Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: হূদ   আয়াত:
قَالَ یٰقَوْمِ اَرَءَیْتُمْ اِنْ كُنْتُ عَلٰی بَیِّنَةٍ مِّنْ رَّبِّیْ وَاٰتٰىنِیْ مِنْهُ رَحْمَةً فَمَنْ یَّنْصُرُنِیْ مِنَ اللّٰهِ اِنْ عَصَیْتُهٗ ۫— فَمَا تَزِیْدُوْنَنِیْ غَیْرَ تَخْسِیْرٍ ۟
ಸ್ವಾಲಿಹ್ ಉತ್ತರಿಸಿದರು; ಓ ನನ್ನ ಜನಾಂಗದವರೇ, ನೀವು ಯೋಚಿಸಿದ್ದೀರಾ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸದೃಢ ಪ್ರಮಾಣದಲ್ಲಿದ್ದು ಹಾಗೂ ಅವನು ನನಗೆ ತನ್ನ ಕಡೆಯ ಕಾರುಣ್ಯವನ್ನು ನೀಡಿದ್ದಾನೆ, ಆ ಬಳಿಕ ನಾನು ಅಲ್ಲಾಹನನ್ನು ಧಿಕ್ಕರಿಸಿದರೆ ನನಗೆ ಅವನ ಹೊರತು ಸಹಾಯ ಮಾಡುವವನಾರಿದ್ದಾನೆ ? ನೀವು ನನ್ನ £ಷ್ಟ್ಟವಲ್ಲದೆ ಇನ್ನೇನನ್ನು ಹೆಚ್ಚಿಸುತ್ತಿಲ್ಲ.
আৰবী তাফছীৰসমূহ:
وَیٰقَوْمِ هٰذِهٖ نَاقَةُ اللّٰهِ لَكُمْ اٰیَةً فَذَرُوْهَا تَاْكُلْ فِیْۤ اَرْضِ اللّٰهِ وَلَا تَمَسُّوْهَا بِسُوْٓءٍ فَیَاْخُذَكُمْ عَذَابٌ قَرِیْبٌ ۟
ಓ ನನ್ನ ಜನಾಂಗದವರೇ ಇದೋ ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತವಾಗಿದೆ. ಇನ್ನು ನೀವು ಅದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ಮೇಯಲು ಬಿಡಿರಿ, ಮತ್ತು ಅದಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಬೇಡಿರಿ. ಹಾಗೇನಾದರೂ ಆದರೆ ಅತಿ ಶೀಘ್ರ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
আৰবী তাফছীৰসমূহ:
فَعَقَرُوْهَا فَقَالَ تَمَتَّعُوْا فِیْ دَارِكُمْ ثَلٰثَةَ اَیَّامٍ ؕ— ذٰلِكَ وَعْدٌ غَیْرُ مَكْذُوْبٍ ۟
ಹಾಗಿದ್ದೂ ಅವರು ಆ ಒಂಟೆಯ ಕಾಲಿನ ಸ್ನಾಯುಗಳನ್ನು ಕತ್ತರಿಸಿಬಿಟ್ಟರು ಆಗ ಸ್ವಾಲಿಹ್ ಹೇಳಿದರು; ಇನ್ನು ನೀವು ನಿಮ್ಮ ಮನೆಗಳಲ್ಲಿ ಕೇವಲ ಮೂರು ದಿನಗಳವರೆಗೆ ಸುಖಭೋಗಗಳನ್ನು ಸವಿಯಿರಿ. ಇದು ಸುಳ್ಳಾಗದಂತಹ ವಾಗ್ದಾನವಾಗಿದೆ.
আৰবী তাফছীৰসমূহ:
فَلَمَّا جَآءَ اَمْرُنَا نَجَّیْنَا صٰلِحًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا وَمِنْ خِزْیِ یَوْمِىِٕذٍ ؕ— اِنَّ رَبَّكَ هُوَ الْقَوِیُّ الْعَزِیْزُ ۟
ಕೊನೆಗೆ ನಮ್ಮ ಯಾತನೆಯು ಬಂದಾಗ ನಾವು ಸ್ವಾಲಿಹ್‌ರವರನ್ನೂ ಅವರ ಮೇಲೆ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಜವಾಗಿಯೂ ನಿಮ್ಮ ಪ್ರಭು ಅತ್ಯಂತ ಬಲಿಷ್ಠನೂ, ಪ್ರಚಂಡನೂ ಆಗಿದ್ದಾನೆ,
আৰবী তাফছীৰসমূহ:
وَاَخَذَ الَّذِیْنَ ظَلَمُوا الصَّیْحَةُ فَاَصْبَحُوْا فِیْ دِیَارِهِمْ جٰثِمِیْنَ ۟ۙ
ಮತ್ತು ಅಕ್ರಮಿಗಳನ್ನು ಘೋರ ಆರ್ಭಟವೊಂದು ಹಿಡಿದು ಬಿಟ್ಟಿತ್ತು. ಅನಂತರ ಅವರು ತಮ್ಮ ಮನೆಗಳಲ್ಲಿ ಆಧೋಮುಖಿಗಳಾಗಿ ಬಿದ್ದಿದ್ದರು.
