ترجمة معاني القرآن الكريم - الترجمة الكنادية * - فهرس التراجم

XML CSV Excel API
تنزيل الملفات يتضمن الموافقة على هذه الشروط والسياسات

ترجمة معاني سورة: المنافقون   آية:

سورة المنافقون - ಸೂರ ಅಲ್ -ಮುನಾಫಿಕೂನ್

اِذَا جَآءَكَ الْمُنٰفِقُوْنَ قَالُوْا نَشْهَدُ اِنَّكَ لَرَسُوْلُ اللّٰهِ ۘ— وَاللّٰهُ یَعْلَمُ اِنَّكَ لَرَسُوْلُهٗ ؕ— وَاللّٰهُ یَشْهَدُ اِنَّ الْمُنٰفِقِیْنَ لَكٰذِبُوْنَ ۟ۚ
ಕಪಟವಿಶ್ವಾಸಿಗಳು ನಿಮ್ಮ ಬಳಿಗೆ ಬಂದರೆ, “ಖಂಡಿತವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಎಂದು ನಾವು ಸಾಕ್ಷಿ ನುಡಿಯುತ್ತೇವೆ” ಎಂದು ಹೇಳುತ್ತಾರೆ. ನೀವು ಅಲ್ಲಾಹನ ಸಂದೇಶವಾಹಕರು ಎಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಸುಳ್ಳು ಹೇಳುವವರಾಗಿದ್ದಾರೆ ಎಂದು ಅಲ್ಲಾಹು ಸಾಕ್ಷಿ ನುಡಿಯುತ್ತಾನೆ.
التفاسير العربية:
اِتَّخَذُوْۤا اَیْمَانَهُمْ جُنَّةً فَصَدُّوْا عَنْ سَبِیْلِ اللّٰهِ ؕ— اِنَّهُمْ سَآءَ مَا كَانُوْا یَعْمَلُوْنَ ۟
ಅವರು ತಮ್ಮ ಆಣೆಗಳನ್ನು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಇದರ ಮೂಲಕ ಅವರು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಅವರು ಮಾಡುವ ಈ ಕೃತ್ಯವು ಬಹಳ ನಿಕೃಷ್ಟವಾಗಿದೆ.
التفاسير العربية:
ذٰلِكَ بِاَنَّهُمْ اٰمَنُوْا ثُمَّ كَفَرُوْا فَطُبِعَ عَلٰی قُلُوْبِهِمْ فَهُمْ لَا یَفْقَهُوْنَ ۟
ಅದೇಕೆಂದರೆ, ಅವರು ಮೊದಲು ವಿಶ್ವಾಸವಿಟ್ಟು ನಂತರ ನಿಷೇಧಿಸಿದರು. ಆದ್ದರಿಂದ ಅವರ ಹೃದಯಗಳಿಗೆ ಮೊಹರು ಹಾಕಲಾಯಿತು. ಆದ್ದರಿಂದ ಅವರು (ಸತ್ಯವನ್ನು) ಅರ್ಥಮಾಡಿಕೊಳ್ಳುವುದಿಲ್ಲ.
التفاسير العربية:
وَاِذَا رَاَیْتَهُمْ تُعْجِبُكَ اَجْسَامُهُمْ ؕ— وَاِنْ یَّقُوْلُوْا تَسْمَعْ لِقَوْلِهِمْ ؕ— كَاَنَّهُمْ خُشُبٌ مُّسَنَّدَةٌ ؕ— یَحْسَبُوْنَ كُلَّ صَیْحَةٍ عَلَیْهِمْ ؕ— هُمُ الْعَدُوُّ فَاحْذَرْهُمْ ؕ— قَاتَلَهُمُ اللّٰهُ ؗ— اَنّٰی یُؤْفَكُوْنَ ۟
ನೀವು ಅವರನ್ನು ನೋಡಿದರೆ ಅವರ ಅಂಗಸೌಷ್ಟವವು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರು ಮಾತನಾಡ ತೊಡಗಿದರೆ ನೀವು ಅವರ ಮಾತನ್ನು ಕೇಳುವಿರಿ. ಅವರು ಗೋಡೆಗೆ ಒರಗಿ ನಿಲ್ಲಿಸಲಾದ ಮರದ ದಿಮ್ಮಿಗಳಂತೆ. ಪ್ರತಿಯೊಂದು ಶಬ್ದವನ್ನೂ ಅವರಿಗೆ ವಿರುದ್ಧವಾದುದೆಂದು ಅವರು ಭಾವಿಸುತ್ತಾರೆ. ಅವರೇ ನಿಜವಾದ ವೈರಿಗಳು. ಅವರ ಬಗ್ಗೆ ಜಾಗರೂಕರಾಗಿರಿ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ತಪ್ಪಿಸಿಬಿಡಲಾಗುತ್ತಿದೆ?
