Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আল-বাক্বাৰাহ   আয়াত:
وَاتَّبَعُوْا مَا تَتْلُوا الشَّیٰطِیْنُ عَلٰی مُلْكِ سُلَیْمٰنَ ۚ— وَمَا كَفَرَ سُلَیْمٰنُ وَلٰكِنَّ الشَّیٰطِیْنَ كَفَرُوْا یُعَلِّمُوْنَ النَّاسَ السِّحْرَ ۗ— وَمَاۤ اُنْزِلَ عَلَی الْمَلَكَیْنِ بِبَابِلَ هَارُوْتَ وَمَارُوْتَ ؕ— وَمَا یُعَلِّمٰنِ مِنْ اَحَدٍ حَتّٰی یَقُوْلَاۤ اِنَّمَا نَحْنُ فِتْنَةٌ فَلَا تَكْفُرْ ؕ— فَیَتَعَلَّمُوْنَ مِنْهُمَا مَا یُفَرِّقُوْنَ بِهٖ بَیْنَ الْمَرْءِ وَزَوْجِهٖ ؕ— وَمَا هُمْ بِضَآرِّیْنَ بِهٖ مِنْ اَحَدٍ اِلَّا بِاِذْنِ اللّٰهِ ؕ— وَیَتَعَلَّمُوْنَ مَا یَضُرُّهُمْ وَلَا یَنْفَعُهُمْ ؕ— وَلَقَدْ عَلِمُوْا لَمَنِ اشْتَرٰىهُ مَا لَهٗ فِی الْاٰخِرَةِ مِنْ خَلَاقٍ ۫ؕ— وَلَبِئْسَ مَا شَرَوْا بِهٖۤ اَنْفُسَهُمْ ؕ— لَوْ كَانُوْا یَعْلَمُوْنَ ۟
ಶೈತಾನರು ಸುಲೈಮಾನರ ರಾಜ್ಯಭಾರದಲ್ಲಿ ಓದುತ್ತಿದ್ದಂತಹದನ್ನು (ಯಹೂದಿಯರು) ಹಿಂಬಾಲಿಸಿದರು. ಸುಲೈಮಾನರಂತು ಸತ್ಯನಿಷೇಧಿಸಿರಲಿಲ್ಲ. ಆದರೆ ಸತ್ಯ ನಿಷೇಧವು ಶೈತಾನರದ್ದಾಗಿತ್ತು. ಅವರು ಜನರಿಗೆ ಮಾಟವನ್ನು (ಜಾದುವನ್ನು) ಕಲಿಸುತ್ತಿದ್ದರು. ಮತ್ತು ಬಾಬಿಲೋನಿಯಾದಲ್ಲಿದ್ದ ಹಾರೂತ್-ಮಾರೂತ್‌ರೆಂಬ ಇಬ್ಬರು ದೂತರ ಮೇಲೆ ಅವತೀರ್ಣಗೊಳಿಸಲಾಗಿದ್ದನ್ನೂ (ಯಹೂದಿಯರು) ಹಿಂಬಾಲಿಸಿದರು. ನಾವು (ಹಾರೂತ್-ಮಾರೂತ್) ಒಂದು ಪರೀಕ್ಷೆಯಾಗಿದ್ದೇವೆ. ಆದ್ದರಿಂದ “ನೀನು ಸತ್ಯ ನಿಷೇಧಿಸಬೇಡ” ಎಂದು ಹೇಳದೆ ಅವರಿಬ್ಬರೂ ಯಾವೊಬ್ಬನಿಗೂ ಜಾದುವನ್ನು ಕಲಿಸುತ್ತಿರಲಿಲ್ಲ. ನಂತರ ಜನರು ಅವರಿಂದ ಪತಿ ಪತ್ನಿಯ ನಡುವೆ ಒಡಕುಂಟು ಮಾಡುವುದನ್ನು ಕಲಿತುಕೊಳ್ಳುತ್ತಿದ್ದರು. ವಸ್ತುತಃ ಅವರು ಅಲ್ಲಾಹನು ಬಯಸದ ವಿನಃ ಅದರ ಮೂಲಕ ಯಾರೊಬ್ಬರಿಗೂ ಯಾವ ತೊಂದರೆಯನ್ನೂ ನೀಡಲಾರರು. ಅವರು ತಮಗೆ ಹಾನಿಯೊದಗಿಸುವುದನ್ನು ಮತ್ತು ಲಾಭ ನೀಡದಂತಹದನ್ನೂ ಕಲಿಯುತ್ತಿದ್ದರು ಮತ್ತು ಜಾದುವನ್ನು ಕಲಿಯುವವನಿಗೆ ಪರಲೋಕದಲ್ಲಿ ಯಾವುದೇ ಪಾಲು ಇಲ್ಲವೆಂಬುದನ್ನು ನಿಶ್ಚಯವಾಗಿಯು ಅವರು ತಿಳಿದಿದ್ದರು ಮತ್ತು ಅವರು ತಮ್ಮ ಆತ್ಮಗಳ ಬದಲಿಗೆ ಖರೀದಿಸಿದ್ದು ಎಷ್ಟೋ ನಿಕೃಷ್ಟವಾಗಿದೆ. ಅವರು ಅರಿಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು.
