Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-কাহাফ   আয়াত:
وَدَخَلَ جَنَّتَهٗ وَهُوَ ظَالِمٌ لِّنَفْسِهٖ ۚ— قَالَ مَاۤ اَظُنُّ اَنْ تَبِیْدَ هٰذِهٖۤ اَبَدًا ۟ۙ
ಮತ್ತು ಅವನು ತನಗೇ ಅನ್ಯಾಯವೆಸಗುತ್ತಾ ತನ್ನ ತೋಟದೊಳಗೆ ಪ್ರವೇಶಿಸಿದನು ಮತ್ತು ಹೇಳಿದನು. ಇವು ಎಂದಾದರೂ ನಾಶವಾಗುವುದೆಂದು ನಾನು ಭಾವಿಸುವುದಿಲ್ಲ.
আৰবী তাফছীৰসমূহ:
وَّمَاۤ اَظُنُّ السَّاعَةَ قَآىِٕمَةً ۙ— وَّلَىِٕنْ رُّدِدْتُّ اِلٰی رَبِّیْ لَاَجِدَنَّ خَیْرًا مِّنْهَا مُنْقَلَبًا ۟ۚ
ಮತ್ತು ಪ್ರಳಯ ಬರಲಿದೆಯೆಂದೂ ನಾನು ಭಾವಿಸುವುದಿಲ್ಲ ಇನ್ನು ನನ್ನನ್ನು ನನ್ನ ಪ್ರಭುವಿನೆಡೆಗೆ ಮರಲಿಸಲಾದರೂ ಇದಕ್ಕಿಂತ ಹೆಚ್ಚು ಉತ್ತಮವಾದುದನ್ನು ಪಡೆಯುವೆನು.
আৰবী তাফছীৰসমূহ:
قَالَ لَهٗ صَاحِبُهٗ وَهُوَ یُحَاوِرُهٗۤ اَكَفَرْتَ بِالَّذِیْ خَلَقَكَ مِنْ تُرَابٍ ثُمَّ مِنْ نُّطْفَةٍ ثُمَّ سَوّٰىكَ رَجُلًا ۟ؕ
ಅವನ ಸಂಗಡಿಗನು ಅವನೊಂದಿಗೆ ಮಾತನಾಡುತ್ತಾ ಹೇಳಿದನು: ನಿನ್ನನ್ನು ಮಣ್ಣಿನಿಂದ, ನಂತರ ವೀರ್ಯಾಣುವಿನಿಂದ ಸೃಷ್ಟಿಸಿ ಆ ಬಳಿಕ ನಿನ್ನನ್ನು ಒಬ್ಬ ಪರಿಪೂರ್ಣ ಮನುಷ್ಯನಾಗಿ ಮಾಡಿದವನನ್ನು ಧಿಕ್ಕರಿಸುತ್ತಿರುವೆಯಾ?
আৰবী তাফছীৰসমূহ:
لٰكِنَّاۡ هُوَ اللّٰهُ رَبِّیْ وَلَاۤ اُشْرِكُ بِرَبِّیْۤ اَحَدًا ۟
ಆದರೆ ನನ್ನ ಮಾತೇ ಬೇರೆ, ನನ್ನ ಪ್ರಭುವು ಆ ಅಲ್ಲಾಹನೇ ಆಗಿದ್ದಾನೆ. ಮತ್ತು ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.
আৰবী তাফছীৰসমূহ:
وَلَوْلَاۤ اِذْ دَخَلْتَ جَنَّتَكَ قُلْتَ مَا شَآءَ اللّٰهُ ۙ— لَا قُوَّةَ اِلَّا بِاللّٰهِ ۚ— اِنْ تَرَنِ اَنَا اَقَلَّ مِنْكَ مَالًا وَّوَلَدًا ۟ۚ
ನೀನು ನಿನ್ನ ತೋಟದಲ್ಲಿ ಪ್ರವೇಶಿಸಿದಿದಾಗ “ಅಲ್ಲಾಹನು ಇಚ್ಛಿಸಿರುವುದೇ ಆಗುತ್ತದೆ ಅಲ್ಲಾಹನ ಹೊರತು ಇನ್ನಾವ ಶಕ್ತಿಯೂ ಇಲ್ಲ” ಎಂದು ಯಾಕೆ ಹೇಳಲಿಲ್ಲ? ಸಂಪತ್ತಿನಲ್ಲೂ, ಸಂತಾನದಲ್ಲೂ ನೀನು ನನ್ನನ್ನು ನಿನಗಿಂತ ಕೀಳಾಗಿ ಕಾಣುವುದಾದರೆ.
