Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আলে ইমৰাণ   আয়াত:
وَاِنَّ مِنْهُمْ لَفَرِیْقًا یَّلْوٗنَ اَلْسِنَتَهُمْ بِالْكِتٰبِ لِتَحْسَبُوْهُ مِنَ الْكِتٰبِ وَمَا هُوَ مِنَ الْكِتٰبِ ۚ— وَیَقُوْلُوْنَ هُوَ مِنْ عِنْدِ اللّٰهِ وَمَا هُوَ مِنْ عِنْدِ اللّٰهِ ۚ— وَیَقُوْلُوْنَ عَلَی اللّٰهِ الْكَذِبَ وَهُمْ یَعْلَمُوْنَ ۟
ನಿಸ್ಸಂಶಯವಾಗಿ ಗ್ರಂಥದವರಲ್ಲಿ ಒಂದು ಗುಂಪು ಗ್ರಂಥವನ್ನು ಓದುವಾಗ ನಾಲಿಗೆಯನ್ನು ತಿರುಚುತ್ತಾರೆ. ಅವರು ಗ್ರಂಥದ ವಿಷಯವನ್ನು ಓದುತ್ತಾರೆಂದು ನೀವು ಭಾವಿಸಲಿಕ್ಕಾಗಿ ವಸ್ತುತಃ ಅದು ಗ್ರಂಥದ ವಿಷಯವಾಗಿರುವುದಿಲ್ಲ. ನಾವು ಓದುತ್ತಿರುವುದೆಲ್ಲ ಅಲ್ಲಾಹನ ಕಡೆಯಿಂದ ಎಂದು ಅವರು ಹೇಳುತ್ತಾರೆ ಆದರೆ ಅದು ಅಲ್ಲಾಹನ ಕಡೆಯಿಂದಾಗಿರುವುದಿಲ್ಲ. ಅವರು ಬೇಕು ಬೇಕೆಂದು ಸುಳ್ಳಾರೋಪವನ್ನು ಅಲ್ಲಾಹನ ಮೇಲೆ ಹೊರಿಸುತ್ತಾರೆ.
আৰবী তাফছীৰসমূহ:
مَا كَانَ لِبَشَرٍ اَنْ یُّؤْتِیَهُ اللّٰهُ الْكِتٰبَ وَالْحُكْمَ وَالنُّبُوَّةَ ثُمَّ یَقُوْلَ لِلنَّاسِ كُوْنُوْا عِبَادًا لِّیْ مِنْ دُوْنِ اللّٰهِ وَلٰكِنْ كُوْنُوْا رَبّٰنِیّٖنَ بِمَا كُنْتُمْ تُعَلِّمُوْنَ الْكِتٰبَ وَبِمَا كُنْتُمْ تَدْرُسُوْنَ ۟ۙ
ಅಲ್ಲಾಹನು ಗ್ರಂಥ ಮತ್ತು ಸುಜ್ಞಾನ ಹಾಗೂ ಪ್ರವಾದಿತ್ವವನ್ನು ನೀಡಿದಂತಹ ವ್ಯಕ್ತಿಯು ಜನರೊಂದಿಗೆ ನೀವು ಅಲ್ಲಾಹನ ಹೊರತು ನನ್ನ ದಾಸರಾಗಿರೆಂದು ಹೇಳುವುದು ಅಸಾಧ್ಯವಾಗಿದೆ. ಆದರೆ ನೀವು ಗ್ರಂಥವನ್ನು ಕಲಿಸುತ್ತಿರುವುದರ ನಿಮಿತ್ತ ಮತ್ತು ನಿಮ್ಮ ಈ ಗ್ರಂಥದ ಪಾರಾಯಣ ಮಾಡುವುದರ ನಿಮಿತ್ತ ನೀವು ಪ್ರಭುವಿನ ದಾಸರಾಗಿರಿ (ಎಂದು ಹೇಳುವನು)
আৰবী তাফছীৰসমূহ:
وَلَا یَاْمُرَكُمْ اَنْ تَتَّخِذُوا الْمَلٰٓىِٕكَةَ وَالنَّبِیّٖنَ اَرْبَابًا ؕ— اَیَاْمُرُكُمْ بِالْكُفْرِ بَعْدَ اِذْ اَنْتُمْ مُّسْلِمُوْنَ ۟۠
ಅವನು ನಿಮಗೆ ಮಲಕ್‌ಗಳನ್ನು ಮತ್ತು ಪೈಗಂಬರರನ್ನು ಪ್ರಭುಗಳನ್ನಾಗಿ ನಿಶ್ಚಯಿಸಿಕೊಳ್ಳಲು ಆದೇಶಿಸುವುದು ಅಸಾಧ್ಯವಾಗಿದೆ. ನೀವು ವಿಶ್ವಾಸಿಗಳಾದ ನಂತರವು ನಿಷೇಧಿಗಳಾಗಲು ಅವನು ನಿಮಗೆ ಆದೇಶಿಸುತ್ತಾನೆಯೇ?