আৰবী তাফছীৰসমূহ:
وَلَوْ اَنَّهُمْ اٰمَنُوْا وَاتَّقَوْا لَمَثُوْبَةٌ مِّنْ عِنْدِ اللّٰهِ خَیْرٌ ؕ— لَوْ كَانُوْا یَعْلَمُوْنَ ۟۠
ಮತ್ತು ನಿಜವಾಗಿಯು ಅವರು ಸತ್ಯವಿಶ್ವಾಸಿಗಳಾಗಿದ್ದರೆ ಹಾಗೂ ಭಯ ಭಕ್ತಿ ಪಾಲಿಸುವವರಾಗಿದ್ದರೆ ಅಲ್ಲಾಹನಿಂದ ಅವರಿಗೆ ಅತ್ಯುತ್ತಮ ಪ್ರತಿಫಲ ದೊರಕುತ್ತಿತ್ತು. ಅವರು ಅರಿಯುತ್ತಿದ್ದರೆ!
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْا لَا تَقُوْلُوْا رَاعِنَا وَقُوْلُوا انْظُرْنَا وَاسْمَعُوْا ؕ— وَلِلْكٰفِرِیْنَ عَذَابٌ اَلِیْمٌ ۟
ಓ ಸತ್ಯವಿಶ್ವಾಸಿಗಳೇ ನೀವು (ಪೈಗಂಬರ(ಸ)ರನ್ನು ಸಂಭೋಧಿಸುತ್ತಾ) 'ರಾಯಿನಾ' ಎಂದು ಹೇಳಬೇಡಿರಿ. ಆದರೆ ನೀವು 'ಉಂಜರ‍್ನಾ' ಅರ್ಥಾತ್ ನಮ್ಮೆಡೆಗೆ ನೋಡಿರಿ ಎಂದು ಹೇಳಿರಿ ಮತ್ತು ಗಮನಕೊಟ್ಟು ಆಲಿಸಿರಿ ಮತ್ತು ಸತ್ಯ ನಿಷೇಧಿಗಳಿಗೆ ವೇದನಾಜನಕ ಯಾತನೆಯಿದೆ.
আৰবী তাফছীৰসমূহ:
مَا یَوَدُّ الَّذِیْنَ كَفَرُوْا مِنْ اَهْلِ الْكِتٰبِ وَلَا الْمُشْرِكِیْنَ اَنْ یُّنَزَّلَ عَلَیْكُمْ مِّنْ خَیْرٍ مِّنْ رَّبِّكُمْ ؕ— وَاللّٰهُ یَخْتَصُّ بِرَحْمَتِهٖ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟
ನಿಮ್ಮ ಮೇಲೆ ನಿಮ್ಮ ಪ್ರಭುವಿನಿಂದ ಯಾವುದೇ ಒಳಿತು ಅವತೀರ್ಣ ಗೊಳ್ಳುವುದನ್ನು ಗ್ರಂಥದವರ ಪೈಕಿ ಸತ್ಯ ನಿಷೇಧಿಸಿದವರಾಗಲಿ, ಬಹುದೇವರಾಧಕರಾಗಲಿ ಇಷ್ಟಪಡಲಾರರು. ಅಲ್ಲಾಹನು ತನ್ನ ವಿಶೇಷ ಕಾರುಣ್ಯವನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನು ಮಹಾ ಅನುಗ್ರಹ ದಾತನಾಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আল-বাক্বাৰাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