আৰবী তাফছীৰসমূহ:
كَاَنْ لَّمْ یَغْنَوْا فِیْهَا ؕ— اَلَاۤ اِنَّ ثَمُوْدَاۡ كَفَرُوْا رَبَّهُمْ ؕ— اَلَا بُعْدًا لِّثَمُوْدَ ۟۠
ಅವರು ಅಲ್ಲಿ ಎಂದೂ ವಾಸಿಸಿಯೇ ಇಲ್ಲವೆಂಬAತೆ( ಅಳಿದು ಹೋದರು) ಜಾಗ್ರತೆ! ಸಮೂದ್ ಜನಾಂಗದವರು ತಮ್ಮ ಪ್ರಭುವನ್ನು ನಿಷೇಧಿಸಿದ್ದರು. ಅರಿತುಕೊಳ್ಳಿರಿ! ಸಮೂದ್‌ರÀವರ ಮೇಲೆ ಶಾಪವಿರಲಿ.
আৰবী তাফছীৰসমূহ:
وَلَقَدْ جَآءَتْ رُسُلُنَاۤ اِبْرٰهِیْمَ بِالْبُشْرٰی قَالُوْا سَلٰمًا ؕ— قَالَ سَلٰمٌ فَمَا لَبِثَ اَنْ جَآءَ بِعِجْلٍ حَنِیْذٍ ۟
ನಮ್ಮ ಮಲಕಗಳು ಇಬ್ರಾಹೀಮ್‌ರವರ ಬಳಿಗೆ ಒಬ್ಬ ಪುತ್ರನ ಶುಭವಾರ್ತೆಯೊಂದಿಗೆ ಬಂದರು ಮತ್ತು 'ಸಲಾಂ' ಹೇಳಿದರು. ಅವರು ಸಹ 'ಸಲಾಂ' ಎಂದು ಉತ್ತರಿಸಿದರು. ಮತ್ತು ತಡಮಾಡದೆ ಹುರಿದ ಕರುವೊಂದನ್ನು ತಂದರು.
আৰবী তাফছীৰসমূহ:
فَلَمَّا رَاٰۤ اَیْدِیَهُمْ لَا تَصِلُ اِلَیْهِ نَكِرَهُمْ وَاَوْجَسَ مِنْهُمْ خِیْفَةً ؕ— قَالُوْا لَا تَخَفْ اِنَّاۤ اُرْسِلْنَاۤ اِلٰی قَوْمِ لُوْطٍ ۟ؕ
ಆದರೆ ಅವರ ಕೈಗಳು ಆಹಾರವನ್ನು ಮುಟ್ಟದಿರುವುದನ್ನು ಕಂಡಾಗ ಅವರ ಬಗ್ಗೆ ಅಪರಿಚಿತತೆಯು ಭಾಸವಾಗಿ ಒಳಗೊಳಗೆ ಅವರ ಕುರಿತು ಭಯಪಡಲಾರಂಭಿಸಿದರು. ಅವರೆಂದರು; ಭಯಪಡಬೇಡಿರಿ ನಾವು ಲೂತರ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.
আৰবী তাফছীৰসমূহ:
وَامْرَاَتُهٗ قَآىِٕمَةٌ فَضَحِكَتْ فَبَشَّرْنٰهَا بِاِسْحٰقَ ۙ— وَمِنْ وَّرَآءِ اِسْحٰقَ یَعْقُوْبَ ۟
ಸಮೀಪದಲ್ಲೇ ನಿಂತಿದ್ದ ಅವರ ಪತ್ನಿಯು ಇದನ್ನು ಕೇಳಿ ನಕ್ಕುಬಿಟ್ಟರು. ಆಗ ನಾವು ಅವರಿಗೆ ಇಸ್‌ಹಾಕರ(ಪುತ್ರನ) ಹಾಗೂ ಇಸ್‌ಹಾಕರ ನಂತರ ಯಾಕೂಬರ ಮೊಮ್ಮಗನ ಶುಭವಾರ್ತೆಯನ್ನು ನೀಡಿದೆವು.
আৰবী তাফছীৰসমূহ:
 
অৰ্থানুবাদ ছুৰা: হূদ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