للإطلاع على الموقع بحلته الجديدة

ترجمة معاني القرآن الكريم - الترجمة الكنادية - حمزة بتور * - فهرس التراجم

PDF XML CSV Excel API
تنزيل الملفات يتضمن الموافقة على هذه الشروط والسياسات

ترجمة معاني سورة: الحجرات   آية:
یٰۤاَیُّهَا الَّذِیْنَ اٰمَنُوا اجْتَنِبُوْا كَثِیْرًا مِّنَ الظَّنِّ ؗ— اِنَّ بَعْضَ الظَّنِّ اِثْمٌ وَّلَا تَجَسَّسُوْا وَلَا یَغْتَبْ بَّعْضُكُمْ بَعْضًا ؕ— اَیُحِبُّ اَحَدُكُمْ اَنْ یَّاْكُلَ لَحْمَ اَخِیْهِ مَیْتًا فَكَرِهْتُمُوْهُ ؕ— وَاتَّقُوا اللّٰهَ ؕ— اِنَّ اللّٰهَ تَوَّابٌ رَّحِیْمٌ ۟
ಸತ್ಯವಿಶ್ವಾಸಿಗಳೇ! ಹೆಚ್ಚಿನ ಊಹೆಗಳಿಂದಲೂ ದೂರವಿರಿ. ನಿಶ್ಚಯವಾಗಿಯೂ ಕೆಲವು ಊಹೆಗಳು ಪಾಪವಾಗಿವೆ. ಇನ್ನೊಬ್ಬರ (ಖಾಸಗಿ) ವಿಚಾರಗಳನ್ನು ಕೆದಕಬೇಡಿ. ಇನ್ನೊಬ್ಬರ ಬಗ್ಗೆ ಪರದೂಷಣೆ ಮಾಡಬೇಡಿ. ಸತ್ತು ಮಲಗಿರುವ ತನ್ನ ಸಹೋದರನ ಮಾಂಸವನ್ನು ತಿನ್ನಲು ನಿಮ್ಮಲ್ಲಿ ಯಾರಾದರೂ ಇಷ್ಟಪಡುತ್ತಾರೆಯೇ? ನೀವು ಅದನ್ನು ಅಸಹ್ಯಪಡುತ್ತೀರಿ! ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
التفاسير العربية:
یٰۤاَیُّهَا النَّاسُ اِنَّا خَلَقْنٰكُمْ مِّنْ ذَكَرٍ وَّاُ وَجَعَلْنٰكُمْ شُعُوْبًا وَّقَبَآىِٕلَ لِتَعَارَفُوْا ؕ— اِنَّ اَكْرَمَكُمْ عِنْدَ اللّٰهِ اَتْقٰىكُمْ ؕ— اِنَّ اللّٰهَ عَلِیْمٌ خَبِیْرٌ ۟
ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ.
التفاسير العربية:
قَالَتِ الْاَعْرَابُ اٰمَنَّا ؕ— قُلْ لَّمْ تُؤْمِنُوْا وَلٰكِنْ قُوْلُوْۤا اَسْلَمْنَا وَلَمَّا یَدْخُلِ الْاِیْمَانُ فِیْ قُلُوْبِكُمْ ؕ— وَاِنْ تُطِیْعُوا اللّٰهَ وَرَسُوْلَهٗ لَا یَلِتْكُمْ مِّنْ اَعْمَالِكُمْ شَیْـًٔا ؕ— اِنَّ اللّٰهَ غَفُوْرٌ رَّحِیْمٌ ۟
ಮರುಭೂಮಿ ನಿವಾಸಿಗಳು ಹೇಳಿದರು: “ನಾವು ಸತ್ಯವಿಶ್ವಾಸಿಗಳಾಗಿದ್ದೇವೆ.” ಹೇಳಿರಿ: “ನೀವು ಸತ್ಯವಿಶ್ವಾಸಿಗಳಾಗಿಲ್ಲ, ಬದಲಿಗೆ, ನಾವು ಮುಸ್ಲಿಮರಾಗಿದ್ದೇವೆ ಎಂದು ಹೇಳಿರಿ. ಏಕೆಂದರೆ ಸತ್ಯವಿಶ್ವಾಸವು ನಿಮ್ಮ ಹೃದಯವನ್ನು ಹೊಕ್ಕಿಲ್ಲ. ನೀವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮಗೆ ನಿಮ್ಮ ಕರ್ಮಫಲದಲ್ಲಿ ಏನೂ ಕಡಿಮೆ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
