیْ وَالْمُكَذِّبِیْنَ اُولِی النَّعْمَةِ وَمَهِّلْهُمْ قَلِیْلًا ۟
ನನ್ನನ್ನು ಮತ್ತು ಸುಖಲೋಲುಪರಾದ ಸತ್ಯನಿಷೇಧಿಗಳನ್ನು ಬಿಟ್ಟುಬಿಡಿರಿ ಮತ್ತು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
التفاسير العربية:
اِنَّ لَدَیْنَاۤ اَنْكَالًا وَّجَحِیْمًا ۟ۙ
ಖಂಡಿತವಾಗಿಯೂ ನಮ್ಮ ಬಳಿ ಬಲಿಷ್ಠ ಸಂಕೋಲೆಗಳು ಮತ್ತು ಧಗಧಗಿಸುವ ನರಕಾಗ್ನಿಯಿದೆ,
التفاسير العربية:
وَّطَعَامًا ذَا غُصَّةٍ وَّعَذَابًا اَلِیْمًا ۟۫
ಗಂಟಲಲ್ಲಿ ಸಿಲುಕಿಸಿಕೊಳ್ಳುವ ಆಹಾರ ಮತ್ತು ವೇದನಾಜನಕ ಶಿಕ್ಷೆಯಿದೆ.
التفاسير العربية:
یَوْمَ تَرْجُفُ الْاَرْضُ وَالْجِبَالُ وَكَانَتِ الْجِبَالُ كَثِیْبًا مَّهِیْلًا ۟
ಅಂದು ಭೂಮಿ ಮತ್ತು ರ‍್ವತಗಳು ಕಂಪನಗೊಳ್ಳುವುವು ಮತ್ತು ರ‍್ವತಗಳು ಉದುರುವ ಮರಳ ರಾಶಿಗಳಂತಾಗುವುವು.
التفاسير العربية:
اِنَّاۤ اَرْسَلْنَاۤ اِلَیْكُمْ رَسُوْلًا ۙ۬— شَاهِدًا عَلَیْكُمْ كَمَاۤ اَرْسَلْنَاۤ اِلٰی فِرْعَوْنَ رَسُوْلًا ۟ؕ
ನಿಸ್ಸಂಶಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮ ಮೇಲೆ ಸಾಕ್ಷಿಯಾಗಿರುವ ರ‍್ವ ಸಂದೇಶವಾಹಕನನ್ನು ಕಳುಹಿಸಿರುತ್ತೇವೆ, ಫಿರ್ಔನನ ಬಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿರುವಂತೆ.
التفاسير العربية:
فَعَصٰی فِرْعَوْنُ الرَّسُوْلَ فَاَخَذْنٰهُ اَخْذًا وَّبِیْلًا ۟
ಆಗ ಫಿರ್ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಉಗ್ರ ಹಿಡಿತದಲ್ಲಿ ಹಿಡಿದುಬಿಟ್ಟೆವು.
التفاسير العربية:
فَكَیْفَ تَتَّقُوْنَ اِنْ كَفَرْتُمْ یَوْمًا یَّجْعَلُ الْوِلْدَانَ شِیْبَا ۟
. ಇನ್ನು ನೀವು ನಿಷೇಧಿಸಿದರೆ ಮಕ್ಕಳನ್ನು ವೃದ್ಧರನ್ನಾಗಿ ಮಾಡುವ ಆ ದಿನ ಹೇಗೆ ರಕ್ಷಣೆ ಪಡೆಯುವಿರಿ ?
التفاسير العربية:
١لسَّمَآءُ مُنْفَطِرٌ بِهٖ ؕ— كَانَ وَعْدُهٗ مَفْعُوْلًا ۟
ಅಂದು ಆಕಾಶವು ಸಿಡಿದು ಹೋಳಾಗುವುದು, ಅಲ್ಲಾಹನ ಈ ವಾಗ್ದಾನವು ನಡೆದೇ ತೀರುವುದು,
التفاسير العربية:
اِنَّ هٰذِهٖ تَذْكِرَةٌ ۚ— فَمَنْ شَآءَ اتَّخَذَ اِلٰی رَبِّهٖ سَبِیْلًا ۟۠
ನಿಸ್ಸಂದೇಹವಾಗಿಯೂ ಇದೊಂದು ಉಪದೇಶವಾಗಿದೆ, ಆದ್ದರಿಂದ ಇಚ್ಚಿಸುವವನು ತನ್ನ ಪ್ರಭುವಿನತ್ತ ಮರ‍್ಗವನ್ನು ಹಿಡಿದುಕೊಳ್ಳಲಿ.