التفاسير العربية:
وَاِذَا قِیْلَ لَهُمْ تَعَالَوْا یَسْتَغْفِرْ لَكُمْ رَسُوْلُ اللّٰهِ لَوَّوْا رُءُوْسَهُمْ وَرَاَیْتَهُمْ یَصُدُّوْنَ وَهُمْ مُّسْتَكْبِرُوْنَ ۟
“ಬನ್ನಿ, ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡುತ್ತಾರೆ” ಎಂದು ಅವರೊಡನೆ ಹೇಳಲಾದರೆ ಅವರು ತಲೆಯನ್ನು ಅಲ್ಲಾಡಿಸುತ್ತಾರೆ. ಅವರು ಅಹಂಕಾರ ತೋರುತ್ತಾ ನುಣುಚಿಕೊಳ್ಳುವುದು ನಿಮಗೆ ಕಾಣಬಹುದು.
التفاسير العربية:
سَوَآءٌ عَلَیْهِمْ اَسْتَغْفَرْتَ لَهُمْ اَمْ لَمْ تَسْتَغْفِرْ لَهُمْ ؕ— لَنْ یَّغْفِرَ اللّٰهُ لَهُمْ ؕ— اِنَّ اللّٰهَ لَا یَهْدِی الْقَوْمَ الْفٰسِقِیْنَ ۟
ನೀವು ಅವರಿಗೋಸ್ಕರ ಕ್ಷಮೆಯಾಚನೆ ಮಾಡಿದರೂ ಮಾಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅಲ್ಲಾಹು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಶ್ಚಯವಾಗಿಯೂ ದುಷ್ಕರ್ಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
التفاسير العربية:
هُمُ الَّذِیْنَ یَقُوْلُوْنَ لَا تُنْفِقُوْا عَلٰی مَنْ عِنْدَ رَسُوْلِ اللّٰهِ حَتّٰی یَنْفَضُّوْا ؕ— وَلِلّٰهِ خَزَآىِٕنُ السَّمٰوٰتِ وَالْاَرْضِ وَلٰكِنَّ الْمُنٰفِقِیْنَ لَا یَفْقَهُوْنَ ۟
ಅವರು ಯಾರೆಂದರೆ, “ಅಲ್ಲಾಹನ ಸಂದೇಶವಾಹಕರ ಬಳಿಯಿರುವವರಿಗೆ ಅವರು ಅಲ್ಲಿಂದ ಚದುರಿಹೋಗುವ ತನಕ ಖರ್ಚು ಮಾಡಬೇಡಿ” ಎಂದು ಹೇಳುವವರು.[1] ಭೂಮ್ಯಾಕಾಶಗಳ ಬೊಕ್ಕಸಗಳು ಅಲ್ಲಾಹನಿಗೆ ಸೇರಿದ್ದು. ಆದರೆ ಕಪಟವಿಶ್ವಾಸಿಗಳು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
[1] ಒಮ್ಮೆ ಒಂದು ಯುದ್ಧದಿಂದ ಹಿಂದಿರುಗಿ ಬರುವಾಗ ಒಬ್ಬ ಮುಹಾಜಿರ್ ಮತ್ತು ಅನ್ಸಾರನ ನಡುವೆ ಜಗಳವಾಯಿತು. ಇಬ್ಬರೂ ತಮ್ಮ ತಮ್ಮ ಜನರನ್ನು ಸಹಾಯಕ್ಕೆ ಕರೆದರು. ಆಗ ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಅನ್ಸಾರರನ್ನು ಕರೆದು, “ನೋಡಿ, ನೀವು ಅವರಿಗೆ ಸಹಾಯ ಮಾಡಿದ್ದೀರಿ. ಈಗ ಅದರ ಫಲಿತಾಂಶವೇನಾಯಿತೆಂದು ನೋಡಿ. ಅವರು ನಿಮ್ಮ ವಿರುದ್ಧ ಅವರ ಜನರನ್ನು ಕರೆಯುತ್ತಿದ್ದಾರೆ.” ನಂತರ ಆತ ಹೇಳಿದ: “ಇದಕ್ಕಿರುವ ಮದ್ದೇನೆಂದರೆ ಅವರಿಗೆ ಖರ್ಚು ಮಾಡುವುದನ್ನು ನೀವು ನಿಲ್ಲಿಸಬೇಕು. ಆಗ ಅವರ ಸ್ವಯಂ ಸರಿದಾರಿಗೆ ಬರುತ್ತಾರೆ.”
التفاسير العربية:
یَقُوْلُوْنَ لَىِٕنْ رَّجَعْنَاۤ اِلَی الْمَدِیْنَةِ لَیُخْرِجَنَّ الْاَعَزُّ مِنْهَا الْاَذَلَّ ؕ— وَلِلّٰهِ الْعِزَّةُ وَلِرَسُوْلِهٖ وَلِلْمُؤْمِنِیْنَ وَلٰكِنَّ الْمُنٰفِقِیْنَ لَا یَعْلَمُوْنَ ۟۠