التفاسير العربية:
اِنَّمَا الْمُؤْمِنُوْنَ الَّذِیْنَ اٰمَنُوْا بِاللّٰهِ وَرَسُوْلِهٖ ثُمَّ لَمْ یَرْتَابُوْا وَجٰهَدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ ؕ— اُولٰٓىِٕكَ هُمُ الصّٰدِقُوْنَ ۟
ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟ ಬಳಿಕ ಸ್ವಲ್ಪವೂ ಸಂಶಯಪಡದವರು ಮತ್ತು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರು ಯಾರೋ ಅವರೇ ಸತ್ಯವಿಶ್ವಾಸಿಗಳು. ಅವರೇ ಸತ್ಯವಂತರು.
التفاسير العربية:
قُلْ اَتُعَلِّمُوْنَ اللّٰهَ بِدِیْنِكُمْ ؕ— وَاللّٰهُ یَعْلَمُ مَا فِی السَّمٰوٰتِ وَمَا فِی الْاَرْضِ ؕ— وَاللّٰهُ بِكُلِّ شَیْءٍ عَلِیْمٌ ۟
ಹೇಳಿರಿ: “ನೀವು ನಿಮ್ಮ ಧಾರ್ಮಿಕತೆಯ ಬಗ್ಗೆ ಅಲ್ಲಾಹನಿಗೆ ತಿಳಿಸುತ್ತಿದ್ದೀರಾ? ವಾಸ್ತವವಾಗಿ, ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ಅಲ್ಲಾಹು ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳನ್ನು ತಿಳಿದವನಾಗಿದ್ದಾನೆ.”
التفاسير العربية:
یَمُنُّوْنَ عَلَیْكَ اَنْ اَسْلَمُوْا ؕ— قُلْ لَّا تَمُنُّوْا عَلَیَّ اِسْلَامَكُمْ ۚ— بَلِ اللّٰهُ یَمُنُّ عَلَیْكُمْ اَنْ هَدٰىكُمْ لِلْاِیْمَانِ اِنْ كُنْتُمْ صٰدِقِیْنَ ۟
ಅವರು ಇಸ್ಲಾಂ ಸ್ವೀಕರಿಸಿದ್ದು ನಿಮಗೆ ಮಾಡಿದ ಉಪಕಾರವೆಂದು ಅವರು ಪರಿಗಣಿಸುತ್ತಾರೆ. ಹೇಳಿರಿ: “ನೀವು ಇಸ್ಲಾಂ ಸ್ವೀಕರಿಸಿದ್ದು ನನಗೆ ಮಾಡಿದ ಉಪಕಾರವೆಂದು ಪರಿಗಣಿಸಬೇಡಿ. ವಾಸ್ತವವಾಗಿ, ನಿಮಗೆ ಸತ್ಯವಿಶ್ವಾಸಕ್ಕೆ ದಾರಿ ತೋರಿಸಿದ್ದು ಅಲ್ಲಾಹು ನಿಮಗೆ ಮಾಡಿದ ಉಪಕಾರವಾಗಿದೆ. ನೀವು ಸತ್ಯವಂತರಾಗಿದ್ದರೆ.”
التفاسير العربية:
اِنَّ اللّٰهَ یَعْلَمُ غَیْبَ السَّمٰوٰتِ وَالْاَرْضِ ؕ— وَاللّٰهُ بَصِیْرٌ بِمَا تَعْمَلُوْنَ ۟۠
ನಿಶ್ಚಯವಾಗಿಯೂ ಅಲ್ಲಾಹು ಭೂಮ್ಯಾಕಾಶಗಳ ಅದೃಶ್ಯಗಳನ್ನು ತಿಳಿಯುತ್ತಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ವೀಕ್ಷಿಸುತ್ತಿದ್ದಾನೆ.
التفاسير العربية:
 
ترجمة معاني سورة: الحجرات
فهرس السور رقم الصفحة
 
ترجمة معاني القرآن الكريم - الترجمة الكنادية - حمزة بتور - فهرس التراجم

ترجمها محمد حمزة بتور. تم تطويرها بإشراف مركز رواد الترجمة.

إغلاق