আৰবী তাফছীৰসমূহ:
وَاِذْ اَخَذَ اللّٰهُ مِیْثَاقَ النَّبِیّٖنَ لَمَاۤ اٰتَیْتُكُمْ مِّنْ كِتٰبٍ وَّحِكْمَةٍ ثُمَّ جَآءَكُمْ رَسُوْلٌ مُّصَدِّقٌ لِّمَا مَعَكُمْ لَتُؤْمِنُنَّ بِهٖ وَلَتَنْصُرُنَّهٗ ؕ— قَالَ ءَاَقْرَرْتُمْ وَاَخَذْتُمْ عَلٰی ذٰلِكُمْ اِصْرِیْ ؕ— قَالُوْۤا اَقْرَرْنَا ؕ— قَالَ فَاشْهَدُوْا وَاَنَا مَعَكُمْ مِّنَ الشّٰهِدِیْنَ ۟
ಅಲ್ಲಾಹನು ಪ್ರವಾದಿಗಳೊಂದಿಗೆ ಕರಾರನ್ನು ಪಡೆದ ಸಂದರ್ಭವನ್ನು ಸ್ಮರಿಸಿರಿ. ನಾನು ನಿಮಗೆ ಗ್ರಂಥ ಮತ್ತು ಸುಜ್ಞಾನವನ್ನು ನೀಡಿ ಅನಂತರ ನಿಮ್ಮ ಬಳಿಯಿರುವುದನ್ನು ಸತ್ಯವೆಂದು ದೃಢಪಡಿಸುವ ಓರ್ವ ಸಂದೇಶವಾಹಕನನ್ನು ನಿಮ್ಮ ಬಳಿಗೆ ಬಂದರೆ ನೀವು ಅವನಲ್ಲಿ ವಿಶ್ವಾಸವನ್ನಿಡುವುದು ಹಾಗೂ ಅವನಿಗೆ ಸಹಾಯವನ್ನು ನೀಡುವುದು ನಿಮ್ಮ ಮೇಲೆ ಕಡ್ಡಾಯವಾಗಿದೆ. ತರುವಾಯ ಅಲ್ಲಾಹನು ಹೇಳಿದನು: ನೀವದನ್ನು ಒಪ್ಪಿಕೊಂಡು ಆ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಿರಾ? ಅವರೆಲ್ಲರೂ ಹೇಳಿದರು: ನಾವು ಒಪ್ಪಿಕೊಂಡೆವು, ಅವನು ಹೇಳಿದನು: ಹಾಗಾದರೆ ನೀವು ಸಾಕ್ಷಿಗಳಾಗಿರಿ ಮತ್ತು ಸ್ವತಃ ನಾನೂ ನಿಮ್ಮೊಂದಿಗೆ ಸಾಕ್ಷಿಗಳಲ್ಲಿ ಸೇರುವೆನು.
আৰবী তাফছীৰসমূহ:
فَمَنْ تَوَلّٰی بَعْدَ ذٰلِكَ فَاُولٰٓىِٕكَ هُمُ الْفٰسِقُوْنَ ۟
ಅದರ ನಂತರವೂ ಯಾರು ವಿಮುಖರಾಗುತ್ತಾರೋ ಅವರೇ ಧಿಕ್ಕಾರಿಗಳಾಗಿದ್ದಾರೆ.
আৰবী তাফছীৰসমূহ:
اَفَغَیْرَ دِیْنِ اللّٰهِ یَبْغُوْنَ وَلَهٗۤ اَسْلَمَ مَنْ فِی السَّمٰوٰتِ وَالْاَرْضِ طَوْعًا وَّكَرْهًا وَّاِلَیْهِ یُرْجَعُوْنَ ۟
ಅವರು ಅಲ್ಲಾಹನ ಧರ್ಮದ ಹೊರತು ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? ವಸ್ತುತಃ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ಸ್ವ-ಇಚ್ಛೆಯಿಂದ ಅಥವಾ ಅನಿವಾರ್ಯತೆಯಿಂದ ಅವನಿಗೆ ವಿಧೇಯರಾಗಿದ್ದಾರೆ. ಎಲ್ಲರೂ ಅವನೆಡೆಗೇ ಮರಳಿಸಲಾಗುವರು.
আৰবী তাফছীৰসমূহ:
 
অৰ্থানুবাদ ছুৰা: আলে ইমৰাণ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