ಅವರು ಹೇಳುತ್ತಾರೆ: “ನಾವು ಮದೀನಕ್ಕೆ ಮರಳಿದರೆ ಪ್ರತಿಷ್ಠೆಯುಳ್ಳವರು ದೀನರನ್ನು ಅಲ್ಲಿಂದ ಹೊರಗಟ್ಟುವರು.”[1] ಪ್ರತಿಷ್ಠೆಯಿರುವುದು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ. ಆದರೆ ಕಪಟವಿಶ್ವಾಸಿಗಳು ಅದನ್ನು ತಿಳಿಯುವುದಿಲ್ಲ.
[1] ಇದು ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಹೇಳಿದ ಮಾತು. ಅವನ ಪ್ರಕಾರ ಅವನು ಮತ್ತು ಅವನ ಅನುಯಾಯಿಗಳು ಪ್ರತಿಷ್ಠಿತರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಅನುಯಾಯಿಗಳು ದೀನರು.
التفاسير العربية:
یٰۤاَیُّهَا الَّذِیْنَ اٰمَنُوْا لَا تُلْهِكُمْ اَمْوَالُكُمْ وَلَاۤ اَوْلَادُكُمْ عَنْ ذِكْرِ اللّٰهِ ۚ— وَمَنْ یَّفْعَلْ ذٰلِكَ فَاُولٰٓىِٕكَ هُمُ الْخٰسِرُوْنَ ۟
ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸ್ತಿ ಮತ್ತು ಮಕ್ಕಳು ಅಲ್ಲಾಹನ ಸ್ಮರಣೆಯನ್ನು ನಿರ್ಲಕ್ಷಿಸುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರು.
التفاسير العربية:
وَاَنْفِقُوْا مِنْ مَّا رَزَقْنٰكُمْ مِّنْ قَبْلِ اَنْ یَّاْتِیَ اَحَدَكُمُ الْمَوْتُ فَیَقُوْلَ رَبِّ لَوْلَاۤ اَخَّرْتَنِیْۤ اِلٰۤی اَجَلٍ قَرِیْبٍ ۙ— فَاَصَّدَّقَ وَاَكُنْ مِّنَ الصّٰلِحِیْنَ ۟
ನಿಮ್ಮಲ್ಲೊಬ್ಬರಿಗೆ ಮರಣವು ಆಸನ್ನವಾಗಿ, “ನನ್ನ ಪರಿಪಾಲಕನೇ! ನನಗೆ ಸ್ವಲ್ಪ ಕಾಲಾವಕಾಶವನ್ನು ಕೊಟ್ಟರೆ ನಾನು ದಾನಧರ್ಮ ಮಾಡುತ್ತೇನೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇನೆ” ಎಂದು ಹೇಳುವಂತಾಗುವುದಕ್ಕೆ ಮೊದಲು ನಾವು ನಿಮಗೆ ಒದಗಿಸಿದ ಸಂಪತ್ತಿನಿಂದ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿರಿ.
التفاسير العربية:
وَلَنْ یُّؤَخِّرَ اللّٰهُ نَفْسًا اِذَا جَآءَ اَجَلُهَا ؕ— وَاللّٰهُ خَبِیْرٌ بِمَا تَعْمَلُوْنَ ۟۠
ಒಬ್ಬ ವ್ಯಕ್ತಿಯ ನಿಶ್ಚಿತ ಅವಧಿಯು ಬಂದು ಬಿಟ್ಟರೆ, ನಂತರ ಅಲ್ಲಾಹು ಅವನಿಗೆ ಕಾಲಾವಕಾಶ ನೀಡುವುದೇ ಇಲ್ಲ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
التفاسير العربية:
 
ترجمة معاني سورة: المنافقون
فهرس السور رقم الصفحة
 
ترجمة معاني القرآن الكريم - الترجمة الكنادية - فهرس التراجم

ترجمة معاني القرآن الكريم إلى اللغة الكنادية ترجمها محمد حمزة بتور.

إغلاق