التفاسير العربية:
اِنَّ رَبَّكَ یَعْلَمُ اَنَّكَ تَقُوْمُ اَدْنٰی مِنْ  الَّیْلِ وَنِصْفَهٗ وَثُلُثَهٗ وَطَآىِٕفَةٌ مِّنَ الَّذِیْنَ مَعَكَ ؕ— وَاللّٰهُ یُقَدِّرُ الَّیْلَ وَالنَّهَارَ ؕ— عَلِمَ اَنْ لَّنْ تُحْصُوْهُ فَتَابَ عَلَیْكُمْ فَاقْرَءُوْا مَا تَیَسَّرَ مِنَ الْقُرْاٰنِ ؕ— عَلِمَ اَنْ سَیَكُوْنُ مِنْكُمْ مَّرْضٰی ۙ— وَاٰخَرُوْنَ یَضْرِبُوْنَ فِی الْاَرْضِ یَبْتَغُوْنَ مِنْ فَضْلِ اللّٰهِ ۙ— وَاٰخَرُوْنَ یُقَاتِلُوْنَ فِیْ سَبِیْلِ اللّٰهِ ۖؗ— فَاقْرَءُوْا مَا تَیَسَّرَ مِنْهُ ۙ— وَاَقِیْمُوا الصَّلٰوةَ وَاٰتُوا الزَّكٰوةَ وَاَقْرِضُوا اللّٰهَ قَرْضًا حَسَنًا ؕ— وَمَا تُقَدِّمُوْا لِاَنْفُسِكُمْ مِّنْ خَیْرٍ تَجِدُوْهُ عِنْدَ اللّٰهِ هُوَ خَیْرًا وَّاَعْظَمَ اَجْرًا ؕ— وَاسْتَغْفِرُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟۠
ನೀವು ಮತ್ತು ನಿಮ್ಮೊಡನೆ ಇರುವ ಒಂದು ಸಮೂಹವು ಕೆಲವೊಮ್ಮೆ ರಾತ್ರಿ ಮೂರನೇ ಎರಡು ಭಾಗ ಮತ್ತು ಕೆಲವೊಮ್ಮೆ ರ‍್ಧಭಾಗ ಮತ್ತು ಕೆಲವೊಮ್ಮೆ ಮೂರನೇ ಒಂದು ಭಾಗದಲ್ಲಿ ನಮಾಜ್ ಮಾಡುತ್ತಿರುವಿರಿ ಎಂದು ನಿಮ್ಮ ಪ್ರಭು ಖಂಡಿತ ಬಲ್ಲನು ಮತ್ತು ರಾತ್ರಿಹಗಲುಗಳ ಸಂಪರ‍್ಣ ಎಣಿಕೆಯು ಅಲ್ಲಾಹನಿಗೆ ಮಾತ್ರವಿದೆ, ನೀವೆಂದೂ ಅದನ್ನು ಎಣಿಸಲಾರಿರೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಔದರ‍್ಯ ತೋರಿದನು. ಮತ್ತು ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ, ನಿಮ್ಮಲ್ಲಿ ಕೆಲವರು ರೋಗಿಗಳೂ ಇದ್ದಾರೆ ಕೆಲವರು ಭೂಮಿಯಲ್ಲಿ ಸಂಚರಿಸಿ ಅಲ್ಲಾಹನ ಅನುಗ್ರಹವನ್ನು ಅರಸುವವರಾಗಿದ್ದಾರೆ ಮತ್ತು ಕೆಲವು ಮಂದಿ ಅಲ್ಲಾಹನ ಮರ‍್ಗದಲ್ಲಿ ಯುದ್ಧವನ್ನೂ ಮಾಡುವವರಿದ್ದಾರೆಂದು ಅವನಿಗೆ ತಿಳಿದಿದೆ. ಆದ್ದರಿಂದ ನಿಮಗೆ ಸುಲಭವಾದಷ್ಟು ಕುರ್ಆನನ್ನು ಪಠಿಸಿರಿ ಮತ್ತು ನಮಾಜನ್ನು ಸಂಸ್ಥಾಪಿಸಿರಿ ಮತ್ತು ಜಕಾತ್ ನೀಡಿರಿ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡಿರಿ. ನೀವು ಸ್ವತಃ ನಿಮಗಾಗಿ ಯಾವ ಒಳಿತನ್ನು ಮುಂಗಡ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮ ಪ್ರತಿಫಲದಲ್ಲಿ ಅತಿ ಹೆಚ್ಚಿನದ್ದನ್ನು ಪಡೆಯುವಿರಿ, ನೀವು ಅಲ್ಲಾಹನೊಂದಿಗೆ ಪಾಪಮುಕ್ತಿಗಾಗಿ ಬೇಡಿರಿ, ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿದ್ದಾನೆ.
التفاسير العربية:
 
ترجمة معاني سورة: المزمل
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمة معاني القرآن الكريم إلى اللغة الكنادية ترجمها بشير ميسوري.

إغلاق