আৰবী তাফছীৰসমূহ:
فَعَسٰی رَبِّیْۤ اَنْ یُّؤْتِیَنِ خَیْرًا مِّنْ جَنَّتِكَ وَیُرْسِلَ عَلَیْهَا حُسْبَانًا مِّنَ السَّمَآءِ فَتُصْبِحَ صَعِیْدًا زَلَقًا ۟ۙ
ನನ್ನ ಪ್ರಭುವು ನಿನ್ನ ತೋಟಕ್ಕಿಂತಲೂ ಉತ್ತಮವಾದುದನ್ನು ನನಗೆ ಕೊಡಬಹುದು ಮತ್ತು ನಿನ್ನ ತೋಟದ ಮೇಲೆ ಆಕಾಶದಿಂದ ಯಾವುದಾದರೂ ವಿಪತ್ತೊಂದು ಕಳುಹಿಸಿ ಅದನ್ನು ಸಮತಟ್ಟು ಪ್ರದೇಶವನ್ನಾಗಿ ಮಾಡಿಬಿಡಬಹುದು.
আৰবী তাফছীৰসমূহ:
اَوْ یُصْبِحَ مَآؤُهَا غَوْرًا فَلَنْ تَسْتَطِیْعَ لَهٗ طَلَبًا ۟
ಅಥವಾ ಅದರ ನೀರು ಬತ್ತಿ ಹೋಗಿ ಅದನ್ನು ಪಡೆಯಲು ನಿನಗೆ ಸಾಧ್ಯವಾಗದಿರಬಹುದು.
আৰবী তাফছীৰসমূহ:
وَاُحِیْطَ بِثَمَرِهٖ فَاَصْبَحَ یُقَلِّبُ كَفَّیْهِ عَلٰی مَاۤ اَنْفَقَ فِیْهَا وَهِیَ خَاوِیَةٌ عَلٰی عُرُوْشِهَا وَیَقُوْلُ یٰلَیْتَنِیْ لَمْ اُشْرِكْ بِرَبِّیْۤ اَحَدًا ۟
ಕೊನೆಗೆ ಅವನ ಫಲಗಳು ನಾಶವಾದವು. ತೋಟವು ಚಪ್ಪರದೊಂದಿಗೆ ನೆಲಕಚ್ಚಿತು. ತಾನು ಅದಕ್ಕಾಗಿ ಖರ್ಚು ಮಾಡಿದ ಬಗ್ಗೆ ತನ್ನ ಕೈಗಳನ್ನು ಹಿಸುಕುತ್ತಾ ಅಯ್ಯೋ! ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರುತ್ತಿದಿದ್ದರೆ ಎಂದು ಹೇಳತೊಡಗಿದನು.
আৰবী তাফছীৰসমূহ:
وَلَمْ تَكُنْ لَّهٗ فِئَةٌ یَّنْصُرُوْنَهٗ مِنْ دُوْنِ اللّٰهِ وَمَا كَانَ مُنْتَصِرًا ۟ؕ
ಅವನನ್ನು (ಆಗ) ಅಲ್ಲಾಹನಿಂದ ರಕ್ಷಿಸುವಂತಹ ಯಾವುದೇ ಜನಕೂಟವು ಇರಲಿಲ್ಲ ಮತ್ತು ಸ್ವತಃ ಅವನೇ ಪ್ರತೀಕಾರ ತೀರಿಸುವವನೂ ಆಗಲಿಲ್ಲ.
আৰবী তাফছীৰসমূহ:
هُنَالِكَ الْوَلَایَةُ لِلّٰهِ الْحَقِّ ؕ— هُوَ خَیْرٌ ثَوَابًا وَّخَیْرٌ عُقْبًا ۟۠
ಅಲ್ಲಿ ಸರ್ವಾಧಿಕಾರವು ಸತ್ಯಪೂರ್ಣನಾದ ಅಲ್ಲಾಹನಿಗೇ ಇರುವುದು. ಅವನು ಪ್ರತಿಫಲ ಕೊಡುವುದರಲ್ಲೂ ಫಲಿತಾಂಶ ನೀಡುವುದರಲ್ಲೂ ಅತ್ಯುತ್ತಮನಾಗಿದ್ದಾನೆ ಎಂದು ತಿಳಿದುಕೊಂಡನು.
আৰবী তাফছীৰসমূহ:
وَاضْرِبْ لَهُمْ مَّثَلَ الْحَیٰوةِ الدُّنْیَا كَمَآءٍ اَنْزَلْنٰهُ مِنَ السَّمَآءِ فَاخْتَلَطَ بِهٖ نَبَاتُ الْاَرْضِ فَاَصْبَحَ هَشِیْمًا تَذْرُوْهُ الرِّیٰحُ ؕ— وَكَانَ اللّٰهُ عَلٰی كُلِّ شَیْءٍ مُّقْتَدِرًا ۟
(ಓ ಪೈಗಂಬರರೇ) ಅವರಿಗೆ ಲೌಕಿಕ ಜೀವನದ ಉಪಮೆಯನ್ನು ವಿವರಿಸಿಕೊಡಿ. ಅದು ಆಕಾಶದಿಂದ ನಾವು ಸುರಿಸುವಂತಹ ಒಂದು ಮಳೆಯಂತೆ. ಅದರ ಮೂಲಕ ಭೂಮಿಯ ಬೆಳೆಗಳು ದಟ್ಟವಾದವು. ಪರಿಣಾಮವಾಗಿ ಅವು (ಒಣಗಿ) ಗಾಳಿಯು ಹಾರಿಸುತ್ತಾ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আল-কাহাফ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